ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ಹಿನ್ನಲೆಯಲ್ಲಿ, ಮಾಜಿ ರಕ್ಷಣಾ ಸಚಿವ ಮತ್ತು NCP ಅಧ್ಯಕ್ಷರೂ ಆಗಿರುವ ಶರದ್ ಪವಾರ್ ಅವರು, ಎಲ್ಲಾ ನೆರೆಯ ರಾಷ್ಟ್ರಗಳಿಗೆ ಸಂಬಂಧಿಸಿದಂತೆ ಭಾರತದ ವಿದೇಶಾಂಗ ನೀತಿಯನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಸೋಮವಾರ ಹೇಳಿದ್ದಾರೆ.
ಅಫ್ಘಾನಿಸ್ಥಾನದ ಬಿಕ್ಕಟ್ಟಿನ ಬಗ್ಗೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಶರದ್ ಪವಾರ್, “ನಾವು ಜಾಗರೂಕರಾಗಿದ್ದು, ದೀರ್ಘಾವಧಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಪಾಕಿಸ್ತಾನ ಮತ್ತು ಚೀನಾ ಹೊರತುಪಡಿಸಿ, ಇತರ ನೆರೆಹೊರೆಯ ದೇಶಗಳೊಂದಿಗೆ ಭಾರತದ ಸಂಬಂಧ ಉತ್ತಮವಾಗಿದ್ದ ಸಮಯವೊಂದಿತ್ತು” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಸಿಲುಕಿರುವ 200 ಸಿಖ್ಖರನ್ನು ರಕ್ಷಿಸುವಂತೆ ಕೇಂದ್ರಕ್ಕೆ ಅಮರಿಂದರ್ ಸಿಂಗ್ ಮನವಿ
“ಇತರ ದೇಶಗಳಿಗೆ ಸಂಬಂಧಿಸಿದ ನಮ್ಮ ವಿದೇಶಾಂಗ ನೀತಿಯನ್ನು ಪರಿಶೀಲಿಸಲು ಇದು ಸಕಾಲವಾಗಿದೆ. ಪರಿಸ್ಥಿತಿ ಉತ್ತಮವಾಗಿಲ್ಲ. ಆದರೆ ಇದು ಸೂಕ್ಷ್ಮ ವಿಚಾರವಾಗಿದೆ. ಇದು ರಾಷ್ಟ್ರೀಯ ಭದ್ರತೆಯ ವಿಷಯವಾಗಿರುವುದರಿಂದ ನಾವು ಸರ್ಕಾರದೊಂದಿಗೆ ಸಹಕರಿಸುತ್ತೇವೆ” ಎಂದು ಮಾಜಿ ರಕ್ಷಣಾ ಸಚಿವ ಶರದ್ ಪವಾರ್ ಹೇಳಿದ್ದಾರೆ.
ಅಫ್ಘಾನ್ ಸರ್ಕಾರ ಪತನಗೊಂಡು ಅಲ್ಲಿನ ಅಧ್ಯಕ್ಷ ಅಶ್ರಫ್ ಗನಿ ದೇಶವನ್ನು ತೊರೆದ ನಂತರ ಭಾನುವಾರ ತಾಲಿಬಾನ್ ಬಂಡುಕೋರರು ಅಫ್ಘಾನಿಸ್ತಾನದ ರಾಜಧಾನಿಗೆ ನುಗ್ಗಿದ್ದಾರೆ. ಅಫ್ಘಾನ್ ರಾಜಧಾನಿ ಕಾಬೂಲ್‌ನಲ್ಲಿ ಜನರು ಭಯಭೀತರಾಗಿ ದೇಶದಿಂದ ತಪ್ಪಿಸಿಕೊಳ್ಳಲು ವಿಮಾನ ನಿಲ್ದಾಣದಲ್ಲಿ ನೆರೆದಿದ್ದು, ಜನಜಂಗುಳಿಯಲ್ಲಿ ಹಲವು ಜನರು ಮೃತಪಟ್ಟಿರುವ ಸುದ್ದಿಗಳನ್ನು ಮಾಧ್ಯಮಗಳು ಬಿತ್ತರಿಸಿವೆ.
ಈ ಮಧ್ಯೆ ಅಫ್ಘಾನ್‌ನ ಭಾರತದ ರಾಯಭಾರಿ ಕಚೇರಿಯಲ್ಲಿ ಸಿಬ್ಬಂದಿ ಸಹಿತ ದೇಶದ ಸುಮಾರು 200 ಜನರು ಸಿಲುಕಿಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಅಫ್ಘಾನ್ ಪತನ: ವಿಮಾನ ನಿಲ್ದಾಣದಲ್ಲಿ ನೂಕು ನುಗ್ಗಲು; ಟೇಕಾಫ್ ಆದ ವಿಮಾನದಿಂದ ಬಿದ್ದ ಜನರು!



Not getting any words to express our feelings towards Afghanistan citizens.
Only hope is the statement from Taliban about changing their openion towards Women.
Hope they really follow Islam (Peace, Peace n Peace ) and medias all over the world behave with responsibility