ಎಂತಹ ತ್ಯಾಗಕ್ಕೂ ಸಿದ್ದವಾಗಿದ್ದೇವೆ. ಮೂರು ಕೃಷಿ ಕಾಯ್ದೆಗಳು ವಾಪಸ್ಸಾಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಆರ್‌ಎಲ್‌ಡಿ ಮುಖಂಡ ನರೇಶ್ ಟಿಕಾಯತ್ ಘೋಷಿಸಿದ್ದಾರೆ.
ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಬಿಲಾರಿ ಪಟ್ಟಣದಲ್ಲಿ ನಡೆದ ಕಿಸಾನ್ ಮಹಾಪಂಚಾಯತ್‌ನಲ್ಲಿ ಭಾಗವಹಿಸಿ ಮಾತನಾಡಿದ ಅವರು ರೈತ ವಿರೋಧಿ ಕಾನೂನುಗಳನ್ನು ಸರ್ಕಾರ ಹಿಂಪಡೆಯಲೇಬೇಕು ಎಂದು ಒತ್ತಾಯಿಸಿದ್ದಾರೆ.
ಶುಕ್ರವಾರ ನಡೆದ ಮಹಾಪಂಚಾಯತ್‌ನಲ್ಲಿ ಭಾರತೀಯ ಕಿಸಾನ್ ಯೂನಿಯನ್‌ನ ರಾಕೇಶ್ ಟಿಕಾಯತ್ ಸೇರಿದಂತೆ ವಿವಿಧ ಮುಖಂಡರು ಭಾಗವಹಿಸಿದ್ದರು. ಉತ್ತರ ಪ್ರದೇಶದ ಆರು ಜಿಲ್ಲೆಗಳ ಬಿಕೆಯು ಸಂಘಟನೆಯ ಜಿಲ್ಲಾ ಹಾಗೂ ಮಂಡಲ್ ಮಟ್ಟದ ಪದಾಧಿಕಾರಿಗಳು ಹಾಗೂ ಮೊರಾದಾಬಾದ್, ಅಮ್ರೋಹಾ, ಸಂಭಾಲ್, ರಾಂಪುರ್ ಮತ್ತು ಬಾದೌನ್ ಜಿಲ್ಲೆಗಳ ಸುಮಾರು 10 ಸಾವಿರ ರೈತರು ಭಾಗವಹಿಸಿದ್ದರು ಎಂದು ಅಮರ್ ಉಜಾಲ ವರದಿ ಮಾಡಿದೆ.
”ಮಹಾಪಂಚಾಯತ್‌ನಲ್ಲಿ ಭಾಗವಹಿಸಿರುವ ಎಲ್ಲಾ ರೈತರಿಗೆ ಅಗತ್ಯವಿರುವ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಪೊಲೀಸರು ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿಡಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹರಿಯಾಣದಲ್ಲಿ ನಡೆದ ಅಹಿತಕರ ಘಟನೆ ಇಲ್ಲಿ ಮರುಕಳಿಸದಂತೆ ಎಚ್ಚರ ವಹಿಸಲಾಗಿದೆ.’ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.
ಹೋರಾಟ ನಿರತ ರೈತರ ಮುಖವಾಣಿ ಕಿಸಾನ್ ಏಕ್ತಾ ಮೋರ್ಚಾ #MahapanchayatRevolution ಎಂಬ ಹ್ಯಾಷ್‌ಟ್ಯಾಗ್ ನೀಡಿದ್ದು, ದೇಶದೆಲ್ಲೆಡೆ ಮಹಾಪಂಚಾಯತ್‌ಗಳನ್ನು ನಡೆಸಲು ಕರೆ ನೀಡಿದೆ. ಫೆಬ್ರವರಿ 13ರಂದು – ಪಿಡಿಎಂ ಕಾಲೇಜು ಬಹದ್ದೂರ್ ಬೈಪಾಸ್ ಬಳಿ, ಫೆಬ್ರವರಿ 18 – ರೈಸಿಂಗ್ ನಗರ, ಶ್ರೀ ಗಂಗನಗರ ರಾಜಸ್ಥಾನ, ಫೆಬ್ರವರಿ 19– ಹನುಮನ್‌ಗರ್, ರಾಜಸ್ಥಾನ, ಫೆಬ್ರವರಿ 23 – ಸಿಕಾರ್, ರಾಜಸ್ಥಾನದಲ್ಲಿ ಕಿಸಾನ್ ಮಹಾಪಂಚಾಯತ್ ಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ. ದರ್ಶನ್ ಪಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಮೋದಿ ಸತ್ಯ ಒಪ್ಪಿಕೊಂಡಿದ್ದಾರೆ, ಹಾಗೆಯೆ ಕಾಯ್ದೆ ವಾಪಸ್ ಪಡೆಯಲಿ: ದರ್ಶನ್ ಪಾಲ್


