ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನದೊಂದಿಗಿನ ನಡೆದ ಸಂಘರ್ಷದ ವೇಳೆ ಅನಿರ್ದಿಷ್ಟ ಸಂಖ್ಯೆಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಯಿತು ಎಂದು ಭಾರತದ ಉನ್ನತ ಮಿಲಿಟರಿ ಜನರಲ್ ಮೊದಲ ಬಾರಿಗೆ ಒಪ್ಪಿಕೊಂಡಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಅದಾಗ್ಯೂ, ಸಶಸ್ತ್ರ ಪಡೆಗಳು ಪಾಕಿಸ್ತಾನದ ಮೇಲೆ ಮತ್ತೆ ದಾಳಿ ಮಾಡಲು ತನ್ನ ತಪ್ಪುಗಳನ್ನು ತ್ವರಿತವಾಗಿ ಸರಿಪಡಿಸಿಕೊಂಡಿವೆ ಎಂದು ಅವರು ಪ್ರತಿಪಾದಿಸಿದ್ದಾರೆ. ಪಾಕಿಸ್ತಾನದ ವಿರುದ್ಧದ ಸಂಘರ್ಷದ
ಶಾಂಗ್ರಿ-ಲಾ ಸಂವಾದದ ಹೊರತಾಗಿ ಬ್ಲೂಮ್‌ಬರ್ಗ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ನಾಲ್ಕು ರಫೇಲ್‌ಗಳು ಸೇರಿದಂತೆ ಆರು ಭಾರತೀಯ ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ ಎಂಬ ಪಾಕಿಸ್ತಾನ ಪ್ರಧಾನಿಯ ಹೇಳಿಕೆಯನ್ನು “ಸಂಪೂರ್ಣವಾಗಿ ತಪ್ಪು” ಎಂದು ತಳ್ಳಿಹಾಕಿದ್ದಾರೆ.
“ಜೆಟ್ ಪತನವಾಗಿದ್ದು ಮುಖ್ಯ ವಿಚಾರವಲ್ಲ, ಅವು ಏಕೆ ಪತನಗೊಂಡವು, ಯಾವ ತಪ್ಪುಗಳನ್ನು ಮಾಡಲಾಯಿತು ಎಂಬುವುದು ಮುಖ್ಯವೇ ಹೊರತು, ಸಂಖ್ಯೆಗಳು ಮುಖ್ಯವಲ್ಲ” ಎಂದು ಜನರಲ್ ಚೌಹಾಣ್ ಹೇಳಿದ್ದಾರೆ.
India’s military confirmed for the first time that it lost an unspecified number of fighter jets in clashes with Pakistan in May.
Anil Chauhan, chief of defense staff of the Indian Armed Forces, spoke to Bloomberg TV on Saturday, while attending the Shangri-La Dialogue in… pic.twitter.com/9y3GW6WJfn
— Bloomberg TV (@BloombergTV) May 31, 2025
ರಾಯಿಟರ್ಸ್‌ಗೆ ನೀಡಿದ ಪ್ರತ್ಯೇಕ ಸಂದರ್ಶನದಲ್ಲಿ ಮಾತನಾಡಿದ ಜನರಲ್ ಚೌಹಾಣ್, ಭಾರತ ಅನುಭವಿಸಿದ ನಷ್ಟಗಳು ಮೇ 7 ರಂದು ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಆರಂಭಿಕ ಹಂತಗಳಲ್ಲಿ ನಡೆದಿವೆ ಎಂದು ಹೇಳಿದ್ದಾರೆ.
“ನಾನು ಹೇಳುವುದೇನೆಂದರೆ, ಮೇ 7 ರಂದು, ಆರಂಭಿಕ ಹಂತಗಳಲ್ಲಿ ಈ ನಷ್ಟಗಳು ಸಂಭವಿಸಿದವು… ಈ ನಷ್ಟಗಳು ಏಕೆ ಸಂಭವಿಸುತ್ತವೆ ಮತ್ತು ಅದರ ನಂತರ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯವಾಗಿತ್ತು” ಎಂದು ಅವರು ತಿಳಿಸಿದ್ದಾರೆ.
ಆದಾಗ್ಯೂ, ಸಶಸ್ತ್ರ ಪಡೆಗಳು “ಯುದ್ಧತಂತ್ರದ ತಪ್ಪುಗಳನ್ನು” ವಿಶ್ಲೇಷಿಸಿ, ಅವುಗಳನ್ನು ಸರಿಪಡಿಸಲು ಮತ್ತು ಮೇ 8 ಮತ್ತು ಮೇ 10 ರಂದು ಮತ್ತೆ ಪಾಕಿಸ್ತಾನವನ್ನು ಗುರಿಯಾಗಿಸಲು ತ್ವರಿತವಾಗಿ ಕಾರ್ಯಾಚರಿಸಿದವು ಎಂದು ಹೇಳಿದ್ದಾರೆ. ಪಾಕಿಸ್ತಾನದ ವಿರುದ್ಧದ ಸಂಘರ್ಷದ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ದಲಿತ ರ‍್ಯಾಪರ್ ವೇಡನ್ ವಿರುದ್ಧ ಪ್ರಚೋದನಾತ್ಮಕ ಹೇಳಿಕೆ; ಆರ್‌ಎಸ್‌ಎಸ್ ಮುಖವಾಣಿ ಕೇಸರಿ ಮುಖ್ಯ ಸಂಪಾದಕನ ಬಂಧನ
ದಲಿತ ರ‍್ಯಾಪರ್ ವೇಡನ್ ವಿರುದ್ಧ ಪ್ರಚೋದನಾತ್ಮಕ ಹೇಳಿಕೆ; ಆರ್‌ಎಸ್‌ಎಸ್ ಮುಖವಾಣಿ ಕೇಸರಿ ಮುಖ್ಯ ಸಂಪಾದಕನ ಬಂಧನ


Indian forces have achieved their goals. Fighting between two forces nobody can predict what will happen. Enemy country has got sophisticated modern arms supplied by America. Both countries India and Pakistan are customers America it has got good Markets for its dumped arms.