Homeಮುಖಪುಟಪೃಥ್ವಿರಾಜ್ ಚೌಹಾಣ್‌, ಮೋದಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಯತಿ ನರಸಿಂಗಾನಂದ ವಿರುದ್ಧ ಎಫ್‌ಐಆರ್‌

ಪೃಥ್ವಿರಾಜ್ ಚೌಹಾಣ್‌, ಮೋದಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಯತಿ ನರಸಿಂಗಾನಂದ ವಿರುದ್ಧ ಎಫ್‌ಐಆರ್‌

ಪ್ರಕರಣ ದಾಖಲಾದ ಬಳಿಕ ಜುಬೇರ್‌ ಅವರನ್ನು ನಿಂದಿಸಿ ವಿಡಿಯೊ ಬಿಡುಗಡೆ ಮಾಡಿರುವ ನರಸಿಂಗಾನಂದ, “ನಾನು ತಪ್ಪು ಇತಿಹಾಸ ಓದಿಕೊಂಡಿದ್ದೇನೆ” ಎಂದೂ ಹೇಳಿದ್ದಾರೆ.

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿಯವರನ್ನು ರಜಪೂತ ರಾಜ ಪೃಥ್ವಿರಾಜ್ ಚೌಹಾಣ್‌ಗೆ ಹೋಲಿಸಿ, ಅವಹೇಳನಕಾರಿಯಾಗಿ ಮಾತನಾಡಿದ್ದ ಉತ್ತರ ಪ್ರದೇಶದ ದಾಸ್ನಾ ದೇವಿ ದೇವಸ್ಥಾನದ ಪ್ರಧಾನ ಅರ್ಚಕ ಯತಿ ನರಸಿಂಗಾನಂದ ವಿರುದ್ಧ ಪ್ರಕರಣ ದಾಖಲಾಗಿದೆ.

ಮಸೂರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ ಎಂದು ಗಾಜಿಯಾಬಾದ್ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಈರಾಜ್ ರಾಜಾ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಆಲ್ಟ್‌ನ್ಯೂಸ್‌ ಸಹಸಂಸ್ಥಾಪಕ, ಪತ್ರಕರ್ತ ಮೊಹಮ್ಮದ್ ಜುಬೇರ್‌ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೊ ವೈರಲ್‌ ಆಗಿದೆ. ಗಾಜಿಯಾಬಾದ್ ಪೊಲೀಸರ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ ಮೂಲಕ ಪ್ರತಿಕ್ರಿಯಿಸಿರುವ ಎಸ್‌ಪಿ ರಾಜಾ, “ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ವೈರಲ್‌ ಆಗುತ್ತಿದೆ. ಈ ವಿಡಿಯೊದಲ್ಲಿ ಯತಿ ನರಸಿಂಹಾನಂದ ಅವರು ಗೌರವಾನ್ವಿತ ಪ್ರಧಾನಿ ಮತ್ತು ಇತರ ಮಹಾನ್ ನಾಯಕರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ” ಎಂದು ತಿಳಿಸಿದ್ದಾರೆ.

ಐಪಿಸಿ ಸೆಕ್ಷನ್ 153 ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 295 ಎ (ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶಪೂರ್ವಕ ಕೃತ್ಯ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ದ್ವೇಷ ಭಾಷಣಗಳ ಮೂಲಕ ಕುಖ್ಯಾತರಾಗಿರುವ ಯತಿ ನರಸಿಂಗಾನಂದ ಅವರು ಇತ್ತೀಚೆಗೆ ಪೃಥ್ವಿರಾಜ್ ಚೌಹಾಣ್, ಪ್ರಧಾನಿ ನರೇಂದ್ರಮೋದಿ ಹಾಗೂ ಮಹಾತ್ಮ ಗಾಂಧಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು.

“ಪೃಥ್ವಿರಾಜ್ ಚೌಹಾಣ್ ಹಿಂದೂಗಳನ್ನು ಹೇಗೆ ನಡೆಸಿಕೊಂಡರು, ಮೋದಿಯವರೂ ಅದೇ ರೀತಿ ಮಾಡುತ್ತಿದ್ದಾರೆ. ಪೃಥ್ವಿರಾಜನು ಅನೇಕ ಹಿಂದೂಗಳನ್ನು ಕೊಂದನು ಮತ್ತು ಮಹಿಳೆಯರನ್ನು ಅಪಹರಿಸಿದನು. ವಾಸ್ತವವಾಗಿ, ಆತ ತಮ್ಮ ಸ್ವಂತ ಸಹೋದರನ ಮಗಳನ್ನು ಬಿಡಲಿಲ್ಲ” ಎಂದು ಯತಿ ನರಸಿಂಗಾನಂದ ಹೇಳಿರುವುದು ವಿಡಿಯೊದಲ್ಲಿ ದಾಖಲಾಗಿದೆ.

“ಅನೇಕ ವೀರ ಹಿಂದೂ ರಾಜರ ಸಾವಿಗೆ ಪೃಥ್ವಿರಾಜ್ ಕಾರಣನಾಗಿದ್ದನು. ಆದರೆ ಮುಸ್ಲಿಂ ಆಡಳಿತಗಾರನನ್ನು ಎಂದಿಗೂ ಮುಟ್ಟಲಿಲ್ಲ. ಕೊನೆಯಲ್ಲಿ ಏನಾಯಿತು? ಆತನನ್ನು ಮುಸ್ಲಿಂ ದೊರೆ ಕೊಂದಿದ್ದಾನೆಯೇ ಹೊರತು ಹಿಂದೂ ಅಲ್ಲ” ಎಂದು ಆರೋಪಿಸಿದ್ದರು.

“ಪೃಥ್ವಿರಾಜ್ ಮಾಡಿರುವ ದುಷ್ಕೃತ್ಯಗಳು ಮಹಾತ್ಮ ಗಾಂಧಿ ಮತ್ತು ನರೇಂದ್ರ ಮೋದಿಯವರಿಗೆ ಹೋಲಿಕೆಯಾಗುತ್ತವೆ. ನಾವು ಮಾಡುವುದೆಂದರೆ ಅವರನ್ನು (ಮೋದಿ) ಹೊಗಳುವುದು. ಮೋದಿ ಮುಂದುವರಿದರೆ, ಅವರಿಗೆ ಶಾಂತಿಯಿಂದ ಅಳಲು ಸ್ಥಳವಿರುವುದಿಲ್ಲ” ಎಂದು ಟೀಕಿಸಿದ್ದರು.

ಪೃಥ್ವಿರಾಜ್ ಚೌಹಾಣ್ ಅವರ ಸೋದರಸಂಬಂಧಿ ಮತ್ತು ರಾಜಕುಮಾರಿ ಸಂಯೋಗಿತಾ ಅವರ ತಂದೆ ಜೈಚಂದ್ (ರಜಪೂತ ರಾಜ) ಬಗ್ಗೆ ಮಾತನಾಡಿದ್ದರು. ಜೈಚಂದ್‌ ಅವರನ್ನು ಮಹಾನ್ ನಾಯಕ ಎಂದು ಕರೆದ ನರಸಿಂಗಾನಂದ, “ಪೃಥ್ವಿರಾಜ್ ಚೌಹಾಣ್‌ಗಿಂತ ಅವರನ್ನು ತನ್ನ ಸ್ನೇಹಿತನನ್ನಾಗಿ ಆಯ್ಕೆ ಮಾಡಿಕೊಳ್ಳುತ್ತೇನೆ” ಎಂದಿದ್ದರು.

“ಘೋರಿ ರಾಜವಂಶದ ದೊರೆ ಮುಹಮ್ಮದ್ ಘೋರಿಗೆ ಜೈಚಂದ್ ಎಂದಿಗೂ ಸಹಾಯ ಮಾಡಲಿಲ್ಲ. ಅವರು ನಿಜವಾದ ರಜಪೂತರಾಗಿದ್ದರು” ಎಂದು ಶ್ಲಾಘಿಸಿದ್ದರು. ಹಿಂದೂಗಳು ದೀರ್ಘಕಾಲದಿಂದಲೂ ವಿವಿಧ ವಿದೇಶಿ ಆಡಳಿತಗಾರರಿಂದಾಗಿ ಗುಲಾಮರಾಗಿದ್ದಾರೆ ಎಂದು ಆರೋಪಿಸಿದ್ದರು.

“ಇದು ಗಾಂಧಿಯನ್ನು ಗೌರವಿಸುವ, ನಾಥೂರಾಂ ಗೋಡ್ಸೆ ಮತ್ತು ವೀರ್ ಸಾವರ್ಕರ್ ಅವರನ್ನು ನಿಂದಿಸುವ ದೇಶ. ದೇಶದ ಮನಸ್ಥಿತಿ ಬದಲಾಗುವವರೆಗೂ ಇದು ಮುಂದುವರಿಯುತ್ತದೆ” ಎಂದು ಹೇಳಿಕೆ ನೀಡಿದ್ದರು.

ಇದನ್ನೂ ಓದಿರಿ: ಹರ್‌‌ ಘರ್‌ ತಿರಂಗ ಬಹಿಷ್ಕರಿಸಿ, ಕೇಸರಿ ಧ್ವಜ ಹಾರಿಸಿ: ಯತಿ ನರಸಿಂಗಾನಂದ

ಕ್ಷತ್ರಿಯ ಪರಿಷತ್ ಖಂಡನೆ

ಯತಿ ನರಸಿಂಗಾನಂದ ಅವರ ಹೇಳಿಕೆಯನ್ನು ಕ್ಷತ್ರೀಯ ಪರಿಷತ್ ಖಂಡಿಸಿದ್ದು, ಕ್ರಮಕ್ಕೆ ಆಗ್ರಹಿಸಿದೆ. “ಮಹಾನ್ ಕ್ಷತ್ರಿಯ ಚಕ್ರವರ್ತಿ ಪೃಥ್ವಿರಾಜ್ ಚೌಹಾಣ್ ಅವರ ವಿರುದ್ಧ ಹುಸಿ-ರಾಷ್ಟ್ರೀಯವಾದಿ ಯತಿ ನರಸಿಂಹಾನಂದ ಮಾಡಿರುವ ಭಯಾನಕ ಅಭಿಪ್ರಾಯಗಳು ಇತ್ತೀಚಿನ ದಿನಗಳಲ್ಲಿನ ವಿಭಜಿಸುವ ರಾಜಕೀಯದಲ್ಲೇ ಕೀಳುಮಟ್ಟದ್ದಾಗಿವೆ” ಎಂದು ಅಭಿಪ್ರಾಯಪಟ್ಟಿದೆ.

“ಯತಿ ನರಸಿಂಗಾನಂದ ಅವರ ದುರುದ್ದೇಶಪೂರಿತ ಅಭಿಪ್ರಾಯಗಳನ್ನು ಖಂಡಿಸುತ್ತೇವೆ. ಅಪರಾಧಿಯ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸುತ್ತೇವೆ” ಎಂದಿದೆ.

ಪ್ರಕರಣ ದಾಖಲಾದ ಬಳಿಕ ತೀವ್ರ ಹಿಂದುತ್ವವಾಗಿ ನರಸಿಂಗಾನಂದ ಯೂಟರ್ನ್ ಹೊಡೆದಿದ್ದಾರೆ. ಮೊಹಮ್ಮದ್ ಜುಬೇರ್‌ ಅವರನ್ನು ನಿಂದಿಸುವ ಮೂಲಕ ಕ್ಷಮಾಪಣಾ ವಿಡಿಯೊ ಬಿಡುಗಡೆ ಮಾಡಿರುವ ಯತಿ, “ನನ್ನ ವಿಡಿಯೊವನ್ನು ಜುಬೇರ್‌ ಎಡಿಟ್‌ ಮಾಡಿ ಹಂಚಿಕೊಂಡಿದ್ದಾರೆ. ಚೌಹಾಣ್ ಬಗ್ಗೆ ತಪ್ಪು ಇತಿಹಾಸವನ್ನು ಓದಿದ್ದೇನೆ ಎಂದು ಭಾವಿಸಿದ್ದೇನೆ. ರಜಪೂತ ಸಮುದಾಯದ ಕ್ಷಮೆಯಾಚಿಸುತ್ತೇನೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಒಂದೆಡೆ ಜುಬೇರ್‌ ಅವರನ್ನು ನಿಂದಿಸುತ್ತಲೇ, ತಾನು ತಪ್ಪು ಓದಿಕೊಂಡಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನು ಮೊದಲೇ ಊಹಿಸಿದ್ದ ಪತ್ರಕರ್ತ ಮೊಹಮ್ಮದ್ ಜುಬೇರ್‌, “ಎಫ್‌ಐಆರ್‌ ದಾಖಲಾಗಿರುವುದರಿಂದ, ಅವರ ವೀಡಿಯೊವನ್ನು ನಾನು ಎಡಿಟ್ ಮಾಡಿದ್ದೇನೆ ಎಂದು ಈಗ ಯತಿ ನರಸಿಂಗಾನಂದ ಹೇಳಿಕೊಳ್ಳಬಹುದು. ಸಂಪೂರ್ಣ ವೀಡಿಯೊ ಲಿಂಕ್‌ ಹಾಕಿದ್ದೇನೆ. 17:20 ನಿಮಿಷದಲ್ಲಿ ನೋಡಿರಿ” ಎಂದು ಟ್ವೀಟ್ ಮಾಡಿದ್ದರು.

ಯತಿ ನರಸಿಂಗಾನಂದ ಅವರು ನಾಲಿಗೆ ಹರಿಬಿಡುವುದು ಇದು ಮೊದಲೇನೂ ಅಲ್ಲ. ಮುಸ್ಲಿಮರ ನರಮೇಧ ನಡೆಸಬೇಕು ಎಂದು ಹೇಳಿಕೆ ನೀಡಿ ಬಂಧನಕ್ಕೆ ಒಳಗಾಗಿದ್ದರು. ಭಾರತದ ಸಂವಿಧಾನ ಹಾಗೂ ಸುಪ್ರೀಂ ಕೋರ್ಟ್ ವಿರುದ್ಧ ಅತ್ಯಂತ ತುಚ್ಛವಾಗಿ ಮಾತನಾಡಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...