ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಜುಲೈ 4ರಂದು ನಡೆದ ಗುಂಪು ಹತ್ಯೆ ಎನ್ನಲಾದ ಘಟನೆಯ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿದ್ದವರ ವಿರುದ್ದ ಪೊಲೀಸರು ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್) ಯ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ದೆಹಲಿ ಮೂಲದ ಇಬ್ಬರು ಪತ್ರಕರ್ತರು ಸೇರಿ ಐವರ ವಿರುದ್ದ ‘ದುರುದ್ದೇಶಪೂರಿತ ಪೋಸ್ಟ್ ಮೂಲಕ ಧರ್ಮದ ಆಧಾರದ ಮೇಲೆ ದ್ವೇಷವನ್ನು ಉತ್ತೇಜಿಸಿದ ಆರೋಪ ಹೊರಿಸಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
Shamli police (Uttar Pradesh) has lodged FIR against five reporters under sections 196 ( promoting enmity) & 353 (public mischief) of Bharatiya Nyaya Sanhita (new IPC) for posting on their social media handles about a mob lynching incident. pic.twitter.com/sq7rA61YUY
— Ratna Singh (@whattalawyer) July 7, 2024
ಜುಲೈ 4 ರ ರಾತ್ರಿ ತನ್ನ ಮನೆಯಲ್ಲಿ ಸಾವನ್ನಪ್ಪಿದ ಫಿರೋಝ್ ಖುರೇಷಿ ಎಂಬ ವ್ಯಕ್ತಿಯ ಬಗ್ಗೆ ಐವರು “ತಪ್ಪು ಮಾಹಿತಿ” ಹಂಚಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
“ಫಿರೋಝ್ ಅವರ ಕುಟುಂಬದವರು ನೀಡಿದ ದೂರಿನ ಪ್ರಕಾರ, ಗಂಗಾ ಆರ್ಯ ನಗರದ ನಿವಾಸಿಗಳಾದ ಪಿಂಕಿ, ಪಂಕಜ್ ಮತ್ತು ರಾಜೇಂದ್ರ ಎಂಬ ಮೂವರು ವ್ಯಕ್ತಿಗಳು ಅವರನ್ನು ರಾತ್ರಿ 8 ಗಂಟೆಯ ಸುಮಾರಿಗೆ ಥಳಿಸಿದ್ದಾರೆ ಮತ್ತು ಅವರು ತಮ್ಮ ಮನೆಗೆ ತಲುಪಿದ ನಂತರ ರಾತ್ರಿ 11 ರ ಸುಮಾರಿಗೆ ಸಾವನ್ನಪ್ಪಿದ್ದಾರೆ” ಎಂದು ಹೇಳಿದ್ದಾರೆ.
ಈ ಸಂಬಂಧ ಜುಲೈ 5 ರಂದು ಬಿಎನ್‌ಎಸ್ ಸೆಕ್ಷನ್ 105 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ವರದಿಗಳ ಪ್ರಕಾರ, ಶಾಮ್ಲಿಯ ಠಾಣಾ ಭವನ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮನೇಂದ್ರ ಕುಮಾರ್ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ. ಇಬ್ಬರು ಪತ್ರಕರ್ತರನ್ನು ಝಾಕಿರ್ ಅಲಿ ತ್ಯಾಗಿ ಮತ್ತು ವಾಸಿಂ ಅಕ್ರಮ್ ತ್ಯಾಗಿ ಎಂದು ಗುರುತಿಸಲಾಗಿದ್ದು, ಇತರ ಮೂವರು ಆಸಿಫ್ ರಾಣಾ, ಸೈಫ್ ಅಲಹಬಾದಿ ಮತ್ತು ಅಹ್ಮದ್ ರಜಾ ಖಾನ್ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ನೀಟ್ ವಿವಾದ: ಇಂದು ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದ 30ಕ್ಕೂ ಹೆಚ್ಚು ಅರ್ಜಿಗಳ ವಿಚಾರಣೆ


