Homeಮುಖಪುಟನರೇಗ ಕಾರ್ಮಿಕರಿಗೆ ದುಡಿಮೆಯ ಹಣ ತಲುಪಿಸುವಲ್ಲಿ ವಿಳಂಬ: ಸಂಶೋಧನಾ ವರದಿ

ನರೇಗ ಕಾರ್ಮಿಕರಿಗೆ ದುಡಿಮೆಯ ಹಣ ತಲುಪಿಸುವಲ್ಲಿ ವಿಳಂಬ: ಸಂಶೋಧನಾ ವರದಿ

ದುಡಿಮೆಯ ಹಣ ಸಿಗದವರಲ್ಲಿ 70% ಜನರಿಗೆ ಹಣ ತಲಪದೆ ಇರುವುದಕ್ಕೆ ಕಾರಣ ಕೂಡಾ ತಿಳಿದಿಲ್ಲ

- Advertisement -
- Advertisement -

ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಮಿಕರಿಗೆ ಪಾವತಿ ವಿಳಂಬವಾಗುತ್ತಿದೆ, ಕಾರ್ಮಿಕರು ತಮ್ಮ ದುಡಿಮೆಯ ಹಣವನ್ನು ಪಡೆಯಲು ಕಷ್ಟಪಡುತ್ತಿದ್ದಾರೆ, ಎಷ್ಟೋ ಜನಕ್ಕೆ ಈ ಹಣ ಕೊನೆಯ ಹಂತದಲ್ಲಿ ಸರಿಯಾಗಿ ತಲುಪದೆ ವಾಪಾಸಾಗುತ್ತಿದೆ, ದುಡಿಮೆಯ ಹಣ ಸಿಗದವರಲ್ಲಿ 70% ಜನರಿಗೆ ಹಣ ತಲಪದೆ ಇರುವುದಕ್ಕೆ ಕಾರಣ ಕೂಡಾ ತಿಳಿದಿಲ್ಲ ಹೀಗೆ ಹತ್ತು ಹಲವು ಸಂಗತಿಗಳನ್ನು ಬಿಚ್ಚಿಡುತ್ತದೆ ಇತ್ತೀಚೆಗಿನ ಸಂಶೋಧನಾ ವರದಿ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(MNREGA)ಯ ಈ ಯೋಜನೆಯಡಿ ಭಾರತದ ಗ್ರಾಮೀಣ ಭಾಗದ ನಿರುದ್ಯೋಗಿಗಳಿಗೆ ವರ್ಷಕ್ಕೆ 100 ದಿನಗಳ ಉದ್ಯೋಗವನ್ನು ಒದಗಿಸುತ್ತದೆ. ಕೇಂದ್ರದ ಈ ಜನಪ್ರಿಯ ಯೋಜನೆಯಿಂದ ಹಳ್ಳಿಯಿಂದ ಕೆಲಸ ಹುಡುಕಿ ನಗರಕ್ಕೆ ವಲಸೆ ಬರುವ ಅನಿಶ್ಚಿತತೆ ಸೇರಿದಂತೆ ನಿರುದ್ಯೋಗ ಸಮಸ್ಯೆಗೆ ಕೂಡಾ ತುಸು ಪರಿಹಾರ ಸಿಕ್ಕಿತ್ತು. ಈ ಯೋಜನೆಯಡಿ ದುಡಿದವರಿಗೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ (ಡಿಬಿಟಿ) ಉಪಕ್ರಮದಡಿಯಲ್ಲಿ ಭಾರತ ಸರ್ಕಾರವು ಪರಿಹಾರವನ್ನು ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತದೆ.

ಇದನ್ನೂ ಓದಿ:ಉದ್ಯೋಗ ಖಾತ್ರಿ ಕೆಲಸಕ್ಕೆ ಕತ್ತರಿ, ರೊಕ್ಕಾ ಇಲ್ರಿ, ಜೀವನ ತ್ರಾಸರೀ 

ಈ ಕಾರ್ಮಿಕರ ಬಗ್ಗೆ ಲಿಬ್‌ಟೆಕ್ ಇಂಡಿಯಾ ಸಂಸ್ಥೆ, ಬೆಂಗಳೂರಿನ ಅಜೀಂ ಪ್ರೇಂಜಿ ವಿಶ್ವವಿದ್ಯಾನಿಲಯದ ಅನುದಾನದಿಂದ ಸಮೀಕ್ಷೆಯನ್ನು ನಡೆಸಿದ್ದು “ಲೆಂತ್‌ ಆಫ್‌ ದಿ ಲಾಸ್ಟ್ ಮೈಲ್- ನರೇಗ ಪಾವತಿಯಲ್ಲಿನ ವಿಳಂಬ ಮತ್ತು ಅಡಚಣೆಗಳು” ಎಂಬ ಸಂಶೋಧನಾ ವರದಿಯನ್ನು ಬಿಡುಗಡೆ ಮಾಡಿದೆ. ಈ ಸಂಸ್ಥೆ 2018 ರ ಸಪ್ಟೆಂಬರ್‌ ಮತ್ತು ನವೆಂಬರ್‌ ನಡುವೆ ಆಂಧ್ರಪ್ರದೇಶ, ಜಾರ್ಖಂಡ್ ಮತ್ತು ರಾಜಸ್ಥಾನಗಳಲ್ಲಿ ಒಟ್ಟು 1947 ನರೇಗ ಕಾರ್ಮಿಕರನ್ನು ಸಮೀಕ್ಷೆಯಲ್ಲಿ ಒಳಗೊಂಡಿದೆ.

ಸರ್ಕಾರ ಪಾವತಿಸುವ ಹಣವನ್ನು ಪಡೆಯಲು ಬ್ಯಾಂಕು, ಗ್ರಾಹಕ ಸೇವಾಕೇಂದ್ರ, ಇತರ ವ್ಯವಹಾರ ಕೇಂದ್ರ, ಅಂಚೆ ಕಚೇರಿ ಸೇರಿದಂತೆ ಎಟಿಎಂಗಳಲ್ಲಿ ಉದ್ಯೋಗಿಗಳು ಪಡುವ ಕಷ್ಟಗಳ ಬಗ್ಗೆ ಕೂಡಾ ಸಮೀಕ್ಷ ನಡೆಸಲಾಗಿದೆ. ಒಟ್ಟಾರೆಯಾಗಿ, ಪರಿಹಾರ ವಿತರಣೆಯ ಸಮಯದಲ್ಲಿ, ಆಂಧ್ರ ಪ್ರದೇಶದ ಕಾರ್ಮಿಕರು ಕಡಿಮೆ ಕಷ್ಟಗಳನ್ನು ಅನುಭವಿಸಿದರೆ, ಜಾರ್ಖಂಡ್‌‌ನಲ್ಲಿರುವವರು ಹೆಚ್ಚು ಕಷ್ಟಗಳನ್ನು ಎದುರಿಸುತ್ತಾರೆ ಎಂದು ಸಮೀಕ್ಷೆಯು ತಿಳಿಸುತ್ತದೆ.

ಮೂರು ರಾಜ್ಯಗಳಲ್ಲಿ ಆಂಧ್ರಪ್ರದೇಶದಲ್ಲಿ ಮಾತ್ರ ಅಂಚೆ ಕಚೇರಿಗಳನ್ನು ಬಳಕೆ ಮಾಡುತ್ತಿದ್ದು, ಅಲ್ಲಿನ ಸೇವೆಗಳ ಗುಣಮಟ್ಟದಲ್ಲಿದ್ದು ಕಾರ್ಮಿಕರು ಹೆಚ್ಚು ತೃಪ್ತರಾಗಿದ್ದಾರೆ. ಮೂರೂ ರಾಜ್ಯಗಳಲ್ಲಿರುವ ಗ್ರಾಮೀಣ ಬ್ಯಾಂಕುಗಳಲ್ಲೇ ಹೆಚ್ಚು ಜನದಟ್ಟಣೆ ಇರುತ್ತವೆ. ಬ್ಯಾಂಕುಗಳು ತಮ್ಮ ಪಂಚಾಯತ್‌ನಿಂದ ದೂರದಲ್ಲಿರುವುದು ಕಾರ್ಮಿಕರಿಗೆ ಹಣ ಪಡೆಯುವುದು ತ್ರಾಸದಾಯಕವಾಗುತ್ತದೆ. ಅನೇಕ ಸಂದರ್ಭಗಳಲ್ಲಿ, ಕಾರ್ಮಿಕರು ತಮ್ಮ ವೇತನವನ್ನು ಪಡೆಯಲು ಅನೇಕ ಸಾರಿ ಅಲೆದಾಡಬೇಕಾಗುತ್ತದೆ.

ಇದನ್ನೂ ಓದಿ: ಜುಲೈ ತಿಂಗಳೊಂದರಲ್ಲೇ 50 ಲಕ್ಷ ಉದ್ಯೋಗಗಳು ನಷ್ಟ: CMIE

ಜಾರ್ಖಂಡ್‌‌ನಲ್ಲಿ 42% ಮತ್ತು ರಾಜಸ್ಥಾನದಲ್ಲಿ 38% ಜನರು ಬ್ಯಾಂಕುಗಳಿಂದ ತಮ್ಮ ವೇತನವನ್ನು ಪಡೆಯಲು 4 ಗಂಟೆಗಳಿಗಿಂತ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಾರೆ. ಇದಕ್ಕೆ ವಿರುದ್ಧವಾಗಿ, ಇದು ಆಂಧ್ರಪ್ರದೇಶದಲ್ಲಿ ಕೇವಲ 2% ಜನರಿಗಷ್ಟೇ ಆಗುತ್ತದೆ. ಒಟ್ಟಾರೆಯಾಗಿ, ಅಂದಾಜು 45% ಜನರು ತಮ್ಮ ಹಣ ಪಡೆಯಲು ಬ್ಯಾಂಕ್‌ಗೆ ಅನೇಕ ಬಾರಿ ಭೇಟಿ ನೀಡಬೇಕಾಗುತ್ತದೆ.

ಗ್ರಾಹಕ ಸೇವಾ ಕೇಂದ್ರ ಹಾಗೂ ಇತರ ವ್ಯವಹಾರ ಕೇಂದ್ರಗಳು ಬ್ಯಾಂಕಿಗಿಂತಲೂ ಉತ್ತಮ ಪರ್ಯಾಯವಾಗಿ ಕಾಣಿಸಿಕೊಂಡಿದ್ದರೂ, ಅಂದಾಜು 40% ಜನರು ಬಯೋ ಮೆಟ್ರಿಕ್ ವೈಫಲ್ಯದಿಂದಾಗಿ ಅನೇಕ ಬಾರಿ ಅಲ್ಲಿಗೆ ಭೇಟಿ ನೀಡಬೇಕಾಗುತ್ತದೆ. ಈ ಕೇಂದ್ರಗಳಲ್ಲಿ ಪಾಸ್‌ಬುಕ್ ಅಪ್ಡೇಟ್ ಸೌಲಭ್ಯವನ್ನು ಹೊಂದಿಲ್ಲ. ಇದಕ್ಕೆ ಹೋಲಿಸಿದರೆ, ಆಂದ್ರ ಪ್ರದೇಶದಲ್ಲಿ ಅಂಚೆ ಖಾತೆಗಳನ್ನು ಹೊಂದಿರುವ ಜನರು ತಮ್ಮ ಪ್ರತಿ ವಹಿವಾಟಿಗೆ ಪಾಸ್‌ಬುಕ್‌ಗಳನ್ನು ನವೀಕರಿಸುತ್ತಾರೆ. ಆಂಧ್ರ ಪ್ರದೇಶದಲ್ಲಿ ಗ್ರಾಹಕ ಸೇವಾ ಕೇಂದ್ರದಲ್ಲಿ ಹಣ ಪಡೆದಾಗ ರಶೀದಿಗಳನ್ನು ಪಡೆದರೆ, ಜಾರ್ಖಂಡ್ ಮತ್ತು ರಾಜಸ್ಥಾನ್‌ಗಳಲ್ಲಿ ರಶೀದಿಗಳನ್ನು ವಿರಳವಾಗಿ ನೀಡಲಾಗುತ್ತದೆ.

ಈ ಗ್ರಾಹಕ ಸೇವಾ ಕೇಂದ್ರಗಳಲ್ಲಿ ಕೆಲವು ಕಾರ್ಮಿಕರಿಂದ ಅಲ್ಲಿ ವಹಿವಾಟು ನಡೆಸಲು ಶುಲ್ಕ ಪಡೆಯುತ್ತಾರೆ. ಜಾರ್ಖಂಡ್‌ನಲ್ಲಿ ಇದು ಅತ್ಯಧಿಕವಾಗಿದ್ದು, ಅಲ್ಲಿ 45% ಜನರಿಗೆ ಶುಲ್ಕ ವಿಧಿಸಲಾಗುತ್ತದೆ. ಇದರಾಚೆಗೂ ಕಾರ್ಮಿಕರು ಹೆಚ್ಚು ನಂಬಿಕೆ ಉಳಿಸಿರುವ ಸಂಸ್ಥೆಯಾಗಿ ಬ್ಯಾಂಕುಗಳು ಉಳಿದಿವೆ ಎಂದು ಸಮೀಕ್ಷಯು ಉಲ್ಲೇಖಿಸಿದೆ.

ಇದನ್ನೂ ಓದಿ: ಭಾರತದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯ ಮೇಲೆ RCEP ಪರಿಣಾಮಗಳು – ಡಾ. ಬಿ.ಸಿ.ಬಸವರಾಜ್

 

ನರೇಗ
PC: PTI

ಆಧಾರ್ ಆಧಾರಿತ ಪಾವತಿ ಮತ್ತು ಕೇಂದ್ರೀಕರಣ ವ್ಯವಸ್ಥೆಯಿಂದಾಗಿ ಕಾರ್ಮಿಕರಿಗೆ ಕೆಲವೊಮ್ಮೆ ತಮ್ಮ ವೇತನ ಎಲ್ಲಿ ಬರುತ್ತದೆ ಎಂಬ ಮಾಹಿತಿಯಾಗಲೀ ಮತ್ತು ಅವರ ಪಾವತಿಗಳನ್ನು ತಿರಸ್ಕರಿಸುವುದರ ಬಗ್ಗೆ ಸ್ವಲ್ಪವು ಸುಳಿವು ಹೊಂದಿರುವುದಿಲ್ಲ ಎಂದು ಸಮೀಕ್ಷೆಯು ಹೇಳುತ್ತದೆ. ಸರಿಯಾದ ಖಾತೆ ಸಂಖ್ಯೆಗಳು ಇಲ್ಲದಿರುವುದು ಹಾಗೂ ಈ ಸಂಖ್ಯೆಗಳಿಗೆ ಆಧಾರ್‌‌ ಮ್ಯಾಪಿಂಗ್‌‌ನ ತಾಂತ್ರಿಕ ಅಡಚಣೆಯಿಂದಾಗಿ ಇವರ ಪಾವತಿಯನ್ನು ತಿರಸ್ಕರಿಸಲಾಗುತ್ತಿದೆ.

ಅಧಿಕೃತ ಅಂಕಿಅಂಶಗಳ ಪ್ರಕಾರ, ಜುಲೈ 2020 ರಂತೆ, ಕಳೆದ ಐದು ವರ್ಷಗಳಲ್ಲಿ, ಸುಮಾರು ರೂ. 4,800 ಕೋಟಿ ಮೌಲ್ಯದ ಪಾವತಿಗಳನ್ನು ಭಾರತದಾದ್ಯಂತ ತಿರಸ್ಕರಿಸಲಾಗಿದೆ ಮತ್ತು ಸುಮಾರು 1,274 ಕೋಟಿ ರೂ.ಗಳನ್ನು ಕಾರ್ಮಿಕರಿಗೆ ಪಾವತಿಸಲು ಬಾಕಿ ಇದೆ. ಒಟ್ಟಾರೆ ಬ್ಯಾಂಕಿಂಗ್ ಬಗ್ಗೆ ಮತ್ತು ತಮ್ಮ ಹಕ್ಕುಗಳ ಬಗ್ಗೆ ಇವರಲ್ಲಿ ಜಾಗೃತಿ ಕಡಿಮೆಯಾಗಿದೆ. ಈ ಎಲ್ಲಾ ಅನಾನುಕೂಲತೆಗಳ ಹೊರತಾಗಿಯೂ ಕಾರ್ಮಿಕರು ಬ್ಯಾಂಕ್‌ಗಳಿಗೆ ತಮ್ಮ ಆದ್ಯತೆ ನೀಡುತ್ತಾರೆ. ಸಂಬಳ ಪಡೆಯುವಲ್ಲಿ ತೊಂದರೆ ಆದವರಲ್ಲಿ ಕೇವಲ 28% ಜನರಷ್ಟೇ ದೂರು ನೀಡುತ್ತಾರೆ ಎಂದು ಸಮೀಕ್ಷೆ ತಿಳಿಸುತ್ತದೆ. ಬಹುತೇಕ ಮಂದಿ ಕಾರ್ಮಿಕರಿಗೆ ಮೌಖಿಕ ದೂರು ನೀಡಲು ಮಾತ್ರ ಸಾಧ್ಯವಾಗುತ್ತದೆ ಎಂದು ಕೂಡ ವರದಿ ತಿಳಿಸಿದೆ.

ಇದನ್ನೂ ಓದಿ: ಮಹಿಳಾ ರೈತರ ಹಿತದೃಷ್ಟಿಗೆ ಮಾರಕವಾದ ಕೃಷಿ ಕಾಯ್ದೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...