ನಿನ್ನೆ ಪ್ರಾಂಭವಾದ ಮಾನ್ಸೂನ್ ಅಧಿವೇಶದಲ್ಲಿ ಭಾಗವಹಿಸುವ ಸಂಸದರಿಗೆ ಕುಳಿತು ಮಾತನಾಡುವ ಅವಕಾಶವನ್ನು ಲೋಕಸಭಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನೀಡಲಾಗಿದೆ.
ಕೊರೊನಾ ಸಾಂಕ್ರಾಮಿಕವನ್ನು ತಡೆಯಲು ಈ ಉಪಕ್ರಮವನ್ನು ಅಳವಡಿಸಲಾಗಿದ್ದು, ಮಾನ್ಸೂನ್ ಅಧಿವೇಶನವು ಅಕ್ಟೋಬರ್ 1 ರವರೆಗೆ ಮುಂದುವರಿಯುತ್ತದೆ.
ಸಂಸದರು ತಮ್ಮ ಸ್ಥಳದಲ್ಲೇ ಕುಳಿತುಕೊಂಡು ಮಾತನಾಡಲು ಅವಕಾಶ ನೀಡಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, “ಮಾನ್ಸೂನ್ ಅಧಿವೇಶನದಲ್ಲಿ ಎಲ್ಲಾ ಸಂಸದರು ತಮ್ಮ ಆಸನಗಳಲ್ಲಿ ಕುಳಿತೆ ಮಾತನಾಡುತ್ತಾರೆ. ಕೊರೊನಾ ಸಾಂಕ್ರಾಮಿಕದ ದೃಷ್ಟಿಯಿಂದ ಈ ಉಪಕ್ರಮವನ್ನು ತೆಗೆದುಕೊಳ್ಳಲಾಗಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಲಾಕ್‌ಡೌನ್ ಸಮಯದಲ್ಲಿ ಮೃತಪಟ್ಟ ವಲಸಿಗರ ಮಾಹಿತಿ ಇಲ್ಲ: ಕೇಂದ್ರ ಸರ್ಕಾರ
ತಮ್ಮ ಸ್ಥಾನಕ್ಕೆ ಗೌರವ ನೀಡುವ ಸಂಕೇತವಾಗಿ ಈ ಹಿಂದೆ ಎಲ್ಲಾ ಸಂಸದರು ಸಂಸತ್ತಿನಲ್ಲಿ ಎದ್ದು ನಿಂತು ಮಾತನಾಡುತ್ತಿದ್ದರು.
ವಿಶೇಷ ಮಾನ್ಸೂನ್ ಅಧಿವೇಶನವನ್ನು ಸ್ವಾಗತಿಸಿದ ಸ್ಪೀಕರ್ ಓಂ ಬಿರ್ಲಾ, ಅಧಿವೇಶನದ ಮೊದಲನೆ ದಿನದಂದು ಸಂಸತ್ ಸದಸ್ಯರ ಗರಿಷ್ಠ ಉಪಸ್ಥಿತಿಯ ಬಗ್ಗೆ ಸಂತೋಷ ವ್ಯಕ್ತಪಡಿಸಿ, ಎಲ್ಲಾ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಖಾತ್ರಿಪಡಿಸಲಾಗಿದೆ ಮತ್ತು ಗರಿಷ್ಠ ಡಿಜಿಟಲೀಕರಣ ಮಾಡಲಾಗಿದೆ ಎಂದು ಹೇಳಿದರು.
ಸದನದ ಅಧಿವೇಶನವನ್ನು ಪ್ರತಿದಿನ ನಾಲ್ಕು ಗಂಟೆಗಳ ಕಾಲ ಮಾತ್ರ ನಡೆಸಲಾಗುವುದರಿಂದ ಸಂಕ್ಷಿಪ್ತವಾಗಿ ಮಾತನಾಡುವಂತೆ ಸಂಸದರೊಂದಿಗೆ ವಿನಂತಿಸಿದ್ದಾರೆ.
ಇದನ್ನೂಓದಿ: ನೀವು ಲೆಕ್ಕ ಹಾಕಿಲ್ಲದಿದ್ದರಿಂದ ಯಾರು ಮೃತಪಟ್ಟಿಲ್ಲವೆ? ಕೇಂದ್ರದ ವಿರುದ್ಧ ರಾಹುಲ್ ಕಿಡಿ


