ಕನ್ಯತ್ವ ಪರೀಕ್ಷೆಗೆ ಒತ್ತಾಯಿಸುವುದು ಮಹಿಳೆಯ ಘನತೆಯ ಹಕ್ಕನ್ನು ಉಲ್ಲಂಘಿಸುತ್ತದೆ: ಛತ್ತೀಸ್‌ಗಢ ಹೈಕೋರ್ಟ್

ಮಹಿಳೆಯೊಬ್ಬಳನ್ನು ಕನ್ಯತ್ವ ಪರೀಕ್ಷೆಗೆ ಒಳಪಡಿಸಲು ಒತ್ತಾಯಿಸಲಾಗುವುದಿಲ್ಲ ಎಂದು ಛತ್ತೀಸ್‌ಗಢ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. “ಅಂತಹ ಪದ್ಧತಿಯು ಭಾರತೀಯ ಸಂವಿಧಾನದ ವಿಧಿ 21 ರ ಉಲ್ಲಂಘನೆಯಾಗಿದೆ. ವಿಧಿ 21 ಜೀವನದ ಮೂಲಭೂತ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ; ಇದರಲ್ಲಿ ಘನತೆಯ ಹಕ್ಕೂ ಸೇರಿದೆ” ಎಂದು ನ್ಯಾಯಾಲಯ ಒತ್ತಿ ಹೇಳಿದೆ. “ಕನ್ಯತ್ವ ಪರೀಕ್ಷೆಗೆ ಅನುಮತಿ ನೀಡುವುದು ಮೂಲಭೂತ ಹಕ್ಕುಗಳು, ನೈಸರ್ಗಿಕ ನ್ಯಾಯದ ಪ್ರಮುಖ ತತ್ವಗಳು ಹಾಗೂ ಮಹಿಳೆಯ ಗೌಪ್ಯತೆ ಹಕ್ಕಿಗೆ ವಿರುದ್ಧವಾಗಿದೆ. ವಿಧಿ 21 ಮೂಲಭೂತ ಹಕ್ಕುಗಳ … Continue reading ಕನ್ಯತ್ವ ಪರೀಕ್ಷೆಗೆ ಒತ್ತಾಯಿಸುವುದು ಮಹಿಳೆಯ ಘನತೆಯ ಹಕ್ಕನ್ನು ಉಲ್ಲಂಘಿಸುತ್ತದೆ: ಛತ್ತೀಸ್‌ಗಢ ಹೈಕೋರ್ಟ್