ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೋಬ್ಡೆ ಅವರು ಮಂಗಳವಾರದಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ನಾಗಪುರದ ಕೇಂದ್ರ ಕಚೇರಿಯಲ್ಲಿ ಭೇಟಿಯಾಗಿ ವಿವಾದ ಸೃಷ್ಟಿಸಿದ್ದಾರೆ. ಕಚೇರಿಯಲ್ಲಿ ಅವರು ಸುಮಾರು ಒಂದು ಗಂಟೆಗಳ ಕಾಲ ಸಭೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಆರೆಸ್ಸೆಸ್ ಅಧೀಕೃತವಾಗಿ ಇಂತಹದ್ದೊಂದು ಸಭೆ ನಡೆರುವುದನ್ನು ನಿರಾಕರಿಸಿದ್ದಾರಾದರೂ, ವಿಶ್ವಾಸಾರ್ಹ ಮೂಲಗಳು ಸಭೆ ನಡೆದಿರುವುದನ್ನು ದೃಪಡಿಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. “ಮಹಲ್ ಪ್ರದೇಶದ ಆರ್‌ಎಸ್‌ಎಸ್ ಪ್ರಧಾನ ಕಚೇರಿಯಲ್ಲಿ ಸಂಜೆ 4 ರಿಂದ 5 ರ ನಡುವೆ ಈ ಸಭೆ ನಡೆಯಿತು” ಎಂದು ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.
ಇದನ್ನೂ ಓದಿ: ಸಂಸ್ಕೃತ ಅಧೀಕೃತ ರಾಷ್ಟ್ರೀಯ ಭಾಷೆ ಎಂದು ಅಂಬೇಡ್ಕರ್ ಪ್ರಸ್ತಾಪಿಸಿದ್ದರು: ಮುಖ್ಯ ನ್ಯಾಯಮೂರ್ತಿ ಬೋಬ್ಡೆ ವಿವಾದ
ನ್ಯಾಯಮೂರ್ತಿ ಬೋಬ್ಡೆ ಅವರು ಆರೆಸ್ಸೆಸ್ ಮುಖ್ಯಸ್ಥರನ್ನು ಪ್ರಧಾನ ಕಚೇರಿಯಲ್ಲಿ ಔಪಚಾರಿಕವಾಗಿ ಭೇಟಿಯಾಗಿದ್ದು ಇದೇ ಮೊದಲು ಎನ್ನಲಾಗಿದೆ. ಇಷ್ಟೆ ಅಲ್ಲದೆ ಅವರು ಮುಂಬೈನ ನಾಗಪುರದ ಮಹಲ್ ಪ್ರದೇಶದಲ್ಲಿರುವ ಆರೆಸ್ಸೆಸ್ ಸಂಸ್ಥಾಪಕ ಕೇಶವ್ ಬಲಿರಾಮ್ ಹೆಡ್ಗೆವಾರ್ ಅವರ ಜನ್ಮಸ್ಥಳಕ್ಕೂ ಭೇಟಿ ನೀಡಿದ್ದಾರೆ ಎಂದು TNIE ವರದಿ ಮಾಡಿದೆ.
ನ್ಯಾಯಮೂರ್ತಿ ಬೋಬ್ಡೆ ಅವರು ಮಹಾರಾಷ್ಟ್ರದ ನಾಗ್ಪುರದವರಾಗಿದ್ದು, ಅಲ್ಲಿ ಹಲವು ವರ್ಷಗಳು ಕಾನೂನು ಅಭ್ಯಾಸ ಮಾಡುತ್ತಿದ್ದರು. ಈ ವರ್ಷದ ಆರಂಭದಲ್ಲಿ ತಮ್ಮ ವೃತ್ತಿಯಿಂದ ಅವರು ನಿವೃತ್ತರಾಗಿದ್ದರು. ನಿವೃತ್ತಿಯ ನಂತರ, ಎಪ್ರಿಲ್‌ನಿಂದ ಅವರು ನಾಗ್ಪುರದಲ್ಲಿ ವಾಸಿಸುತ್ತಿದ್ದಾರೆ.
ಅವರಿಗಿಂತಲೂ ಹಿಂದೆ ನಿವೃತ್ತರಾಗಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು, ಕಳೆದ ವರ್ಷ ನಿವೃತ್ತಿಯ ನಂತರ ರಾಜ್ಯಸಭೆಗೆ ನಾಮನಿರ್ದೇಶನಗೊಂಡರು. ಇದು ಕೂಡಾ ಭಾರೀ ವಿವಾದವನ್ನು ಸೃಷ್ಟಿಸಿತ್ತು.
ಇದನ್ನೂ ಓದಿ: ಬೈಕ್ ಬಿಜೆಪಿ ನಾಯಕನ ಮಗನದ್ದು; ಹೆಲ್ಮೆಟ್, ಮಾಸ್ಕ್ ಎಲ್ಲಿ ಮೈ ಲಾರ್ಡ್…!



ನಮ್ಮ ದೇಶದಲ್ಲಿಂದು, ನ್ಯಾಯಮೂರ್ತಿಗಳು ನಿವೃತ್ತರಾದ ನಂತರ ಆಡಳಿತಾರೂಢರ ಕೃಪಾಕಟಾಕ್ಶ ಪಡೆಯಲು, ಬಿಕ್ಶುಕರಂತೆ ವರ್ತಿಸುತ್ತಿರುವುದು ನ್ಯಾಯಾಂಗದ ಗನತೆಗೆ ಕುಂದು ತರುತ್ತಿದೆ ಹಾಗೂ ನ್ಯಾಯಾಂಗದ ಬಗ್ಗೆ ಜನಸಾಮಾನ್ಯರು ನಂಬಿಕೆ ಕಳೆದುಕೊಳ್ಳಲು ಪ್ರೇರಣೆ ನೀಡುತ್ತಿದೆ.