ಹಿಂದೂ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡುತ್ತಾರೆ ಇದು ಸರಿಯೇ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಪ್ರಶ್ನಿಸಿದರು.
ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೊಗಡು ಶಿವಣ್ಣ, ಲಿಂಗಾಯತ ಸಮಾಜವನ್ನು ಒಡೆಯುವ ಕ್ಷುಲ್ಲಕ ವ್ಯಕ್ತಿ ಯಾರು..? ನಾನು ಕಾಲೋನಿಗಳಿಗೆ ಭೇಟಿ ನೀಡಿ, ದಲಿತರ ಮನೆಯಲ್ಲಿ ಊಟ ಮಾಡುತ್ತೇನೆ. ಕುರುಬರ ಮನೆಯಲ್ಲೂ ಉಂಡು ತಿಂದಿದ್ದೇನೆ. ಅವರು ಬಂದು ತಿನ್ನಲಿ ನೋಡೋಣ ಎಂದು ಸವಾಲು ಹಾಕಿದರು.
ಬಾಗಲಕೋಟೆಯಲ್ಲಿ ಏಕವಚನದಲ್ಲೇ ಮಾತನಾಡುತ್ತಾನೆ. ಮುಖ್ಯಮಂತ್ರಿಯಾಗಿದ್ದವನಿಗೆ ಮಾತನಾಡಲು ಬರುವುದಿಲ್ಲ. ಪ್ರಧಾನಿ ಅವರನ್ನು ನರಹಂತಕ ಎಂದು ಕರೆಯುತ್ತಾರೆ. ಹೀಗೆ ಕರೆದರೆ ಹಿಂದೂ ಬ್ಲಡ್ ತುಂಬಿಕೊಂಡಿರುವ ನನ್ನಂಥವರು ಸಹಿಸಲು ಸಾಧ್ಯವಿಲ್ಲ. ಈಗ ನಾಟಕ ಆರಂಭವಾಗಿದೆ ಎಂದು ಕಿಡಿಕಾರಿದರು.
ಮಾತೆತ್ತಿದರೆ ಯಡಿಯೂರಪ್ಪ ವಿರುದ್ಧ ಮಾತನಾಡುತ್ತಾರೆ. ಜೈಲಿಗೆ ಹೋಗಿ ಬಂದವರು ಎನ್ನುತ್ತಾರೆ. ಹೀಗೆ ನಮ್ಮ ಮುಖಂಡರ ವಿರುದ್ಧ ಮಾತನಾಡಿದರೆ ನಾವು ಸುಮ್ಮನಿರಲು ಸಾಧ್ಯವಿಲ್ಲ. ನಾನು ಯಾರ ಬಳಿಯೂ ಕ್ಷಮೆಯಾಚಿಸುವುದಿಲ್ಲ ಎಂದರು.
ನಾನು ಸಜ್ಜನರು, ದುರ್ಜನರಲ್ಲೂ ಮತಯಾಚಿಸುತ್ತೇನೆ. ದುರ್ಜನರು, ಸಜ್ಜನರೊಂದಿಗೂ ಇರುತ್ತೇನೆ. ಪಿಕ್ ಪ್ಯಾಕೇಟರ್ಗೆ ಕೈ ಮುಗಿದು ವೋಟು ಕೇಳುತ್ತೇನೆ. ದಾರಿ ತಪ್ಪಿರುವ ಮಹಿಳೆಗೂ ಕೈ ಮುಗಿಯುತ್ತೇನೆ. ಸ್ವಾಮೀಜಿಗೂ ಕೈ ಮುಗಿಯುತ್ತೇನೆ ಎಂದು ತಮ್ಮದೇ ಧಾಟಿಯಲ್ಲಿ ಹೇಳಿದರು.



ನರೇಂದ್ರ ಮೋದಿ ಹಿಂದೂ ಪ್ರಧಾನಿ ಎಂದು ಹೇಳುವ ನೀವು ಸಾರ್ವಜನಿಕವಾಗಿ ಮಾತನಾಡಲಿಕ್ಕೇ ಅಯೋಗ್ಯರು,,ಅಷ್ಟಕ್ಕೂ ಯಡಿಯೂರಪ್ಪ ಜೈಲಿಗೆ ಹೋಗಲಿಕ್ಕೆಂದೇ ರಾಜಿನಾಮೆ ಕೊಟ್ಟದ್ದು ಇಡೀ ಜಗತ್ತಿಗೆ ಗೊತ್ತಿದೆ ಅದನ್ನು ಯಾಕೆ ಮುಚ್ಚಿಡಲು ಪ್ರಯತ್ನ ಮಾಡುತ್ತಾ ಇದ್ದಿರಿ,,ಇನ್ನೂ ಮೋದಿ ನರಹಂತಕ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ,,ನಿಮ್ಮ ಮೈಯಲ್ಲಿ ಹಿಂದೂ ಬ್ಲಡ್ ತುಂಬಿಕೊಂಡಿದೆ ಎಂದು ಹೇಳುವ ನೀವು ನಿಮ್ಮ ಪೂರ್ವಜರ ಬಗ್ಗೆ ಸಂಪೂರ್ಣ ಅಧ್ಯಯನ ಮಾಡುವುದು ಒಳಿತು…