Homeಮುಖಪುಟಗೋವಾ ಮಾಜಿ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಮಗ ಬಿಜೆಪಿಗೆ ರಾಜೀನಾಮೆ

ಗೋವಾ ಮಾಜಿ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಮಗ ಬಿಜೆಪಿಗೆ ರಾಜೀನಾಮೆ

ಪಣಜಿ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಅವರು ಘೋಷಿಸಿದ್ದಾರೆ

- Advertisement -
- Advertisement -

ಗೋವಾ ಬಿಜೆಪಿಯ ಪ್ರಮುಖ ನಾಯಕ, ರಾಜ್ಯದ ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್ ಪರಿಕ್ಕರ್‌ ಅವರ ಪುತ್ರ ಉತ್ಪಲ್ ಪರಿಕ್ಕರ್ ಶುಕ್ರವಾರ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ವರಿಷ್ಠರು ವಿಧಾನಸಭಾ ಚುನಾವಣೆಗೆ ಟಿಕೆಟ್ ನಿರಾಕರಿಸಿದ ನಂತರ ಪಣಜಿ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಅವರು ಘೋಷಿಸಿದ್ದಾರೆ.

ಪಣಜಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಉತ್ಪಲ್ ಪರಿಕ್ಕರ್‌, “ಜನರಿಗೆ ಆಯ್ಕೆಯನ್ನು ನೀಡಲು ಬಯಸಿದ್ದರಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಪ್ರಸ್ತುತ ಬಿಜೆಪಿಯಲ್ಲಿ ನಿರಂತರವಾಗಿ ಮೌಲ್ಯಗಳು ಕುಸಿಯುತ್ತಿದೆ, ಈ ಮೌಲ್ಯಗಳ ಪರವಾಗಿ ನಿಲ್ಲುವ ಸಮಯ ಬಂದಿದೆ” ಎಂದು ಹೇಳಿದ್ದಾರೆ.

“ಈ ಎಲ್ಲಾ ವರ್ಷಗಳಲ್ಲಿ ನನ್ನ ತಂದೆ ಮನೋಹರ್ ಪರಿಕ್ಕರ್‌ ಪಣಜಿಯ ಜನರೊಂದಿಗೆ ಅಪಾರವಾದ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು. ನನಗೂ ಅವರ ಜೊತೆ ಈ ಬಾಂಧವ್ಯ ಬೆಳೆದಿದೆ. ಆದರೆ ಕಾರಣಾಂತರಗಳಿಂದ ಪಣಜಿಗೆ ಉಮೇದುವಾರಿಕೆ ಪಡೆಯಲು ಸಾಧ್ಯವಾಗಿಲ್ಲ. ನನ್ನ ಬದಲಾಗಿ, ಕಳೆದ ಎರಡು ವರ್ಷಗಳ ಹಿಂದೆ ಅವಕಾಶಕ್ಕಾಗಿ ಬಿಜೆಪಿ ಸೇರಿದ ಯಾರಿಗೊ ಅದನ್ನು ನೀಡಲಾಗಿದೆ” ಎಂದು ಉತ್ಪಲ್ ಪರಿಕ್ಕರ್ ಹೇಳಿದ್ದಾರೆ.

ಇದನ್ನೂ ಓದಿ:ಗೋವಾ BJPಗೆ ಭಾರಿ ಮುಖಭಂಗ: ಒಂದೇ ದಿನದಲ್ಲಿ ಇಬ್ಬರು ಶಾಸಕರು ರಾಜೀನಾಮೆ!

ಪ್ರಸ್ತುತ ಬಿಜೆಪಿಯು ಪಣಜಿ ಶಾಸಕ ಮತ್ತು ಮಾಜಿ ಕಾಂಗ್ರೆಸ್ಸಿಗ ಅಟಾನಾಸಿಯೊ ‘ಬಾಬುಷ್’ ಮೊನ್ಸೆರೆಟ್ ಅವರಿಗೆ ಟಿಕೆಟ್‌ ನೀಡಲಾಗಿದೆ. ಈ ಕ್ಷೇತ್ರವನ್ನು ಕಳೆದ 25 ವರ್ಷಗಳಲ್ಲಿ ಮನೋಹರ್‌ ಪರಿಕ್ಕರ್‌ ಸ್ಪರ್ಧಿಸುತ್ತಿದ್ದರು. ಹೀಗಾಗಿ ಪಣಜಿಯಿಂದ ತನಗೆ ಟಿಕೆಟ್‌ ನೀಡಬೇಕು ಎಂದು ಉತ್ಪಲ್‌ ಪರಿಕ್ಕರ್‌ ಬಿಜೆಪಿಗೆ ಕೇಳಿದ್ದರು.

ಪಣಜಿ ಕ್ಷೇತ್ರಕ್ಕೆ ಬಿಜೆಪಿ ಮಾಡಿರುವ ಆಯ್ಕೆಯ ಬಗ್ಗೆ ಪ್ರತಿಕ್ರಿಯಿಸಿದ ಉತ್ಪಲ್ ಪರಿಕ್ಕರ್‌, “ಈಗಿನ ಅಭ್ಯರ್ಥಿಯ ಬಗ್ಗೆ ಮಾತನಾಡಲು ನನಗೆ ನಾಚಿಕೆಯಾಗುತ್ತಿದೆ. ಬಿಜೆಪಿಯು ನನ್ನ ಪ್ರೊಫೈಲ್ ಮತ್ತು ಅವರು ಟಿಕೆ‌ಟ್‌ ನೀಡಿದ ಅಭ್ಯರ್ಥಿಯ ವಿವರವನ್ನು ನೋಡಬಹುದು. 2019 ರಲ್ಲಿ ಪಣಜಿ ಉಪಚುನಾವಣೆಯ ಪ್ರಚಾರ ಮಾಡುವಾಗ ಮುಖ್ಯಮಂತ್ರಿ ಪ್ರಮೋದ್ ಸಾವಂತ್‌ ಕೂಡಾ ಮಾನ್ಸೆರೇಟ್ ಅವರನ್ನು ಟೀಕಿಸಿದ್ದರು” ಎಂದು ಎಂದು ಹೇಳಿದ್ದಾರೆ.

ಮನೋಹರ್ ಪರಿಕ್ಕರ್ ಅವರು ನಂಬಿದ್ದ ಮೌಲ್ಯಗಳ ಪರವಾಗಿ ನಿಲ್ಲುವುದನ್ನು ಬಿಟ್ಟು ನನಗೆ ಬೇರೆ ದಾರಿಯಿಲ್ಲ. ಪಣಜಿಯ ಜನರು ನನ್ನ ರಾಜಕೀಯ ಭವಿಷ್ಯವನ್ನು ನಿರ್ಧರಿಸುತ್ತಾರೆ. ಅವರ ಆತ್ಮದ ಜೊತೆಗೆ ಬಿಜೆಪಿ ಉಳಿದಿದೆಯೆ ಅಥವಾ ಅವರನ್ನು ತೊರೆದಿದೆಯೇ ಎಂದು ಜನರು ಪ್ರಶ್ನಿಸಬೇಕು ಎಂದು ಉತ್ಪಲ್ ಪರಿಕ್ಕರ್‌ ಹೇಳಿದ್ದಾರೆ.

ಇದನ್ನೂ ಓದಿ:‘ಕೋಮುವಾದಿ ಪಕ್ಷ’: TMC ಸೇರಿದ ಮೂರೇ ತಿಂಗಳಲ್ಲಿ ಪಕ್ಷದಿಂದ ಹೊರ ನಡೆದ ಗೋವಾದ ಮಾಜಿ ಶಾಸಕ!

ಶಿವಸೇನೆ ಮತ್ತು ಆಮ್ ಆದ್ಮಿ ಪಾರ್ಟಿ (ಎಎಪಿ) ಯಂತಹ ಇತರ ಪಕ್ಷಗಳ ಬೆಂಬಲವನ್ನು ನೀವು ಸ್ವಾಗತಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಉತ್ಪಲ್ ಪರಿಕ್ಕರ್‌, “ಮಾನ್ಸೆರೇಟ್ ಅವರಂತಹ ಅಭ್ಯರ್ಥಿಯ ವಿರುದ್ಧ ಹೋರಾಡಲು ಅಗತ್ಯವಿರುವ ಯಾವುದೇ ಬೆಂಬಲ ಯಾವಾಗಲೂ ಸ್ವಾಗತಾರ್ಹ” ಎಂದು ಹೇಳಿದ್ದಾರೆ.

ಬಿಜೆಪಿಯು ಗುರುವಾರ ಪ್ರಕಟಿಸಿದ 34 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಮಾನ್ಸೆರೇಟ್ ಮತ್ತು ಅವರ ಪತ್ನಿ ಜೆನ್ನಿಫರ್ ಅವರಿಗೆ ಟಿಕೆಟ್ ನೀಡಲಾಗಿದೆ. ಎರಡು ವರ್ಷಗಳ ಅಂತರವನ್ನು ಹೊರತುಪಡಿಸಿ, ಪಣಜಿ ಕ್ಷೇತ್ರವನ್ನು ದಿವಂಗತ ಮನೋಹರ್‌ ಪರಿಕ್ಕರ್ ಅವರು 1994 ರಿಂದ ಮಾರ್ಚ್ 2019 ರ ವರೆಗೂ ಪ್ರತಿನಿಧಿಸಿದ್ದರು.

ಶಿವಸೇನೆಯ ಸಂಜಯ್ ರಾವತ್ ಮತ್ತು ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಈ ಹಿಂದೆಯೆ ಉತ್ಪಲ್ ಪರಿಕ್ಕರ್ ಅವರಿಗೆ ಬೆಂಬಲ ನೀಡುವ ಭರವಸೆ ನೀಡಿದ್ದರು. ಆದರೆ ಕಾಂಗ್ರೆಸ್ ಪಣಜಿಯಿಂದ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಶಿವಸೇನೆ ನಾಯಕ ಸಂಜಯ್‌ ರಾವತ್ ಅವರು ಉತ್ಪಲ್ ಪರಿಕ್ಕರ್ ಅವರನ್ನು ಬೆಂಬಲಿಸಲು ಎಲ್ಲಾ ವಿರೋಧ ಪಕ್ಷಗಳಿಗೆ ಕರೆ ನೀಡಿದ್ದರು.

ಇದನ್ನೂ ಓದಿ:ಗೋವಾ BJP ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಪರಿಕ್ಕರ್‌ ಮಗನಿಗೆ ಪಣಜಿಯಿಂದ ಟಿಕೆಟ್ ನಿರಾಕರಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಧಾರವಾಡ ಅಖಾಡ: ಕೇಸರಿ ಕೋಟೆಯಲ್ಲೇ ಸಂಘೀ ಸೇನಾಧಿಪತಿ ಪ್ರಹ್ಲಾದ್ ಜೋಶಿಗೆ ನಡುಕ!!

0
ಪೇಡಾ ನಗರಿ, ಸಾಂಸ್ಕೃತಿಕ ರಾಜಧಾನಿ, ಕರ್ನಾಟಕದ ಆಕ್ಸ್‌ಫರ್ಡ್ ಎಂದೆಲ್ಲ ಗುರುತಿಸಲ್ಪಡುವ ಧಾರವಾಡ ನಗರ ಕೇಂದ್ರವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರ ಮಲೆನಾಡು, ಅರೆಮಲೆನಾಡು ಮತ್ತು ಬಯಲುನಾಡುಗಳ ವಿಭಿನ್ನ ನೈಸರ್ಗಿಕ ಗುಣ-ಧರ್ಮದ ಸೀಮೆ. ಖಡಕ್ ಜವಾರಿ...