Homeಮುಖಪುಟಅತ್ಯಾಚಾರ ಪ್ರಕರಣ: ಬೆಂಗಳೂರಿನಲ್ಲಿ ತಮಿಳುನಾಡಿನ ಮಾಜಿ ಸಚಿವ ಎಂ.ಮಣಿಕಂಠನ್ ಬಂಧನ

ಅತ್ಯಾಚಾರ ಪ್ರಕರಣ: ಬೆಂಗಳೂರಿನಲ್ಲಿ ತಮಿಳುನಾಡಿನ ಮಾಜಿ ಸಚಿವ ಎಂ.ಮಣಿಕಂಠನ್ ಬಂಧನ

- Advertisement -

ತಮಿಳುನಾಡಿನ ಎಐಡಿಂಕೆ ಸರ್ಕಾರದ ಅವಧಿಯಲ್ಲಿ ಮಂತ್ರಿಯಾಗಿದ್ದ ಎಂ.ಮಣಿಕಂಠನ್, ಇಂಡೊ-ಮಲೇ‍ಷಿಯಾ ಮೂಲದ ಮಹಿಳೆಯೊಬ್ಬರನ್ನು ಅತ್ಯಾಚಾರ ಮಾಡಿದ ಆರೋಪದಲ್ಲಿ ಭಾನುವಾರ ಬೆಂಗಳೂರಿನಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಭಾನುವಾರ ಬೆಳಗ್ಗೆ ಬೆಂಗಳೂರು ನಗರದಲ್ಲಿ ಚೆನ್ನೈನ ವಿಶೇಷ  ಪೊಲೀಸರ ತಂಡ ಮಣಿಕಂಠನ್ ಅವರನ್ನು ಬಂಧಿಸಿ ತಮಿಳುನಾಡಿಗೆ ಕರೆದುಕೊಂಡು ಹೋಗಿದೆ.

ಇಂಡೊ-ಮಲೇ‍ಷಿಯಾ ಮೂಲದ ಮಹಿಳೆಯೊಬ್ಬರನ್ನು ಅತ್ಯಾಚಾರ ಮಾಡಿದ, ಗರ್ಭಪಾತ ಮಾಡಿಸಿದ ಮತ್ತು ಬೆದರಿಕೆ ಒಡ್ಡಿದ ಕೃತ್ಯಗಳಲ್ಲಿ ತೊಡಗಿದ ಆರೋಪವನ್ನು ಮಾಜಿ ಸಚಿವ ಮಣಿಕಂಠನ್ ಎದುರಿಸುತ್ತಿದ್ದಾರೆ.

ಮದ್ರಾಸ್ ಹೈಕೋರ್ಟ್‌ನಲ್ಲಿ  ತಮ್ಮ ಬಂಧನಕ್ಕೆ ತಡಕೋರಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಮದ್ರಾಸ್ ಹೈಕೋರ್ಟ್ ಮಣಿಕಂಠನ್ ಜಾಮೀನು ಅರ್ಜಿಯನ್ನು ವಿಚಾರಣೆ ಮಾಡಿ ಜೂನ್ 9 ರ ವರೆಗೆ ಅವರನ್ನು ಬಂಧಿಸದಂತೆ ಆದೇಶ ನೀಡಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಮಣಿಕಂಠನ್ ತಮಿಳುನಾಡನ್ನು ತೊರೆದು ತಲೆಮರೆಸಿಕೊಂಡಿದ್ದರು. ಬೆಂಗಳೂರಿನಲ್ಲಿ ಮಣಿಕಂಠನ್ ಅಡಗಿರುವ ನಿಖರ ಮಾಹಿತಿಯನ್ನು ಪಡೆದ ಪೊಲೀಸರು ಇಂದು ಮುಂಜಾನೆ ಅವರನ್ನು ಬಂಧಿಸಿ ತಮಿಳುನಾಡಿಗೆ ಕರೆದೊಯ್ದಿದ್ದಾರೆ.

ಇದನ್ನೂ ಓದಿ: ಲಕ್ಷದ್ವೀಪಕ್ಕೆ ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲಿಸುವುದಿಲ್ಲ: ಆಯಿಷಾ ಸುಲ್ತಾನಾ

ಕಳೆದ ತಿಂಗಳು ಮಲೇಷಿಯಾ ಮೂಲದ ಮಹಿಳೆ ಆಡ್ಯಾರ್ ಆಲ್ ವಿಮೆನ್ ಪೊಲೀಸ್ ಠಾಣೆಯಲ್ಲಿ ಮಣಿಕಂದನ್ ಅವರ ವಿರುದ್ಧ ಮೋಸ, ಅತ್ಯಾಚಾರ, ಗರ್ಭಪಾತದ ಆರೋಪದಲ್ಲಿ ದೂರು ದಾಖಲಿಸಿದ್ದರು.  ಆಡ್ಯಾರ್ ಪೊಲೀಸರು ಮಣಿಕಂಠನ್ ವಿರುದ್ಧ IPC ಸೆಕ್ಷನ್ 376 ( ಅತ್ಯಾಚಾರ) ,ಸೆಕ್ಷನ್ 313 (ಗರ್ಭಪಾತ), ಸೆಕ್ಷನ್ 323 ( ಸ್ವಯಂ ಪ್ರೇರಿತ ಹಲ್ಲೆ), ಸೆಕ್ಷನ್ 417(ಮೋಸ), ಸೆಕ್ಷನ್ 506(i)(ಅಪರಾಧಿಕ ಕೃತ್ಯಕ್ಕೆ ಕುಮ್ಮಕ್ಕು) IT ಕಾಯ್ದೆ ಸೇರಿ ಹಲವು ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು.

ಮಣಿಕಂದನ್ ಕಳೆದ ನಾಲ್ಕು ವರ್ಷಗಳಿಂದ ತಮ್ಮ ಜೊತೆ ಲಿವ್‌ ಇನ್ ಸಂಬಂಧದಲ್ಲಿ ಇದ್ದಾರೆ. 3 ಸಾರಿ ಬಲವಂತದಿಂದ ಗರ್ಭಪಾತವನ್ನು ಮಾಡಿಸಿದ್ದಾರೆ. ಈಗ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ದಾಖಲಿಸಿದ್ದಾಳೆ.

2017 ರಲ್ಲಿ ಮಣಿಕಂಠನ್ ತಮಿಳು ನಾಡಿನ IT  ಇಲಾಖೆಯ ಮಂತ್ರಿಯಾಗಿದ್ದರು. ಆ ಸಂದರ್ಭದಲ್ಲಿ ಇಂಡೋ-ಮಲೇಷಿಯನ್ ನಟಿಯ ಪರಿಚಯವಾಗಿದೆ. ಹಾಗೇ ಪರಿಚಯ ಸ್ನೇಹಕ್ಕೆ ತಿರುಗಿ, ಮದುವೆಯಾಗುವ ಆಮಿಷವೊಡ್ಡಿ ಮಹಿಳೆಗೆ ಗರ್ಭಪಾತವನ್ನು ಮಾಡಿಸಿದ್ದಾರೆ. ವಿವಾಹಿತ ವ್ಯಕ್ತಿಯಾಗಿದ್ದರೂ ತನ್ನನ್ನು ಮದುವೆಯಾಗುವುದಾಗಿ ತಮಿಳು ನಾಡಿನ ಮಾಜಿ ಮಂತ್ರಿ ನಂಬಿಸಿದ್ದರು. ಈಗ ಅವರು ಮಲೇಷಿಯಾಗೆ ಮರಳು, ಇಲ್ಲವಾದರೆ ನಿನ್ನ ಕುಟಂಬಕ್ಕೆ ತೊಂದರೆ ಕೊಡುವುದಾಗಿ ಬೆದರಿಸಿದ್ದಾರೆ. ಹಾಗೆ ನಗ್ನ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವುದಾಗಿ ಬೆದರಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಸಂತ್ರಸ್ತ ಮಹಿಳೆಯ ಎಲ್ಲಾ ಆರೋಪಗಳನ್ನು ಎಂ.ಮಣಿಕಂಠನ್ ನಿರಾಕರಿಸಿದ್ದು, ಆರೋಪಗಳು ನಿರಾಧಾರವಾಗಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಚುರುಕುಗೊಂಡ ಅನ್‌ಲಾಕ್ ಪ್ರಕ್ರಿಯೆ: ಎಚ್ಚರಿಕೆಯ ಹೆಜ್ಜೆಯಿಡಲು ಕೇಂದ್ರದಿಂದ ರಾಜ್ಯಗಳಿಗೆ ಸೂಚನೆ

ನಾನು ಗೌರಿ ಡೆಸ್ಕ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

Wordpress Social Share Plugin powered by Ultimatelysocial
Shares