ಬಾಂಗ್ಲಾದೇಶಿಗರು ಎಂಬ ಆರೋಪ : ಬಂಗಾಳದ ನಾಲ್ವರು ಮುಸ್ಲಿಂ ವ್ಯಾಪಾರಿಗಳಿಗೆ ಒಡಿಶಾ ತೊರೆಯಲು 72 ಗಂಟೆಗಳ ಗಡುವು

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ನಾಲ್ವರು ಮುಸ್ಲಿಂ ವ್ಯಾಪಾರಿಗಳನ್ನು ಬಾಂಗ್ಲಾದೇಶಿಯರು ಮತ್ತು ರೋಹಿಂಗ್ಯಾ ವಲಸಿಗರು ಎಂದು ಆರೋಪಿಸಿ ಒಡಿಶಾದ ನಯಾಗಢವನ್ನು ತೊರೆಯಲು 72 ಗಂಟೆಗಳ ಗಡುವು ನೀಡಲಾಗಿದೆ ಎಂದು ದಿ ಟೆಲಿಗ್ರಾಫ್ ಮಂಗಳವಾರ (ಡಿ.2) ವರದಿ ಮಾಡಿದೆ. ಈ ನಾಲ್ವರು ಪುರುಷರು ಹಲವಾರು ವರ್ಷಗಳಿಂದ ನಯಾಗಢದಲ್ಲಿ ದ್ವಿಚಕ್ರ ವಾಹನಗಳಲ್ಲಿ ಸೊಳ್ಳೆ ಪರದೆ, ಹೊದಿಕೆ ಮತ್ತು ಉಣ್ಣೆಯ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದರು. ನಾಲ್ವರೂ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಡೊಮ್ಕಲ್ ಉಪವಿಭಾಗದ ಜಲಂಗಿ ಬ್ಲಾಕ್‌ನಲ್ಲಿರುವ ಸಾಗರ್‌ಪಾರ ಗ್ರಾಮ ಪಂಚಾಯತ್‌ಗೆ ಸೇರಿದವರು. … Continue reading ಬಾಂಗ್ಲಾದೇಶಿಗರು ಎಂಬ ಆರೋಪ : ಬಂಗಾಳದ ನಾಲ್ವರು ಮುಸ್ಲಿಂ ವ್ಯಾಪಾರಿಗಳಿಗೆ ಒಡಿಶಾ ತೊರೆಯಲು 72 ಗಂಟೆಗಳ ಗಡುವು