Homeಮುಖಪುಟವಾಕ್ ಸ್ವಾತಂತ್ರ್ಯದ ಮೇಲೆ ಯೋಗಿ ಮೇಷ್ಟ್ರ ಪಾಠ

ವಾಕ್ ಸ್ವಾತಂತ್ರ್ಯದ ಮೇಲೆ ಯೋಗಿ ಮೇಷ್ಟ್ರ ಪಾಠ

- Advertisement -
- Advertisement -

| ಲೋಕೇಶ್ ಮಾಲ್ತಿ ಪ್ರಕಾಶ್ |
ಅನುವಾದ: ನಿಖಿಲ್ ಕೋಲ್ಪೆ

ಸತ್ತವರ ಕುರಿತು ನಾಲ್ಕು ಒಳ್ಳೆಯ ಮಾತುಗಳನ್ನೇ ಆಡುವುದು ನಮ್ಮ ದೇಶದ ಸಂಪ್ರದಾಯ. ನಾವು ದೈವಭಯ ಇರುವ ಜನರು ಮತ್ತು ನಮಗಿಂತ ಸತ್ತವರು ದೇವರಿಗೆ ಹೆಚ್ಚು ಹತ್ತಿರವಾದವರು ಎಂದು ನಂಬುವವರಾದುದರಿಂದ ನಾವು ಸತ್ತವರ ಬಗ್ಗೆ ಒಳ್ಳೆಯದನ್ನೇ ಮಾತನಾಡುತ್ತೇವೆ. ಸತ್ತವರು ನಮಗೆ ಭಾರತದ ನ್ಯಾಯಾಲಯದಲ್ಲಿಯ ಬೆಳಗ್ಗಿನ ದೇಖಾವೆಗೆ ಪಕ್ಕಾ ಟಿಕೆಟ್ ದೊರಕಿಸಿಕೊಡಬಲ್ಲ ಖಾನ್ ಮಾರ್ಕೆಟ್ ಗ್ಯಾಂಗ್ ಇದ್ದಂತೆ. ಕೆಲವೊಮ್ಮೆ ನಾವು ಹಿಟ್ಲರ್ ನಮ್ಮಲ್ಲಿ ಹುಟ್ಟಲಿಲ್ಲವಲ್ಲ ಎಂದು ಸ್ವಲ್ಪ ಸಮಾಧಾನಪಡುವುದುಂಟು! ಖಂಡಿತವಾಗಿಯೂ ಆತನಿಗೆ ಸ್ಪರ್ಧೆ ನೀಡಬಲ್ಲ ದೇಸಿ ತಳಿಗಳು ನಮ್ಮಲ್ಲಿವೆಯದರೂ….

ಆದುದರಿಂದ, ಮೊನ್ನೆ ಸುಪ್ರೀಂಕೋರ್ಟ್ ಸ್ವಾತಂತ್ರ್ಯವು ಪವಿತ್ರವಾದುದು, ಅದರಲ್ಲಿ ಚೌಕಾಸಿ ಮಾಡುವಂತಿಲ್ಲ ಎಂದಿತ್ಯಾದಿಯಾಗಿ ಮೂಲಭೂತ ಹಕ್ಕುಗಳ ಕುರಿತು ನಾಲ್ಕು ಒಳ್ಳೆಯ ಮಾತುಗಳನ್ನು ಆಡಿದಾಗ ನನಗೆ ಸ್ವಲ್ಪ ಗಲಿಬಿಲಿಯಾಯಿತು. ಹೌದೇ? ಇದು ನಿಜವೇ? “ಏ ಇಲ್ಲ! ಇದು ಹಸಿಸುಳ್ಳು” ಎಂದು ಗಟ್ಟಿಯಾಗಿ ಕಿರುಚಿಕೊಳ್ಳುವುದರಿಂದ ನಾನು ಸ್ವಲ್ಪ ಪ್ರಯತ್ನದ ಬಳಿಕವಷ್ಟೇ ತಡೆದುಕೊಂಡೆ! ಸ್ವಾತಂತ್ರ್ಯದ ಹಕ್ಕು ಸತ್ತಿದೆಯೇ? ಸಾವು ಮತ್ತು ವಂಚನೆಯ ಈ ಭವದಲ್ಲಿ ಬಿಟ್ಟು ಅದು ಸ್ವರ್ಗವಾಸಿಯಾಗಿದೆಯೆ? (ಅದಕ್ಕಾಗಿಯೇ ಹೊಗಳುತ್ತಿದ್ದಾರೆಯೆ?)

ಈ ದೇಶದಲ್ಲಿ ಮೂಲಭೂತ ಹಕ್ಕುಗಳು ಸತ್ತು ಬಹಳ ಕಾಲವಾಗಿಹೋಗಿದೆ ಎಂದು ಟೀಕಾಕಾರರು ಖಂಡಿತಾ ಹೇಳಬಹುದು. ಇವರಲ್ಲಿ ಕಟು ಟೀಕಾಕಾರರು, ಇಲ್ಲಪ್ಪಾ, ಅದು ಇನ್ನೂ ಹುಟ್ಟಿಯೇ ಇಲ್ಲವಾದುದರಿಂದ ಸಾಯುವ ಪ್ರಶ್ನೆ ಶುದ್ಧ ಸುಳ್ಳೆಂದು ತಗಾದೆ ಎತ್ತಬಹುದು.

ಈ ವಿಷಯಕ್ಕೆ ಬಂದಾಗ, ನಾನೊಬ್ಬ ದೇಶಭಕ್ತ ಮತ್ತು ಈ ತಳಿಯ ಇತರ ಪ್ರಭೇದಗಳಂತೆ. ಮತ್ತು ಅವರಷ್ಟೇ ನಾನು ಕೂಡಾ ವಾಕ್ ಸ್ವಾತಂತ್ರ್ಯದ ಸಂಪೂರ್ಣ ಬೆಂಬಲಿಗ ಎಂದು ಮೊದಲಿಗೇ ಹೇಳಿಬಿಡುತ್ತೇನೆ. ನಮ್ಮ ಸರಕಾರಗಳು ಸಂವಿಧಾನವನ್ನು ಅಕ್ಷರಶಃ ಅನುಸರಿಸುತ್ತವೆ. ಮತ್ತು ಸರಕಾರವೂ ದೇಶಭಕ್ತವಾಗಿದ್ದಲ್ಲಿ ಸಂವಿಧಾನದ ಕುರಿತು ಅದರ ನಿಷ್ಟೆಯನ್ನು ಯಾರೂ ಸಂಶಯಿಸಬಾರದು. ಮೊನ್ನೆಯಷ್ಟೇ ಮೋದೀಜಿ ಸಂವಿಧಾನಕ್ಕೆ ಹೇಗೆ ಕೈಮುಗಿದು ತಲೆಬಾಗಿದರೆಂದು ನೀವು ನೋಡಿಲ್ಲವೆ? ಸಂವಿಧಾನ ಮತ್ತು ಕಾನೂನು ಯಾವತ್ತೂ ಇದಕ್ಕಿಂತ ಸುರಕ್ಷಿತ ಕೈಗಳಲ್ಲಿ ಇರಲಿಲ್ಲ; ಇರುವುದು ಸಾಧ್ಯವೂ ಇಲ್ಲ.

ಹೀಗಿದ್ದರೂ, ಈ ಖಾನ್ ಮಾರ್ಕೆಟ್ ಗ್ಯಾಂಗ್ ಒಂದು ದೇಶಭಕ್ತ ಸರಕಾರ ಮತ್ತದರ ವೀರ ಪೊಲೀಸರನ್ನು ಮೇಲೆ ಕೆಸರೆರಚುವ ಕಿಂಚಿತ್ ಅವಕಾಶವನ್ನೂ ತಪ್ಪಿಸಿಕೊಳ್ಳುವುದಿಲ್ಲ. ಉತ್ತರಪ್ರದೇಶದಲ್ಲಿ ಅಲ್ಲಿನ ಮುಖ್ಯಮಂತ್ರಿಯ ವೈಯಕ್ತಿಕ ಬದುಕಿನ ಬಗೆಗಿನ ಕೆಲವು ಜುಜುಬಿ ವಿಷಯಗಳ ಬಗ್ಗೆ ಟ್ವೀಟ್ ಮಾಡಿದ್ದಕ್ಕಾಗಿಯೋ, ಅದಾವುದೋ ನ್ಯೂಸ್ ಚಾನೆಲಿನಲ್ಲಿ ಸುದ್ದಿ ಪ್ರಸಾರ ಮಾಡಿದ್ದಕ್ಕಾಗಿಯೋ ಕೆಲವು ಪತ್ರಕರ್ತರನ್ನು ಬಂಧಿಸಿದ ಚಿಕ್ಕ ವಿಷಯದ ಬಗ್ಗೆ ಸುಮ್ಮಸುಮ್ಮನೆ ಗದ್ದಲ ಎಬ್ಬಿಸಲಾಗುತ್ತಿದೆ. ಅವರು ಮಾಧ್ಯಮ ವೃತ್ತಿಯ ಮರ್ಯಾದೆಯನ್ನು ಮೀರಿದ್ದಾರೆ. ಅವರಿಗೆ ಟ್ವೀಟ್ ಮಾಡಲು ಬೇರೆಷ್ಟೋ ವಿಷಯಗಳಿದ್ದವು. ಅವರು ಬೇಕಾದರೆ ಯೋಗಿ ಸರಕಾರ ಮತ್ತೆ ಜೀವನೀಡುತ್ತಿರುವ ಏಂಟಿರೋಮಿಯೋ ಸ್ಕ್ವಾಡ್ ಬಗ್ಗೆ ಟ್ವೀಟ್ ಮಾಡಬಹುದಿತ್ತು. ಅದು ಬೇಡವೆಂದರೆ ಬೆಂಕಿಹಚ್ಚುವ ಭಾಷಣಗಳ ಬಗ್ಗೆ ಟ್ವೀಟ್ ಮಾಡಬಹುದಿತ್ತು. ಅದೂ ಬೇಡ ಎಂದಾದರೆ, ಹದಗೆಡುತ್ತಿರುವ ಸಾರ್ವಜನಿಕ ಆರೋಗ್ಯ ಸೇವೆಗಳು, ಸರಕಾರಿ ಶಾಲಾ ಸೌಲಭ್ಯಗಳ ಬಗ್ಗೆ, ನಿರುದ್ಯೋಗದ ಬಗ್ಗೆ, ಗೋರಕ್ಷಕ ಗ್ಯಾಂಗುಗಳ ಬಗ್ಗೆ ಇತ್ಯಾದಿ ಇತ್ಯಾದಿಗಳ ಬಗ್ಗೆ ಮಾತಾಡಬಹುದಿತ್ತು. ಮಾತಾಡಲು ಮತ್ತು ಟ್ವೀಟ್ ಮಾಡಲು ಎಷ್ಟೊಂದು ವಿಷಯಗಳಿವೆ! ಇಷ್ಟಿದ್ದರೂ ಅವರು ಸುಮ್ಮಸುಮ್ಮನೇ ಗಾಸಿಪ್‌ಗಳ ಹಿಂದೆಬಿದ್ದರು! ಯೋಗಿ ಸಾರ್ವಜನಿಕ ನೈತಿಕತೆಯ ಟೇಕೇದಾರನಾಗಿರುವುದರಿಂದ ಕ್ರಮ ಕೈಗೊಳ್ಳಲೇಬೇಕಾಗಿತ್ತು, ಅವರಿಗೆಲ್ಲಾ ಒಂದು ಪಾಠ ಕಲಿಸಲೇಬೇಕಾಗಿತ್ತು.. ಅವರ ಪೊಲೀಸರು ಆ ಕೆಲಸ ಮಾಡಿದರು ಅಷ್ಟೇ.

ನೈತಿಕ ಶಿಕ್ಷಣಕ್ಕೆ ಹೊರತಾಗಿ ಯುಪಿ ಪೊಲೀಸರು ಕಾನೂನು ಮತ್ತು ಶಿಸ್ತು ಅಥವಾ ನಿಖರವಾಗಿ ಹೇಳಬೇಕೆಂದರೆ ಸಾರ್ವಜನಿಕ ನೆಮ್ಮದಿಯನ್ನು ಕಾಪಾಡುವ ಕೆಲಸವನ್ನು ಕೈಗೆತ್ತಿಕೊಂಡರು. ಪೊಲೀಸರು ಏನು ಮಾಡಬೇಕೋ ಯುಪಿ ಪೊಲೀಸರು ಅದನ್ನೇ ಮಾಡಿದರು. ಕೆಲ ಸಮಯದ ಹಿಂದೆ ಬಂಗಾಳದಲ್ಲಿ, ಕರ್ನಾಟಕದಲ್ಲಿ, ಮತ್ತೇ ಅನೇಕ ಕಡೆಗಳಲ್ಲಿ ಮಾಡಿದ್ದನ್ನೇ ಅವರು ಮಾಡಿದ್ದು. ಪೋಲೀಸರು ಇಲ್ಲದಿದ್ದರೆ, ಈ ದೇಶದಲ್ಲಿ ಕಾನೂನು ಮತ್ತು ಶಿಸ್ತು ಎಂಬುದೊಂದು ಇದೆ ಎಂದು ಈ ಜನಸಾಮಾನ್ಯರು ಮರೆತೇಬಿಡುತ್ತಾರೆ. ಇದರಿಂದ ವಿನಾಯಿತಿ ಇರುವುದು ನೀರವ್ ಮೋದಿಯಂತಹ ಜನರಿಗೆ ಮಾತ್ರ. ಅದನ್ನು ಇತರರಿಗೆ ನೀಡುವಂತಿಲ್ಲ. ಅದೂ ಕೂಡಾ ರಾಮರಾಜ್ಯ ಇನ್ನೇನು ಹತ್ತಿರದಲ್ಲೇ ಇದೆ ಎನ್ನುವಾಗ ಅದನ್ನು ಕೊಡಲಾದೀತೆ? ಪೊಲೀಸರ ತ್ವರಿತ ಕ್ರಮಕ್ಕಾಗಿ ಅವರಿಗೆ ಶಹಬ್ಬಾಷ್‌ಗಿರಿ ನೀಡಬೇಕಾದಲ್ಲಿ ಈ ಖಾನ್ ಮಾರ್ಕೆಟ್ ಗ್ಯಾಂಗ್ ಪೊಲೀಸರ ಮಾನಹಾನಿ ಮಾಡಿ ಅವರ ನೈತಿಕ ಸ್ಥೈರ್ಯವನ್ನು ಕೆಡಿಸಲು ಎದ್ದುನಿಂತಿದೆ.

ಬಾಲಿವುಡ್ ಚಿತ್ರಗಳಲ್ಲಿ ಕೂಡ ಸಮಯಕ್ಕೆ ಸರಿಯಾಗಿ ತಲುಪಿ ಅಪರಾಧವನ್ನು ತಡೆಗಟ್ಟಲಾಗದ ಪೋಲಿಸರು ನಿಜ ಜೀವನದಲ್ಲಿ ಹಿಂದೆಂದೂ ಕಾಣದ ತ್ವರಿತತೆಯಿಂದ ಕ್ರಮ ಕೈಗೊಂಡಿದ್ದಾರೆ. ಇದು ಅತ್ಯಂತ ಜನಭರಿತ ರಾಜ್ಯವನ್ನು ಭಾರೀ ಕಾನೂನು ಮತ್ತು ಶಿಸ್ತಿನ ಮಹಾ ಬಿಕ್ಕಟ್ಟಿನಿಂದ ಬಚಾವು ಮಾಡಿದೆ. ಅದು ಸಾರ್ವಜನಿಕ ಶಾಂತಿಯನ್ನು ಯಾರಾದರೂ ಕದಡುವ ಮುನ್ನವೇ ಕಾಪಾಡಿದೆ. ಇದು ಮಹಾ ಗಟ್ಟಿಗ ನಾಯಕನ ನಾಯಕತ್ವದಲ್ಲಿ ಮಾತ್ರ ಸಾಧ್ಯ. ಅವರ ಕಾರ್ಯದಕ್ಷತೆಯನ್ನು ಕೊಂಡಾಡುವ ಬದಲು ಟೀಕಾಕಾರರು ಪೊಲೀಸರು ಮತ್ತು ಯೋಗಿಯ ಮೇಲೆ ಎಗರಿಬಿದ್ದಿದ್ದಾರೆ

ಒಬ್ಬ ಮಹಿಳೆ ಮುಖ್ಯಮಂತ್ರಿ ಯೋಗಿಯ ಮೇಲೆ (ಪರಸ್ಪರ) ಪ್ರೇಮ ತೋರುವ ವಿಡಿಯೊ ಯೋಗಿ ಭಕ್ತರನ್ನು ರೊಚ್ಚಿಗೆಬ್ಬಿಸುತ್ತದೆ ಎಂದು ಯುಪಿಯ ಪೊಲೀಸ್‌ವಾಲರಿಗೆ ಗೊತ್ತು. ಭಾವನೆ ಘಾಸಿಗೊಂಡ ಭಕ್ತರು ಸಾಮೂಹಿಕ ವಿನಾಶದ ಅಸ್ತ್ರಗಳಿಗಿಂತಲೂ ಅಪಾಯಕಾರಿ ಎಂಬುದೂ ಅವರಿಗೆ ಗೊತ್ತು.

ಆದುದರಿಂದ, ಸಾರ್ವಜನಿಕ ಶಾಂತಿಗೆ ಭಾರೀ ಬಿಕ್ಕಟ್ಟು ಕವಿದಿರುವುದನ್ನು ಪೊಲೀಸರು ಸರಿಯಾಗಿಯೇ ಗ್ರಹಿಸಿದ್ದಾರೆ. ತ್ವರಿತ ಕಾರ್ಯಾಚರಣೆಯ ಮೂಲಕ ಇಂತಹ ಒಂದು ಸ್ಫೋಟಕ ಮಾಹಿತಿಯನ್ನು ಪ್ರಸಾರ ಮಾಡಿದ ಜನರನ್ನು ಬಂಧಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ನಮ್ಮ ನೆಚ್ಚಿನ ಸ್ವಾತಂತ್ರ್ಯದ ಹಕ್ಕಿಗೆ ಏನಾದರೂ ಆದರೆ, ಯಾರು ತಾನೇ ಲೆಕ್ಕಿಸುತ್ತಾರೆ! ಬಹುಶಃ ಅದು ಬಹಳ ಹಿಂದೆಯೇ ಸತ್ತಿದೆ. ಬಹುಶಃ ನಾವೀಗ ಕೊನೆಯ ಸುತ್ತಿನ ಶ್ರದ್ಧಾಂಜಲಿಯನ್ನು ಓದುತ್ತಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...