Homeಮುಖಪುಟಸ್ವತಃ ‘ಲಾಕಪ್’ ಅನುಭವದಿಂದ ಹೋರಾಟದವರೆಗೂ: ವಿಸಾರಣೈ ಕಥೆಗಾರ ಚಂದ್ರಕುಮಾರ್ ಸಂದರ್ಶನ

ಸ್ವತಃ ‘ಲಾಕಪ್’ ಅನುಭವದಿಂದ ಹೋರಾಟದವರೆಗೂ: ವಿಸಾರಣೈ ಕಥೆಗಾರ ಚಂದ್ರಕುಮಾರ್ ಸಂದರ್ಶನ

ಭಾರತದ ಮಟ್ಟಿಗೆ ಪೊಲೀಸರು ತಾವು ಪ್ರಶ್ನಾತೀತ ಸಂಘಟನೆ ಎಂದೇ ತಿಳಿದಿದ್ದಾರೆ. ಪೊಲೀಸರಿಗೆ ಪ್ರಶ್ನೆ ಮಾಡುವುದೇ ಒಂದು ಅಪರಾಧ ಎಂಬ ಮನೋಭಾವ ಅವರ ಆಳವಾದ ಮನಸ್ಸಿನಲ್ಲಿ ಅಚ್ಚೊತ್ತಿದೆ.

- Advertisement -
- Advertisement -

ತಮಿಳಿನ ಪ್ರಮುಖ ಬರಹಗಾರರಲ್ಲಿ ಒಬ್ಬರಾದ ’ಚಂದ್ರಕುಮಾರ್’ ಅವರ ಕಾದಂಬರಿಯಾದ ’ಲಾಕಪ್’ ಮತ್ತು ಇದೇ ಕಾದಂಬರಿಯನ್ನು ಆಧರಿಸಿ 2015ರಲ್ಲಿ ಬಿಡುಗಡೆಯಾದ ’ವಿಸಾರಣೈ’ ಎಂಬ ಚಿತ್ರ ಕಳೆದ ಕೆಲವು ದಿನಗಳಲ್ಲಿ ಮತ್ತೆ ಮುನ್ನಲೆಗೆ ಬಂದು ಚರ್ಚೆಯಾಗುತ್ತಿದೆ. ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತಾನ್ಕುಳಂನಲ್ಲಿ ನಡೆದಿರುವ ಜೋಡಿ ಲಾಕಪ್ ಡೆತ್ ಪ್ರಕರಣ ಇದಕ್ಕೆ ಕಾರಣ ಎಂದು ಊಹಿಸಲು ಕಷ್ಟವೇನಲ್ಲ.

ಅಸಲಿಗೆ “ಲಾಕಪ್” ಎಂಬ ಕಾದಂಬರಿ ನೈಜ ಘಟನೆಯ ಎಳೆಯನ್ನು ಆಧರಿಸಿದ್ದ ಕಾದಂಬರಿ. 30 ವರ್ಷಗಳ ಹಿಂದೆ ತಾನು ಸ್ವತಃ ಜೈಲಿನಲ್ಲಿ ಅನುಭವಿಸಿದ್ದ ಘೋರ ದೈಹಿಕ ದೌರ್ಜನ್ಯದ ಕುರಿತು ಬರಹಗಾರ ಚಂದ್ರಕುಮಾರ್ ಈ ಪುಸ್ತಕದಲ್ಲಿ ಓದುಗರಿಗೆ ಅಘಾತವಾಗುವಂತೆ ಬರೆದಿದ್ದರು. ಈ ಪುಸ್ತಕವನ್ನು ಅಷ್ಟೇ ಶ್ರದ್ಧೆಯಿಂದ ಪರಿಣಾಮಕಾರಿಯಾಗಿ ಅಡವಳಿಸಿಕೊಂಡು ಸಿನಿಮಾ ಮಾಡುವಲ್ಲಿ ನಿರ್ದೇಶಕ ವೆಟ್ರಿಮಾರನ್ ಯಶಸ್ವಿಯಾಗಿದ್ದರು.

ಇದು 30 ವರ್ಷದ ಹಿಂದಿನ ಕಥೆ. ಆದರೆ, ಪಸ್ತುತ ದಿನಗಳಲ್ಲಿ ಮಾನವ ಹಕ್ಕುಗಳು ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಕಾದಂಬರಿಯಲ್ಲಿ ಉಲ್ಲೇಖಿಸಿರುವಂತೆಯೇ ಪೊಲೀಸರ ದೌರ್ಜನ್ಯಕ್ಕೆ ಈಗಲೂ ಜನ ಬಲಿಯಾಗುತ್ತಿದ್ದಾರೆ ಎಂಬುದು ಇಂತಹ ಸಂದರ್ಭದಲ್ಲೂ ಹೋಲಿಕೆಯಾಗುತ್ತಿರುವ ಮಾತ್ರ ದುರಂತ. ಪೊಲೀಸರ ಪೈಶಾಚಿಕ ಕೃತ್ಯಕ್ಕೆ ಎರಡೆರಡು ಲಾಕಪ್ ಡೆತ್ ಆಗುತ್ತದೆ ಎಂದರೆ ಇಡೀ ವ್ಯವಸ್ಥೆ ತಲೆತಗ್ಗಿಸಬೇಕಿದೆ.

ಕಳೆದ ಜೂನ್ 19 ರಂದು ತಮಿಳುನಾಡಿನ ಪೊಲೀಸ್ ದೌರ್ಜನ್ಯಕ್ಕೆ ಬಲಿಯಾದ ಜಯರಾಜ್ ಮತ್ತು ಬೆನಿಕ್ಸ್ ಸಾವಿನ ವಿರುದ್ಧ ಇಂದು ಇಡೀ ತಮಿಳುನಾಡಿನ ಜನ ಒಟ್ಟಾಗಿ ಹೋರಾಟ ನಡೆಸುತ್ತಿದ್ದಾರೆ. ಭಾರತದ ವಿವಿಧ ಮೂಲೆಗಳಿಗೂ ಈ ಹೋರಾಟ ಹಬ್ಬಿದೆ.

ಪರಿಣಾಮ ಸ್ವಯಂಪ್ರೇರಿತವಾಗಿ ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ತಮಿಳುನಾಡಿನ ಮಧುರೈ ಹೈಕೋರ್ಟ್ ಪೀಠ ತಪ್ಪಿತಸ್ಥ ನಾಲ್ಕೂ ಪೊಲೀಸ್ ಅಧಿಕಾರಿಗಳ ವಿರುದ್ಧ ಕೊಲೆ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಅಲ್ಲದೆ, ಈ ಪ್ರಕರಣವನ್ನು ಈಗಾಗಲೇ ಸಿಬಿಐ ವಿಚಾರಣೆಗೆ ವರ್ಗಾಯಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸಾತಾನ್ಕುಳಂ ಘಟನೆಯ ಬಗ್ಗೆ ’ಲಾಕಪ್’ ಕಾದಂಬರಿ ಬರಹಗಾರ ಚಂದ್ರಕುಮಾರ್ ’ನ್ಯಾಯಪಥ’ದ ಜೊತೆಗೆ ಮಾತನಾಡಿದ್ದಾರೆ. ಈ ಘಟನೆ ಮತ್ತು ಭಾರತದಲ್ಲಿ ನಡೆಯುತ್ತಿರುವ ಪೊಲೀಸ್ ಅರಾಜಕತೆಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

“ಲಾಕಪ್ ಇದು ನೈಜ ಘಟನೆಯನ್ನು ಆಧರಿಸಿ ಬರೆದ ಕಾದಂಬರಿ. ಆದರೆ, ವರ್ಷಗಳೇ ಉರುಳಿದರೂ ಪೊಲೀಸರ ದೌರ್ಜನ್ಯ ಮಾತ್ರ ಈವರೆಗೆ ಬದಲಾಗಿಲ್ಲ. 1983ರಲ್ಲಿ ನಾನು ಮಾಡದ ತಪ್ಪಿಗೆ ಎರಡು ವಾರಗಳ ಕಾಲ ನನ್ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಅಂದು ಸತತ ಎರಡು ವಾರಗಳ ಕಾಲ ಪೊಲೀಸರು ನಡೆಸಿದ ದೌರ್ಜನ್ಯದಿಂದ ನಾನು ಬದುಕಿ ಬಂದದ್ದೇ ದೊಡ್ಡ ಪವಾಡ.

“ಆನಂತರವೂ ಕಳೆದ 37 ವರ್ಷಗಳಿಂದ ದೇಶದ ನಾನಾ ಮೂಲೆಗಳಲ್ಲಿ ಪೊಲೀಸರು ನಡೆಸುತ್ತಿರುವ ದೌರ್ಜನ್ಯದ, ಲಾಕಪ್ ಡೆತ್ ಕುರಿತ ಸುದ್ದಿಗಳನ್ನು ನಾನು ಕೇಳುತ್ತಲೇ ಇದ್ದೇನೆ. ಆದರೆ, ಜಯರಾಜ್ ಮತ್ತು ಬೆನಿಕ್ಸ್ ಸಾವು ಮಾತ್ರ ಮಾನವ ಸಮಾಜ ಅರಗಿಸಿಕೊಳ್ಳಲು ಸಾಧ್ಯವಾಗದ ಕ್ರೌರ್ಯದ ಪರಮಾವಧಿ ಎಂದರೆ ತಪ್ಪಾಗಲಾರದು.

“ಪೊಲೀಸರ ಕೈಗೆ ಶಸ್ತ್ರವನ್ನು ಕೊಡಲಾಗಿದೆ. ಎಲ್ಲೇ ತಪ್ಪು ನಡೆದರೂ ಸಹ ಅದನ್ನು ಪ್ರಶ್ನೆ ಮಾಡುವ ಹಕ್ಕು ನೀಡಲಾಗಿದೆ. ಈ ಅಧಿಕಾರವನ್ನು ಪೊಲೀಸರು ಸಮಾಜಘಾತುಕ ಶಕ್ತಿಯ ವಿರುದ್ಧ ಬಳಸಬೇಕು. ಆದರೆ, ದುರಾದೃಷ್ಟವಶಾತ್ ಅವರ ಈ ಶಕ್ತಿ ಸಾಮಾಜಿಕ ಧಮನಕ್ಕೆ ಮತ್ತು ಜನರನ್ನು ಕೊಲ್ಲುವ ಮೂಲಭೂತ ಅರ್ಹತೆಯಾಗಿ ಬದಲಾಗಿದೆ.

“ಕ್ರೌರ್ಯ ಮತ್ತು ನಿರ್ದಯಿಗಳಿಗೆ ಮಾತ್ರ ಪೊಲೀಸ್ ಕೆಲಸ ಎಂಬಂತಹ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಜಯರಾಜ್ ಮತ್ತು ಬೆನಿಕ್ಸ್ ಸಾವಿಗಾಗಿ ಈ ಪೊಲೀಸರಿಗೆ ಏನೇ ಶಿಕ್ಷೆ ನೀಡಿದರೂ ಸಹ, ಖಂಡಿತ ಅದರಿಂದ ಸತ್ತವರಿಗೆ ನ್ಯಾಯ ದೊರಕಲಾಗದು.

“ತಕ್ಕ ಮಟ್ಟಿಗೆ ಪೊಲೀಸರು 24 ಗಂಟೆ ಕೆಲಸ ನಿರ್ವಹಿಸಲು ಮಾನಸಿಕವಾಗಿ ಸಿದ್ದವಾದ ನಂತರವೇ ಪೊಲೀಸ್ ಇಲಾಖೆಯು ಅವರನ್ನು ಕೆಲಸಕ್ಕೆ ನಿಯೋಜಿಸುತ್ತದೆ. ಸಮಾಜದಲ್ಲಿನ ಆಂತರಿಕ ಹಿಂಸಾಚಾರವನ್ನು ನಿಗ್ರಹಿಸುವ ಮೂಲಕ ಜನರಲ್ಲಿ ಶಾಂತಿ ಮತ್ತು ನೆಮ್ಮದಿ ತರುವುದು ಅವರ ಕೆಲಸ. ಆದರೆ, ಹೊರಗಿನ ಜನರಿಗೆ ತಿಳಿದಿರುವ ಪೊಲೀಸರ ಚಿತ್ರಕ್ಕಿಂತ ಅವರ ಕೆಲಸ ಮತ್ತು ಮಾನಸಿಕ ಸ್ಥಿತಿ ಭಿನ್ನ ಎಂಬುದೇ ಸತ್ಯ.

“ಅಸಲಿಗೆ ಪೊಲೀಸ್ ಇಲಾಖೆಯಲ್ಲಿ ಪೊಲೀಸರು ಕಾನೂನು ಸುವ್ಯವಸ್ಥೆಯನ್ನು ಪರಿಪಾಲಿಸಬಾರದು ಎಂಬ ಕಾರಣಕ್ಕೆ ಲಂಚ ಎಂಬ ಅಸ್ತ್ರ ಅಧಿಕಾರ ವರ್ಗದಲ್ಲಿ ಕೆಳಗಿನಿಂದ ಮೇಲ್ಮುಖವಾಗಿ ಚಲಿಸುತ್ತದೆ. ಈ ಸಮಸ್ಯೆಯನ್ನು ಸಂಪೂರ್ಣವಾಗಿ ಬದಲಿಸದೆ ಸಮಸ್ಯೆಯನ್ನು ಪರಿಹರಿಸುವುದು ಸಾಧ್ಯವಿಲ್ಲ. ಪೊಲೀಸರಿಂದ ನೈತಿಕತೆಯನ್ನು – ಕರುಣೆಯನ್ನು ಎದುರುನೋಡುವುದಂತೂ ಅಸಾಧ್ಯವಾದ ಮಾತು.

“ಇನ್ನೂ ಕಳೆದ ಮೂರು ನಾಲ್ಕು ತಿಂಗಳಿನಿಂದ ದೇಶದಾದ್ಯಂತ ಲಾಕ್‍ಡೌನ್ ಜಾರಿ ಮಾಡಲಾಗಿದೆ. ಇದರಿಂದ ಯಾವುದೇ ವ್ಯಾಪಾರ ವಹಿವಾಟು ನಡೆದಿಲ್ಲ. ಜನ ಮನೆಯಿಂದ ಹೊರಗಡೆ ಹೋಗಿಲ್ಲ. ಹೀಗಾಗಿ ಪೊಲೀಸರಿಗೆ ಲಂಚದ ರೂಪದಲ್ಲಿ ಹರಿದು ಬರಬೇಕಾಗಿದ್ದ ಅಪಾರ ಪ್ರಮಾಣದ ಹಣ ಅವರ ಕೈಸೇರಿಲ್ಲ. ಇದು ಸಾಮಾನ್ಯವಾಗಿ ಅವರ ಮಾನಸಿಕ ಸ್ಥಿಮಿತವನ್ನು ಹದಗೆಡಿಸಿದೆ. ಸ್ವಯಂ-ಅಸಮ್ಮತಿ, ಒತ್ತಡ ಮತ್ತು ಅತಿರೇಕದ ಚಟುವಟಿಕೆ ಕಾರಣವಾಗಿದೆ.

“ಈ ನಡುವೆ ಕಳೆದ ತಿಂಗಳು ಪೊಲೀಸ್ ಅಧಿಕಾರಿ ರಘು, ಬೆನಿಕ್ಸ್ ಮೊಬೈಲ್ ಅಂಗಡಿಯಲ್ಲಿ ಉಚಿತವಾಗಿ ಮೊಬೈಲ್ ಕೇಳಿದ್ದಾರೆ. ಮೊದಲೇ ವ್ಯಾಪಾರ ಇಲ್ಲದ ಕಾರಣ ಬೆನಿಕ್ಸ್ ಉಚಿತವಾಗಿ ಮೊಬೈಲ್ ನೀಡಲು ನಿರಾಕರಿಸಿದ್ದಾರೆ. ಇದೇ ಕೋಪದಲ್ಲಿ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಇನ್ನು ಅವರನ್ನು ಕೊಲ್ಲಬೇಕು ಎಂದೇ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದೆ ಎಂಬುದು ಘಟನೆಗಳನ್ನು ಪರಾಮರ್ಶಿಸಿದರೆ ತಿಳಿಯುತ್ತದೆ.

“ಏಕೆಂದರೆ ಸಾಮಾನ್ಯವಾಗಿ ಯಾರನ್ನಾದರೂ ಕೊಲ್ಲಬೇಕು ಎಂದರೆ ಮಾತ್ರ ಪೊಲೀಸರು ಅಪರಾಧಿಗಳ ಗುದದ್ವಾರದಲ್ಲಿ ಲಾಠಿ ಪ್ರಯೋಗಿಸುತ್ತಾರೆ. ಜಯರಾಜ್ ಮತ್ತು ಬೆನಿಕ್ಸ್ ಅವರನ್ನು ನಗ್ನಗೊಳಿಸಿ ಅವರಿಬ್ಬರ ಗುದದ್ವಾರದಲ್ಲಿ ಲಾಠಿ ಪ್ರಯೋಗಿಸಿರುವುದು ನಿಜ ಎಂಬುದಾದರೆ, ಆ ಇಬ್ಬರೂ ಅಮಾಯಕನ್ನು ಕೊಲೆ ಮಾಡುವುದೇ ಪೊಲೀಸರ ಉದ್ದೇಶವಾಗಿತ್ತು ಎಂಬುದು ವೇದ್ಯವಾಗುತ್ತದೆ.

ವಿಸಾರಣೈ ಸಿನಿಮಾದ ದೃಶ್ಯ

ಭಾರತದ ಮಟ್ಟಿಗೆ ಪೊಲೀಸರು ತಾವು ಪ್ರಶ್ನಾತೀತ ಸಂಘಟನೆ ಎಂದೇ ತಿಳಿದಿದ್ದಾರೆ. ಪೊಲೀಸರಿಗೆ ಪ್ರಶ್ನೆ ಮಾಡುವುದೇ ಒಂದು ಅಪರಾಧ ಎಂಬ ಮನೋಭಾವ ಅವರ ಆಳವಾದ ಮನಸ್ಸಿನಲ್ಲಿ ಅಚ್ಚೊತ್ತಿದೆ.

ಉದಾಹರಣೆಗೆ:- ಪೊಲೀಸರಿಗೆ ಹಣ ನೀಡಿದರೆ ನೀವು ರಾತ್ರಿ ಎಷ್ಟು ಹೊತ್ತು ಬೇಕಿದ್ದರೂ ಅಂಗಡಿ ಬಾಗಿಲು ತೆರೆಯಬಹುದು. ಇಲ್ಲದಿದ್ದರೆ ವ್ಯಾಪಾರಕ್ಕೆ ಅವಕಾಶ ಇಲ್ಲ. ಈ ಕುರಿತು ಪ್ರಶ್ನೆ ಮಾಡಿದ ಕಾರಣಕ್ಕಾಗಿಯೇ ಇಂದು ಜಯರಾಜ್ ಮತ್ತು ಬೆನಿಕ್ಸ್ ಅನ್ಯಾಯವಾಗಿ ಬಲಿಯಾಗಿದ್ದಾರೆ. ದೇಶದಲ್ಲಿ ಪೊಲೀಸರು ಉದ್ದೇಶಪೂರ್ವಕವಾಗಿ ಕಾನೂನನ್ನು ನಿಯಂತ್ರಿಸುತ್ತಿದ್ದಾರೆ. ಇದು ವ್ಯವಸ್ಥೆಯ ಭಾಗವಾಗಿರುವ ಎಲ್ಲರಿಗೂ ತಿಳಿಯದ ವಿಚಾರವೇನಲ್ಲ. ಹಲವೆಡೆ ಪೊಲೀಸರೇ ಹಣವನ್ನು ಬೆದರಿಸಿ ಸುಲಿಗೆ ಮಾಡಿರುವ ಉದಾಹರಣೆಗಳೂ ದೇಶದಲ್ಲಿ ಸಾಕಷ್ಟಿವೆ.

“ಇನ್ನೂ ಲಾಕಪ್‍ಡೆತ್ ಭಾರತದ ಮಟ್ಟಿಗೆ ಹೊಸದೇನಲ್ಲ. ಕೇಂದ್ರ ಅಪರಾಧ ವಿಭಾಗ ನೀಡುವ ಅಂಕಿಅಂಶದ ಪ್ರಕಾರ 2019ರಲ್ಲಿ ಭಾರತದಲ್ಲಿ 1,606 ಜನ ಪೊಲೀಸರ ಸುಪರ್ದಿಯಲ್ಲಿದ್ದಾಗ ಲಾಕಪ್‍ನಲ್ಲೇ ಸಾವಿಗೀಡಾಗಿದ್ದಾರೆ. ಈ ಪೈಕಿ ಉತ್ತರಪ್ರದೇಶದಲ್ಲಿ ಅಧಿಕ ಜನ ಸಾವನ್ನಪ್ಪಿದ್ದರೆ, ತಮಿಳುನಾಡು, ಪಂಜಾಬ್ ಮತ್ತು ಬಿಹಾರ ಎರಡನೇ ಸ್ಥಾನದಲ್ಲಿವೆ. ಹಾಗಾದರೆ ಈ ಲಾಕಪ್ ಡೆತ್‍ಗಳಗೆ ಪರಿಹಾರ ಏನು? ಎಂಬುದು ನಮ್ಮ ಮುಂದೆ ನಿಲ್ಲುವ ಬಹುದೊಡ್ಡ ಪ್ರಶ್ನೆ.

“ಅಸಲಿಗೆ ದೇಶದಲ್ಲಿ ಸಾಕಷ್ಟು ಲಾಕಪ್‍ಡೆತ್‍ಗಳು ಸಂಭವಿಸುತ್ತಲೇ ಇವೆ. ಆದರೂ, ಇವುಗಳಿಗೆ ಕೊನೆ ಇಲ್ಲ ಏಕೆ? ಎಂದರೇ, ಲಾಕಪ್‍ಡೆತ್ ಅಪರಾಧದಲ್ಲಿ ಪಾಲ್ಗೊಂಡ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲು ದೇಶದಲ್ಲಿ ಪ್ರಬಲವಾದ ಕಾನೂನು ಇಲ್ಲ. ಹೆಚ್ಚೆಂದರೆ ಆರೋಪಿ ಪೊಲೀಸ್ ಅಧಿಕಾರಿಯನ್ನು ಮೂರು ತಿಂಗಳ ಕಾಲ ಸಸ್ಪೆಂಡ್ ಮಾಡಿ ಬೇರೆಡೆ ವರ್ಗಾವಣೆ ಮಾಡಲಾಗುತ್ತದೆ. ಭವಿಷ್ಯದಲ್ಲಿ ಪ್ರಕರಣ ಖುಲಾಸೆಯಾಗುತ್ತದೆ. ಆತ ಮತ್ತೆ ಉನ್ನತ ಹುದ್ದೆಗೆ ಏರುತ್ತಾನೆ. ಆದರೆ, ಆತನಿಂದ ಸತ್ತ ವ್ಯಕ್ತಿಗೆ ಕೊನೆಯವರೆಗೂ ನ್ಯಾಯ ದೊರೆಯುವುದೇ ಇಲ್ಲ.

“ಹೀಗಾಗಿ ಇನ್ನಾದರೂ ಲಾಕಪ್‍ಡೆತ್ ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು. ಸ್ಥಳಾಂತರಿಸುವುದು, ವಜಾಗೊಳಿಸುವುದು ಇದಕ್ಕೆ ಪರಿಹಾರವಲ್ಲ. ಪೊಲೀಸ್ ಕಸ್ಟಡಿಯಲ್ಲಿ ವ್ಯಕ್ತಿ ಗಾಯಗೊಂಡಿದ್ದರೂ ಸುಳ್ಳು ಪ್ರಮಾಣ ಪತ್ರ ನೀಡುವ ಸರ್ಕಾರಿ ವೈದ್ಯಾಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಜರುಗಿಸಬೇಕು. ಇಂತಹ ಕ್ರಮಗಳಿಂದ ಮಾತ್ರ ಪ್ರಜಾಪ್ರಭುತ್ವವನ್ನು ಉಳಿಸುವುದು ಸಾಧ್ಯ. ಇಲ್ಲದಿದ್ದರೆ, ಫ್ಯಾಸಿಸಂ ಆಡಳಿತಕ್ಕೂ ಪ್ರಜಾಪ್ರಭುತ್ವಕ್ಕೂ ವ್ಯತ್ಯಾಸ ಇಲ್ಲದಂತಾಗುತ್ತದೆ.

“ಅಮೇರಿಕದ ಜಾರ್ಜ್ ಫ್ಲಾಯ್ಡ್ ಸಾವಿಗೆ ಒಟ್ಟುಗೂಡುತ್ತಿರುವ ಜನಸಮೂಹವು ಜಯರಾಜ್ ಬೆನಿಕ್ಸ್ ಸಾವಿಗೂ ಒಂದಾಗಬೇಕು. ಜಾರ್ಜ್ ಫ್ಲಾಯ್ಡ್ ಅವರಿಗಾದ ಅನ್ಯಾಯದ ವಿರುದ್ಧದ ಹೋರಾಟಗಳು ಸ್ವಾಗತಾರ್ಹ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜನರು ಬೀದಿಗಳಲ್ಲಿ, ಮಾಧ್ಯಮಗಳ ಮೂಲಕ ಜಾರ್ಜ್ ಪರವಾಗಿ ಹೋರಾಡಿದರು. ಜಾರ್ಜ್ ಫ್ಲಾಯ್ಡ್ ಪರ ಹೋರಾಟಗಳು ಭಾರತದಲ್ಲಿ ರಾಜಕೀಯ ಬದಲಾವಣೆಯನ್ನು ತರುವುದಿಲ್ಲ. ಆದರೆ, ಜಯರಾಜ್ ಮತ್ತು ಬೆನಿಕ್ಸ್ ಪರವಾದ ಹೋರಾಟ ಇಲ್ಲಿ ರಾಜಕೀಯ ಬದಲಾವಣೆಯನ್ನು ತರಬಲ್ಲದು.

“ತಮಿಳುನಾಡಿನ ಡೈರಿ ಅಸೋಸಿಯೇಷನ್ ಮತ್ತು ವ್ಯಾಪಾರ ಸಂಘಟನೆಗಳು ತಪ್ಪಿತಸ್ಥ ಪೊಲೀಸರ ಕುಟುಂಬಗಳಿಗೆ ನಾವು ಯಾವುದೇ ಆಹಾರ ಸಾಮಗ್ರಿಗಳನ್ನು ನೀಡುವುದಿಲ್ಲ ಎಂದು ಒಮ್ಮತದ ನಿರ್ಣಯ ತೆಗೆದುಕೊಂಡಿದೆ. ಇದು ಸ್ವಾಗತಾರ್ಹ. ಆದರೆ, ನಾಡಿನ ಎಲ್ಲಾ ಜನರ ಇಂತಹ ಮಾನವೀಯ ಹೋರಾಟದ ಭಾಗವಾದರೆ ಮಾತ್ರ ವ್ಯವಸ್ಥೆಯನ್ನು ಬದಲಿಸುವುದು ಸಾಧ್ಯ. ಜನರ ಇಂತಹ ಸಾತ್ವಿಕ ಸಿಟ್ಟಿನ ಫಲಿತಾಂಶ ಮುಂದಿನ ಚುನಾವಣೆಯಲ್ಲಿ ಹೊರಹೊಮ್ಮಲಿದೆ.

“ಇನ್ನೂ ಜನರ ಮೇಲಿನ ಪೊಲೀಸರ ದೌರ್ಜನ್ಯವನ್ನು ಕಡಿಮೆ ಮಾಡಲು ಎಲ್ಲಾ ಪೊಲೀಸ್ ಠಾಣೆಗಳಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ನಾವು ಕಳೆದ 10 ವರ್ಷಗಳಿಂದ ಹೋರಾಡುತ್ತಿದ್ದೇವೆ. ಆದರೆ, ಆ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸ್ ಠಾಣೆಯ ಸುರಕ್ಷತೆಗಾಗಿ ಹೊರಗೆ ಅಳವಡಿಸಲಾಗಿದೆಯೇ ಹೊರತು, ಪೊಲೀಸ್ ಠಾಣೆಯ ಒಳಗೆ ಅಳವಡಿಸಲಾಗಿಲ್ಲ. ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸ್ ಠಾಣೆಯ ಒಳಗೂ ಅಳವಡಿಸುವವರೆಗೆ ಪಾರದರ್ಶಕತೆ ಅಸಾಧ್ಯ.”


ಇದನ್ನು ಓದಿ: 8 ಪೊಲೀಸರ ಹತ್ಯೆಗೆ ಕಾರಣವಾಗಿದ್ದ ಕ್ರಿಮಿನಲ್ ವಿಕಾಸ್ ದುಬೆ ಬಂಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಯಾರು ಹೆದರುತ್ತಾನೋ ಅವನು ಸತ್ತಂತೆ’: ರಾಘವ್ ಛಡ್ಡಾಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್ 

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ವೀಡಿಯೊ ಸಂದೇಶದಲ್ಲಿ ಆಪ್ ಸಂಸದ ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ "ಸಾಫ್ಟ್ ಪಿಆರ್" ನಲ್ಲಿ ತೊಡಗಿದ್ದಾರೆ...

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...

‘ನನ್ನ ಮೌನವನ್ನು ಸೋಲು ಎಂದು ತಿಳಿಯಬೇಡಿ’’: ರಾಜ್ಯಸಭೆಯಲ್ಲಿ ಪದಚ್ಯುತಿಯ ನಂತರ ಎಎಪಿಗೆ ತಿರಗೇಟು ನೀಡಿದ ಸಂಸದ ರಾಘವ್ ಛಡ್ಡಾ

ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕನ ಸ್ಥಾನದಿಂದ ತೆಗೆದುಹಾಕಲ್ಪಟ್ಟ ಒಂದು ದಿನದ ನಂತರ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಛಡ್ಡಾ ಅವರು ಶುಕ್ರವಾರ "ನನ್ನ ಬಾಯಿ ಮುಚ್ಚಿಸಬಹುದು, ಸೋಲಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. ಪಕ್ಷದ...

ಮಾಲ್ಡಾ ನ್ಯಾಯಾಂಗ ಅಧಿಕಾರಿಗಳ ಘೇರಾವ್ ಪ್ರಕರಣದಲ್ಲಿ 17 ಜನರ ಬಂಧನ: ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಿದ ಇಸಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಏಳು ನ್ಯಾಯಾಂಗ ಅಧಿಕಾರಿಗಳ ಘೇರಾವ್‌ನಲ್ಲಿ ಭಾಗಿಯಾಗಿದ್ದಕ್ಕಾಗಿ ಚುನಾವಣಾ ಅಭ್ಯರ್ಥಿ ಸೇರಿದಂತೆ ಕನಿಷ್ಠ 17 ಜನರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು...

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...