Homeಮುಖಪುಟಸತ್ಯದ ಮೇಲೆ ಚುನಾವಣೆ ನಡೆಸಿ ಎಂದು ಕರೆಕೊಟ್ಟು ಸುಳ್ಳು ಹೇಳಿ ಸಿಕ್ಕಿಬಿದ್ದ ಬಿಜೆಪಿಯ ಗೌತಮ್‌ ಗಂಭೀರ್‌!

ಸತ್ಯದ ಮೇಲೆ ಚುನಾವಣೆ ನಡೆಸಿ ಎಂದು ಕರೆಕೊಟ್ಟು ಸುಳ್ಳು ಹೇಳಿ ಸಿಕ್ಕಿಬಿದ್ದ ಬಿಜೆಪಿಯ ಗೌತಮ್‌ ಗಂಭೀರ್‌!

- Advertisement -
- Advertisement -

ದೆಹಲಿಯಲ್ಲಿ ಸಿಎಎ ಹೋರಾಟದ ಜೊತೆಗೆ ಚುನಾವಣೆ ರಂಗೇರಿದೆ. ಆಮ್‌ ಆದ್ಮಿ ಪಕ್ಷ ಮರು ಆಯ್ಕೆ ಬಯಸಿ ನಮ್ಮ ಕೆಲಸಗಳು ನಿಮಗೆ ಇಷ್ಟವಾದರೆ ಮಾತ್ರ ಮತ ಕೊಡಿ ಎಂದು ಘೋಷಿಸಿಬಿಟ್ಟಿವೆ. ಅದಕ್ಕೆ ಬಿಜೆಪಿ ಅವರ ಕೆಲಸಗಳು ಇಷ್ಟವಾಗಿಲ್ಲ ಎಂದು ತೋರಿಸುವ ನಾನಾ ಪ್ರಯತ್ನ ಮಾಡುತ್ತಿದೆ. ಅದರಲ್ಲಿ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ “ಸತ್ಯದ ಮೇಲೆ ಚುನಾವಣೆ ನಡೆಸಿ ಎಂದು ಕರೆಕೊಟ್ಟು ಸುಳ್ಳು ಹೇಳಿ ಸಿಕ್ಕಿಬಿದ್ದ” ಘಟನೆ ಜರುಗಿದೆ.

ಜನವರಿ 27 ರಂದು ಬಿಜೆಪಿ ದೆಹಲಿ ಸಂಸದ ಗೌತಮ್ ಗಂಭೀರ್ ಅವರು ವಿಡಿಯೋವನ್ನು ಟ್ವೀಟ್ ಮಾಡಿದ್ದು, ಇದು ರಾಜಧಾನಿಯಲ್ಲಿ ಶಿಥಿಲಗೊಂಡಿರುವ ಶಾಲೆಯನ್ನು ತೋರಿಸುತ್ತದೆ ಎಂದು ಕರೆದಿದ್ದಾರೆ. “ಅವರು ಶಿಕ್ಷಣದ ಮೇಲೆ ಚುನಾವಣೆ ಎದುರಿಸಿ ಎಂದು ಹೇಳುತ್ತಾರೆ, ನಾನು ಚುನಾವಣೆಯನ್ನು ಸತ್ಯದ ಮೇಲೆ ಎದುರಿಸಿ ಎಂದು ಹೇಳುತ್ತೇನೆ!” ಎಂದು ಬರೆದಿದ್ದು ಆಮ್ ಆದ್ಮಿ ಪಕ್ಷವನ್ನು ಕಳಪೆ ಶಾಲೆಗಳನ್ನು ಸೃಷ್ಟಿಸಿದೆ ಎಂದು ಪ್ರತಿಪಾದಿಸಿದ್ದಾರೆ. ಅವರ ವಿಡಿಯೋ ಮಂದಬೆಳಕಿನಲ್ಲಿ ಚಿತ್ರಿಸಲು ಪ್ರಯತ್ನಿಸಿದೆ.

ಗಂಭೀರ್‌ರವರ ವೈರಲ್ ವೀಡಿಯೊದ ಪ್ರಾರಂಭದಲ್ಲಿ, ಕಟ್ಟಡದ ಗೇಟ್‌ನಲ್ಲಿ ನೋಟಿಸ್ ಒಂದು ಗೋಚರಿಸುತ್ತದೆ. ಆದರೆ ಕ್ಯಾಮೆರಾ ನೋಟಿಸ್‌ನತ್ತ ಗಮನ ಹರಿಸುವುದಿಲ್ಲ. ಪತ್ರಕರ್ತ ಉದಯ್ ರಾಣಾ ಸಿಂಗ್ ಅವರು ನೋಟಿಸ್ ಅನ್ನು ಕ್ಲೋಸ್ ಅಪ್ ಮಾಡಿ ಟ್ವೀಟ್ ಮಾಡಿದ್ದಾರೆ. ಈ ಶಾಲೆಯನ್ನು ಎಸ್‌ಬಿವಿ ಜೆಜೆ ಕಾಲೋನಿಗೆ ಅಕ್ಟೋಬರ್ 9, 2019 ರಂದು ಸ್ಥಳಾಂತರಿಸಲಾಗಿದೆ ಎಂದು ಎಂದು ನೋಟಿಸ್‌ನಲ್ಲಿ ಬರೆಯಲಾಗಿದೆ. ಅಂದರೆ ಮುಚ್ಚಿರುವ ಶಾಲೆಯ ವಿಡಿಯೋ ಮಾಡಿ ಗಂಭೀರ್‌ ಆಪ್‌ ಮೇಲೆ ಗೂಬೆ ಕೂರಿಸಲು ಹೋಗಿ ಸಿಕ್ಕಿಬಿದ್ದಿದ್ದಾರೆ!

ಇದಕ್ಕೆ ಪ್ರತಿಕ್ರಿಯಿಸಿರುವ ಎಎಪಿ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಗಂಭೀರ್ ಅವರ ಟ್ವೀಟ್ ಅನ್ನು ಉಲ್ಲೇಖಿಸಿ “ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಕಟ್ಟಡವು ಇನ್ನು ಮುಂದೆ ಕ್ರಿಯಾತ್ಮಕ ಶಾಲೆಯಾಗಿರುವುದಿಲ್ಲ ಎಂದು ಬರೆದಿದ್ದಾರೆ. ನೀವು ಭೇಟಿ ನೀಡಿದ ಶಾಲೆಯನ್ನು 2019 ರ ಅಕ್ಟೋಬರ್‌ನಲ್ಲಿ ಎಸ್‌ಬಿವಿ ಜೆಜೆ ಕಾಲೋನಿಗೆ ಸ್ಥಳಾಂತರಿಸಲಾಗಿದೆ” ಎಂದು ನೋಟಿಸ್ ಸ್ಪಷ್ಟವಾಗಿ ಗೋಚರಿಸುವ ವೀಡಿಯೊವನ್ನು ಪೋಸ್ಟ್‌ ಮಾಡಿದ್ದಾರೆ.

ಆಪ್‌ ಪಕ್ಷವು “ಗಂಭೀರ್‌ರವರು ದಯವಿಟ್ಟು ಕಾಮೆಂಟರಿ ಬಾಕ್ಸ್‌ನಿಂದ ಹೊರಬಂದು ನಮ್ಮ ದೆಹಲಿ ಸರ್ಕಾರಿ ಶಾಲೆಗಳನ್ನು ನೋಡಬೇಕೆಂದು” ಕರೆ ನೀಡಿದ್ದಾರೆ.

ಪತ್ರಕರ್ತ ಉದಯ್ ರಾಣಾ ಸಿಂಗ್ ವಿದ್ಯಾರ್ಥಿಗಳಿಗೆ ಒದಗಿಸಿದ ತಾತ್ಕಾಲಿಕ ಶಾಲೆಯ ಛಾಯಾಚಿತ್ರವನ್ನು ಹಂಚಿಕೊಂಡಿದ್ದಾರೆ. “ನಾನು ಖಿಚ್ಡಿಪುರದ ತಾತ್ಕಾಲಿಕ ಶಾಲೆಗೂ ಭೇಟಿ ನೀಡಿದ್ದೆ. ಮಕ್ಕಳ ಶಾಲೆ ನವೀಕರಣಗೊಳ್ಳುತ್ತಿರುವುದರಿಂದ ಅವರು ಅಕ್ಟೋಬರ್‌ನಿಂದ ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ ”ಎಂದು ಅವರು ಬರೆದಿದ್ದಾರೆ.

ಗಂಭೀರ್‌ರವರ ಈ ತಪ್ಪು ಮಾಹಿತಿಯನ್ನು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡ ಟೀಕಿಸಿದ್ದಾರೆ. “ಸರ್ ಅಮಿತ್‌ಶಾ ಜಿಯವರೆ, ಸಂಸದ ಗೌತಮ್ ಗಂಭೀರ್ ಅವರು ಟ್ವೀಟ್‌ ಮಾಡಿರುವ ವಿಡಿಯೊದಲ್ಲಿ, ಕಟ್ಟಡದ ಗೇಟ್‌ನಲ್ಲಿರುವ ನೋಟೀಸ್‌ನಲ್ಲಿ, ಶಾಲೆಯು ನವೀಕರಣಗೊಳ್ಳುತ್ತಿರುವುದರಿಂದ ಆರು ತಿಂಗಳ ಹಿಂದೆ ನೆರೆಯ ಶಾಲೆಗೆ ಸ್ಥಳಾಂತರಿಸಲಾಗಿದೆ ಎಂದು ಹೇಳುತ್ತದೆ” ಸರಿಯಾಗಿ ನೋಡಿ ಎಂದು ಒತ್ತಾಯ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್

0
ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಅವರು ಬಿಜೆಪಿ ತೊರೆದು ಇಂದು (ಏ.19) ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮಾಲೀಕಯ್ಯ ಗುತ್ತೇದಾರ್‌ ಅವರನ್ನು...