ಮಧ್ಯ ಗಾಜಾ ಮೇಲೆ ಭಾನುವಾರ ಮುಂಜಾನೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೇಸ್ತೀನ್ ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ. ದೇರ್ ಅಲ್-ಬಲಾಹ್ ಪಟ್ಟಣದ ಅಲ್-ಅಕ್ಸಾ ಹುತಾತ್ಮರ ಆಸ್ಪತ್ರೆಯ ಬಳಿ ಸ್ಥಳಾಂತರಗೊಂಡ ನಿರಾಶ್ರಿತ ಜನರಿಗೆ ಆಶ್ರಯ ನೀಡುತ್ತಿರುವ ಮಸೀದಿಗೆ ದಾಳಿ ನಡೆಸಲಾಗಿದೆ ಎಂದು ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಮಧ್ಯ ಗಾಜಾದ ಡೀರ್ ಅಲ್-ಬಲಾಹ್‌ನಲ್ಲಿರುವ ಅಲ್-ಅಕ್ಸಾ ಹುತಾತ್ಮರ ಆಸ್ಪತ್ರೆಯ ಗೇಟ್‌ನ ಮುಂದೆ ಸ್ಥಳಾಂತರಗೊಂಡ ಜನರಿಗೆ ಆಶ್ರಯ ನೀಡುವ ಮಸೀದಿಯ ಮೇಲೆ ಆಕ್ರಮಣಕಾರರಾದ ಇಸ್ರೇಲ್ ಬಾಂಬ್ ದಾಳಿ ನಡೆಸಿದೆ. ಪರಿಣಾಮವಾಗಿ ಸಾವಿನ ಸಂಖ್ಯೆ 21 ಕ್ಕೆ ಏರಿದ್ದು, ದೊಡ್ಡ ಸಂಖ್ಯೆಯಲ್ಲಿ ಜನರು ಗಾಯಗೊಂಡಿದ್ದಾರೆ” ಎಂದು ಏಜೆನ್ಸಿಯ ವಕ್ತಾರ ಮಹ್ಮದ್ ಬಾಸ್ಸಲ್ ಹೇಳಿದ್ದಾರೆ.
ಮಸೀದಿಯ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಮಾಸ್ ಬಂಡುಕೋರರ ಮೇಲೆ ನಿಖರವಾದ ದಾಳಿ ನಡೆಸಲಾಗಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ. ಇತ್ತೀಚಿನ ದಾಳಿ ಸೇರಿದಂತೆ ಇಸ್ರೇಲ್ ದಾಳಿಗೆ ಮೃತಪಟ್ಟ ಜನರ ಸಂಖ್ಯೆ 42,000ದ ಸಮೀಪಕ್ಕೆ ತಲುಪುತ್ತಿದೆ ಎಂದು ಪ್ಯಾಲೇಸ್ತೀನಿ ಆರೋಗ್ಯ ಸಚಿವಾಲಯ ಹೇಳಿದೆ.
ಇದನ್ನೂಓದಿ: ಪ್ರವಾದಿ ಮುಹಮ್ಮದರ ಕುರಿತು ದ್ವೇಷ ಭಾಷಣ : ಯತಿ ನರಸಿಂಗಾನಂದ ಬಂಧನ
ಪ್ಯಾಲೇಸ್ತೀನಿ ನಿರಾಶ್ರಿತರು ಸೇರಿದಂತೆ ಲೆಬನಾನ್‌ನಲ್ಲಿ ಸಾವಿರಾರು ಜನರು ಯುದ್ಧ ಪೀಡಿತ ಪ್ರದೇಶದಿಂದ ಪಲಾಯನ ಮಾಡುವುದನ್ನು ಮುಂದುವರೆಸಿದ್ದಾರೆ. 2023ರ ಅಕ್ಟೋಬರ್ ವೇಳೆಗೆ ಪ್ರಾರಂಭವಾದ ಈ ಯುದ್ಧಕ್ಕೆ ವರ್ಷವಾಗುತ್ತಿದ್ದು, ಪ್ಯಾಲೆಸ್ತೀನ್ ಪರ ಪ್ರಪಂಚದಾದ್ಯಂತ ರ್ಯಾಲಿ ನಡಸಿ ಪ್ರತಿಭಟನೆ ನಡೆಸಲಾಗುತ್ತಿದೆ.
ಶನಿವಾರದಂದು, ಉತ್ತರ ಬೆಡ್ಡಾವಿ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ದಾಳಿಯು ಹಮಾಸ್‌ನ ಮಿಲಿಟರಿ ವಿಭಾಗದ ಅಧಿಕಾರಿ ಮತ್ತು ಅವರ ಹೆಂಡತಿ ಹಾಗೂ ಇಬ್ಬರು ಚಿಕ್ಕ ಹೆಣ್ಣುಮಕ್ಕಳೊಂದಿಗೆ ಕೊಂದಿದೆ ಎಂದು ಪ್ಯಾಲೇಸ್ತೀನಿ ಬಂಡುಕೋರ ಗುಂಪು ಹೇಳಿದೆ. ಗಾಜಾ
ಇಸ್ರೇಲ್-ಹಮಾಸ್ ಯುದ್ಧ ಪ್ರಾರಂಭವಾದಾಗಿನಿಂದ ಇಸ್ರೇಲ್ ಲೆಬನಾನ್‌ನಲ್ಲಿ ಹಲವಾರು ಹಮಾಸ್ ಅಧಿಕಾರಿಗಳನ್ನು ಕೊಂದಿದೆ. ಜೊತೆಗೆ ಲೆಬನಾನ್ ಮೂಲದ ಹೆಜ್ಬೊಲ್ಲಾ ಬಂಡಕೋರ ಗುಂಪಿನ ವಿರುದ್ಧ ಕೂಡಾ ದಾಳಿ ನಡೆಸುತ್ತಿದೆ. ಇಸ್ರೇಲ್ ದಾಳಿಯ ನಂತರ ನಾಗರಿಕರು, ವೈದ್ಯರು ಮತ್ತು ಹೆಜ್ಬೊಲ್ಲಾ ಹೋರಾಟಗಾರರು ಸೇರಿದಂತೆ ಕನಿಷ್ಠ 1,400 ಲೆಬನಾನಿಗರು ಕೊಲ್ಲಲ್ಪಟ್ಟರು ಮತ್ತು ಕಳೆದ ಎರಡು ವಾರಗಳಲ್ಲಿ 1.2 ಮಿಲಿಯನ್ ಜನರು ತಮ್ಮ ಮನೆಗಳಿಂದ ಪಲಾಯನ ಮಾಡಿದ್ದಾರೆ ಎಂದು ವರದಿಯಾಗಿದೆ.
ಕಳೆದ ವಾರ, ಇಸ್ರೇಲ್ ಸೇನೆಯು ದಕ್ಷಿಣ ಲೆಬನಾನ್ ಮೇಲೆ ಸೀಮಿತ ನೆಲದ ಕಾರ್ಯಾಚರಣೆ ನಡೆಸುವುದಾಗಿ ಹೇಳಿಕೊಂಡಿತ್ತು. ಈ ವೇಳೆ ನಡೆಸಿದ್ದ ಸರಣಿ ದಾಳಿಗಳಲ್ಲಿ ಹಿಜ್ಬುಲ್ಲಾ ಸಂಘಟನೆಯ ದೀರ್ಘಕಾಲದ ನಾಯಕ ಹಸನ್ ನಸ್ರಲ್ಲಾ ಸೇರಿದಂತೆ ಸಂಘಟನೆಯ ಇತರರನ್ನು ಕೊಂದು ಹಾಕಿತ್ತು.
ವಿಡಿಯೊ ನೋಡಿ: ರೈತ-ಕಾರ್ಮಿಕ ಹಿತ ರಕ್ಷಣಾ ಸಮಿತಿ ಮಲೆನಾಡು: ಪತ್ರಿಕಾಗೋಷ್ಠಿ


