ಅಮೆರಿಕದ ಮಿನಸೋಟ ರಾಜ್ಯದಲ್ಲಿ, ಬಂಧನದ ವೇಳೆ ಬಿಳಿಯ ಪೊಲೀಸ್ ಅಧಿಕಾರಿಯಿಂದ ಕೊಲೆಗೀಡಾಗಿರುವ ಕಪ್ಪು ಜನಾಂಗದ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಕುಟುಂಬಕ್ಕೆ ಮಿನಪೊಲಿಸ್ ನಗರವು 27 ಮಿಲಿಯನ್ ಡಾಲರ್ (ಸುಮಾರು 196 ಕೋಟಿ ರೂಪಾಯಿ) ಪರಿಹಾರ ನೀಡಲಿದೆ ಎಂದು ಜಾರ್ಜ್ ಫ್ಲಾಯ್ಡ್ ಕುಟುಂಬದ ವಕೀಲರು ಹೇಳಿದ್ದಾರೆ.
ಅಮೆರಿಕದ ಇತಿಹಾಸದಲ್ಲೇ ಪೊಲೀಸರ ಕೈಯಿಂದ ಅನ್ಯಾಯವಾಗಿ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ಸಿಗುತ್ತಿರುವ ಅತ್ಯಧಿಕ ಪರಿಹಾರದ ಮೊತ್ತ ಇದಾಗಿದೆ.
ಕಳೆದ ವರ್ಷದ ಮೇ 25ರಂದು ನಕಲಿ ಹಣ ಚಲಾಯಿಸಿದ ಆರೋಪದಲ್ಲಿ ಫ್ಲಾಯ್ಡ್ ರನ್ನು ಬಂಧಿಸಿದ ವೇಳೆ ಅವರು ಮೃತಪಟ್ಟಿದ್ದರು. ಫ್ಲಾಯ್ಡ್ ಕುತ್ತಿಗೆಯ ಮೇಲೆ ಮಿನಪೊಲಿಸ್ ಪೊಲೀಸ್ ಅಧಿಕಾರಿ ಡೆರೆಕ್ ಶಾವಿನ್ ಮೊಣಕಾಲೂರಿ ಸುಮಾರು 8 ನಿಮಿಷಗಳ ಕೂತಿದ್ದಾಗ ಅವರು ಕೊನೆಯುಸಿರೆಳೆದಿದ್ದರು. ಡೆರೆಕ್ ಶಾವಿನ್ ಈಗ ಕೊಲೆ ಆರೋಪದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
ಇದನ್ನೂ ಓದಿ: ಜಾರ್ಜ್ ಫ್ಲಾಯ್ಡ್ ಹತ್ಯೆ ಮಾದರಿಯಲ್ಲೇ ಜೋಧಪುರದಲ್ಲೊಂದು ಅಮಾನವೀಯ ಘಟನೆ; ವಿಡಿಯೋ ವೈರಲ್
ಇದು ಅಮೆರಿಕದಲ್ಲಿ ವ್ಯಾಪಕ ಆಕ್ರೋಷಕ್ಕೆ ಕಾರಣವಾಗಿತ್ತು. ನಂತರ ’ಜಾರ್ಜ್ ಫ್ಲಾಯ್ಡ್ ಜಸ್ಟೀಸ್ ಇನ್ ಪೋಲಿಸಿಂಗ್ ಆಕ್ಟ್’ ಅನ್ನು ಅಮೆರಿಕ ಸಂಸತ್ತಿನ ಶಾಸಕರು (ಲಾ ಮೇಕರ್ಸ್) ಅಂಗೀಕರಿಸಿದ್ದರು. ಇದು ಕಾನೂನು ಜಾರಿಗಾಗಿ ಅರ್ಹವಾದ ವಿನಾಯಿತಿ ಎಂದು ಕರೆಯಲ್ಪಡುವ ಸುಧಾರಣಾ ಮಸೂದೆಯಾಗಿದೆ. ಈ ಮಸೂದೆ ಪೊಲೀಸ್ ದುಷ್ಕೃತ್ಯದ ಘಟನೆಗಳನ್ನು ಪರಿಶೀಲನೆಗೆ ಒಳಪಡಿಸುತ್ತದೆ.
“ನಿರಾಯುಧ ವ್ಯಕ್ತಿಯನ್ನು ಕಾಪಾಡಬೇಕಾದವರು ಇನ್ನೆಂದಿಗೂ ಹತ್ಯೆ ಮಾಡಬಾರದು ಎಂಬ ಉದ್ದೇಶವನ್ನು ಶಾಸನ ಹೊಂದಿದೆ” ಎಂದು ರಿಪಬ್ಲಿಕನ್ ಕರೆನ್ ಬಾಸ್ ಹೇಳಿಕೆಯಲ್ಲಿ ತಿಳಿಸಿದ್ದರು. “ಮಿನ್ನೇಸೋಟದ ಬೀದಿಗಳಲ್ಲಿ ಜಾರ್ಜ್ ಫ್ಲಾಯ್ಡ್‌ಗೆ ಏನಾಯಿತು ಎಂದು ನಾವು ನೋಡಿದ್ದೇವೆ. ಜಗತ್ತು ಮತ್ತೊಮ್ಮೆ ಅಂಥದ್ದಕ್ಕೆ ಸಾಕ್ಷಿಯಾಗಬಾರದು” ಎಂದು ಅವರು ಹೇಳಿದ್ದರು.
ಇದನ್ನೂ ಓದಿ: ಲಂಕೇಶ್-86: ‘ಯಾಕ್ ಅಂದ್ರ ಅದು ಲಂಕೇಶ್‌ದೊಳಗ ಬಂದದ ಅಂದ್ರ ಖರೆ ಇದ್ದೇ ಇರ್ತದ’


