ನಿನ್ನೆ ತಾನೇ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ ಅಗ್ನಿಪಥ್ ಸೈನಿಕರ ನೇಮಕಾತಿ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಕೇವಲ ನಾಲ್ಕು ವರ್ಷಗಳ ಗುತ್ತಿಗೆ ಆಧಾರದ ಕೆಲಸ ಬೇಡ ಎಂದು ಪೂರ್ಣ ಪ್ರಮಾಣದ ಸುಭದ್ರ ಉದ್ಯೋಗ ಆಕಾಂಕ್ಷಿಗಳು ಉತ್ತರ ಪ್ರದೇಶದ ಹಲವೆಡೆ ಇಂದು ಪ್ರತಿಭಟನೆ ನಡೆಸಿದ್ದಾರೆ.
ನರೇಂದ್ರ ಮೋದಿಯವರು ಮಂಗಳವಾರ ಹೊಸ ಯೋಜನೆ ಘೋಷಿಸಿದ್ದರು. ಅದರಂತೆ 17.5 ವರ್ಷ ತುಂಬಿದ ಮತ್ತು 21 ವರ್ಷದೊಳಗಿನ 45000 ಯುವಜನರನ್ನು ಭಾರತೀಯ ಸೇನೆಗೆ ಅರೆಕಾಲಿಕ ಸಮಯಕ್ಕೆ ಗುತ್ತಿಗೆ ಆಧಾರಲದಲ್ಲಿ ನೇಮಿಸಿಕೊಳ್ಳುವುದಾಗಿ ಘೋಷಿಸಿದ್ದರು. ಅವರನ್ನು ಅಗ್ನಿವೀರ್ ಎಂದು ಕರೆಯಲಾಗುವುದು ಮತ್ತು ಅದರಲ್ಲಿ ಕೇವಲ 25% ಸೈನಿಕರಿಗೆ ಮಾತ್ರ ಭತ್ಯೆ-ಸಂಬಳ ಸೌಲಭ್ಯ ನೀಡುವುದಾಗಿ ಉಳಿದ 75% ಜನರು 4 ವರ್ಷಗಳ ಸೇವೆ ಮುಗಿಸಿ ನಿವೃತ್ತರಾಗಬೇಕೆಂದು ಹೇಳಲಾಗಿತ್ತು. ಈ ಯೋಜನೆಗೆ ರಾಷ್ಟ್ರದ್ಯಾಂತದ ಯುವಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉದ್ಯೋಗ ನೀಡಿ, ಇಲ್ಲದಿದ್ದರೆ ಕೊಂದುಬಿಡಿ ಎಂಬ ಘೋಷಣೆಗಳೊಂದಿಗೆ ಉತ್ತರ ಪ್ರದೇಶ ಮತ್ತು ಬಿಹಾರದ ಹಲವೆಡೆ ಯುವಜನರು ಪ್ರತಿಭಟನೆ ನಡೆಸಿದ್ದಾರೆ. ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಹಾರದಲ್ಲಿ ರೈಲು ತಡೆ ಹೋರಾಟ ನಡೆಸಲಾಗಿದೆ. ಮುಜಾಫರ್‌ಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಪ್ರತಿಭಟನಾಕಾರರು “ನಾವು ಸೈನಿಕರ ನೇಮಕಾತಿ ಮಾಡಿಕೊಳ್ಳುತ್ತಾರೆ ಎಂದು ಸತತ ಎರಡು ವರ್ಷಗಳಿಂದ ಕಾದಿದ್ದೇವೆ. ಆದರೆ ಕೊರೊನಾ ನೆಪ ಹೇಳಿ ನೇಮಕಾತಿ ನಡೆದಿಲ್ಲ. ಈಗ ಸರ್ಕಾರವು ಗುತ್ತಿಗೆ ಆಧಾರದಲ್ಲಿ ಕೇವಲ 4 ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳಲು ಮುಂದಾಗಿರುವುದನ್ನು ಒಪ್ಪಲು ಸಾಧ್ಯವಿಲ್ಲ” ಎಂದಿದ್ದಾರೆ.
ವಯೋಮಿತಿಯನ್ನು ಸಹ 21ಕ್ಕೆ ವರ್ಷಕ್ಕೆ ಇಳಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಕಾದಿರುವ ಯುವಜನರು ಏನು ಮಾಡಬೇಕು. ಎರಡು ವರ್ಷಗಳ ಕಾಲ ನೇಮಕಾತಿ ಮಾಡದೇ ಇರುವುದು ಸರ್ಕಾರದ ತಪ್ಪು. ಹಾಗಾಗಿ ವಯೋಮಿತಿಯನ್ನು ಎರಡು ವರ್ಷ ಏರಿಸಿದರೆ ನಮಗೆ ನ್ಯಾಯ ಸಿಗುತ್ತದೆ ಎಂದು ಅವರು ಆಗ್ರಹಿಸಿದ್ದಾರೆ.
ನಮ್ಮನ್ನು ಮೂರ್ಖರನ್ನಾಗಿ ಮಾಡಲಾಗಿದೆ. ನಮ್ಮೊಂದಿಗೆ ಸರ್ಕಾರ ಪಬ್‌ಜಿ ರೀತಿ ಆಡುತ್ತಿದೆ. ಇಷ್ಟು ದಿನ ನೇಮಕಾತಿ ಮಾಡಿಕೊಳ್ಳದಿರುವುದು ಏಕೆ ಎಂದು ಯಾವುದೇ ಬಿಜೆಪಿ ನಾಯಕರು ಹೇಳಿಲ್ಲ. ಈಗ ಇದ್ದಕ್ಕಿದ್ದಂತೆ ಹೊಸ ಯೋಜನೆ ತಂದಿದ್ದಾರೆ. ನಮಗೆ ಭದ್ರತೆಯ ಉದ್ಯೋಗ ಸಿಗುವವರೆಗೂ ಹೋರಾಡುತ್ತೇವೆ ಎಂದು ಪ್ರತಭಟನಾಕಾರರು ಹೇಳಿದ್ದಾರೆ.
ಸರ್ಕಾರವು ಅಗ್ನಿಪಥ್ ಯೋಜನೆಯನ್ನು “ಐತಿಹಾಸಿಕ” ಎಂದು ಕರೆದಿದೆ. ಸುಮಾರು 45,000 ಸೈನಿಕರನ್ನು ಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ಅಲ್ಪಾವಧಿಯ ಒಪ್ಪಂದದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು ಎಂದು ಘೋಷಿಸಿದೆ. ಆ ಮೂಲಕ ಸಂಬಳ ಮತ್ತು ಪಿಂಚಣಿ ಬಿಲ್‌ಗಳ ಹೊರೆ ಕಡಿಮೆ ಮಾಡಿಕೊಳ್ಳಲು ಯೋಚಿಸುತ್ತಿದೆ. ಮುಂದಿನ 90 ದಿನಗಳಲ್ಲಿ ನೇಮಕಾತಿ ಪ್ರಾರಂಭವಾಗಲಿದ್ದು, ಜುಲೈ 2023 ರ ವೇಳೆಗೆ ಮೊದಲ ಬ್ಯಾಚ್ ಸಿದ್ಧವಾಗಲಿದೆ ಎಂದು ಸರ್ಕಾರ ಹೇಳಿದೆ.
ಸರ್ಕಾರದ ಯೋಜನೆಯನ್ನು ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ತೀವ್ರವಾಗಿ ಖಂಡಿಸಿದ್ದಾರೆ. “ದೇಶದ ಅತಿ ದೊಡ್ಡ ಉದ್ಯೋಗದಾತರಾದ “ಭಾರತೀಯ ರೈಲ್ವೇ ಮತ್ತು ಸೈನ್ಯ”ದ ನಾಗರಿಕ ಸೇವೆಯಲ್ಲಿ ಗುತ್ತಿಗೆ ಮತ್ತು ಲ್ಯಾಟರಲ್ ಎಂಟ್ರಿಯ ಹೆಸರಿನಲ್ಲಿ ಉದ್ಯೋಗಗಳನ್ನು ನೀಡಲು ಪ್ರಾರಂಭಿಸಿದರೆ ಯುವಕರು ಏನು ಮಾಡುತ್ತಾರೆ? ಭವಿಷ್ಯದಲ್ಲಿ ಬಿಜೆಪಿಯ ಬಂಡವಾಳಶಾಹಿ ಸ್ನೇಹಿತರ ವ್ಯಾಪಾರದ ನೆಲೆಗಳನ್ನು ಕಾಪಾಡಲು ಯುವಕರು ಕೇವಲ 4 ವರ್ಷಗಳ ಗುತ್ತಿಗೆ ಕೆಲಸವನ್ನು ಮಾಡುತ್ತಾರೆಯೇ?” ಎಂದು ಪ್ರಶ್ನಿಸಿದ್ದಾರೆ.
अगर देश के सबसे बड़े नियोक्ताओं “भारतीय रेलवे व सेना” में भी नौकरियाँ ठेके एवं सिविल सेवा में लेटरल एंट्री के नाम पर दी जाने लगेंगी तो युवा क्या करेंगे?
क्या युवा पढ़ाई और 4 वर्षों की संविदा नौकरी भविष्य में BJP के पूँजीपति मित्रों के व्यावसायिक ठिकानों की रखवाली के लिए करेंगे?
— Tejashwi Yadav (@yadavtejashwi) June 15, 2022



Employment is very important and presently it’s at lowest.