ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ಯನ್ನು ಧೈರ್ಯವಿದ್ದರೆ “ಕಾರ್ಯಗತಗೊಳಿಸಲು ಪ್ರಯತ್ನಿಸಿ ಎಂದು ಜೆಡಿಯು ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಗೃಹ ಸಚಿವ ಅಮಿತ್ ಶಾ ಅವರಿಗೆ ಸವಾಲು ಹಾಕಿದ್ದಾರೆ.
“ನಾಗರಿಕರ ಭಿನ್ನಾಭಿಪ್ರಾಯವನ್ನು ಹೊಸಕಿಹಾಕುವುದು ಯಾವುದೇ ಸರ್ಕಾರದ ಬಲದ ಸಂಕೇತವಲ್ಲ. ಅಮಿತ್ ಶಾರವರೆ ನೀವು #CAA_NRC ವಿರುದ್ಧ ಹೋರಾಟವನ್ನು ನಿರ್ಲಕ್ಷಿಸುವುದಾದರೆ, ನೀವೇ ಘೋಷಿಸಿದ ಕ್ರೊನಾಲಜಿ ಪ್ರಕಾರ CAA & NRC ಅನುಷ್ಠಾನಗೊಳಿಸಲು ಏಕೆ ಮುಂದಾಗುತ್ತಿಲ್ಲ? ಎಂದು ಪ್ರಶಾಂತ್ ಕಿಶೋರ್ ಟ್ವೀಟ್ ಮಾಡಿದ್ದಾರೆ.
Being dismissive of citizens’ dissent couldn’t be the sign of strength of any Govt. @amitshah Ji, if you don’t care for those protesting against #CAA_NRC, why don’t you go ahead and try implementing the CAA & NRC in the chronology that you so audaciously announced to the nation!
— Prashant Kishor (@PrashantKishor) January 22, 2020
ಲಕ್ನೋದಲ್ಲಿ ನಡೆದ ರ್‍ಯಾಲಿಯಲ್ಲಿ ಅಮಿತ್ ಶಾರವರು, “ನೀವು ಎಷ್ಟು ಬೇಕಾದರೂ ಪ್ರತಿಭಟಿಸಿ, ಯಾವುದೇ ಕಾರಣಕ್ಕೂ ಸಿಎಎ ಹಿಂತೆಗೆದುಕೊಳ್ಳಲಾಗುವುದಿಲ್ಲ ಎಂದು ಪುನರುಚ್ಚರಿಸಿದ ನಂತರ ರಾಜಕೀಯ ಚುತುರ ಪ್ರಶಾಂತ್ ಕಿಶೋರ್ ಸವಾಲು ಹಾಕಿದ್ದಾರೆ.
“ನಾವು ಪ್ರತಿಭಟನೆಗಳಿಗೆ ಹೆದರುವುದಿಲ್ಲ. ವಾಸ್ತವವಾಗಿ ನಾವು ಜನಿಸಿದ್ದು ಪ್ರತಿಭಟನೆಗಳ ಮಧ್ಯೆಯೇ, ಅಲ್ಲಿಯೇ ಬೆಳೆದಿದ್ದೇನೆ. ನಾವು ಪ್ರತಿಪಕ್ಷದಲ್ಲೂ ಇದೇ ಮಾತನ್ನು ಹೇಳಿದ್ದೆವು ಮತ್ತು ಅಧಿಕಾರದಲ್ಲಿದ್ದಾಗ ನಾವು ಈಗ ಅದೇ ಮಾತನ್ನು ಹೇಳುತ್ತಿದ್ದೇವೆ” ಎಂದ ಅವರು ಈ ಕುರಿತು ಯಾರಾದರೂ ಬಹಿರಂಗ ಚರ್ಚೆಗೆ ಬರಬಹುದು ಎಂದು ಕರೆ ನೀಡಿದ್ದರು.
ಪ್ರಶಾಂತ್ ಕಿಶೋರ್ ಆರಂಭದಿಂದಲೂ ಸಿಎಎ, ಎನ್‌ಆರ್‌ಸಿ ವಿರುದ್ಧ ದನಿಯೆತ್ತಿದ್ದರು. ಅಲ್ಲದೇ ತಮ್ಮ ಜೆಡಿಯು ಪಕ್ಷವೂ ಸಹ ಇದಕ್ಕೆ ವಿರೋಧ ವ್ಯಕ್ತಪಡಿಸುವಂತೆ ಒತ್ತಡ ತಂದಿದ್ದರು. ತಮ್ಮ ಪಕ್ಷದೊಳಗೆ ತಿದ್ದುಪಡಿ ಮಾಡಿದ ಪೌರತ್ವ ಕಾನೂನು ಮತ್ತು ಎನ್‌ಆರ್‌ಸಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೊನೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಹ ಸಿಎಎ ಎನ್‌ಆರ್‌ಸಿ ವಿರುದ್ಧ ನಿಲುವು ತೆಗೆದುಕೊಂಡಿದ್ದರು.



Mr. Prashant Kishore, so called intelligent strategist, try to support the government for all the constructive work/approach. Try to come out of the illusion that you are the only intelligent in the world. Be informed that you are going to meet your ‘WATERLOO’.
ಸಿಎಎ, ಎನ್.ಆರ್.ಸಿ. ಎಲ್ಲೆಡೆಯೂ ವಿರೋಧ ಹೆಚ್ಚುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ.