ಬುಡಕಟ್ಟು ಕಲ್ಯಾಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳನ್ನು ಮಾಡಿದ್ದ ಗೋವಾ ಸಚಿವ ಗೋವಿಂದ್ ಗೌಡೆ ಅವರನ್ನು ಮೂರು ವಾರಗಳ ನಂತರ ಬುಧವಾರ ರಾಜ್ಯ ಸಚಿವ ಸಂಪುಟದಿಂದ ತೆಗೆದುಹಾಕಲಾಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಬುಡಕಟ್ಟು ಕಲ್ಯಾಣ ಖಾತೆಯನ್ನು ಹೊಂದಿದ್ದಾರೆ. ಸಿಎಂ ಇಲಾಖೆಯಲ್ಲಿ ಭ್ರಷ್ಟಾಚಾರ
ಕಲೆ ಮತ್ತು ಸಂಸ್ಕೃತಿ ಸಚಿವರಾದ ಗೌಡೆ ಅವರನ್ನು ಸಂಪುಟದಿಂದ ಕೈಬಿಡುವ ನಿರ್ಧಾರವನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ ಎಂದು ಗೋವಾ ಬಿಜೆಪಿ ಮುಖ್ಯಸ್ಥ ದಾಮು ನಾಯಕ್ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. “ಸರ್ಕಾರ, ಪಕ್ಷ ಮತ್ತು ಪಕ್ಷದ ಕೇಂದ್ರ ನಾಯಕತ್ವದ ಸಮಾಲೋಚನೆಯ ನಂತರ ಈ ಕ್ರಮ ತೆಗೆದುಕೊಳ್ಳಲಾಗಿದೆ, ಪಕ್ಷದ ಶಿಸ್ತು ಅತ್ಯಗತ್ಯ.” ಎಂದು ಅವರು ಹೇಳಿದ್ದಾರೆ.
ಗೌಡೆ ಅವರನ್ನು ಸಚಿವ ಸಂಪುಟದಿಂದ ತೆಗೆದುಹಾಕಲು ಮುಖ್ಯಮಂತ್ರಿ ಮಾಡಿದ ಶಿಫಾರಸನ್ನು ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೈ ಅಂಗೀಕರಿಸಿದ್ದಾರೆ ಎಂದು ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ.
ಜೂನ್ 18 ರಂದು ಆಚರಿಸಲಾಗುವ ಗೋವಾ ವಿಮೋಚನಾ ದಿನದಂದು ಸಮಾಜದ ತಳಮಟ್ಟದಲ್ಲಿರುವ ವರ್ಗಗಳ ಪರವಾಗಿ ನಿಂತಿದ್ದಕ್ಕಾಗಿ “ಈ ಭಾಗ್ಯವನ್ನು” ನಾನು ಪಡೆದಿದ್ದೇನೆ ಎಂದು ಗೌಡೆ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.
चिड्डल्या माडल्या लोकांचो पक्ष घेतलो हाची पावती गोंयच्या क्रांती दिसाक मेळप हाच्या परस व्हडले भाग्य आसपाक शकना. जे गजालीक लागून ह्या सरकारान ही भूमीका घेतल्या त्या संघर्शाक आवाज दिवपाक मेकळो केल्या खातीर म्हज्या सरकाराचें आनी पक्षाचें उपकार आटयता. सत्ता आनी सत्य भीतर निवड करपाची…
— Govind Gaude (@Govind_Gaude) June 18, 2025
ಮೇ 26 ರಂದು ನಡೆದ ರಾಜ್ಯ ಮಟ್ಟದ ಸಮಾರಂಭದಲ್ಲಿ ಮಾತನಾಡಿದ್ದ ಗೌಡೆ ಅವರು ರಾಜ್ಯ ಬುಡಕಟ್ಟು ಕಲ್ಯಾಣ ಇಲಾಖೆಯು ಅಸಮರ್ಥವಾಗಿದೆ ಎಂದು ಆರೋಪಿಸಿದ್ದರು ಮತ್ತು ಫೈಲ್‌ಗಳಿಗೆ ಸಹಿ ಹಾಕಲು ಅದರ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ ಎಂದು ಹೇಳಿದ್ದರು.
ಆದಿವಾಸಿ ನಾಯಕರೂ ಆಗಿರುವ ಗೌಡೆ ಅವರು, ರಾಜ್ಯದಲ್ಲಿ “ಬುಡಕಟ್ಟು ಭವನ” ನಿರ್ಮಾಣ ಏಕೆ ಸ್ಥಗಿತಗೊಂಡಿದೆ ಎಂದು ಪ್ರಶ್ನಿಸಿದ್ದರು.ಈ ಯೋಜನೆಗಾಗಿ ಅನೇಕ ಆದಿವಾಸಿಗಳು ತಮ್ಮ ಭೂಮಿಯನ್ನು ಬಿಟ್ಟುಕೊಟ್ಟಿದ್ದಾರೆ ಎಂದು ಹೇಳಿದ್ದರು. “ನಾನು ಬುಡಕಟ್ಟು ಕಲ್ಯಾಣ ಸಚಿವನಾಗಿದ್ದಾಗ ಅಡಿಪಾಯ ಹಾಕಲಾಯಿತು. ಆದರೆ ಈಗ ಯೋಜನೆ ಸ್ಥಗಿತಗೊಂಡಿದೆ. ಯೋಜನೆಯಲ್ಲಿ ಏಕೆ ಪ್ರಗತಿಯಿಲ್ಲ?” ಎಂದು ಗೌಡೆ ಹೇಳಿದ್ದರು.
ಸಚಿವ ಗೌಡೆ ಅವರ “ಬೇಜವಾಬ್ದಾರಿ ಹೇಳಿಕೆಗಳಿಗಾಗಿ” ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಾವಂತ್ ಹೇಳಿದ್ದರು. ಗೌಡೆ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ರಾಜ್ಯದಲ್ಲಿ “ವಿಪರೀತ ಭ್ರಷ್ಟಾಚಾರ” ನಡೆಯುತ್ತಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಉಲ್ಲೇಖಿಸಿ ರಾಜ್ಯಪಾಲರನ್ನು ಕಾಂಗ್ರೆಸ್ ಒತ್ತಾಯಿಸಿದೆ.
ವಿರೋಧ ಪಕ್ಷದ ನಾಯಕ, ಗೋವಾ ಫಾರ್ವರ್ಡ್ ಪಕ್ಷದ ಮುಖ್ಯಸ್ಥ ವಿಜಯ್ ಸರ್ದೇಸಾಯಿ ಪ್ರತಿಕ್ರಿಯಿಸಿ, “ಗೌಡೆ ಅವರ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಬಂದಾಗ ಅವರನ್ನು ತೆಗೆದುಹಾಕಲಾಗಿಲ್ಲ. ಆದರೆ, ಈಗ ಅವರು ಬುಡಕಟ್ಟು ಇಲಾಖೆಯಲ್ಲಿ ಭ್ರಷ್ಟಾಚಾರದ ಆರೋಪಗಳನ್ನು ಎತ್ತಿದಾಗ, ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಂಡಿದೆ” ಎಂದು ರು ಹೇಳಿದ್ದಾರೆ. ಸಿಎಂ ಇಲಾಖೆಯಲ್ಲಿ ಭ್ರಷ್ಟಾಚಾರ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ | ರಾಂಚಿ, ಪಾಟ್ನಾದಲ್ಲಿ ಇಡಿ ದಾಳಿ
ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ | ರಾಂಚಿ, ಪಾಟ್ನಾದಲ್ಲಿ ಇಡಿ ದಾಳಿ

