ಆಸ್ಟ್ರೇಲಿಯಾದ ಸಂಸತ್ತು ಗುರುವಾರ ಮಹತ್ವದ ಶಾಸನವನ್ನು ಅಂಗೀಕರಿಸಿದೆ. ಈ ಶಾಸನದಂತೆ ಜಾಗತಿಕ ಡಿಜಿಟಲ್ ಕಂಪೆನಿಗಳು ಸ್ಥಳೀಯ ಸುದ್ದಿ ಉದ್ಯಮಗಳಿಗೆ ಹಣ ಪಾವತಿಸಬೇಕಾಗುತ್ತದೆ. ಆಸ್ಟ್ರೇಲಿಯಾ ಸಂಸತ್ತು ಜಾರಿಗೆ ತಂದಿರುವ ಈ ಶಾಸನವನ್ನು ವಿಶ್ವದಾದ್ಯಂತ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.
ಸ್ಥಳೀಯ ಮಾಧ್ಯಮ ಕಂಪನಿಗಳಿಗೆ ಹಣ ಪಾವತಿಸಲು ಫೇಸ್‌ಬುಕ್ ಮತ್ತು ಗೂಗಲ್ ತೀವ್ರವಾಗಿ ವಿರೋಧಿಸಿದ್ದವು, ಆದರೆ ಆಸ್ಟ್ರೇಲಿಯಾ ಸರ್ಕಾರ ಪಟ್ಟು ಬಿಡದೆ ಕಾನೂನು ಜಾರಿ ಮಾಡಿದೆ.
ಇದನ್ನೂ ಓದಿ: ತನ್ನ ವ್ಯವಹಾರದ ರಕ್ಷಣೆಗೆ ಭಜರಂಗದಳದ ಪರ ನಿಂತ ಫೇಸ್‌ಬುಕ್: ವಾಲ್‌ಸ್ಟ್ರೀಟ್ ಜರ್ನಲ್ ವರದಿ
ಆಸ್ಟ್ರೇಲಿಯ ಜಾರಿಗೆ ತಂದಿರುವ ಈ ಹೊಸ ಕಾನೂನು ಗೂಗಲ್ ಮತ್ತು ಫೇಸ್‌ಬುಕ್‌ಗೆ ಸ್ಥಳೀಯ ಸುದ್ದಿ ಉದ್ಯಮಕ್ಕೆ ಹತ್ತಾರು ಮಿಲಿಯನ್ ಡಾಲರ್‌ಗಳನ್ನು ಹೂಡಿಕೆ ಮಾಡಲು ದಾರಿ ಮಾಡಿಕೊಡುತ್ತದೆ. ಗೂಗಲ್ ಈಗ ತನ್ನ ನ್ಯೂಸ್ ಫೀಡ್‌ನಲ್ಲಿ ಕಾಣಿಸಿಕೊಳ್ಳುವ ಸುದ್ದಿಗಳಿಗೆ ಪಾವತಿ ಮಾಡಲಿದೆ. ಫೇಸ್‌ಬುಕ್ ಕೂಡಾ ತನ್ನ ನ್ಯೂಸ್ ಫೀಡ್‌ನಲ್ಲಿ ಕಾಣಿಸಿಕೊಳ್ಳುವ ಸುದ್ದಿಗಳಿಗೆ ಪಾವತಿ ಮಾಡುತ್ತದೆ ಎಂಬ ನಿರೀಕ್ಷೆಯಿದೆ.
ತಮ್ಮ ಸುದ್ದಿಗಳನ್ನು ಉಚಿತವಾಗಿ ಬಳಸಿಕೊಂಡು ಆನ್‌ಲೈನ್ ಜಾಹೀರಾತಿನಲ್ಲಿ ಪ್ರಾಬಲ್ಯ ಹೊಂದಿರುವ ಕಂಪನಿಗಳು ಹಣಮಾಡುತ್ತಿದೆ ಎಂದು ಸುದ್ದಿ ಮಾಧ್ಯಮಗಳ ನಿಯಂತ್ರಕರು ಆರೋಪಿಸಿದ್ದರು. ಈ ಕಾನೂನಿನಿಂದಾಗಿ ತಮ್ಮ ವ್ಯವಹಾರದ ಮಾದರಿಗಳಿಗೆ ತೊಂದರೆ ಉಂಟಾಗುತ್ತದೆ ಎಂದು ದೊಡ್ಡ ತಂತ್ರಜ್ಞಾನ ಸಂಸ್ಥೆಗಳು ಕಾನೂನನ್ನು ಮೊದಲಿನಿಂದಲೂ ತೀವ್ರವಾಗಿ ವಿರೋಧಿಸಿದ್ದವು.
ಇದನ್ನೂ ಓದಿ: ಫೇಸ್‌ಬುಕ್ ದ್ವೇಷದಿಂದ ಲಾಭ ಗಳಿಸುತ್ತಿದೆ: ಮಾಜಿ ಫೇಸ್‌ಬುಕ್ ಉದ್ಯೋಗಿ ಮಾರ್ಕ್ ಲಕ್ಕಿ


