Homeಮುಖಪುಟಶಾಲಾ ಮಕ್ಕಳು ಆರ್‌ಎಸ್‌ಎಸ್‌ ಗೀತೆ ಹಾಡಿದ ಪ್ರಕರಣ : ತನಿಖೆಗೆ ಆದೇಶಿಸಿದ ಸರ್ಕಾರ

ಶಾಲಾ ಮಕ್ಕಳು ಆರ್‌ಎಸ್‌ಎಸ್‌ ಗೀತೆ ಹಾಡಿದ ಪ್ರಕರಣ : ತನಿಖೆಗೆ ಆದೇಶಿಸಿದ ಸರ್ಕಾರ

- Advertisement -
- Advertisement -

ಹೊಸದಾಗಿ ಚಾಲನೆ ನೀಡಲಾದ ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೊದಲ ಸಂಚಾರದ ವೇಳೆ ಶಾಲಾ ಮಕ್ಕಳು ಆರ್‌ಎಸ್‌ಎಸ್‌ ಗೀತೆ (ಗಾನ ಗೀತಂ) ಹಾಡಿದ ಬಗ್ಗೆ ತನಿಖೆಗೆ ಕೇರಳದ ಪ್ರಾಥಮಿಕ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಆದೇಶಿಸಿದ್ದಾರೆ.

ಸೂಕ್ತ ತನಿಖೆ ನಡೆಸಿ ವರದಿ ಒಪ್ಪಿಸುವಂತೆ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಸಚಿವರು ಸೂಚಿಸಿದ್ದಾರೆ.

“ಮಕ್ಕಳು ಆರ್‌ಎಸ್‌ಎಸ್‌ ಗೀತೆ ಹಾಡಿರುವುದು ಅತ್ಯಂತ ಗಂಭೀರ ವಿಷಯ” ಎಂದಿರುವ ಸಚಿವರು, “ಯಾವುದೇ ಸಂಘಟನೆಯ ಕೋಮು ಅಥವಾ ರಾಜಕೀಯ ಉದ್ದೇಶಗಳಿಗಾಗಿ ಮಕ್ಕಳನ್ನು ಬಳಸಿಕೊಳ್ಳುವುದು ಸಾಂವಿಧಾನಿಕ ತತ್ವಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಇದು ಬಲವಾದ ಖಂಡನೆಗೆ ಅರ್ಹವಾಗಿದೆ. ನಮ್ಮ ಮಕ್ಕಳಿಗೆ ಜಾತ್ಯತೀತ ಶಿಕ್ಷಣವನ್ನು ಖಾತ್ರಿಪಡಿಸಿಕೊಳ್ಳುವಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ” ಎಂದು ಹೇಳಿದ್ದಾರೆ.

ಶನಿವಾರ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಚಾಲನೆ ನೀಡಿದ ರೈಲಿನ ಮೊದಲ ಸಂಚಾರದ ವೇಳೆ ಕೊಚ್ಚಿಯ ಸರಸ್ವತಿ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ಇಪ್ಪತ್ತು ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರು ‘ಪರಮಪವಿತ್ರಮಥಮೀ ಮನ್ನಿಲ್ ಭಾರತಾಂಬಾಯೆ ಪೂಜಿಕ್ಕಾನ್’ಎಂಬ ಆರ್‌ಎಸ್‌ಎಸ್‌ ಗೀತೆ ಹಾಡಿದ್ದಾರೆ. ಇದರ ವಿಡಿಯೋವನ್ನು ದಕ್ಷಿಣ ರೈಲ್ವೆ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದೆ.

ಸರಸ್ವತಿ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಗೆ ಸಂಯೋಜಿತವಾಗಿದೆ ಮತ್ತು ಆರ್‌ಎಸ್‌ಎಸ್‌ನ ಶಿಕ್ಷಣ ವಿಭಾಗವಾದ ವಿದ್ಯಾ ಭಾರತಿಯ ಕೇರಳ ಘಟಕ ಭಾರತೀಯ ವಿದ್ಯಾನಿಕೇತನ ಅಡಿಯಲ್ಲಿ ಬರುತ್ತದೆ.

ಮಕ್ಕಳು ಹಾಡಿರುವ ಆರ್‌ಎಸ್‌ಎಸ್‌ ಗೀತೆ ಸರಸ್ವತಿ ಶಾಲೆಯ ಗೀತೆ ಎಂದು ದಕ್ಷಿಣ ರೈಲ್ವೆ ತನ್ನ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಹೇಳಿದೆ.

ವಿವಾದದ ಕುರಿತು ಪ್ರತಿಕ್ರಿಯಿಸಿರುವ ಶಾಲೆಯ ಪ್ರಾಂಶುಪಾಲ ಕೆ.ಪಿ. ಡಿಂಟೊ, “ಹಾಡನ್ನು ಆಯ್ಕೆ ಮಾಡಿರುವುದರಲ್ಲಿ ರೈಲ್ವೆಯ ಪಾತ್ರವಿಲ್ಲ ಎಂಬುವುದಾಗಿ ಹೇಳಿದ್ದಾರೆ” ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

“ಟಿವಿ ಚಾನೆಲ್ ತಂಡದವರು ವಿದ್ಯಾರ್ಥಿಗಳೊಂದಿಗೆ ಹಾಡು ಹಾಡಲು ವಿನಂತಿಸಿದರು. ವಿದ್ಯಾರ್ಥಿಗಳು ವಂದೇ ಮಾತರಂ ಹಾಡಲು ಪ್ರಾರಂಭಿಸಿದಾಗ, ಟಿವಿ ಚಾನೆಲ್‌ನವರು ಮಲಯಾಳಂ ಹಾಡು ಹಾಡುವಂತೆ ಹೇಳಿದರು. ಟಿವಿ ತಂಡದ ಕೋರಿಕೆಯ ಮೇರೆಗೆ ಮಕ್ಕಳು ವಿವಿಧತೆಯಲ್ಲಿ ಏಕತೆಯನ್ನು ಆಚರಿಸುವ ಹಾಡನ್ನು ಹಾಡಿದ್ದಾರೆ” ಎಂದು ಡಿಂಟೊ ಹೇಳಿದ್ದಾಗಿ ಪತ್ರಿಕೆ ಉಲ್ಲೇಖಿಸಿದೆ.

ವಂದೇ ಭಾರತ್‌ ರೈಲಿನಲ್ಲಿ ಆರ್‌ಎಸ್‌ಎಸ್‌ ಗೀತೆ ಹಾಡಿದ ಮಕ್ಕಳು, ವಿಡಿಯೋ ಹಂಚಿಕೊಂಡ ರೈಲ್ವೆ : ತೀವ್ರ ವಿರೋಧ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೈಸೂರು| ಒಳಮೀಸಲಾತಿ ಹೋರಾಟ ಹತ್ತಿಕ್ಕಲು ನಿಷೇಧಾಜ್ಞೆ ಹೇರಿದ ಕಾಂಗ್ರೆಸ್ ಸರ್ಕಾರ

ಪೂರ್ಣ ಪ್ರಮಾಣದ ಒಳಮೀಸಲಾತಿ ಜಾರಿಗೆ ಆಗ್ರಹಿಸಿ 'ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ' ನಡೆಸುತ್ತಿದ್ದ ಹೋರಾಟಕ್ಕೆ ಜಿಲ್ಲಾ ಪೊಲೀಸರು ಅನುಮತಿ ನಿರಾಕರಿಸಿದ್ದು, ಸಿದ್ದರಾಮನಹುಂಡಿಯಿಂದ ಮೈಸೂರಿಗೆ ಇಂದು ಪಾದಯಾತ್ರೆ ಆರಂಭಿಸಿದ ಹೋರಾಟಗಾರರನ್ನು...

‘ನಕಲಿ ಬ್ಯಾಂಕ್ ಗ್ಯಾರಂಟಿ’ ಪ್ರಕರಣ : ರಿಲಯನ್ಸ್ ಪವರ್, ಇತರ ಸಂಸ್ಥೆಗಳ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ ಇಡಿ

ರಿಲಯನ್ಸ್ ಪವರ್ ಕಂಪನಿಯು ಭಾರತೀಯ ಸೌರಶಕ್ತಿ ನಿಗಮಕ್ಕೆ (ಎಸ್‌ಇಸಿಐ) ಟೆಂಡರ್ ಪಡೆಯಲು ಸಲ್ಲಿಸಿದ 68 ಕೋಟಿ ರೂಪಾಯಿಗಳ ನಕಲಿ ಬ್ಯಾಂಕ್ ಗ್ಯಾರಂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಪವರ್ ಲಿಮಿಟೆಡ್ ಮತ್ತು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್‌ನ...

ಉತ್ತರ ಪ್ರದೇಶ| ಬಾಬರಿ ಮಸೀದಿ ಮೇಲಿನ ದಾಳಿಗೆ 33 ವರ್ಷ; ಅಯೋಧ್ಯೆ-ವಾರಣಾಸಿಯಲ್ಲಿ ಬಿಗಿ ಭದ್ರತೆ

ಬಾಬರಿ ಮಸೀದಿ ಧ್ವಂಸವಾಗಿ 33ನೇ ವರ್ಷ ತುಂಬುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಅಯೋಧ್ಯೆ ಮತ್ತು ಉತ್ತರ ಪ್ರದೇಶದ ಇತರ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಜಾಗರೂಕರಾಗಿದ್ದು, ಎಲ್ಲಾ ಮಾರ್ಗಗಳಲ್ಲಿ ವಾಹನಗಳ ಸಂಪೂರ್ಣ ತಪಾಸಣೆ ನಡೆಸುತ್ತಿವೆ. ಈ ಕುರಿತು...

ನ್ಯಾಷನಲ್ ಹೆರಾಲ್ಡ್‌ಗೆ ದೇಣಿಗೆ: ‘ಡಿಕೆ’ ಸಹೋದರರಿಗೆ ಇಡಿ-ದೆಹಲಿ ಪೊಲೀಸರಿಂದ ಸಮನ್ಸ್

ನ್ಯಾಷನಲ್ ಹೆರಾಲ್ಡ್ ಮತ್ತು ಯಂಗ್ ಇಂಡಿಯಾ ಸಂಸ್ಥೆಗಳಿಗೆ ನೀಡಿದ ದೇಣಿಗೆಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕೈಗೊಂಡಿರುವ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮತ್ತು ಜಾರಿ ನಿರ್ದೇಶನಾಲಯವು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು...

ಇಂಡಿಗೋ ಹಾರಾಟದಲ್ಲಿ ಐದನೇ ದಿನವೂ ವ್ಯತ್ಯಯ: ವಿಮಾನ ದರಕ್ಕೆ ತಾತ್ಕಾಲಿಕ ಮಿತಿ ವಿಧಿಸಿದ ಕೇಂದ್ರ

ಇಂಡಿಗೋದ ದೇಶೀಯ ಕಾರ್ಯಾಚರಣೆಗಳು ಸತತ ಐದನೇ ದಿನವೂ ಅಸ್ತವ್ಯಸ್ತಗೊಂಡಿದ್ದರಿಂದ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಶನಿವಾರ (ಡಿಸೆಂಬರ್ 6) ವಿಮಾನ ಟಿಕೆಟ್ ದರಗಳ ಮೇಲೆ ತಾತ್ಕಾಲಿಕ ಮಿತಿಯನ್ನು ವಿಧಿಸಿದೆ. ನಿಗದಿತ ಮಾನದಂಡಗಳ ಯಾವುದೇ...

ಪಶ್ಚಿಮ ಬಂಗಾಳ| ಎಸ್‌ಐಆರ್‌ನಲ್ಲಿ ಹೆಸರು ನೋಂದಾಯಿಸಲು ನಿರಾಕರಿಸಿದ 79 ಬುಡಕಟ್ಟು ಜನಾಂಗಗಳು

ಪಶ್ಚಿಮ ಬಂಗಾಳದ ಬಂಕುರಾದ ಮುಚಿಕಟಾ ಮತ್ತು ವೆದುವಾಶೋಲ್ ಗ್ರಾಮಗಳ ಬುಡಕಟ್ಟು ಜನಾಂಗದವರು 'ಸಮಾಜ್ವಾದ್ ಅಂತರ-ರಾಜ್ಯ ಮಾಝಿ ಸರ್ಕಾರ್'ಗೆ ನಿಷ್ಠೆಯನ್ನು ಉಲ್ಲೇಖಿಸಿ, ಚುನಾವಣಾ ಆಯೋಗ್ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ...

ವಿದ್ಯಾರ್ಥಿಗಳಿಗೆ ಭಗವದ್ಗೀತೆ ಬೋಧಿಸುವಂತೆ ಪತ್ರ ಬರೆದ ‘ಜಾತ್ಯತೀತ ಜನತಾದಳ’ ನಾಯಕ ಕುಮಾರಸ್ವಾಮಿ

ಭಗವದ್ಗೀತೆಯನ್ನು 'ಪವಿತ್ರ ಗ್ರಂಥ' ಎಂದಿರುವ ಜಾತ್ಯತೀತ ಜನತಾದಳ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ, ವಿದ್ಯಾರ್ಥಿಗಳಿಗೆ ಪಠ್ಯದಲ್ಲಿ ಭಗವದ್ಗೀತೆ ಬೋಧಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಕೇಂದ್ರ ಶಿಕ್ಷಣ...

‘ಲವ್ ಜಿಹಾದ್’ ಕಾರ್ಯಕ್ರಮಗಳನ್ನು ತೆಗೆದು ಹಾಕಲು ಐದು ಚಾನೆಲ್‌ಗಳಿಗೆ ಎನ್‌ಬಿಡಿಎಸ್‌ಎ ಆದೇಶ

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್‌ಸಿಆರ್‌ಟಿ) ಪಠ್ಯಪುಸ್ತಕವನ್ನು 'ಲವ್ ಜಿಹಾದ್' ಪಿತೂರಿಯೊಂದಿಗೆ ಜೋಡಿಸುವ ಎಂಟು ಕಾರ್ಯಕ್ರಮಗಳನ್ನು ತೆಗೆದುಹಾಕುವಂತೆ ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರವು (ಎನ್‌ಬಿಡಿಎಸ್‌ಎ) ಮಂಗಳವಾರ (ಡಿಸೆಂಬರ್...

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಪ್ರಪ್ರಥಮ ‘ಫಿಫಾ ಶಾಂತಿ’ ಪ್ರಶಸ್ತಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರಿಗೆ ಹೊಸ ಫಿಫಾ ಶಾಂತಿ ಪ್ರಶಸ್ತಿಯನ್ನು ಶುಕ್ರವಾರ ನೀಡಲಾಯಿತು. ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಬಹಿರಂಗವಾಗಿ ಆಸೆ ವ್ಯಕ್ತಪಡಿಸಿದ್ದ ಅವರಿಗೆ, ಹೊಸದಾಗಿ ರಚಿಸಲಾದ ಫಿಫಾ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಟ್ರಂಪ್...

ಬಾಬಾ ಸಾಹೇಬರ ಪರಿನಿಬ್ಬಾಣ ಜಗತ್ತಿನ ಕವಲುದಾರಿಗೊಂದು ಕೈಮರದಂತೆ ಕಾಣಿಸುತ್ತಿದೆ

ಬುದ್ಧನ ತತ್ವಗಳು, ಬಸವ- ಅಲ್ಲಮರ ಚಿಂತನೆಗಳು, ಬಾಬಾ ಸಾಹೇಬರ ವಿಚಾರಗಳು , ನಮ್ಮ ಸಂವಿಧಾನದ ದಿಕ್ಸೂಚಿಗಳು ಹಾಗೂ ಕಳೆದ 75 ವರ್ಷಗಳಿಂದ ಸ್ಕ್ಯಾಂಡಿನೇವಿಯನ್ ದೇಶಗಳು ಒಂದು ಮಟ್ಟಿಗೆ ಸಾಧಿಸಿದ ಆಧುನಿಕ‌ ಮಾನವೀಯ‌- ವೈಜ್ಞಾನಿಕ...