ವಿಶೇಷ ಸಚಿವ ಸಂಪುಟ ಮುಂದೂಡಿದ ಸರ್ಕಾರ; ಒಳಮೀಸಲಾತಿ ನಿರ್ಧಾರ ಮತ್ತಷ್ಟು ವಿಳಂಬ

ಪರಿಶಿಷ್ಟ ಜಾತಿಯೊಳಗಿನ (ಎಸ್‌ಸಿ) ಒಳಮೀಸಲಾತಿ ಜಾರಿ ಸಂಬಂಧ ಇಂದು ಸರ್ಕಾರ ನಡೆಸಬೇಕಿದ್ದ ವಿಶೇಷ ಸಚಿವ ಸಂಪುಟ ಸಭೆಯನ್ನು ಉಪಚುನಾವಣೆ ‘ಮಾದರಿ ನೀತಿ ಸಂಹಿತೆ’ ಕಾರಣ ಮುಂದಿಟ್ಟು ಮುಂದೂಡಿದೆ. ಆ ಮೂಲಕ, ಒಳಮೀಸಲಾತಿ ನಿರ್ಧಾರವನ್ನು ಮತ್ತಷ್ಟು ವಿಳಂಬ ಮಾಡಿರುವುದು ದಲಿತ ಸಮುದಾಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಸಭೆ ಮುಂದೂಡಿರುವ ಬಗ್ಗೆ ಸರ್ಕಾರದ ಅಪರ ಕಾರ್ಯದರ್ಶಿಗಳು ಪ್ರಕಟಣೆ ಹೊರಡಿಸಿದ್ದು, “ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ, ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ … Continue reading ವಿಶೇಷ ಸಚಿವ ಸಂಪುಟ ಮುಂದೂಡಿದ ಸರ್ಕಾರ; ಒಳಮೀಸಲಾತಿ ನಿರ್ಧಾರ ಮತ್ತಷ್ಟು ವಿಳಂಬ