Homeಕರೋನಾ ತಲ್ಲಣExplained: ಹೋಮ್‌‌‌ ಐಸೋಲೇಶನ್‌ ರೋಗಿಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಸರ್ಕಾರ

Explained: ಹೋಮ್‌‌‌ ಐಸೋಲೇಶನ್‌ ರೋಗಿಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಸರ್ಕಾರ

- Advertisement -
- Advertisement -

ದೇಶದಾದ್ಯಂತ ಕೊರೊನಾ ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಮಧ್ಯೆ, ಸೌಮ್ಯ ಮತ್ತು ಲಕ್ಷಣರಹಿತ ರೋಗಿಗಳಿಗೆ ಮನೆಯಲ್ಲೇ ಪ್ರತ್ಯೇಕವಾಗಿ (ಹೋಂ ಐಸೋಲೇಶನ್‌‌) ಇರುವುದಕ್ಕಾಗಿ ಒಕ್ಕೂಟ ಸರ್ಕಾರವು ಬುಧವಾರದಂದು ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಯೂ ಸೌಮ್ಯ ಲಕ್ಷಣಗಳನ್ನು ಹೊಂದಿರುವ ಮತ್ತು ಲಕ್ಷಣರಹಿತ ಸೋಂಕಿತರಿಗೆ ಮಾತ್ರ ಅನ್ವಯವಾಗುತ್ತದೆ.

ಹೊಸ ಮಾರ್ಗಸೂಚಿಗಳು ಇಲ್ಲಿವೆ:

  • ಸೋಂಕಿತ ವ್ಯಕ್ತಿ ಪಾಸಿಟಿವ್‌ ಪರೀಕ್ಷೆಯ ವರದಿ ಏಳು ದಿನಗಳ ನಂತರ, ಮೂರು ದಿನಗಳು ಜ್ವರ ಕಾಣಿಸಿಕೊಳ್ಳದಿದ್ದರೆ, ಐಸೋಲೇಶನ್‌ನಿಂದ ಹೊರಬರಬಹುದು. ಆದರೆ ಅವರು ಮಾಸ್ಕ್‌ ಧರಿಸುವುದನ್ನು ಮುಂದುವರೆಸಬೇಕು.
  • ಈ ಹೋಮ್‌ ಐಸೋಲೇಶನ್‌‌ ಅವಧಿ ಮುಗಿದ ನಂತರ ಮತ್ತೇ ಕೊರೊನಾ ಪರೀಕ್ಷೆ ಮಾಡುವ ಅಗತ್ಯವಿಲ್ಲ.
  • ಸೋಂಕಿತ ವ್ಯಕ್ತಿಗಳ ಜೊತೆ ಸಂಪರ್ಕದಲ್ಲಿದ್ದ ಲಕ್ಷಣರಹಿತ ವ್ಯಕ್ತಿಗಳು ಕೋವಿಡ್ ಪರೀಕ್ಷೆಗೆ ಒಳಗಾಗಬೇಕಾಗಿಲ್ಲ.
  • ಹೋಂ ಐಸೋಲೇಶನ್‌‌ನಲ್ಲಿರುವ ರೋಗಿಯು ಯಾವಾಗಲೂ ಟ್ರಿಪಲ್ ಲೇಯರ್ ವೈದ್ಯಕೀಯ ಮುಖವಾಡವನ್ನು ಬಳಸಬೇಕು.
  • 8 ಗಂಟೆಗಳ ಬಳಕೆಯ ನಂತರ ಅಥವಾ ಒದ್ದೆಯಾಗಿದ್ದರೆ ಅಥವಾ ಮಣ್ಣಾಗಿದ್ದು ಕಾಣುತ್ತಿದ್ದರೆ ಅಂತಹ ಮಾಸ್ಕ್‌ ಅನ್ನು ಬಳಸಬಾರದು.

ಇದನ್ನೂ ಓದಿ:ಯುಪಿ ಚುನಾವಣೆ: ಎಲ್ಲಾ ಚುನಾವಣಾ ರ್‍ಯಾಲಿಗಳನ್ನು ರದ್ದುಗೊಳಿಸಿದ ಕಾಂಗ್ರೆಸ್

  • ಹೋಂ ಐಸೋಲೇಶನ್‌ ರೋಗಿಯ ಆರೈಕೆದಾರರು ಕೋಣೆಗೆ ಪ್ರವೇಶಿಸುವ ಸಂದರ್ಭದಲ್ಲಿ, ಆರೈಕೆದಾರ ಮತ್ತು ರೋಗಿಯಿಬ್ಬರೂ N-95 ಮುಖವಾಡವನ್ನು ಬಳಸಲು ಆದ್ಯತೆ ನೀಡಬೇಕು.
  • ಬಳಸಿದ ಮಾಸ್ಕ್‌ಗಳನ್ನು ತುಂಡುಗಳಾಗಿ ಕತ್ತರಿಸಿ, ಅದನ್ನು ಪೇಪರ್‌‌ ಚೀಲದಲ್ಲಿ ಹಾಕಿಟ್ಟು 72 ಗಂಟೆಗಳ ನಂತರ ಅದನ್ನು ಎಸೆಯಬೇಕು.
  • ಹೋಂ ಐಸೋಲೇಶನ್‌ ಹೊಂದಿರುವ ರೋಗಿ, ವಿಶೇಷವಾಗಿ ಇತರ ಕಾಯಿಲೆ ಹೊಂದಿರುವ ವಯಸ್ಸಾದವರಿಂದ ತನ್ನನ್ನು ಪ್ರತ್ಯೇಕಿಸಿಕೊಳ್ಳಬೇಕು ಮತ್ತು ಚೆನ್ನಾಗಿ ಗಾಳಿಯಡುವ ಕೋಣೆಯಲ್ಲಿ ಉಳಿಯಬೇಕು.
  • ರೋಗಿಗಳೇ ಪಲ್ಸ್ ಆಕ್ಸಿಮೀಟರ್ನೊಂದಿಗೆ ರಕ್ತದ ಆಮ್ಲಜನಕದ ಶುದ್ಧತ್ವವನ್ನು ಸ್ವಯಂ ಮೇಲ್ವಿಚಾರಣೆ ಮಾಡಬಹುದು.
  • ರೋಗಿಯು ತಾನಿರುವ ಸ್ಥಳದಲ್ಲೇ ಇದ್ದು ಉಸಿರಾಟದ ಪ್ರಮಾಣವನ್ನು ಸ್ವಯಂ-ಮೇಲ್ವಿಚಾರಣೆ ಮಾಡಬಹುದು. 1 ನಿಮಿಷದಲ್ಲಿ ಮಾಡಿದ ಉಸಿರಾಟದ ಸಂಖ್ಯೆಯನ್ನು ಎಣಿಸುವ ಮೂಲಕ ಇದನ್ನು ಮಾಡಬಹುದು. ಸಾಮಾನ್ಯವಾಗಿ ಒಂದು ನಿಮಿಷಕ್ಕೆ 24 ಬಾರಿ ಉಸಿರಾಡುತ್ತಾರೆ.
  • ಇತರ ಕಾಯಿಲೆಗಳಿರುವ ವಯಸ್ಸಾದ (60+) ರೋಗಿಗಳಿಗೆ ಅವರಿಗೆ ಚಿಕಿತ್ಸೆ ನೀಡುವ ವೈದ್ಯರಿಂದ ಸರಿಯಾದ ಪರೀಕ್ಷೆ ನಡೆಸಿದ ನಂತರ ಮಾತ್ರ ಹೋಂ ಐಸೋಲೇಷನ್‌ ಅನುಮತಿಸಲಾಗುತ್ತದೆ.
  • ಎಚ್‌ಐವಿ, ಕಸಿ ಪಡೆಯುವ, ಕ್ಯಾನ್ಸರ್ ಚಿಕಿತ್ಸೆ ಇತ್ಯಾದಿ ಪಡೆಯುತ್ತಿರುವ ರೋಗಿಗಳು ಹೋಮ್ ಐಸೋಲೇಷನ್‌ಗೆ ಶಿಫಾರಸು ಮಾಡಲಾಗುವುದಿಲ್ಲ. ಅವರಿಗೆ ಚಿಕಿತ್ಸೆ ನೀಡುವ ವೈದ್ಯರಿಂದ ಸರಿಯಾದ ಪರಿಕ್ಷೆಯಾದರೆ ಮಾತ್ರ ಹೋಮ್ ಐಸೋಲೇಶನ್ ಮಾಡಬಹುದು.

ಇದನ್ನೂ ಓದಿ:ಶೀಘ್ರದಲ್ಲೇ ರಾಜ್ಯಕ್ಕೆ ಅಮಿತ್‌ ಶಾ ಭೇಟಿ: BJP ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕುತ್ತು, ಸಿಎಂ ಬದಲಾವಣೆ ಸಾಧ್ಯತೆ?

  • ರೋಗಿಗಳು ಆನ್‌ಲೈನ್‌ ವೇದಿಕೆಯನ್ನು ಸಮಾಲೋಚನೆಗೆ ಬಳಸಿಕೊಳ್ಳಬಹುದು.
  • ದಿನಕ್ಕೆ ನಾಲ್ಕು ಬಾರಿ ಪ್ಯಾರೆಸಿಟಮಾಲ್ 650 ಮಿಗ್ರಾಂ ಸೇವಿಸಿಯೂ ಜ್ವರ ನಿಯಂತ್ರಣಕ್ಕೆ ಬರದಿದ್ದರೆ, ಚಿಕಿತ್ಸೆ ನೀಡುವ ವೈದ್ಯರನ್ನು ಸಂಪರ್ಕಿಸಬೇಕು.
  • ದಿನಕ್ಕೆ ಮೂರು ಬಾರಿ ಬೆಚ್ಚಗಿನ ನೀರಿನಲ್ಲಿ ಗಾರ್ಗಲ್ ಮಾಡಲು ಅಥವಾ ಹಬೆ ತೆಗೆದುಕೊಳ್ಳಲು ರೋಗಿಗಳಿಗೆ ಸಲಹೆ.
  • ತಾವೆ ಸ್ವಯಂ ಔಷಧಿ ತೆಗೆದುಕೊಳ್ಳುವುದು, ವೈದ್ಯರ ಸಮಾಲೋಚನೆಯಿಲ್ಲದೆ ರಕ್ತದ ಪರೀಕ್ಷೆ, ಎದೆಯ ಎಕ್ಸ್-ರೇ ಅಥವಾ ಎದೆಯ CT ಸ್ಕ್ಯಾನ್‌ ತೆಗೆದುಕೊಳ್ಳುವುದಕ್ಕೆ ನಿಷೇಧ.
  • ಸೌಮ್ಯವಾದ ಕಾಯಿಲೆಗಳಲ್ಲಿ ಸ್ಟೀರಾಯ್ಡ್‌ಗಳನ್ನು ನೀಡಲಾಗುವುದಿಲ್ಲ ಮತ್ತು ಸ್ವಯಂ ಚಿಕಿತ್ಸೆ ಮಾಡಬಾರದು. ಸ್ಟೀರಾಯ್ಡ್‌ಗಳ ಅತಿಯಾದ ಬಳಕೆ ಮತ್ತು ಅನುಚಿತ ಬಳಕೆಯು ಹೆಚ್ಚುವರಿ ತೊಡಕುಗಳಿಗೆ ಕಾರಣವಾಗಬಹುದು ಎಂದು ಹೊಸ ಮಾರ್ಗಸೂಚಿಗಳು ತಿಳಿಸಿವೆ.
  • 3 ದಿನಗಳಿಗಿಂತ ಹೆಚ್ಚು ಕಾಲ 100 ಡಿಗ್ರಿ ಎಫ್‌ಗಿಂತ ಹೆಚ್ಚಿನ ತೀವ್ರತರವಾದ ಜ್ವರ, ಇತರ ಗಂಭೀರ ರೋಗಲಕ್ಷಣಗಳು ಕಂಡರೆ ವೈದ್ಯಕೀಯ ಆರೈಕೆಯನ್ನು ಪಡೆಯಬೇಕು.

ಹೋಮ್‌ ಐಸೋಲೇಶನ್‌ ಆಗಿರುವ ರೋಗಿಗಳ ಮೇಲ್ವಿಚಾರಣೆಯನ್ನು ಪ್ರತಿದಿನ ಜಿಲ್ಲಾಡಳಿತ ಮಾಡಬೇಕು ಎಂದು ಒಕ್ಕೂಟ ಸರ್ಕಾರ ಹೊಸ ಮಾರ್ಗಸೂಚಿಯಲ್ಲಿ ಹೇಳಿದೆ.

Covid-19 Home Isolation Gui… by The Indian Express

ಇದನ್ನೂ ಓದಿ:ವೀಕೆಂಡ್‌ ಕರ್ಫ್ಯೂ: ಹೊಸ ಕೊರೊನಾ ಮಾರ್ಗಸೂಚಿಯಲ್ಲಿ ಏನೇನಿದೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...