ರೈತರು ಭೂಮಿ ಬಿಟ್ಟು ಹೊರಗಡೆ ಹೋಗಲಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಯಸುತ್ತಿದ್ದು, ಕೃಷಿ ಭೂಮಿಯ ಅವಕಾಶವನ್ನು ತೆಗೆದು ಹಾಕಿ ಕಂಪೆನಿ ಕೃಷಿಯನ್ನು ತರುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷರಾದ ಯು. ಬಸವರಾಜ್ ಅವರು ಹೇಳಿದರು. ಕೇಂದ್ರ ಸರ್ಕಾರ ಕಾರ್ಪೋರೇಟ್ ಪರವಾದ ಹಿಂದುತ್ವದ ಬಜೆಟ್ ಅನ್ನು ಮಂಡಿಸಿದರೆ, ಕರ್ನಾಟಕದಲ್ಲಿ ಕೂಡಾ ಹಿಂದುತ್ವದ ಬಗ್ಗೆ ಮೃದು ಧೋರಣೆ ಇರುವ ಕಂಪೆನಿ ಕೃಷಿಗಳ ಪರವಾದ ಬಜೆಟ್ ಮಂಡಿಸಲಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ರೈತರು ಭೂಮಿ ಬಿಟ್ಟು ಬರಲಿ
‘ಸಂಯುಕ್ತ ಹೋರಾಟ-ಕರ್ನಾಟಕ’ ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಿರುವ ಎರಡು ದಿನಗಳ ‘ಜನ ಚಳವಳಿಗಳ ಬಜೆಟ್ ಅಧಿವೇಶನ’ದಲ್ಲಿ ‘ಕರಾಳ ಕೃಷಿ ಹಾಗೂ ಭೂ ಸ್ವಾಧೀನ ಕಾಯ್ದೆಗಳು’ ಎಂಬ ವಿಚಾರದಲ್ಲಿ ಅವರು ಮಾತನಾಡುತ್ತಿದ್ದರು. ರೈತರು ಭೂಮಿ ಬಿಟ್ಟು ಬರಲಿ
“ರೈತರು ಭೂಮಿ ಬಿಟ್ಟು ಹೊರಗಡೆ ಹೋಗಲಿ ಎಂದು ಬಿಜೆಪಿ ಮತ್ತು ಕೇಂದ್ರ ಸರ್ಕಾರಗಳು ಬಯಸುತ್ತಿದ್ದು, ಕೃಷಿ ಭೂಮಿಯ ಅವಕಾಶವನ್ನು ತೆಗೆದು ಹಾಕಿ ಕಂಪೆನಿ ಕೃಷಿಯನ್ನು ತರುವ ಬಗ್ಗೆ ಚಿಂತನೆ ನಡೆಸುತ್ತಿದೆ. ಅದಕ್ಕಾಗಿ ದೊಡ್ಡ ಎರಡು ಕಾರಿಡಾರ್‌ಗಳನ್ನು ಮಾಡಲು ಹೊರಟಿವೆ. ಅದರ ಬ್ಲೂ ಪ್ರಿಂಟ್ ಸರ್ಕಾರದ ಬಳಿ ಇದೆ” ಎಂದು ಅವರು ಹೇಳಿದರು.
“ದೊಡ್ಡ ದೊಡ್ಡ ಕಂಪೆನಿಗಳಿಗೆ ಸರಕಾರದ ಭೂ ಸ್ವಾಧೀನ ಮಾಡಿ ಅವರಿಗೆ ಕೊಡುತ್ತಾ ಇದೆ. ಎಪಿಎಂಸಿ ಕಾಯ್ದೆಯನ್ನು ಇಲ್ಲದಂತೆ ಮಾಡಿ ಎಲ್ಲಾ ಕೃಷಿಯನ್ನು ನಾಶ ಮಾಡಿದೆ. ಈ ಮೂಲಕ ಕೃಷಿ, ಆಹಾರದ ಮಾರುಕಟ್ಟೆ, ಅದರ ಕೈಗಾರಿಕೆಯನ್ನು ನೇರವಾಗಿ ಕಂಪೆನಿಗಳಿಗೆ ಕೊಡುವುದು ಸರ್ಕಾರದ ಉದ್ದೇಶವಾಗಿದೆ” ಎಂದು ಅವರು ಹೇಳಿದರು.
“ಸ್ಟೀಲ್ ಉದ್ಯಮಕ್ಕೆ ಎಂದು ಭೂ ಸ್ವಾಧೀನ ಮಾಡಿದರೆ ಅಲ್ಲಿನ ಕಂಪೆನಿಗಳು ಉತ್ಪಾದನೆ ಮಾಡದೆ ಸ್ಟೀಲ್‌ಗೆ ಮಾರುಕಟ್ಟೆ ಇಲ್ಲ ಎಂದು ಹಾಗೆಯೇ ಕೂತಿದೆ. ಐದು ಗ್ಯಾರಂಟಿ ಯೋಜನೆಗೆ 54 ಸಾವಿರ ಕೋಟಿ ಕೊಟ್ಟ ಸರ್ಕಾರ, ಎರಡು ಕಂಪೆನಿಗಳಿಗೆ ಮಾತ್ರ ಎರಡು ಲಕ್ಷ ಕೋಟಿ ಸಬ್ಸಿಡಿ ಕೊಡುತ್ತಿದೆ. ಜೊತೆಗೆ, 500 ಎಕರೆ ಜಮೀನನ್ನು ಗಣಿಗಾರಿಕೆಗೆ ಪುಕ್ಕಟೆಯಾಗಿ ಸರ್ಕಾರ ಕೊಡುತ್ತೆ. ಆದರೆ ನಮ್ಮ ರೈತರಿಗೆ, ಕೂಲಿಕಾರರಿಗೆ, ದಲಿತರಿಗೆ, ಒಂಟಿ ಮಹಿಳೆಯರಿಗೆ ಐದು ಎಕರೆ ಜಮೀನು ಕೊಡಿ ಎಂದರೆ ಭೂಮಿ ಇಲ್ಲ ಎಂದು ಹೇಳುತ್ತಿದೆ” ಎಂದು ಅವರು ಹೇಳಿದರು.
ಗೋಮಾಳ ಸೇರಿದಂತೆ ಸರ್ಕಾರಿ ಭೂಮಿಯನ್ನು ಕಂಪನಿಗಳಿಗೆ ಕೊಡುತ್ತಿದೆ. ರೈತರನ್ನು ಬೀದಿಗೆ ತಳ್ಳಿ, ಬೀದಿ ಹೆಣಗಳನ್ನಾಗಿ ಮಾಡುತ್ತಿದೆ ಎಂದ ಬಸವರಾಜ್ ಅವರು, “ಕೃಷಿಯಿಂದ ರಾಜ್ಯದ ಜಿಡಿಪಿಗೆ 11% ಮಾತ್ರ ಕೊಡುಗೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಕಂಪೆನಿಗಳಿಗೆ ನೀಡುವ ಸಬ್ಸಿಡಿ, ತಂತ್ರಜ್ಞಾನವನ್ನು ರೈತರಿಗೆ ಕೊಟ್ಟರೆ ರೈತರು ಕೂಡಾ ಜಿಡಿಪಿಗೆ ಕೊಡುಗೆ ನೀಡಲಿದ್ದೇವೆ. ಆದರೆ ಸರ್ಕಾರ ಮಾತ್ರ ಕಂಪೆನಿ ಕೃಷಿಗೆ ಪ್ರೋತ್ಸಾಹ ನೀಡುತ್ತಿದೆ” ಎಂದು ಹೇಳಿದರು.
ಮೂರು ಲಕ್ಷ ಕೋಟಿ ಸಬ್ಸಿಡಿ ಕೊಡುವ ಸರ್ಕಾರ ದಲಿತ, ಕೂಲಿಕಾರ ಮತ್ತು ಒಂಟಿ ಮಹಿಳೆಯರಿಗೆ ಕೊಡಲು ತಯಾರಿಲ್ಲ. ಸಾವಿರಾರು ಎಕರೆ ಸರ್ಕಾರಿ ಭೂಮಿಯಿದ್ದು ಅದನ್ನು ದಲಿತ, ಕೂಲಿಕಾರರಿಗೆ ಮಹಿಳೆಯರಿಗೆ ಕೊಡಬೇಕು ಎಂದರು.
ಅರ್ಧದಷ್ಟು ಮಹಿಳೆಯರು, 20% ದಲಿತರು, ಹೆಚ್ಚಿನ ಹಿಂದುಳಿದ ವರ್ಗಗಳ ಜನರು ಪರಾವಲಂಬಿಗಳಾಗಿದ್ದಾರೆ. ಇವರಿಗೆ ಭೂಮಿ ನೀಡಿ ಸಹಕಾರಿ ಕೃಷಿಗೆ ಸಹಕಾರ ಕೊಟ್ಟರೆ, ಕಂಪೆನಿಗಳಿಗೆ ಕೊಡುವ 80% ಸಬ್ಸಿಡಿಯನ್ನು ಹಾಗೂ ತಂತ್ರಜ್ಞಾನವನ್ನು ಕೊಟ್ಟರೆ ರೈತರು ಕೂಡಾ 11% ಜಿಡಿಪಿ ಬದಲಿಗೆ 50% ಜಿಡಿಪಿ ಕೊಡುತ್ತಾರೆ ಎಂದು ಹೇಳಿದರು.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಮತಾಂಧತೆಯ ಪರಿಭಾಷೆಯಲ್ಲಿ ಬಜೆಟ್ ವಿಶ್ಲೇಷಣೆ ನಡೆಸುತ್ತಿರುವುದು ದುರಂತ: ಟಿ.ಆರ್.ಚಂದ್ರಶೇಖರ್
ಮತಾಂಧತೆಯ ಪರಿಭಾಷೆಯಲ್ಲಿ ಬಜೆಟ್ ವಿಶ್ಲೇಷಣೆ ನಡೆಸುತ್ತಿರುವುದು ದುರಂತ: ಟಿ.ಆರ್.ಚಂದ್ರಶೇಖರ್

