Homeಮುಖಪುಟನೀರು ನೆರಳಿಗೂ ಜಾತಿ ಅಂಟಿಸಿದ ನಮ್ಮ ಭವ್ಯ ಪರಂಪರೆ: ಪ್ರತಾಪ್ ಹುಣಸೂರು

ನೀರು ನೆರಳಿಗೂ ಜಾತಿ ಅಂಟಿಸಿದ ನಮ್ಮ ಭವ್ಯ ಪರಂಪರೆ: ಪ್ರತಾಪ್ ಹುಣಸೂರು

- Advertisement -
- Advertisement -

ಯಾವುದೋ ಕಾಲದಲ್ಲಿ ಸೃಷ್ಟಿಸಿ ವ್ಯಾಪಕವಾಗಿದ್ದ ದುರ್ನೀತಿಯ ವರ್ಣವ್ಯವಸ್ಥೆ, ಜಾತಿಯ ಉಗಮಕ್ಕೆ ಕಾರಣವಾಗಿ ಮನುಷ್ಯ-ಮನುಷ್ಯ ನಡುವೆ ನಿರ್ಬಂಧಗಳನ್ನು ಸೃಷ್ಟಿಸಿತ್ತು. ಜಾತಿ ಅಂದಿನಿಂದಲೂ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸಿಕೊಳ್ಳುತ್ತಾ ಬೆಳೆಯುತ್ತಿದೆ. ಜಾತಿ, ಅಸ್ಪೃಶ್ಯತೆ ನಮಲ್ಲಿ ಎಷ್ಟು ಆಳಕ್ಕೆ ಬೇರೂರಿದೆಯೆಂದರೆ, ಅದನ್ನು ಎಷ್ಟು ಬಾರಿ ಕಡಿದರೂ ಮತ್ತೆ ಮತ್ತೆ ಮರವಾಗಿ ಬೇರೆ-ಬೇರೆ ಸ್ವರೂಪಗಳಲ್ಲಿ ಬೆಳೆಯುತ್ತಲೇ ಇದೆ. ಈ ಜಾತಿಯ ಭೂತ ನೀರಿಗೂ ಅಂಟಿಕೊಂಡಿತ್ತು.

ಉತ್ತರ ಪ್ರದೇಶದ ಗಾಜಿಯಾಬಾದ್‌ನ ದಾಸನ ದೇವಿ ಮಂದಿರ್ ದೇವಾಲಯದಲ್ಲಿ ನೀರು ಕುಡಿದಿದ್ದಕ್ಕಾಗಿ ಮುಸ್ಲಿಂ ಬಾಲಕನೊಬ್ಬನ ಮೇಲೆ ಶೃಂಗಿ ನಂದನ್ ಯಾದವ್ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ. ಜೊತೆಗೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿಯಬಿಟ್ಟಿದ್ದ. ಅಲ್ಲದೇ ಹಿಂದು ಏಕ್ತಾ ಸಂಘ್ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ, ಮುಸ್ಲಿಂ ಬಾಲಕನಿಗೆ ಥಳಿಸುವ ವಿಡಿಯೋವನ್ನು ಅಪ್‌ಲೋಡ್ ಮಾಡಿ, ಈ ರೀತಿಯ ಧರ್ಮರಕ್ಷಣೆಯ ಕೆಲಸಗಳಿಗಾಗಿ, ಕೇಸುಗಳ ವಿರುದ್ಧ ಹೋರಾಡುವುದಕ್ಕಾಗಿ ದೇಣಿಗೆ ನೀಡುವಂತೆ ಮನವಿ ಮಾಡಿದ್ದಾನೆ. ಜೊತೆಗೆ ನೀರು ಕುಡಿದಿದ್ದಕ್ಕಾಗಿ ಬಾಲಕನ ಪುರುಷತ್ವ ಹರಣ ಮಾಡಬೇಕು ಎಂದೂ ಬರೆದುಕೊಂಡಿದೆ.

ವೈರಲ್ ವಿಡಿಯೋದಲ್ಲಿ ಆರೋಪಿ ಶೃಂಗಿ ನಂದನ್ ಯಾದವ್, ಆ ಹುಡುಗನಿಗೆ ತನ್ನ ಹೆಸರನ್ನು ಕೇಳಿದ್ದಾನೆ. ಅದಕ್ಕೆ ಆ ಹುಡುಗ ತನ್ನ ಹೆಸರು ಆಸಿಫ್ ಎಂದು ಹೇಳಿದ್ದು, ನೀರು ಕುಡಿಯಲು ದೇವಸ್ಥಾನಕ್ಕೆ ಹೋಗಿದ್ದೆ ಎಂದು ಉತ್ತರಿಸಿದ್ದಾನೆ. ಅದಕ್ಕೆ ಕೋಪಗೊಂಡ ಆರೋಪಿ ಅಮಾನುಷವಾಗಿ ಥಳಿಸಿದ್ದಲ್ಲದೆ, ಕಾಲಿನಲ್ಲಿ ಒದ್ದಿದ್ದಾನೆ ಮತ್ತು ಕೈಮುರಿಯಲು ಯತ್ನಿಸಿದ್ದಾನೆ. ಇದು ವಿಡಿಯೋದಲ್ಲಿ ದಾಖಲಾಗಿದೆ.

ಶತಮಾನಗಳಷ್ಟು ಹಿಂದೆಯೇ ಊರಿನಲ್ಲಿರುವ ಸಾರ್ವಜನಿಕ ಬಾವಿಯಲ್ಲಿನ ನೀರನ್ನು ಜಾತಿವ್ಯವಸ್ಥೆಯ ಪಿರಮಿಡ್‌ನಲ್ಲಿ ಕೆಳಗಿದ್ದ ಶೂದ್ರರು ಮತ್ತು ಅವರಿಗೂ ಹಿಂದುಳಿದವರು ಮುಟ್ಟುವಂತಿರಲಿಲ್ಲ. ಕುಡಿಯುವ ನೀರು ಒಂದುಕಡೆಯಾದರೆ, ಕೆಳಜಾತಿಯವರ ಮನೆಯಿಂದ ಬರುವ ಚರಂಡಿ ನೀರೂ ಕೂಡ ಮೇಲ್ಜಾತಿಯವರ ಚರಂಡಿ ನೀರಿನೊಂದಿಗೆ ಬೆರೆಯಬಾರದು ಎಂಬ ಕಾರಣಕ್ಕೆ ಎತ್ತರದ ಪ್ರದೇಶದಲ್ಲಿ ಮೇಲ್ಜಾತಿಯವರು ಮನೆ ನಿರ್ಮಿಸಿಕೊಳ್ಳುತ್ತಿದ್ದರು. ಕೆಳಜಾತಿಯವರಿಗೆ ತಗ್ಗು ಪ್ರದೇಶಗಳಲ್ಲಿಯೇ ಉಳಿಯುವಂತೆ ನೋಡಿಕೊಳ್ಳುತ್ತಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಳಜಾತಿಯವರ ನೆರಳೂ ಕೂಡ ಮೇಲ್ಜಾತಿಯವರ ಮೇಲೆ ಬೀಳಬಾರದು ಎಂಬ ಕಾರಣಕ್ಕೆ ಬೆಳಿಗ್ಗೆ ಸೂರ್ಯ ನೆತ್ತಿಗೇರುವ ಮುನ್ನ ಕೆಳಜಾತಿಯವರು ಬೀದಿಯಲ್ಲಿ ಓಡಾಡುವಂತಿರಲಿಲ್ಲ. ಇಳಿಸಂಜೆಯ ಹೊತ್ತಿಗೆ ಕೆಳಜಾತಿಯವರು ಹಟ್ಟಿ ಸೇರಿಕೊಳ್ಳಬೇಕಾಗಿತ್ತು. (ಯಾಕೆಂದರೆ ಈ ಸಮಯದಲ್ಲಿ ಯಾವುದೇ ವ್ಯಕ್ತಿಯ ನೆರಳು ಉದ್ದವಾಗಿರುತ್ತದೆ)

ಹೀಗೆ ನೀರು ನೆರಳಿಗೂ ಜಾತಿ ಅಂಟಿಸಿದ ನಮ್ಮ ಭವ್ಯ ಪರಂಪರೆಯ ಸಂತತಿ ಹೆಚ್ಚುತ್ತಿದೆ. ಒಬ್ಬ ಮುಸ್ಲಿಂ ಹುಡುಗನಿಗೆ ಬಾಯಾರಿಕೆಯಾಗಿ ದೇವಸ್ಥಾನದೊಳಗೆ ಹೋಗಿ ನೀರು ಕುಡಿದ ಎನ್ನುವ ಕಾರಣಕ್ಕೆ ಇದನ್ನು ಸಹಿಸದೆ ಆ ಹುಡುಗನ ಮೇಲೆ ಹಲ್ಲೆ ಮಾಡಿರುವ ಮೇಲ್ಜಾತಿಯವನೇ ಈ ಸಂತತಿಯ ವಾರಸುದಾರ. ಇನ್ನೂ ಉಳಿದುಕೊಂಡಿರುವ ಈ ದೊಡ್ಡ ಸಂತತಿಯ ಪ್ರತಿನಿಧಿ.

ಇಂತಹ ದೌರ್ಜನ್ಯಗಳ ವಿರುದ್ಧ ಬಹುಶಃ ಇಡೀ ಭಾರತದಲ್ಲಿ ಮೊದಲು ನೇರಾ-ನೇರ ದನಿಯೆತ್ತಿದವರು ನಮ್ಮ ವಚನಕಾರರು. ಇದಕ್ಕೆ ಒಂದು ಸ್ಪಷ್ಟ ಮತ್ತು ಸಣ್ಣ ಉದಾಹರಣೆಗೆ ಅಲ್ಲಮನ ಈ ವಚನವನ್ನು ನೆನಪಿಸಿಕೊಳ್ಳಬಹುದು.

ನಾ ದೇವನಲ್ಲದೆ ನೀ ದೇವನೆ
ನೀ ದೇವನಾದರೆ ಎನ್ನನೇಕೆ ಸಲಹೆ
ಆರೈದು ಒಂದು ಕುಡಿತೆ ಉದಕವನೆರೆವೆ
ಹಸಿದಾಗ ಒಂದು ತುತ್ತು ಓಗರವನಿಕ್ಕುವೆ
ನಾ ದೇವ ಕಾಣಾ ಗುಹೇಶ್ವರ

“ನಾನು ದೇವರು. ನೀನು ದೇವರಾಗಲು ಹೇಗೆ ಸಾಧ್ಯ? ನೀನು ದೇವರಾದರೆ ನನ್ನನ್ನು ಯಾಕೆ ಸಲಹುವುದಿಲ್ಲ? ಯಾರಾದರೂ ಬಂದು ಕುಳಿತರೆ ನೀರು ಕೊಡುವೆ. ಹಸಿದಾಗ ಒಂದು ತುತ್ತು ಅನ್ನ ಕೊಡುವೆ. ನಾನೇ ದೇವರು” ಎಂದು ಅಲ್ಲಮಪ್ರಭು ಹೇಳುತ್ತಾರೆ.

ಈ ವಚನ ದೇವರನ್ನು ಉದ್ದೇಶಿಸಿರುವುದಲ್ಲ, ಬದಲಿಗೆ ಆ ದೇವರನ್ನೂ ರಾಜಕೀಯಗೊಳಿಸಿ, ಅದಕ್ಕೂ ಅಸ್ಪೃಶ್ಯತೆ ಅಂಟಿಸಿದ ಕರ್ಮಟ ವೈದಿಕರಿಗೆ ಹೇಳುತ್ತಿರುವ ಮಾತಿದು.

ಯಾರೂ ಯಾರನ್ನೂ ಭೇದದಿಂದ ನಡೆಸಿಕೊಳ್ಳಬಾರದು ಮತ್ತು ಸಮಾನತೆ, ಭ್ರಾತೃತ್ವದಿಂದ ಕಾಣಬೇಕು ಎಂದು ಇದೇ ರೀತಿಯ ತತ್ವ ಸಿದ್ಧಾಂತವನ್ನು ಬುದ್ಧನೂ ಕೂಡ ಕ್ರಿಸ್ತಪೂರ್ವದಲ್ಲೆ ಹೇಳಿದ್ದ. ಆದರೆ ಬಸವಣ್ಣನ ನೇತೃತ್ವದಲ್ಲಿ ನಡೆದ ಈ ಕಲ್ಯಾಣದ ಕ್ರಾಂತಿಯನ್ನು ಆದಷ್ಟು ಬೇಗನೆ ಮುಗಿಸಿದವರು, ಬುದ್ಧನನ್ನು ವಿಷ್ಣುವಿನ ಅವತಾರ ಮಾಡಿದವರೂ ಈ ಭವ್ಯ ಪರಂಪರೆಯ ವಾರಸುದಾರರೇ.

ಕೆರೆಯಲ್ಲಿ ದಲಿತರು ನೀರು ಮುಟ್ಟಬಾರದು ಎಂಬುದರ ವಿರುದ್ಧ ಚೌಡಾರ್ ಕರೆ ನೀರನ್ನು ಮುಟ್ಟಿ ಅಂಬೇಡ್ಕರ್ ಪ್ರತಿಭಟಿಸಿದ್ದರು. ಇದು ಬಹಶ: ಸ್ವತಂತ್ರಪೂರ್ವದಲ್ಲಿ ಸಮಾನತೆಗೆ ನಡದ ಮೊದಲನೇ ಬಹುದೊಡ್ಡ ಆಂದೋಲನ. ಇದನ್ನು ಸಹಿಸದ ಇದೇ ವಾರಸುದಾರರು ಅಂದು ಅವರ ಮೇಲೆ ಹಲ್ಲೆ ಮಾಡಿದ್ದರು. ಇದನ್ನು ಪ್ರಶ್ನಿಸಿದರೆ, ಕೆಲವು ಸುಪ್ತ ಮನುವಾದಿಗಳು, “ಇದು ಯಾವುದೋ ಕಾಲದಲ್ಲಿ ಆಗಿದ್ದು. ಇದನ್ನೇ ಇಟ್ಟುಕೊಂಡು ಇನ್ನೂ ಎಷ್ಟು ಕಾಲ ಕಳೆಯುತ್ತೀರಾ? ಇಂತಹವುಗಳೆಲ್ಲಾ ಈಗ ನಡೆಯುತ್ತಿಲ್ಲ. ಎಲ್ಲರೂ ಬದಲಾಗಿದ್ದಾರೆ” ಎಂದು ಹೇಳುತ್ತಾರೆ.

ಅದರೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿರುವ ಘಟನೆಗೂ ಅಂಬೇಡ್ಕರ್ ಅವರ ಕಾಲದಲ್ಲಿ ನಡೆದಿರುವ ಈ ಘಟನೆಗೂ ವ್ಯತ್ಯಾಸವೇನಾದರೂ ಇದೆಯೇ? ವಾಸ್ತವದಲ್ಲಿ ಇವೆರಡಕ್ಕೂ ಸಂಬಂಧ ಇದೆ. ಆದರೆ ಇದನ್ನೂ ಸಮರ್ಥಿಸಿಕೊಳ್ಳುವವರು ಇದ್ದಾರೆ ಎಂದರೆ ಈ ದೇಶದ ಪರಿಸ್ಥಿತಿಯನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಕುದುರೆ ಏರಿದ್ದಕ್ಕೆ, ಮೀಸೆ ಬಿಟ್ಟಿದ್ದಕ್ಕೆ, ನೀರು ಕುಡಿದಿದ್ದಕ್ಕೆ, ಪ್ರೀತಿ ಮಾಡಿದ್ದಕ್ಕೆ ಕೈಕಾಲು ಮುರಿಯುವ ಪುರುಷತ್ವ ಹರಣ ಮಾಡುವ ಮನಸ್ಥಿತಿ ಇಷ್ಟು ಅಗಾಧವಾಗಿ ಬೆಳೆಯಲು ಯಾವ ಕುಯುಕ್ತಿ ಕೆಲಸ ಮಾಡುತ್ತಿದೆ ಎಂಬುದು ಎಲ್ಲರಿಗೂ ಗೋಚರವಾಗುತ್ತದೆ. ಮುಕ್ತ ಮನಸ್ಸಿನಿಂದ ಕಾಣುವ ಹೃದಯವಂತಿಕೆ ಬೆಳೆಸಿಕೊಳ್ಳಬೇಕಷ್ಟೇ!

ಭಾರತವನ್ನು ವಿಶ್ವಗುರು ಮಾಡಲು ನೀರೆರೆದು ಪೋಷಿಸುತ್ತಿರುವ ಹೊತ್ತಲ್ಲೇ ಇಲ್ಲೊಬ್ಬ ನೀರು ಕುಡಿದಿದ್ದಕ್ಕೆ ಹಲ್ಲೆಗೊಳಗಾಗಿದ್ದಾನೆ. ಹೀಗಿರುವಾಗ ನನ್ನ ದೇಶವನ್ನು ವಿಶ್ವಗುರು ಎಂದು ಹೇಗೆ ಒಪ್ಪಿಕೊಳ್ಳುವುದು? ನಮ್ಮ ಪರಂಪರೆ ವಿಶ್ವಕ್ಕೆ ಮಾದರಿ ಎಂದು ಹೇಳುತ್ತಿರುವವರು ಇಂತಹ ಅನಿಷ್ಟ ಪರಂಪರೆಯನ್ನು ಮರೆತರೇಕೆ?
ಇದರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ #SorryAsif ಹ್ಯಾಷ್‌ಟ್ಯಾಗ್ ಮೂಲಕ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಆದರೆ ಎಷ್ಟು ದಿನ, ಹೀಗೆ ಖಂಡನೆಗಳಲ್ಲೆ ತಾತ್ಕಾಲಿಕವಾಗಿ ಮರೆಯಾಗಿ ಮತ್ತೊಂದು ದಿನ ಇನ್ನೆಲ್ಲೋ ಚಿಗುರಿ ಎದ್ದು, ನೀರು ಕುಡಿದಿದ್ದಕ್ಕೆ ಮತ್ತೊಬ್ಬ ಥಳಿತಗೊಂಡು ಅವಮಾನಕ್ಕೆ ಗುರಿಯಾಗಬೇಕು? ಸಂವಿಧಾನದಲ್ಲಿ ಹೇಳಿಕೊಟ್ಟಿರುವ ಸಮಾನತೆ, ಭ್ರಾತೃತ್ವವನ್ನು ಮೈಗೂಡಿಸಿಕೊಳ್ಳಲು ನನ್ನ ದೇಶವಾಸಿಗಳಿಗೆ ಏಕಿಷ್ಟು ಕಷ್ಟ?

ಪ್ರತಾಪ್ ಹುಣಸೂರು

ಪ್ರತಾಪ್ ಹುಣಸೂರು
ಸಂಶೋಧನಾ ವಿದ್ಯಾರ್ಥಿ. ಸದ್ಯ ನಾನುಗೌರಿ.ಕಾಂನಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ದೇವಾಲಯದಲ್ಲಿ ನೀರು ಕುಡಿದ ಮುಸ್ಲಿಂ ಬಾಲಕನ ಮೇಲೆ ಕ್ರೂರ ಹಲ್ಲೆ: #SorryAsif ಎಂದ ನೆಟ್ಟಿಗರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...