ಗುಜರಾತ್‌ನ ಮೋರ್ಬಿ ಜಿಲ್ಲೆಯಲ್ಲಿ ಮಂಗಳವಾರ ದಲಿತ ಸಮುದಾಯದ 10 ನೇ ತರಗತಿಯ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮತ್ತು ಬೆದರಿಕೆ ಹಾಕಲಾಗಿದೆ.
ವಂಕನೇರ್‌ನ ಗ್ಯಾನ್ ಗಂಗಾ ಶಾಲೆಯ 15 ವರ್ಷದ ವಿದ್ಯಾರ್ಥಿಯ ಮೇಲೆ ಶಾಲಾ ಮಾಲೀಕ ಯೋಗೇಂದ್ರಸಿಂಹ ಜಲಾ ಹಲ್ಲೆ ನಡೆಸಿದ್ದು, ಅವರು ಸಂತ್ರಸ್ತನನ್ನು ‘ಶಿಕ್ಷಣಕ್ಕೆ ಅನರ್ಹ’ ಎಂದು ದೂಷಿಸಿ, ಅವಾಚ್ಯ ಶಬ್ದ ಬಳಸಿ ಥಳಿಸಿದ್ದಾನೆ.
ಬಾಲಕನ ತಂದೆ ಸಲ್ಲಿಸಿದ ದೂರಿನ ಪ್ರಕಾರ, ದಾಳಿಯ ಸಮಯದಲ್ಲಿ ಸಂತ್ರಸ್ತನ ತೊಡೆಸಂದಿಗೆ ಒದ್ದಿದ್ದು, ಇದರಿಂದ ಆತ ತಲೆತಿರುಗಿ ಬಿದ್ದ. ಕೂಡಲೇ ಅವನು ನೆಲದ ಮೇಲೆ ಕುಸಿದುಬಿದ್ದ ಎಂದು ಹೇಳಿದ್ದಾರೆ.
ಸ್ವಲ್ಪ ಸಮಯದ ಬಳಿಕ ಎಚ್ಚರಗೊಂಡ ಬಾಲಕ ಮನೆಗೆ ಧಾವಿಸಿದ್ದಾನೆ. ಏನಾಯಿತು ಎಂದು ವಿವರಿಸಿದ ನಂತರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಗಾಯಗಳನ್ನು ನೋಡಿ ವೈದ್ಯರು ಸೋನೋಗ್ರಫಿಯನ್ನು ಶಿಫಾರಸು ಮಾಡಿದರು. ಆತ ಪ್ರಸ್ತುತ ವಂಕನೇರ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ತನಿಖೆ ನಡೆಯುತ್ತಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಪ್ರಕರರಣದ ತನಿಖೆಯನ್ನು ಉಪ ಪೊಲೀಸ್ ವರಿಷ್ಠಾಧಿಕಾರಿ ಅವರು ಮೋರ್ಬಿ ಎಸ್‌ಸಿ ಎಸ್‌ಟಿ ಸೆಲ್‌ಗೆ ಹಸ್ತಾಂತರಿಸಿದ್ದಾರೆ.
ಆರೋಪಿ ಜಲಾ ಪರಾರಿಯಾಗಿದ್ದಾನೆ. ಪೊಲೀಸರು ಶೀಘ್ರದಲ್ಲೇ ಆತನನ್ನು ಬಂಧಿಸಲು ಹುಡುಕುತ್ತಿದ್ದಾರೆ. ಕುಟುಂಬವು ನ್ಯಾಯಕ್ಕಾಗಿ ಒತ್ತಾಯಿಸಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಉತ್ತರ ಪ್ರದೇಶ| ಬಿಜೆಪಿ ಸಚಿವರಿಂದ ದಲಿತ ಕುಟುಂಬದ ಮೇಲೆ ಹಲ್ಲೆ; ಪ್ರತಿಭಟನೆ ನಂತರ ಎಫ್‌ಐಆರ್


