ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಆಯುಷ್ಮಾನ್ ಭಾರತ್ (ಪಿಎಂ ಜಯ್ ಆಯುಷ್ಮಾನ್ ಭಾರತ್) ಯೋಜನೆ ಅಡಿಯಲ್ಲಿ ನಿಯಮಗಳನ್ನು ಪಾಲಿಸದ 55 ಆಸ್ಪತ್ರೆಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಗುಜರಾತ್ ಸರ್ಕಾರ ವಿಧಾನಸಭೆಯಲ್ಲಿ ಸೋಮವಾರ ಒಪ್ಪಿಕೊಂಡಿದೆ. 32 ಆಸ್ಪತ್ರೆಗಳನ್ನು 2023 ರಲ್ಲಿ ಮತ್ತು 23 ಆಸ್ಪತ್ರೆಗಳನ್ನು 2024 ರಲ್ಲಿ ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ವಿರೋಧ ಪಕ್ಷದ ನಾಯಕ ಅಮಿತ್ ಚಾವ್ಡಾ ಅವರ ಪ್ರಶ್ನೆಗೆ ಉತ್ತರಿಸಿದ ಸರ್ಕಾರ, ಕ್ರಮ ಎದುರಿಸಿದ ನಂತರ ಕಾರ್ಯಾಚರಣೆಯನ್ನು ಪುನರಾರಂಭಿಸಲು 19 ಆಸ್ಪತ್ರೆಗಳು ಮತ್ತೆ ಅನುಮೋದನೆ ಪಡೆದಿವೆ ಎಂದು ಬಹಿರಂಗಪಡಿಸಿದೆ. ಗುಜರಾತ್
ಪಿಎಂ ಜಯ್ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಅಮಾನತುಗೊಳಿಸಲಾದ ಅಥವಾ ಕಪ್ಪುಪಟ್ಟಿಗೆ ಸೇರಿಸಲಾದ ಆಸ್ಪತ್ರೆಗಳ ಸಂಖ್ಯೆಯ ಬಗ್ಗೆ ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ಅಮಿತ್ ಚಾವ್ಡಾ ಸೋಮವಾರ ಗುಜರಾತ್ ಸರ್ಕಾರವನ್ನು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಡಿಸೆಂಬರ್ 31, 2024 ರ ಹೊತ್ತಿಗೆ 55 ಆಸ್ಪತ್ರೆಗಳು ಕ್ರಮವನ್ನು ಎದುರಿಸಿವೆ ಎಂದು ಸರ್ಕಾರ ಒಪ್ಪಿಕೊಂಡಿತು.
2024 ರಲ್ಲಿ, ಅಗ್ನಿಶಾಮಕ ಸುರಕ್ಷತೆ, ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಮತ್ತು ಯೋಜನೆಯ ಮಾರ್ಗಸೂಚಿಗಳ ಉಲ್ಲಂಘನೆಯನ್ನು ಉಲ್ಲೇಖಿಸಿ ಸರ್ಕಾರ ಡಿಸೆಂಬರ್ 5 ರಂದು ಅರಾವಳಿ ಜಿಲ್ಲೆಯ ಶ್ರೀ ಜಲರಾಮ್ ಮಕ್ಕಳ ಆಸ್ಪತ್ರೆಯನ್ನು ಸ್ಥಗಿತಗೊಳಿಸಿತ್ತು. ಆದಾಗ್ಯೂ, ಕೇವಲ 25 ದಿನಗಳ ನಂತರ, ಅನುಸರಣೆಯನ್ನು ಪುನಃಸ್ಥಾಪಿಸಲಾಗಿದೆ ಎಂದು ಹೇಳುವ ಮೂಲಕ ಅಧಿಕಾರಿಗಳು ಆಸ್ಪತ್ರೆಯ ಪುನರಾರಂಭಕ್ಕೆ ಅನುಮತಿ ನೀಡಿದೆ.
ಅದೇ ರೀತಿ, 2023 ರಲ್ಲಿ, ಇತರ 18 ಆಸ್ಪತ್ರೆಗಳು ಪುನರಾರಂಭಿಸಲು ಹಸಿರು ನಿಶಾನೆ ತೋರಿಸಿಸಲಾಗಿತ್ತು. ಈ ಆಸ್ಪತ್ರೆಗಳು ಈ ಹಿಂದಿನ ಉಲ್ಲಂಘನೆಗಳನ್ನು ಸರಿಪಡಿಸಿದ್ದು, ಈಗ ನಿಯಮಗಳಿಗೆ ಬದ್ಧವಾಗಿವೆ ಎಂದು ಸರ್ಕಾರವು ಪ್ರತಿಪಾದಿಸುವ ಮೂಲಕ ತಮ್ಮ ಪುನಃಸ್ಥಾಪನೆಯನ್ನು ಸಮರ್ಥಿಸಿಕೊಂಡಿದೆ.
ಕಳೆದ ಎರಡು ವರ್ಷಗಳಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಳಪೆ ಪ್ರದರ್ಶನ ನೀಡುವ ಅಧಿಕಾರಿಗಳನ್ನು ಪರಿಶೀಲಿಸುತ್ತಿದೆ ಎಂದು ಸರ್ಕಾರ ಒಪ್ಪಿಕೊಂಡಿದೆ. ಈ ಪರಿಶೀಲನೆಯ ಕಾರಣಕ್ಕೆ ಈ ಅಧಿಕಾರಿಗಳನ್ನು ಕಡ್ಡಾಯ ನಿವೃತ್ತಿ ತೆಗೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಹೈದರಾಬಾದ್: ಸಂಚಾರ ನಿರ್ವಹಣೆಯಲ್ಲಿ ಹೊಸ ಜೀವನ ಕಂಡುಕೊಂಡ ಟ್ರಾನ್ಸ್‌ಜೆಂಡರ್ ಸಮುದಾಯ
ಹೈದರಾಬಾದ್: ಸಂಚಾರ ನಿರ್ವಹಣೆಯಲ್ಲಿ ಹೊಸ ಜೀವನ ಕಂಡುಕೊಂಡ ಟ್ರಾನ್ಸ್‌ಜೆಂಡರ್ ಸಮುದಾಯ

