Homeಚಳವಳಿಗುಜರಾತ್‌ ದಲಿತ ಬಾಲಕಿಯ ಸಾಮೂಹಿಕ ಅತ್ಯಾಚಾರ & ಕೊಲೆ... ಪೊಲೀಸ್‌ ನಿರ್ಲಕ್ಷ್ಯವೇ ಕಾರಣ.. ಭುಗಿಲೆದ್ದ ಆಕ್ರೋಶ

ಗುಜರಾತ್‌ ದಲಿತ ಬಾಲಕಿಯ ಸಾಮೂಹಿಕ ಅತ್ಯಾಚಾರ & ಕೊಲೆ… ಪೊಲೀಸ್‌ ನಿರ್ಲಕ್ಷ್ಯವೇ ಕಾರಣ.. ಭುಗಿಲೆದ್ದ ಆಕ್ರೋಶ

- Advertisement -
- Advertisement -

ಜನವರಿ 5 ರಂದು ಗುಜರಾತ್‌ನ ಮೊಡಾಸಾದ ಸೈರಾ ಗ್ರಾಮದಲ್ಲಿ 19 ವರ್ಷದ ದಲಿತ ಬಾಲಕಿ ನೇತು ಹಾಕಿದ ಸ್ಥಿತಿಯಲ್ಲಿ ಕಾಣಿಸಿಕೊಂಡ ನಂತರ ದಲಿತ ಸಮುದಾಯದ ಸಾವಿರಾರು ಜನ ಅಪರಾಧಿಗಳನ್ನು ಬಂಧಿಸುವಂತೆ ಮತ್ತು ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ಪ್ರತಿಭಟನೆ ಭುಗಿಲೆದ್ದಿದೆ.

ಹುಡಗಿ ನಾಪತ್ತೆಯಾದ ಕೂಡಲೇ ಜನವರಿ 1 ರಂದು ಎಫ್‌ಐಆರ್ ದಾಖಲಿಸಬೇಕೆಂದು ಸಂಪರ್ಕಿಸಿದಾಗ ಪೊಲೀಸ್ ಅಧಿಕಾರಿಗಳು ನಿರಾಕರಿಸಿದರೆಂದು ಆ ಹುಡುಗಿಯ ಕುಟುಂಬವೂ ಆರೋಪಿಸಿದೆ.

“ಅವಳು ನಾಪತ್ತೆಯಾದಾಗ, ಆಕೆಯ ತಂದೆ ದೂರು ನೀಡಲು ಹೋದರು. ಆದರೆ ಪೊಲೀಸರು ಅದನ್ನು ಸ್ವೀಕರಿಸಲಿಲ್ಲ. ಶವ ಪತ್ತೆಯಾದ ಎರಡು ದಿನಗಳ ತನಕ ಅವರು ಅತ್ಯಾಚಾರ ಎಫ್‌ಐಆರ್ ದಾಖಲಿಸಲಿಲ್ಲ” ಎಂದು ಬಾಲಕಿಯ ಚಿಕ್ಕಮ್ಮ ದೂರಿದ್ದಾರೆ.

ಸಾವಿಗೀಡಾಗಿರುವ ಬಾಲಕಿಯು ತನ್ನ ಸಹೋದರಿಯೊಂದಿಗೆ ಮೊಡಾಸಾಗೆ ಹೋಗಿದ್ದಳು. ಆದರೆ ಹಿಂದಿರುಗುವಾಗ ಬಿಮಲ್ ಭರದ್ ಎಂಬ ವ್ಯಕ್ತಿ ಆಕೆಯನ್ನು ಬಲವಂತವಾಗಿ ತನ್ನ ಕಾರಿಗೆ ಎತ್ತಿಹಾಕಿಕೊಂಡಿದ್ದನ್ನು ನೋಡಿದ್ದಾಗಿಯೂ, ಅದರ ಬಗ್ಗೆ ಮೌನವಾಗಿರುವಂತೆ ಬೆದರಿಕೆ ಹಾಕಿದ್ದಾಗಿಯೂ ಬಾಲಕಿಯ ಸಹೋದರಿ ಬಹಿರಂಗಪಡಿಸಿದ್ದಾಳೆ. ಅಲ್ಲಿಯ ಸಹಕಾರಿ ಗಿರಣಿಯ ಸಿಸಿಟಿವಿ ದೃಶ್ಯಾವಳಿಗಳು ಇದನ್ನು ದೃಢಪಡಿಸಿವೆ ಎನ್ನಲಾಗಿದೆ.

ಸಿಸಿಟಿವಿಯ ಫೂಟೇಜ್‌ನಲ್ಲಿ ಸೆರೆಯಾಗಿರುವ ಕಾರನ್ನು ಬಿಮಲ್ ತಂದೆ ಭಾರತ್ ಭರದ್ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಈ ಕಾರನ್ನು ತನ್ನ ಮೂವರು ಸ್ನೇಹಿತರಾದ ದರ್ಶನ್ ಭರದ್, ಸತೀಶ್ ಭರದ್ ಮತ್ತು ಜಿಗರ್ ತೆಗೆದುಕೊಂಡಿದ್ದಾರೆ ಎಂದು ಬಿಮಲ್ ಬಾಲಕಿಯ ಕುಟುಂಬಕ್ಕೆ ತಿಳಿಸಿದ್ದ.

ಜನವರಿ 3 ರಂದು ಮೊಡಾಸಾ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಎನ್.ಕೆ.ರಬಾರಿಯು “ಬಾಲಕಿಯು ತನ್ನ ಸಮುದಾಯದ ಒಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ ಮತ್ತು ಹಿಂತಿರುಗಿ ಬರುತ್ತಾಳೆ ಎಂದು ಬಾಲಕಿಯ ಕುಟುಂಬಕ್ಕೆ ಮಾಹಿತಿ ನೀಡಿದರು. ಆದರೆ ಮರುದಿನವೇ, ರಬಾರಿ ಈ ವಿಷಯವು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಹಾಗಾಗಿ ಸಬಲ್ಪುರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಬಾಲಕಿಯ ಕುಟುಂಬಕ್ಕೆ ತಿಳಿಸಿದ್ದಾರೆ.

ಜನವರಿ 5 ರಂದು, ಹಳ್ಳಿಯ ಪಾದ್ರಿಯೊಬ್ಬರು ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿರುವ ಬಾಲಕಿಯ ಬಗ್ಗೆ ಮಾಹಿತಿ ನೀಡಿದರು. ನಂತರ ಬಾಲಕಿಯ ಅಜ್ಜ ಗುರುತಿಸಿದ್ದಾರೆ.

ಜನವರಿ 7 ರಂದು, ಬಾಲಕಿಯ ಅಜ್ಜ ಬಿಮಾಲ್ ಮತ್ತು ಅವರ ಮೂವರು ಸ್ನೇಹಿತರ ವಿರುದ್ಧ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪ ಹೊರಿಸಿ ದೂರು ದಾಖಲಿಸಿದ್ದಾರೆ.

ಆಕೆಯ ಶವವನ್ನು ಮಂಗಳವಾರ ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ತರಲಾಯಿತು. ಕರ್ತವ್ಯವನ್ನು ನಿರ್ಲಕ್ಷಿಸಿದ್ದಕ್ಕಾಗಿ ರಬರಿಯನ್ನು ಅಮಾನತುಗೊಳಿಸುವವರೆಗೂ ಮತ್ತು ಆರೋಪಿಗಳನ್ನು ಬಂಧಿಸುವವರೆಗೆ ಕುಟುಂಬವು ಆಕೆಯ ದೇಹವನ್ನು ಸ್ವೀಕರಿಸಲು ನಿರಾಕರಿಸಿತು.

“ಪ್ರತಿಭಟನಾಕಾರರು ನನ್ನನ್ನು ಭೇಟಿಯಾಗಿ ಮರಣೋತ್ತರ ವರದಿಯ ಪ್ರತಿಯನ್ನು ಕೋರಿದರು. ಅವರ ಭಾವನೆಗಳನ್ನು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಈ ನಡುವೆ ಆಸ್ಪತ್ರೆಯಲ್ಲಿ ಬುಧವಾರ ಪ್ಯಾನಲ್ ಮರಣೋತ್ತರ ಪರೀಕ್ಷೆ ನಡೆಸಲಾಯಿತು” ಎಂದು ಆಸ್ಪತ್ರೆಯ ಅಧೀಕ್ಷಕ ಗುನ್ವಂತ್ ರಾಥೋಡ್ ಹೇಳಿದ್ದಾರೆ.

ಈ ಸಂಬಂಧ ಆರೋಪಿಗಳನ್ನು ಬಂಧಿಸುವಂತೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ. “ನಮಗೆ ಎರಡು ಬೇಡಿಕೆಗಳಿವೆ. ಈ ಭೀಕರ ಅಪರಾಧದ ದುಷ್ಕರ್ಮಿಗಳನ್ನು ಬಂಧಿಸಬೇಕು ಮತ್ತು ಕರ್ತವ್ಯ ನಿರ್ಲಕ್ಷ್ಯಕ್ಕಾಗಿ ಪೊಲೀಸ್ ಇನ್ಸ್‌ಪೆಕ್ಟರ್‌ನನ್ನು ಅಮಾನತುಗೊಳಿಸಬೇಕು. ಆಗ ಮಾತ್ರ ಕುಟುಂಬವು ದೇಹವನ್ನು ಸ್ವೀಕರಿಸುತ್ತದೆ” ಎಂದು ದಲಿತ ಕಾರ್ಯಕರ್ತ ಕೀರ್ತಿ ರಾಥೋಡ್ ಹೇಳಿದ್ದಾರೆ.

ಪ್ರತಿಭಟನೆಗಳು ಹೆಚ್ಚಾದ ನಂತರ ಪೊಲೀಸರು ಎಸ್‌ಎಸ್ಟಿ ಅಟ್ರಾಸಿಟಿ ಸೇರಿದಂತೆ ಹಲವು ಕೇಸುಗಳನ್ನು ಆರೋಪಿಗಳ ಮೇಲೆ ದಾಖಲಿಸಿದ್ದಾರೆ. ಗುಜರಾತ್‌ನ ಎಸ್‌ಸಿ /ಎಸ್‌ಟಿ ಸೆಲ್‌ನ ಹೆಚ್ಚುವರಿ ಡಿಜಿಪಿ (ಎಡಿಜಿಪಿ) ಕೆಕೆ ಓಜಾ ಅವರು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದ್ದಾರೆ. “ನಾವು ಸಾಧ್ಯವಾದಷ್ಟು ಬೇಗ ಆರೋಪಿಗಳನ್ನು ಬಂಧಿಸುವಂತೆ ಸ್ಥಳೀಯ ಪೊಲೀಸ್ ಉಪಅಧೀಕ್ಷಕರಿಗೆ ಸೂಚಿಸಿದ್ದೇವೆ. ಮತ್ತು ಈ ವಿಷಯದಲ್ಲಿ ಪೊಲೀಸರ ಕಡೆಯಿಂದ ನಿಜವಾಗಿಯೂ ನಿರ್ಲಕ್ಷ್ಯವಿದೆಯೇ ಎಂದು ನಾವು ಇಲಾಖಾ ತನಿಖೆಯನ್ನು ಪ್ರಾರಂಭಿಸಿದ್ದೇವೆ” ಎಂದು ಓಜಾ ಹೇಳಿದರು. ತದನಂತರ ಬಾಲಕಿಯ ಶವಸಂಸ್ಕಾರ ನೆರವೇರಿಸಲಾಗಿದೆ.

ಅದು ಉನಾ ಘಟನೆಯಾಗಿರಲಿ, ಭಾನುಭಾಯ್ ವಂಕರ್ ಅವರ ಆತ್ಮಹತ್ಯೆಯಾಗಲಿ ಅಥವಾ ಈ ಮಗಳ ಮೇಲೆ ಅತ್ಯಾಚಾರ ಮತ್ತು ಹತ್ಯೆಯಾಗಲಿ, ದಲಿತ ಸಮಾಜವನ್ನು ಸುರಕ್ಷಿತವಾಗಿಸಲು ಗುಜರಾತ್ ಸರ್ಕಾರ ಎಂದಿಗೂ ಪ್ರಯತ್ನಿಸುವುದಿಲ್ಲ. ದಲಿತರಿಗೆ ಅವರ ಜಮೀನು ಇಲ್ಲ, ಗೌರವವೂ ಸಿಗಲಿಲ್ಲ! ಈಗ ಜಗಳ ರಸ್ತೆಯಲ್ಲಿದೆ.. ಎಂದು ಶಾಸಕ ಜಿಗ್ನೇಶ್‌ ಮೇವಾನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

19 ವರ್ಷದ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ಅರಾವಳ್ಳಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ ನೋಟಿಸ್ ನೀಡಿದೆ.

“ತುಳಿತಕ್ಕೊಳಗಾದ ಬಹುಜನ ಮಗಳ ಬಲಿಪಶುವಾಗಿದ್ದರೆ ಎಲ್ಲಾ ಸ್ತ್ರೀವಾದಿ ಜಾತ್ಯತೀತ ಮತ್ತು ಪ್ರಗತಿಪರ ಜನರು ಜಾತಿಯನ್ನು ನೋಡುತ್ತಾರೆ. ಇಂಡಿಯಾ ಗೇಟ್‌ನಲ್ಲಿ ಯಾವುದೇ ಕ್ಯಾಂಡಲ್ ಮೆರವಣಿಗೆ ಬರುವುದಿಲ್ಲ. ಇದು ಎಲ್ಲವೂ ಜಾತಿಯ ವಿಷಯವಾಗಿದೆ” ಎಂದು ಭೀಮ್‌ ಆರ್ಮಿಯ ಖುಷ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಆ ಬಾಲಕಿಯ ನ್ಯಾಯಕ್ಕಾಗಿ ಆಂದೋಲನ ಆರಂಭವಾಗಿದೆ. ಆರೋಪಿಗಳು ಯಾರೆಂದು ಸ್ಪಷ್ಟವಾಗಿ ಗೊತ್ತಿದ್ದರೂ ಇನ್ನು ಬಂಧನವಾಗಿಲ್ಲ. ಅದಕ್ಕಿಂತ ಹೆಚ್ಚು ಪೊಲೀಸರು ಸರಿಯಾಗಿ ತಮ್ಮ ಕೆಲಸ ಮಾಡಿದ್ದರೆ ಬಾಲಕಿಯನ್ನು ರಕ್ಷಿಸಬಹುದಿತ್ತು. ಆದರೆ ಅದು ದಲಿತ ಬಾಲಕಿ ಎಂಬ ಕಾರಣಕ್ಕೆ ಆಗಲಿಲ್ಲ. ಇಲ್ಲಿ ಪೊಲೀಸರೆ ಆರೋಪಿಗಳಾಗಿದ್ದಾರೆ. ಹೈದರಾಬಾದ್‌ ಎನ್‌ಕೌಂಟರ್‌ ಅನ್ನು ಸಂಭ್ರಮಿಸಿದವರು ಏಕೆ ಬಾಯಿ ಮುಚ್ಚಿ ಕುಳಿತಿದ್ದಾರೆ? ಎನ್‌ಕೌಂಟರ್‌, ಮರಣದಂಡನೆ ಪರಿಹಾರವಾಗಿದ್ದರೆ ಏಕೆ ಮತ್ತೆ ಮತ್ತೆ ಅತ್ಯಾಚಾರಗಳು ನಡೆಯುತ್ತಿವೆ ಎಂದು ಪ್ರಶ್ನಿಸಿದ್ದಾರೆ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಿಕ ಸಂಸ್ಥೆಗಳು, ಕಾಳಜಿಯುಳ್ಳ ನಾಗರಿಕರಿಂದ ಚುನಾವಣಾ ಆಯೋಗಕ್ಕೆ...

0
ರಾಜಸ್ಥಾನದಲ್ಲಿ ಭಾನುವಾರ (ಏ.21) ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಸುದ್ದಿ ಮತ್ತು ದ್ವೇಷ ಹರಡಿದ್ದಾರೆ. ಈ ಹಿನ್ನೆಲೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಾಗರಿಕ ಸಂಸ್ಥೆಗಳು...