ಪ್ರಜಾಪ್ರಭುತ್ವದಲ್ಲಿ ಜವಾಬ್ದಾರಿಯುತ ವಿರೋಧ ಪಕ್ಷವು ನೀತಿಗಳು ಮತ್ತು ನಿರ್ಧಾರಗಳ ಕುರಿತು ಸರ್ಕಾರವನ್ನು ರಚನಾತ್ಮಕವಾಗಿ ಪ್ರಶ್ನಿಸುತ್ತವೆ. ಆದರೆ, ನಮ್ಮ ಸರ್ಕಾರದ ಬಜೆಟ್‌ನಲ್ಲಿ ರಚನಾತ್ಮಕ ಟೀಕೆಗಳಿಗೆ ಅವಕಾಶವೇ ಇಲ್ಲದಿರುವಾಗ ರಾಜ್ಯದ ಬಿಜೆಪಿ ನಾಯಕರು ಹಲಾಲ್ ಬಜೆಟ್ ಎಂಬ ಟೊಳ್ಳು ಟೀಕೆಯ ಮೊರೆ ಹೋಗಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಶುಕ್ರವಾರ ಹೇಳಿದ್ದಾರೆ.
ಸ್ಟಿರಿಯೋಟೈಪ್ ಟೀಕೆಯ ಮೂಲಕ ಬಿಜೆಪಿಗರು ತಮ್ಮ ಬೌದ್ಧಿಕ ದಿವಾಳಿತನವನ್ನು ತಾವೇ ಪ್ರದರ್ಶನಕ್ಕೆ ಇಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು ಪ್ರಿಯಾಂಕ್ ಖರ್ಗೆ, ಅವರು ಮೌಲ್ಯಯುತ ರಾಜಕಾರಣಕ್ಕೆ ತಿಲಾಂಜಲಿ ಇಟ್ಟಿದ್ದಾರೆ ಎಂದು ಹೇಳಿದ್ದಾರೆ.
ಬಜೆಟ್ ಬಗ್ಗೆ ಅರ್ಥಪೂರ್ಣ ಚರ್ಚೆ ಮಾಡಲು ಸಾಮರ್ಥ್ಯವಿಲ್ಲದ ಬಿಜೆಪಿಗೆ #HalalBudget ಕೊನೆಯ ಅಸ್ತ್ರವಾಗಿದೆ. ಹಿಂದೆ ಹೀಗೆಯೇ ಹಲಾಲ್, ಜಟ್ಕಾ ಕಟ್ ಎಂಬ ವಿಭಜನಾತ್ಮಕ ರಾಜಕೀಯ ಮಾಡಿದ್ದ ಬಿಜೆಪಿಯನ್ನು ರಾಜ್ಯದ ಜನತೆ ಜಟ್ಕಾ ಕಟ್ ಮಾಡಿ ಬಿಸಾಡಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಅಲ್ಲದೆ, ಬಿಜೆಪಿ ಪಕ್ಷವು ಬಣ ಬಡಿದಾಟದ ಹಲಾಲ್ ಕಟ್‌ನಿಂದಾಗಿ ಹಲವು ತುಂಡುಗಳಾಗಿದೆ. ಬಜೆಟ್ ಬಗ್ಗೆ ರಚನಾತ್ಮಕ ಟೀಕೆಗಳನ್ನು ಎದುರಿಸಲು ನಾವು ಸದಾ ಸಿದ್ದರಿದ್ದೇವೆ. ಚರ್ಚೆಗೆ ಮುಕ್ತವಾಗಿದ್ದು, ಉತ್ತರಿಸಲು ತಯಾರಿದ್ದೇವೆ. ಆದರೆ ಬಿಜೆಪಿ ಚರ್ಚೆಗೆ ಸಿದ್ದವಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಕರ್ನಾಟಕದ ಸಮಗ್ರ ಏಳಿಗೆಗೆ, ಆರ್ಥಿಕ ಸುಸ್ಥಿರತೆಗೆ, ಸಾಮಾಜಿಕ ಉನ್ನತಿಗೆ ನಮ್ಮ ಬಜೆಟ್ ಪೂರಕವಾಗಿರುವುದನ್ನು ಸಹಿಸದ ಬಿಜೆಪಿ ಸದಾ ಕನ್ನಡಿಗರನ್ನು ಅವಮಾನಿಸುವ ರಾಜಕಾರಣದಲ್ಲಿ ತೊಡಗಿರುವುದು ದುರಂತ. ಅರ್ಥಪೂರ್ಣ ಹೊಣೆಗಾರಿಕೆ ಪ್ರದರ್ಶಿಸಬೇಕಾದ ವಿರೋಧ ಪಕ್ಷವು ನೈತಿಕ ಹಾಗೂ ಬೌದ್ಧಿಕ ದಿವಾಳಿತನ ಪ್ರದರ್ಶಿಸಿದಾಗ ರಾಜಕೀಯ ವ್ಯವಸ್ಥೆ ಮಾತ್ರವಲ್ಲ ಸಾಮಾಜಿಕ ಸ್ವಾಸ್ಥ್ಯವೂ ಕೆಡುತ್ತದೆ. ಇದಕ್ಕೆ ಬಿಜೆಪಿಯೇ ಸ್ಪಷ್ಟ ಉದಾಹರಣೆ ಎಂದು ಅವರು ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಮುಡಾ ಪ್ರಕರಣ : ಸಿಎಂ ಪತ್ನಿ ಪಾರ್ವತಿ, ಸಚಿವ ಬೈರತಿ ಸುರೇಶ್ ವಿರುದ್ಧದ ಈಡಿ ಸಮನ್ಸ್ ರದ್ದುಗೊಳಿಸಿದ ಹೈಕೋರ್ಟ್
ಮುಡಾ ಪ್ರಕರಣ : ಸಿಎಂ ಪತ್ನಿ ಪಾರ್ವತಿ, ಸಚಿವ ಬೈರತಿ ಸುರೇಶ್ ವಿರುದ್ಧದ ಇಡಿ ಸಮನ್ಸ್ ರದ್ದುಗೊಳಿಸಿದ ಹೈಕೋರ್ಟ್

