ಹೈದರಾಬಾದ್| ಹಲವು ತಿಂಗಳಿಂದ ಕಿರುಕುಳ; ಆತ್ಮಹತ್ಯೆಗೆ ಶರಣಾದ ನೊಂದ ಶಾಲಾ ಬಾಲಕಿ

ನೆರೆಹೊರೆಯ ಯುವಕನಿಂದ ನಿರಂತರ ಕಿರುಕುಳ ನೀಡುತ್ತಿದ್ದರಿಂದ ನೊಂದಿದ್ದ 14 ವರ್ಷದ ಶಾಲಾ ಬಾಲಕಿ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆ ಹೈದರಾಬಾದ್‌ನ ಹಯಾತ್‌ನಗರದ ರಂಗನಾಯಕಕುಲಗುಟ್ಟ ನಿವಾಸಿಯಾಗಿದ್ದಳು. 9 ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ಬಾಲಕಿಯನ್ನು ಸ್ಥಳೀಯ ಯುವಕ ಪಿ ರೋಹಿತ್ ಆರು ತಿಂಗಳಿನಿಂದ ಕಿರುಕುಳ ನೀಡುತ್ತಿದ್ದ ಎಂದು ವರದಿಯಾಗಿದೆ. ಹುಡುಗಿಯ ಕುಟುಂಬದ ಎಚ್ಚರಿಕೆಗಳನ್ನು ಲೆಕ್ಕಿಸದೆ ರೋಹಿತ್ ವೈಯಕ್ತಿಕವಾಗಿ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಆಕೆಯನ್ನು ಹಿಂಬಾಲಿಸುತ್ತಿದ್ದನೆಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಅವನು ಪದೇಪದೆ ಅನಗತ್ಯ ಸಂದೇಶಗಳು, ವೀಡಿಯೊ ಕರೆ ಮತ್ತು … Continue reading ಹೈದರಾಬಾದ್| ಹಲವು ತಿಂಗಳಿಂದ ಕಿರುಕುಳ; ಆತ್ಮಹತ್ಯೆಗೆ ಶರಣಾದ ನೊಂದ ಶಾಲಾ ಬಾಲಕಿ