ಭಾರತದ 140 ವಿಮಾನ ನಿಲ್ದಾಣಗಳಲ್ಲಿ, 12 ವಿಮಾನ ನಿಲ್ದಾಣಗಳಿಂದ ಕಳೆದ ಡಿಸೆಂಬರ್ ಮತ್ತು ಮಾರ್ಚ್ ನಡುವೆ ಒಬ್ಬ ಪ್ರಯಾಣಿಕ ಕೂಡಾ ಪ್ರಯಾಣ ಮಾಡಿಲ್ಲ ಎಂದು ಸರ್ಕಾರಿ ವಾಯುಯಾನ ಅಂಕಿ ಅಂಶಗಳನ್ನು ಉಲ್ಲೇಖಿಸಿ ಬ್ಲೂಮ್‌ಬರ್ಗ್ ವರದಿ ಮಾಡಿದ್ದು, ಈ ವಿಮಾನ ನಿಲ್ದಾಣಗಳು ಭೂತಬಂಗಲೆಗಳಾಗಿ ಪರಿವರ್ತನೆಯಾಗಿದೆ ಎಂದು ವರದಿ ಉಲ್ಲೇಖಿಸಿದೆ. ಭೂತಬಂಗಲೆಯಾದ
ಈ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನವು ಕಳೆದ ವರ್ಷದ ಬಹುತೇಕ ಸಮಯದಲ್ಲಿ ದಿನಕ್ಕೆ ಐದಕ್ಕಿಂತ ಕಡಿಮೆ ವಿಮಾನಗಳನ್ನು ಸರಾಸರಿಯಾಗಿ ನಿರ್ವಹಿಸಿದ್ದು, ಕೆಲವು ದಿನಗಳಲ್ಲಿ ಶೂನ್ಯ ವಿಮಾನಗಳನ್ನು ದಾಖಲಿಸಿವೆ ಎಂದು ವರದಿ ಹೇಳಿದೆ.
ಹರಿಯಾಣದ ಹಿಸಾರ್ ಎಂಬ ಸಣ್ಣ ನಗರದಲ್ಲಿ ಹೊಸ ವಿಮಾನ ನಿಲ್ದಾಣವನ್ನು ಇತ್ತಿಚೆಗೆ ಉದ್ಘಾಟಿಸಲಾಗಿತ್ತು. ಸುಮಾರು 10ರಿಂದ 20 ಲಕ್ಷ ಪ್ರಯಾಣಿಕ ಸಾಮರ್ಥ್ಯದೊಂದಿಗೆ ಪ್ರಾರಂಭವಾದ ಈ ವಿಮಾನ ನಿಲ್ದಾಣವನ್ನು ನವದೆಹಲಿಯ ಹೆಚ್ಚು ಜನನಿಬಿಡ ನಿಲ್ದಾಣಗಳಿಗೆ ಪರ್ಯಾಯವಾಗಿ ನಿರ್ಮಿಸಲಾಗಿತ್ತು ಎನ್ನಲಾಗಿದೆ. ಅದಾಗ್ಯೂ, ಉದ್ಘಾಟನೆಯಾಗಿ ಹಲವಾರು ವರ್ಷಗಳಾದರೂ ಹಿಸಾರ್‌ನ ವಿಮಾನ ನಿಲ್ದಾಣವು ಇನ್ನೂ ಕಾರ್ಯನಿರ್ವಹಿಸುತ್ತಿಲ್ಲ ಎಂದು ವರದಿ ಉಲ್ಲೇಖಿಸಿದೆ.
ಆಗಮನ ಮತ್ತು ನಿರ್ಗಮನ ಸಭಾಂಗಣಗಳು ಹೆಚ್ಚಾಗಿ ಖಾಲಿಯಾಗಿದ್ದು, ಬೀದಿ ನಾಯಿಗಳು ರನ್‌ವೇಯಲ್ಲಿ ವಿಶ್ರಾಂತಿ ಪಡೆಯುತ್ತಿವೆ ಎಂದ ವರದಿ ಹೇಳಿದೆ. ವಿಮಾನ ನಿಲ್ದಾಣವು ಮಿಲಿಟರಿ ಜೆಟ್‌ಗಳು ಮತ್ತು ರಾಜಕಾರಣಿಗಳನ್ನು ಕರೆದೊಯ್ಯುವ ವಿರಳ ವಿಮಾನಗಳನ್ನು ಹೊಂದಿದ್ದರೂ, 2021 ರಿಂದ ಹಿಸಾರ್‌ನಿಂದ ಕೆಲವೇ ಕೆಲವು ಸಬ್ಸಿಡಿ ವಾಣಿಜ್ಯ ವಿಮಾನಗಳು ಹಾರಾಟ ನಡೆಸಿವೆ ಎಂದು ಅದು ಹೇಳಿದೆ.
ವಿಮಾನಯಾನದ ಸರಾಸರಿ ಟಿಕೆಟ್ ಬೆಲೆಗಳು ದೇಶದ ಹೆಚ್ಚಿನ ಜನರಿಗೆ ಇನ್ನೂ ತುಂಬಾ ದುಬಾರಿಯಾಗಿದ್ದರೂ ಚುನಾಯಿತ ನಾಯಕರು ಮತದಾರರನ್ನು ಮೆಚ್ಚಿಸಲು ಆಕರ್ಷಕ ಯೋಜನೆಗಳಿಗೆ ಹಣಕಾಸು ಒದಗಿಸುವ ಒತ್ತಡದಲ್ಲಿದ್ದಾರೆ ಎಂದು ವರದಿ ಹೇಳಿದೆ. ದೇಶದ ಅತ್ಯಂತ ಬಡ ರಾಜ್ಯಗಳಲ್ಲಿ ಒಂದಾದ ಮಧ್ಯಪ್ರದೇಶದ ಮುಖ್ಯಮಂತ್ರಿ ಇತ್ತೀಚೆಗೆ ಪ್ರತಿ 200 ಕಿಲೋಮೀಟರ್ ಭೂಮಿಗೆ ಒಂದು ವಿಮಾನ ನಿಲ್ದಾಣವನ್ನು ನಿರ್ಮಿಸುವುದಾಗಿ ಭರವಸೆ ನೀಡಿರುವ ಬಗ್ಗೆ ವರದಿ ಉಲ್ಲೇಖಿಸಿದೆ.
“ಸ್ಪಷ್ಟವಾಗಿ, ಭಾರತವು ತನ್ನ ವಾಯುಯಾನ ಮೂಲಸೌಕರ್ಯವನ್ನು ಸಂಚಾರ ಮತ್ತು ಬೇಡಿಕೆಯ ತರ್ಕದ ಆಧಾರದ ಮೇಲೆ ಯೋಜಿಸುತ್ತಿಲ್ಲ, ಬದಲಿಗೆ ಚುನಾವಣೆ ಮತ್ತು ರಾಜಕೀಯ ಕಾರ್ಯಸೂಚಿಗಳ ಆಧಾರದ ಮೇಲೆ ಯೋಜಿಸುತ್ತಿದೆ” ಎಂದು ವಾಯುಯಾನ ಸಲಹಾ ಸಂಸ್ಥೆಯಾದ ಮಾರ್ಟಿನ್ ಕನ್ಸಲ್ಟಿಂಗ್‌ನ ಮುಖ್ಯ ಕಾರ್ಯನಿರ್ವಾಹಕ ಮಾರ್ಕ್ ಮಾರ್ಟಿನ್ ಹೇಳಿದರು.
ದೇಶದ ದೊಡ್ಡ ನಗರಗಳಲ್ಲಿ, ಅನೇಕ ಮಹಾನಗರಗಳು ಕೂಡಾ ವಿಮಾನಯಾನ ಉದ್ದಿಮೆಯಲ್ಲಿ ಹೆಣಗಾಡುತ್ತಿವೆ ಎಂದು ವರದಿ ಉಲ್ಲೇಖಿಸಿದೆ. ಮುಂಬೈನ ಪ್ರಯಾಣಿಕರ ಸಂಖ್ಯೆ ಅದರ ಮೂಲ ಗುರಿಯ ಸುಮಾರು 30% ರಷ್ಟಿದ್ದು, ಬೆಂಗಳೂರಿನದು 6% ರಷ್ಟಿದೆ. ನವದೆಹಲಿ ಮತ್ತು ಕೋಲ್ಕತ್ತಾ ಹೊರತುಪಡಿಸಿ, ಭಾರತದಾದ್ಯಂತದ ಮಹಾನಗರಗಳಲ್ಲಿ ನಿಜವಾದ ಪ್ರಯಾಣಿಕರ ಸಂಖ್ಯೆ ಅಪೇಕ್ಷಿತ ಮಟ್ಟಕ್ಕಿಂತ 20% ಕ್ಕಿಂತ ಕಡಿಮೆಯಿದೆ ಎಂದು ವರದಿ ಉಲ್ಲೇಖಿಸಿದೆ.
ಸರ್ಕಾರದ ಅಧಿಕೃತ ಲೆಕ್ಕಪರಿಶೋಧಕರು(ಸಿಎಜಿ) ಹಿಂದೆ ಕೆಲವು ಯೋಜನೆಗಳನ್ನು ಅವುಗಳ ಅಗತ್ಯಕ್ಕಿಂತ ವರ್ಷಗಳ ಅಥವಾ ದಶಕಗಳ ಮೊದಲೇ ನಿರ್ಮಿಸಲಾಗಿದೆ ಎಂದು ಹೇಳಿದ್ದನ್ನು ವರದಿಯು ಉಲ್ಲೇಖಿಸಿದೆ.
“ಸ್ಪಷ್ಟವಾಗಿ, ಭಾರತವು ತನ್ನ ವಾಯುಯಾನ ಮೂಲಸೌಕರ್ಯವನ್ನು ಸಂಚಾರ ಮತ್ತು ಬೇಡಿಕೆಯ ತರ್ಕದ ಆಧಾರದ ಮೇಲೆ ಯೋಜಿಸುತ್ತಿಲ್ಲ. ಬದಲಿಗೆ ಚುನಾವಣೆ ಮತ್ತು ರಾಜಕೀಯ ಕಾರ್ಯಸೂಚಿಗಳ ಆಧಾರದ ಮೇಲೆ ಯೋಜಿಸುತ್ತಿದೆ” ಎಂದು ವಾಯುಯಾನ ಸಲಹಾ ಸಂಸ್ಥೆಯಾದ ಮಾರ್ಟಿನ್ ಕನ್ಸಲ್ಟಿಂಗ್‌ನ ಮುಖ್ಯ ಕಾರ್ಯನಿರ್ವಾಹಕ ಮಾರ್ಕ್ ಮಾರ್ಟಿನ್ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ಭಾರತದ ಖಾಲಿ ವಿಮಾನ ನಿಲ್ದಾಣಗಳು ಬಹುಶಃ ದೇಶದ ನಿರ್ಮಾಣ ಸಮಸ್ಯೆಗಳ ಸಂಕೇತವಾಗಿದೆ ಎಂದು ವರದಿ ಹೇಳಿದ್ದು, ಭಾರತದಲ್ಲಿ ವಾಯು ಸಂಚಾರ ಸಂಖ್ಯೆಗಳು ಎಂದಿಗೂ ಹೆಚ್ಚಿಲ್ಲವಾದರೂ, ಪ್ರಯಾಣಿಕರ ಅಡಚಣೆಗಳು ಹೆಚ್ಚು ಸ್ಪಷ್ಟವಾಗಿರುವಂತಹ ಸ್ಥಳಗಳಲ್ಲಿ, ಸಾಮಾನ್ಯವಾಗಿ ಹೆಚ್ಚಿನ ದಟ್ಟಣೆಯ ಮಹಾನಗರಗಳಲ್ಲಿ, ತೆರಿಗೆ ಹಣಗಳನ್ನು ಪರಿಣಾಮಕಾರಿಯಾಗಿ ಖರ್ಚು ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗಳನ್ನು ವರದಿ ಎತ್ತಿದೆ.
“ಈ ವಿಮಾನ ನಿಲ್ದಾಣಗಳು ಬೇಡಿಕೆಯ ಸವಾಲುಗಳನ್ನು ಎದುರಿಸುತ್ತಿವೆ ಮತ್ತು ಇದು ಶೀಘ್ರದಲ್ಲೇ ಮುಂದುವರಿಯುತ್ತದೆ” ಎಂದು ವಾಯುಯಾನ ಸಲಹಾ ಸಂಸ್ಥೆಯಾದ CAPA ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಮತ್ತು ನಿರ್ದೇಶಕ ಕಪಿಲ್ ಕೌಲ್ ಹೇಳಿದ್ದಾರೆ ಎಂದು ವರದಿ ಹೇಳಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಪ್ರಸ್ತುತ ಅಧಿಕಾರಿಗಳು ನಷ್ಟ ಅನುಭವಿಸುತ್ತಿರುವ ವಿಮಾನ ನಿಲ್ದಾಣಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಖಾಸಗಿಯಾಗಿ ಹೇಳಿಕೊಂಡಿದ್ದಾರೆ ಎಂದು ವರದಿ ಹೇಳಿದೆ. ಸರ್ಕಾರವು ಇನ್ನೂ 10 ರಿಂದ 15 ವರ್ಷಗಳ ಕಾಲ ಸಂಕಷ್ಟದಲ್ಲಿರುವ ವಿಮಾನ ನಿಲ್ದಾಣಗಳಿಗೆ “ಕಾರ್ಯಸಾಧ್ಯತೆಯ ಅಂತರ ನಿಧಿ”ಯನ್ನು ನೀಡಬೇಕಾಗಬಹುದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹೇಳಿದೆ ಎಂದು ವರದಿ ಉಲ್ಲೇಖಿಸಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವರದಿಯಲ್ಲಿನ ಅಂದಾಜಿನ ಪ್ರಕಾರ, ಸಣ್ಣ ವಿಮಾನ ನಿಲ್ದಾಣಗಳು ತಮ್ಮ ನಿರ್ವಹಣಾ ವೆಚ್ಚವನ್ನು ಮರುಪಡೆಯಲು ದಿನಕ್ಕೆ ಕನಿಷ್ಠ 8 ರಿಂದ 10 ವಾಣಿಜ್ಯ ವಿಮಾನಗಳ ಅಗತ್ಯವಿರುತ್ತದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ 140 ವಿಮಾನ ನಿಲ್ದಾಣಗಳಲ್ಲಿ ಅರ್ಧದಷ್ಟು ವಿಮಾನಗಳು ದಿನಕ್ಕೆ 10 ಕ್ಕಿಂತ ಕಡಿಮೆ ವಿಮಾನಗಳನ್ನು ನಿರ್ವಹಿಸುತ್ತದೆ ಎಂದು ಬ್ಲೂಮ್‌ಬರ್ಗ್ ನ್ಯೂಸ್ ಅಂಕಿ ಅಂಶಗಳನ್ನು ಉಲ್ಲೇಖಿಸಿ ಹೇಳಿದೆ. ಭೂತಬಂಗಲೆಯಾದ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಅಪರೇಷನ್ ಕಾಗರ್ ತಕ್ಷಣ ನಿಲ್ಲಿಸಿ, ನಕ್ಸಲರೊಂದಿಗೆ ಮಾತುಕತೆ ನಡೆಸಿ: ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯ ಬಿ.ವಿ.ರಾಘುವುಲು
ಅಪರೇಷನ್ ಕಾಗರ್ ತಕ್ಷಣ ನಿಲ್ಲಿಸಿ, ನಕ್ಸಲರೊಂದಿಗೆ ಮಾತುಕತೆ ನಡೆಸಿ: ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯ ಬಿ.ವಿ.ರಾಘುವುಲು

