Homeಕರ್ನಾಟಕಭ್ರಷ್ಟಾಚಾರ ಪ್ರಶ್ನಿಸಿದ ಪತ್ರಕರ್ತನ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಹಲ್ಲೆ: ಅವ್ಯಾಹತವಾಗಿ ನಡೆದಿದೆ ಅರಣ್ಯ ಲೂಟಿ!

ಭ್ರಷ್ಟಾಚಾರ ಪ್ರಶ್ನಿಸಿದ ಪತ್ರಕರ್ತನ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಹಲ್ಲೆ: ಅವ್ಯಾಹತವಾಗಿ ನಡೆದಿದೆ ಅರಣ್ಯ ಲೂಟಿ!

ಭ್ರಷ್ಟಾಚಾರ ಮತ್ತು ಪತ್ರಕರ್ತನ ಮೇಲಿನ ಹಲ್ಲೆಯ ಪ್ರಮುಖ ಆರೋಪಿ ರತ್ನಪ್ರಭರವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸರನ್ನು ಪ್ರಶ್ನಿಸಿದರೆ ಅವರ ಬಳಿ ಯಾವುದೇ ಉತ್ತರವಿಲ್ಲ!

- Advertisement -
- Advertisement -

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿಯ ಪತ್ರಕರ್ತರೊಬ್ಬರ ಮೇಲೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ರತ್ನಪ್ರಭ ಮತ್ತು ಅವರ ಸಹಚರರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ವರದಿ ಮಾಡಲು ಮುಂದಾದಾಗ ಆ ಹಲ್ಲೆಯ ಹಿಂದಿನ ಆಳ ಅಗಲ ವಿಸ್ತಾರಗೊಳ್ಳುತ್ತಲೇ ಹೋಗುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳೇ ತೀವ್ರ ಹಣದಾಸೆಗೆ ಬಿದ್ದು ಅಪರೂಪದ ವನ್ಯಜೀವಿಗಳಿರುವ ಕಾಡನ್ನು ಬಲಿಕೊಡುತ್ತಿರುವ ಹಲವು ಅಂಶಗಳು, ಹಗರಣಗಳು ಬೆಳಕಿವೆ ಬರುತ್ತಿವೆ. ಈ ಕುರಿತ ವಿಶೇಷ ತನಿಖಾ ವರದಿ ಇಲ್ಲಿದೆ..

ಭಾರತದಲ್ಲಿ ಅರಣ್ಯ ನಾಶ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಭಾರತದ ಒಟ್ಟು ಭೂಪ್ರದೇಶದಲ್ಲಿ ಶೇ. 21.67 ರಷ್ಟು ಅರಣ್ಯವಿದೆ. ಕಳೆದ 30 ವರ್ಷಗಳಲ್ಲಿ ಹಲವು ಕೈಗಾರಿಕೆಗಳಿಗಾಗಿ ಸಾಕಷ್ಟು ಅರಣ್ಯ ನಾಶ ಮಾಡಲಾಗಿದೆ. ಅರಣ್ಯ ನಾಶಕ್ಕೆ ಕೈಗಾರಿಕಾ ವಿಸ್ತರಣೆ, ಗಣಿಗಾರಿಕೆ, ಕಾಡ್ಗಿಚ್ಚು ಕಾರಣದೊಂದಿಗೆ ಭ್ರಷ್ಟಗೊಂಡ ಅರಣ್ಯ ಇಲಾಖೆಯ ಪಾತ್ರವೂ ಹೇರಳವಾಗಿದೆ. ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಎಂಬ ಗಾದೆ ಮಾತು ಹಳೆಯದಾದರೂ ಅರಣ್ಯ ಇಲಾಖೆಗೆ ಅದು ಸಾರ್ವಕಾಲಿಕವಾಗಿ ಅನ್ವಯವಾಗುತ್ತದೆ.

ಭಾರತದಲ್ಲಿ ಅರಣ್ಯಗಳನ್ನು ಉಳಿಸಿ, ಬೆಳೆಸುವುದಕ್ಕಾಗಿ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆಯ ಬೃಹತ್ ಖಾತೆಯೊಂದಿದೆ. ಭಾರತೀಯ ಅರಣ್ಯ ಇಲಾಖೆಯಿದ್ದು ಲಕ್ಷಾಂತರ ಸಿಬ್ಬಂದಿಗಳಿದ್ದಾರೆ. ರಾಜ್ಯಮಟ್ಟದಲ್ಲಿ ಇದೇ ರೀತಿಯ ವ್ಯವಸ್ಥೆಯಿದೆ. ಇಷ್ಟೆಲ್ಲಾ ಇದ್ದರೂ ಅರಣ್ಯಗಳು ಮಾತ್ರ ದಿನನಿತ್ಯ ನಾಶವಾಗುತ್ತಿವೆ. ಇದಕ್ಕೆ ಮೇಲೆ ಹೇಳಿದಂತೆ ಹಲವು ಬಾಹ್ಯ ಕಾರಣಗಳಿದ್ದರೂ ಇಲಾಖೆಯಲ್ಲಿರುವ ಭ್ರಷ್ಟ ಅಧಿಕಾರಿಗಳೆ ಹಲವೆಡೆ ಅರಣ್ಯ ಲೂಟಿಗಿಳಿದಿರುವುದು ದುರಂತದ ಸಂಗತಿ. ಇದನ್ನು ತಡೆಯಲು ಮುಂದಾಗುವ ಸಾಮಾಜಿಕ ಕಾರ್ಯಕರ್ತರು ಮತ್ತು ಪತ್ರಕರ್ತರಿಗೆ ನಿತ್ಯ ಕಿರುಕುಳ ಕೊಡಲಾಗುತ್ತದೆ. ಅಂದದ್ದೆ ವರದಿ ಇಲ್ಲಿದೆ.

ಲಕ್ಕವಳ್ಳಿಯ ಸತ್ಯಪ್ರಭ ಪತ್ರಿಕೆಯ ವರದಿಗಾರ ಅಶ್ವಥ್ ಎಂಬುವವರ ಮನೆಗೆ ಬಂದ ಎಸಿಎಫ್ ರತ್ನಪ್ರಭ ಮತ್ತು  ಸಹಚರರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವರದಿಗಾರರ ಪತ್ನಿ ಆಗಸ್ಟ್ 21ರಂದು ನೀಡಿದ ದೂರಿನನ್ವಯ ಲಕ್ಕವಳ್ಳಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಲಕ್ಕವಳ್ಳಿ ಭದ್ರಾ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಯಲ್ಲಿ ಎಸಿಎಫ್ ರತ್ನಪ್ರಭರವರು ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ ಅಶ್ವಥ್‌ರವರು ಸತ್ಯಪ್ರಭ ಪತ್ರಿಕೆಯಲ್ಲಿ ವರದಿ ಮಾಡಿದ್ದರು. ಅಲ್ಲದೇ ಎಸಿಎಫ್ ಅವ್ಯವಹಾರದ ವಿರುದ್ಧ ಬೆಂಗಳೂರಿನ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದರು. ಹಾಗಾಗಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಅವರ ಪತ್ನಿ ಎಲ್.ಆರ್ ಗಾಯತ್ರಿಯವರು ಆರೋಪಿಸಿದ್ದಾರೆ.

ರತ್ನಪ್ರಭರವರ ಮೇಲಿರುವ ಆರೋಪಗಳು

ಅಭಯಾರಣ್ಯದಲ್ಲಿ ಕಾಡು ಪ್ರಾಣಿಗಳಿಗೆ ಮೇವು ಬೆಳೆಯಲು ಅನುಕೂಲವಾಗುವಂತೆ ಲಂಟಾನ ತೆಗೆಯಲು ಪ್ರತಿವರ್ಷ ಟೆಂಡರ್ ಕರೆಯಲಾಗುತ್ತದೆ. ಅದೇ ರೀತಿ ಈ ವರ್ಷ 18 ಲಕ್ಷ ರೂಗಳ ಟೆಂಡರ್ ಕರೆಯಬೇಕಿತ್ತು. ಆದರೆ ಒಂದು ಲಕ್ಷಕ್ಕಿಂತ ಹೆಚ್ಚಿನ ಹಣ ಖರ್ಚಾಗುವ ಕಾಮಗಾರಿಗೆ ಮಾತ್ರ ಟೆಂಡರ್ ಕರೆಯಬೇಕೆಂಬ ನಿಯಮವಿದೆ. ಆದರೆ ಒಂದು ಲಕ್ಷಕ್ಕಿಂತ ಕಡಿಮೆ ಹಣದ ಕಾಮಗಾರಿಗೆ ಟೆಂಡರ್ ಅಗತ್ಯವಿಲ್ಲವೆಂದು ಮನಗಂಡ ರತ್ನಪ್ರಭಾರವರು 99,000, 90,000 ರೂ ನಂತೆ ಸುಮಾರು 20 ಜನರಿಗೆ ಕಾಮಗಾರಿ ನೀಡಿರುವುದಾಗಿ ತೋರಿಸಿ, ಎರಡೇ ದಿನದಲ್ಲಿ ಕಾಮಗಾರಿ ಮುಗಿದಿದೆ ಎಂದು ನಕಲಿ ದಾಖಲೆ ಸೃಷ್ಟಿಸಿ ನಯಾಪೈಸೆ ಕೆಲಸ ಮಾಡದೇ ಅಷ್ಟೂ ಹಣವನ್ನು ಗುಳುಂ ಮಾಡಿದ್ದಾರೆ ಎನ್ನುವುದು ಪತ್ರಕರ್ತರ ಆರೋಪ.

ಅಭಯಾರಣ್ಯದಲ್ಲಿನ ಹಲವು ಕಾಮಗಾರಿ ಕೆಲಸಗಳನ್ನು ಅಂದಾಜು ಪಟ್ಟಿಯ ಪ್ರಕಾರ ಕೈಗೊಂಡಿಲ್ಲ ಮತ್ತು ಕಳಪೆ ಕಾಮಗಾರಿ ನಡೆಸಲಾಗಿದೆ ಎಂದು ಸ್ಥಳಪರಿಶೀಲನೆ ನಡೆಸಿ, ಶಿಸ್ತುಕ್ರಮ ಕೈಗೊಳ್ಳುವುದಾಗಿ ಅರಣ್ಯ ಸಂರಕ್ಷಣಾಧಿಕಾರಿ ಧನಂಜಯ್‌ರವರು ರತ್ನಪ್ರಭರವರಿಗೆ ಜುಲೈ ತಿಂಗಳಿನಲ್ಲಿ ನೋಟಿಸ್ ನೀಡಿದ್ದಾರೆ.

ಎಸಿಎಫ್ ರತ್ನಪ್ರಭ

ಕಾಡುಗಳಲ್ಲಿ ಕಾಡ್ಗಿಚ್ಚು ಹರಡದಂತೆ ತಡೆಯಲು ದಿನಗೂಲಿ, ಗುತ್ತಿಗೆ ಆಧಾರದಲ್ಲಿ ಹಲವರನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗುತ್ತದೆ. ಅದರಂತೆ 195 ಜನರನ್ನು ನೇಮಿಸಿಕೊಂಡಿರುವುದಾಗಿ, ಅವರಿಗೆ ಉಳಿಯಲು ಕಾಡಿನಲ್ಲಿ ಟೆಂಟ್ ಹಾಕಿಸಲು ಲಕ್ಷಾಂತರ ಹಣ ಖರ್ಚು ಮಾಡಿರುವುದಾಗಿಯೂ, ಅವರಿಗೆ ಪ್ರತಿ ತಿಂಗಳು ತಲಾ 11,000 ರೂ ಸಂಬಳ ನೀಡಿರುವುದಾಗಿ ರತ್ನಪ್ರಭಾರವರು ದಾಖಲೆ ತೋರಿಸುತ್ತಿದ್ದಾರೆ. ಆದರೆ ಕೇವಲ 10-15 ಜನರನ್ನು ಮಾತ್ರ ನೇಮಿಸಿಕೊಂಡಿದ್ದು, ಅವರಿಗೂ ನೆಟ್ಟಗೆ ಸಂಬಳ ನೀಡಿಲ್ಲ, ಎಲ್ಲಾ ಹಣ ಎಂದು ಪತ್ರಕರ್ತ ಅಶ್ವಥ್‌ರವರು ದೂರುತ್ತಾರೆ.

ಅಭಯಾರಣ್ಯದ ಒಳಗೆ ಬೇರೆಯವರಿಗೆ ಪ್ರವೇಶ ನಿಷೇಧ. ಆದರೂ ಪ್ರತಿ ವಾರಕ್ಕೊಮ್ಮೆ ಸಾಗುವಾನಿ, ಬೀಟೆ ಸೇರಿದಂತೆ ಅತ್ಯುತ್ತಮ ಮರಗಳ ಕಳ್ಳತನವಾಗುತ್ತಿದೆ. ಇದು ಅಧಿಕಾರಿಗಳೇ ನಡೆಸುತ್ತಿರುವ ಕುಕೃತ್ಯ. ಇದರಲ್ಲಿ ಎಲ್ಲಾ ಅಧಿಕಾರಿಗಳು ಶಾಮೀಲಾಗಿದ್ದು ಪ್ರತಿಯೊಬ್ಬರಿಗೂ ಕಮಿಷನ್ ಸಿಗುತ್ತಿದೆ. ಆದರೆ ನಮ್ಮ ಅರಣ್ಯ ಮಾತ್ರ ಹಾಳಾಗುತ್ತಿದೆ. ಕಾಡಿನಲ್ಲಿ ಹುಲ್ಲಿನ ಪ್ರಮಾಣ ದಿನೇ ದಿನೇ ಕಡಿಮೆಯಾಗುತ್ತಿದ್ದು, ಪ್ರಾಣಿಗಳಿಗೆ ಆಹಾರವಿಲ್ಲದೇ ಸಾಯುತ್ತಿವೆ ಎಂಬುದು ಸ್ಥಳೀಯರ ಆರೋಪವಾಗಿದೆ.


ಇದನ್ನೂ ಓದಿ: ಕೆ.ಪಿ.ಎಸ್.ಸಿ ಭ್ರಷ್ಟಾಚಾರದಿಂದ ಸಾರ್ವಜನಿಕ ಆಡಳಿತಕ್ಕೆ ಹಿನ್ನಡೆ..


ಇಷ್ಟೆಲ್ಲಾ ಆರೋಪವಿರುವ ರತ್ನಪ್ರಭಾರವರ ಕುರಿತು ಮತ್ತೊಬ್ಬ ಎಸಿಎಫ್‌ ಸೈಯದ್ ಹುಸೇನಿಯವರು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ. ನಂತರ ಮೆಸೇಜ್ ಮಾಡಿದಾಗ ಈ ವಿಚಾರಕ್ಕೆ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದಿದ್ದಾರೆ. “ನೀವು ತನಿಖಾಧಿಕಾರಿಯಾಗಿದ್ದೀರಿ.. ದೂರಿನಲ್ಲಿ ಹುರುಳಿದೆಯೇ, ತನಿಖೆ ಯಾವ ಹಂತದಲ್ಲಿದೆ?” ಎಂದು ಪ್ರಶ್ನಿಸಿದ್ದಕ್ಕೆ ತನಿಖೆ ನಡೆಯುತ್ತಿದೆ ಎಂದರಷ್ಟೇ ಹೊರತು ಫೋನ್ ನಲ್ಲಿ ಮಾತನಾಡಲು ನಿರಾಕರಿಸಿದ್ದಾರೆ. ಒಟ್ಟಿನಲ್ಲಿ ಯಾವ ಅಧಿಕಾರಿಗಳು ಸಹ ಭ್ರಷ್ಟಾಚಾರದ ಕುರಿತು ಮಾತನಾಡಲು ಸಿದ್ಧವಿಲ್ಲದ ಪರಿಸ್ಥಿತಿ ಎದುರಾಗಿದೆ.

ಅಶ್ವಥ್ ಮಾತ್ರವಲ್ಲದೇ ಸ್ಥಳೀಯರು ಸೇರಿದಂತೆ ಹಲವು ಪತ್ರಕರ್ತರು ಇಲ್ಲಿ ನಡೆಯುತ್ತಿರುವ ಹಗಲು ದರೋಡೆ ತಡೆಯಲು ಬೆಂಗಳೂರಿನ ಜಾಗೃತ ಅರಣ್ಯ ದಳಕ್ಕೆ ದೂರು ನೀಡಿದ್ದಾರೆ. ಆದರೆ ಯಾವುದೇ ಸ್ಪಂದನೆ ದೊರೆತಿಲ್ಲ ಎನ್ನಲಾಗಿದೆ. ಪ್ರಶ್ನಿಸಿದವರನ್ನು ಮಣಸಿಲಾಗುತ್ತದೆ, ಅದರ ಪ್ರಯತ್ನವೇ ಅಶ್ವಥ್‌ರವರ ಮೇಲಿನ ಹಲ್ಲೆ ಎನ್ನಲಾಗುತ್ತಿದೆ.

ಆಗಸ್ಟ್ 20ರ ಸಂಜೆ 6.30ರ ಹೊತ್ತಿಗೆ ಘಟನೆ ನಡೆದಿದ್ದು, ಆಗಸ್ಟ್ 21ರಂದು ಠಾಣೆಯಲ್ಲಿ ದೂರು ನೀಡಲಾಗಿದೆ. ತನ್ನ ಪತಿ ರತ್ನಪ್ರಭರವರ ಅವ್ಯವಹಾರಗಳನ್ನು ದಾಖಲೆ ಸಮೇತ ವರದಿ ಮಾಡಿದ್ದರು. ಹಾಗಾಗಿ ದೂರು ಹಿಂಪಡೆಯುವಂತೆ ಬೆದರಿಕೆ ಹಾಕಲು ಹಲ್ಲೆ ನಡೆಸಲಾಗಿದೆ ಎಂದು ಗಾಯತ್ರಿಯವರು ಹೇಳಿದ್ದಾರೆ. ತನ್ನ ಮೇಲೂ ಹಲ್ಲೆ ನಡೆಸಲಾಗಿದ್ದು, ತಮ್ಮ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.

ಪತ್ರಕರ್ತರಾದ ಅಶ್ವಥ್ ಮತ್ತು ಅವರ ಪತ್ನಿ ಗಾಯತ್ರಿ

ರತ್ನಪ್ರಭರವರ ಡ್ರೈವರ್ ಸುರೇಶ್ ಮತ್ತು ಅವರ ಜೊತೆಗಿದ್ದ ಮತ್ತೊಬ್ಬ ವ್ಯಕ್ತಿಯ ಮೇಲೂ ದೂರು ದಾಖಲಾಗಿದ್ದು, ಎಸಿಎಫ್ ವಾಹನವನ್ನ ಲಕ್ಕವಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಈ ವರ್ಷದ ಜನವರಿಯಿಂದ ಮಾರ್ಚ್ ಅವಧಿಯಲ್ಲಿ ಕಾಮಗಾರಿ ಮಾಡದೆಯೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಾಂತರ ಹಣ ಬಿಲ್ಲು ಪಡೆಯಲಾಗಿದೆ. ಆರ್‌ಎಫ್‌ಓ ನಾಗೇಶ್ ಬಳೆಗಾರ್ ಮತ್ತು ಡಿಆರ್‌ಎಫ್‌ಓಗೆ ಹೆದರಿಸಿ ಅವರಿಂದ ಸಹಿ ಪಡೆಯಲಾಗಿದೆ. ಗುತ್ತಿಗೆದಾರರಾದ ನಾರಾಯಣಪ್ಪ, ಸಹದೇವಪ್ಪನವರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಪತ್ರಕರ್ತ ಅಶ್ವಥ್‌ರವರು ಬೆಂಗಳೂರಿನ ಜಾಗೃತ ಅರಣ್ಯ ದಳಕ್ಕೆ ದೂರು ನೀಡಿದ್ದರು.

ರತ್ನಪ್ರಭರವರಿಗೆ ಕಾರಣ ಕೇಳಿ ಎಚ್ಚರಿಕೆ ನೋಟಿಸ್

ಎಸಿಎಫ್‌ ರತ್ನಪ್ರಭರವರು ಕಚೇರಿಯಲ್ಲಿರದೇ ತಮ್ಮ ವಯಕ್ತಿಕ ಕೆಲಸದಲ್ಲಿ ಮುಳುಗಿರುತ್ತಾರೆ, ನಮಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಈ ಕಾರಣದಿಂದಲೇ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಅಶ್ವಥ್‌ರವರು ಹೇಳಿದ್ದಾರೆ.

ಅರಣ್ಯ ಇಲಾಖೆಯಲ್ಲಿ ನಡೆಯುವ ಅಕ್ರಮಗಳನ್ನು ಪ್ರಶ್ನಿಸುವವರ ಮೇಲೆ ಬೆದರಿಕೆ ಒಡ್ಡಲಾಗುತ್ತದೆ. ಈ ಹಿಂದೆಯೂ 7-8 ಜನರ ಮೇಲೆ ಇದೇ ರೀತಿಯ ದಾಳಿಗಳನ್ನು ಮಾಡಲಾಗಿದೆ. ಕೇಸುಗಳಾಗುತ್ತವೆ ಹೊರತು ಯಾವುದೇ ಕ್ರಮಗಳಾಗುವುದಿಲ್ಲ. ತಮ್ಮ ರಾಜಕೀಯ ಪ್ರಭಾವ ಬಳಸಿ ಅಧಿಕಾರಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ. ಜನರ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಮತ್ತೊಬ್ಬ ಪತ್ರಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತನಿಖೆ ಯಾವ ಹಂತದಲ್ಲಿದೆ ಎಂದು ಪ್ರಶ್ನಿಸಲು ಲಕ್ಕವಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಘುನಾಥ್ ರವರನ್ನು ಸಂಪರ್ಕಿಸಿದಾಗ “ದೂರು ದಾಖಲಾದಾಗ ನಾವು ರತ್ನಪ್ರಭರವರ ವಾಹನವನ್ನು ಮುಟ್ಟುಹೋಲು ಹಾಕಿಕೊಂಡು ಮಹಜರು ನಡೆಸಿದ್ದೇವೆ. ಈ ವಿಚಾರದಲ್ಲಿ ತನಿಖೆ ನಡೆಸುತ್ತಿದ್ದೇವೆ. ಚಾರ್ಜ್ ಶೀಟ್ ಸಲ್ಲಿಸಲು ಇನ್ನು ಎರಡು ತಿಂಗಳ ಸಮಯವಿರುವುದರಿಂದ ನಾವು ಯಾವ ಮಾಹಿತಿಗಳನ್ನು ನೀಡಲಾಗುವುದಿಲ್ಲ” ಎಂದರು.

ಈ ಕುರಿತು ಪ್ರಕರಣದ ಆರೋಪಿಯಾಗಿರುವ ಎಸಿಎಫ್ ರತ್ನಪ್ರಭರವರ ಪ್ರತಿಕ್ರಿಯೆ ಪಡೆಯಲು ನಾನುಗೌರಿ.ಕಾಂ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿತು. ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಸಂಪರ್ಕಕ್ಕೆ ಬಂದ ನಂತರ ವರದಿಯನ್ನು ಅಪ್‌ಡೇಟ್‌ ಮಾಡಲಾಗುತ್ತದೆ.

ಇನ್ನು ಇದೇ ಲಕ್ಕವಳ್ಳಿಯಲ್ಲಿ ಅರಣ್ಯ ಹಾಗೂ ಕಂದಾಯ ಅಧಿಕಾರಿಗಳು ನಮಗೆ ಉಳುಮೆ ಮಾಡಲು ಬಿಡುತ್ತಿಲ್ಲ ಎಂದು ರೈತನೋರ್ವ ಅರಣ್ಯ ಇಲಾಖೆ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸಹ ನಡೆದಿದೆ. ಆದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.

ಒಟ್ಟಿನಲ್ಲಿ ತಮ್ಮೂರಿನಲ್ಲಿ ತಮ್ಮ ಕಣ್ಣೆದುರಿಗೆ ನಡೆಯುತ್ತಿರುವ ಭ್ರಷ್ಟಾಚಾರ ವಿರೋಧಿಸುವ ಸ್ಥಳೀಯ ಪತ್ರಕರ್ತರ ಮೇಲೆ ದಾಳಿಯಾಗುತ್ತದೆ. ದೂರು ನೀಡಿದರೂ ಪೊಲೀಸರು ಯಾವ ಕ್ರಮ ತೆಗೆದುಕೊಳ್ಳದೇ ವಿಳಂಬ ಮಾಡುತ್ತಾರೆ. ಅಲ್ಲದೇ ಅವರ ವಿರುದ್ಧವೇ ಪ್ರತಿ ದೂರು ಸಹ ದಾಖಲಾಗುತ್ತದೆ. ಅಭಯಾರಣ್ಯದಲ್ಲಿ ಮೋಜುಮಸ್ತಿ, ಭ್ರಷ್ಟಾಚಾರ ಎಗ್ಗಿಲ್ಲದೇ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಯಾವ ಕ್ರಮ ತೆಗೆದುಕೊಳ್ಳದೇ ಕೈಕಟ್ಟಿ ಕುಳಿತಿದೆ. ಅರಣ್ಯನಾಶ, ಪ್ರಾಣಿಗಳ ನಾಶ ಅವ್ಯಾಹತವಾಗಿ ಮುಂದುವರೆಯುತ್ತಲೇ ಇದೆ. ಇದೆಲ್ಲಾ ಕೊನೆಗೊಳ್ಳುವುದು ಯಾವಾಗ? ಹೇಗೆ ಎಂಬ ಪ್ರಶ್ನೆಗಳು ಮಾತ್ರ ಹಾಗೆಯೇ ಉಳಿದುಕೊಳ್ಳುತ್ತವೆ.


ಇದನ್ನೂ ಓದಿ: ಅಕ್ಕಿಬೇಳೆಯಿಂದ ಪಿಪಿಇ ಕಿಟ್‌ವರೆಗೂ ಭ್ರಷ್ಟಾಚಾರ ನಡೆಯುತ್ತಿದೆ: ರವಿಕೃಷ್ಣಾರೆಡ್ಡಿ ಸಂದರ್ಶನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...