ಗುರುವಾರ ಸಂಜೆ ಸುಮಾರು ಎರಡು ಗಂಟೆ ಸುರಿದ ಧಾರಾಕಾರ ಮಳೆಯಿಂದಾಗಿ ಹೈದರಾಬಾದ್ ನಗರದ ಹಲವೆಡೆ ಪ್ರವಾಹ ಭೀತಿ ಉಂಟಾಗಿದೆ. ಸಾರ್ವಜನಿಕರು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋಗಳನ್ನು ಹಂಚಿಕೊಂಡಿದ್ದು, ಮಳೆಯ ತೀವ್ರತೆ ಆತಂಕ ಉಂಟುಮಾಡಿದೆ.
ಹೈದರಾಬಾದ್‌ನ ಯೂಸುಫ್‌ಗುಡ, ಕೃಷ್ಣನಗರ ಸೇರಿದಂತೆ ಹಲವೆಡೆ ರಸ್ತೆ ಬದಿಯ ತರಕಾರಿ ಬಂಡಿಗಳು, ದ್ವಿಚಕ್ರ ವಾಹನಗಳು ಮುಳುಗಿದ್ದವು. ಸೋಮಾಜಿಗುಡ, ಕಾಚಿಗುಡ, ಶೈಕ್‌ಪೇಟೆ ಮೊದಲಾದೆಡೆ ವಾಹನ ಸವಾರರು ಪರದಾಡುವಂತಾಯಿತು ಎಂದು ತೆಲಂಗಾಣ ಟುಡೇ ವರದಿ ಮಾಡಿದೆ.
I request Hyderabadis to stay safe at home in heavy rains ?#rains #hyderabad #hyderabadi @INCTelangana @revanth_anumula @RahulGandhi @priyankagandhi pic.twitter.com/YDDya75PFj
— Danasari Anasuya (Seethakka) (@seethakkaMLA) September 2, 2021
Heavy Rain Logged on Roads and Lanes, At Krishna Nagar, Yousufguda Division, Jubileehills,Hyderabad pic.twitter.com/qWC9s43Wyg
— K. N. Hari (@KNHari9) September 2, 2021
Heavy Rain???❄️@Srikrishnanagar #Hyderabad pic.twitter.com/LsiHnjp5Bx
— Bharathjainjain@gmai (@Bharath540) September 2, 2021
ಷೈಕ್‌ಪೇಟೆಯಲ್ಲಿ 10 ಸೆಂ.ಮೀ.ಗಿಂತ ಹೆಚ್ಚು ಮಳೆಯಾಗಿದೆ ಎಂದು ಗುರುವಾರ ರಾತ್ರಿ 10 ಗಂಟೆಗೆ ಬಂದ ಹವಾಮಾನ ವರದಿ ತಿಳಿಸಿದೆ. ಹಾಗೆಯೇ ಬಾಲನಗರ, ಸರೂರ್‌ನಗರ, ಸೆರಿಲಿಂಗಪಲ್ಲಿ ಪ್ರದೇಶದಲ್ಲಿ ೮ ಸೆಂ.ಮೀ.ಗಿಂತ ಹೆಚ್ಚಿನ ಮಳೆಯಾಗಿದೆ ಎನ್ನಲಾಗಿದೆ. ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದಾಗಿ ಇನ್ನೂ ಕೆಲವು ದಿನಗಳು ಸಣ್ಣಮಟ್ಟದ ಮಳೆ ಮುಂದುವರಿಯಲಿದೆ ಎಂದು ಹೈದರಾಬಾದ್‌ನಲ್ಲಿನ ಇಂಡಿಯಾ ಮೆಟ್ರೊಲಾಜಿಕಲ್ ಡಿಪಾರ್ಟ್ಮೆಂಟ್ ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.


