ಶನಿವಾರದಿಂದ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದ್ದು ಬೆಂಗಳೂರು-ಮೈಸೂರು ಹೆದ್ದಾರಿ ಜಲಾವೃತಗೊಂಡಿದೆ. ಸೋಮವಾರ ಬೆಳಿಗ್ಗೆ ಕೂಡಾ ಮಳೆ ಸುರಿದ್ದು, ಇದರಿಂದಾಗಿ ಹೆದ್ದಾರಿಯ ಕೆಂಗೇರಿ-ವಂಡರ್ ಲಾ ನಡುವಿನ ಸಂಚಾರಕ್ಕೆ ತೊಂದರೆಯಾಗಿದೆ. ರಾಮನಗರದಲ್ಲೂ ಭಾರಿ ಮಳೆಯಾಗಿದ್ದು, ಸುಮಾರು 20 ವರ್ಷಗಳ ನಂತರ ಕಣ್ವ ಅಣೆಕಟ್ಟು ತುಂಬಿದೆ ಎಂದು ವರದಿಯಾಗಿದೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಿಂತಿರುವ ನೀರಿನಿಂದಾಗಿ ಸಂಚಾರ ಅಸ್ತವ್ಯಸ್ಥವಾಗಿದ್ದು ಬಿಡದಿ ರೈಲ್ವೇ ನಿಲ್ದಾಣದ ರೈಲ್ವೇ ಹಳಿಗಳು ನೀರಿನಿಂದ ಆವೃತವಾಗಿದೆ. ನಿರ್ಮಾಣ ಹಂತದಲ್ಲಿರುವ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ನೀರು ತುಂಬಿಕೊಂಡಿದ್ದು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚನ್ನಪಟ್ಟಣದಲ್ಲಿ ಸಿಲುಕಿಕೊಂಡಿರುವುದಾಗಿ ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ರಾಮನಗರ ಜಿಲ್ಲಾ ಪೊಲೀಸರು ಮುಂದಿನ ಮೂರು ದಿನಗಳು ಬದಲಿ ರಸ್ತೆಯ ಮೂಲಕ ಚಲಿಸುಂತೆ ಶನಿವಾರ ಪ್ರಯಾಣಿಕರಿಗೆ ಸೂಚನೆ ನೀಡಿದ್ದರು. “ಜಿಲ್ಲೆಯ ಹಲವು ಕೆರೆ ಕಟ್ಟೆಗಳು ತುಂಬಿದ ಪರಿಣಾಮವಾಗಿ ಕೆರೆಯ ಕೋಡಿಗಳು ಹರಿದು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನರಿನ ಪ್ರವಾಹ ಉಂಟಾಗಿ ರಸ್ತೆ ದುರಸ್ತಿಗೊಂಡಿದೆ. ಹೀಗಾಗಿ ಮುಂದಿನ ಮೂರು ದಿನಗಳು ಬೆಂಗಳೂರು- ಮೈಸೂರು ಮಾರ್ಗವಾಗಿ ಪ್ರಯಾಣಿಸುವ ಪ್ರಯಾಣಿಕರು ಬೆಂಗಳೂರು-ಕನಕಪುರ- ಮೈಸೂರು ಮಾರ್ಗವಾಗಿ ಅಥವಾ ಬೆಂಗಳೂರು – ಕುಣಿಗಲ್ – ಮೈಸೂರು ಮಾರ್ಗವಾಗಿ ಪ್ರಯಾಣಿಸಬೇಕು” ಎಂದು ಜಿಲ್ಲಾ ಪೊಲೀಸರು ವಿನಂತಿಸಿಕೊಂಡಿದ್ದರು.

ಈ ನಡುವೆ ರಾಮನಗರಲ್ಲಿ ನರೆ ಪರಿಸ್ಥಿತಿ ಉಂಟಾಗಿದ್ದು ಕಣ್ವಾ ಅಣಕಟ್ಟು 20 ವರ್ಷಗಳ ನಂತರ ತುಂಬಿದೆ ಎಂದು ಪತ್ರಕರ್ತರು ವರದಿ ಮಾಡಿದ್ದಾರೆ. ನಿರ್ಮಾಣ ಹಂತದಲ್ಲಿರುವ ಹೆದ್ದಾರಿಯಲ್ಲಿ ನೆರೆ ಉಂಟಾಗಿದ್ದು ವಾಹನಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗವು ದೃಶ್ಯವೂ ವೈರಲ್ ಆಗಿದೆ.
* Ramanagara flooded
* Kanva dam fills up after 20 years
* Under-construction B'lore-Mysuru highway in a mess
* Former CM @hd_kumaraswamy stuck on highway towards Channapatna pic.twitter.com/cYamjh1GHg— S Shyam Prasad (@ShyamSPrasad) August 29, 2022
ಇದನ್ನೂ ಓದಿ: ಮಳೆ: ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳು ತತ್ತರ
ಬಿಡದಿ ರೈಲು ನಿಲ್ದಾಣವೂ ನೀರಿನಿಂದ ಆವೃತ್ತವಾಗಿದ್ದು, “ರೈಲುಗಳನ್ನು ದೋಣಿಗಳೊಂದಿಗೆ ಬದಲಾಯಿಸಲು ಯೋಜಿಸಲಾಗುತ್ತಿದೆ” ಎಂದು ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ವ್ಯಂಗ್ಯವಾಡಿದ್ದಾರೆ. ಜೊತೆಗೆ ಅವರು ಬಿಡದಿ ರೈಲು ನಿಲ್ದಾಣದ ವಿಡಿಯೊವನ್ನು ಕೂಡಾ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದು ಬಿಡದಿ ರೈಲು ನಿಲ್ದಾಣ, ಪ್ರಸ್ತುತ ಅವರು ರೈಲುಗಳನ್ನು ದೋಣಿಗಳೊಂದಿಗೆ ಬದಲಾಯಿಸಲು ಯೋಜಿಸುತ್ತಿದ್ದಾರೆ !
This was the tracks in Bidadi Railway station, presently they are planning to replace trains with boats !@AAPKarnataka @AAPBangalore @Nimmabhaskar22 @MohanDasari_ @rathod_aap pic.twitter.com/xZO4645rcI— Prithvi Reddy (@aapkaprithvi) August 29, 2022
ಬೆಂಗಳೂರು-ಮೈಸೂರು ಹೆದ್ದಾರಿ ಜಲಾವೃತಗೊಂಡಿರುವ ವಿಡಿಯೊ ಕೂಡಾ ವೈರಲ್ ಆಗಿದೆ. ವಿಡಿಯೊದಲ್ಲಿ ಹಲವು ವಾಹನಗಳು ನೀರಿನಲ್ಲಿ ಮುಳುಗಿರುವುದು ಕಾಣಿಸಿಕೊಂಡಿದೆ.
ಮೈಸೂರು ಬೆಂಗಳೂರು ಹೊಸದಾಗಿ ನಿರ್ಮಾಣ ಆಗುತ್ತಿರುವ ರಸ್ತೆ…
ಈ ಕ್ಷಣದ ಪರಿಸ್ಥಿತಿ…. pic.twitter.com/QqpYqcqrgb— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) August 29, 2022
ಮಳೆಯಿಂದಾಗಿ ಬೆಂಗಳೂರು ನಗರದ ಒಳಗಡೆಯು ಜನ ಜೀವನ ಅಸ್ತವ್ಯಸ್ತಗೊಂಡಿದೆ. ನಗರದ ಲಾಲ್ಬಾಗ್, ಸೌಂತ್ ಎಂಡ್ ಸರ್ಕಲ್, ಜೆ.ಸಿ.ರಸ್ತೆ, ಜಯನಗರ, ಶಾಂತಿನಗರ ಸುತ್ತಮುತ್ತ ಹೆಚ್ಚಿನ ಮಳೆಯಾಗಿದೆ ಎಂದು ವರದಿಯಾಗಿದ್ದು, ಹಲವಾರು ಕಡೆಯಲ್ಲಿ ನೀರು ಶೇಖರಣೆಗೊಂಡಿದೆ.


