Homeಮುಖಪುಟಹೆಲಿಕ್ಯಾಪ್ಟರ್ ಪತನ: ಜನರಲ್ ಬಿಪಿನ್ ರಾವತ್ ದುರ್ಮರಣ

ಹೆಲಿಕ್ಯಾಪ್ಟರ್ ಪತನ: ಜನರಲ್ ಬಿಪಿನ್ ರಾವತ್ ದುರ್ಮರಣ

ಜನರಲ್ ಬಿಪಿನ್ ರಾವತ್, ಶ್ರೀಮತಿ ಮಧುಲಿಕಾ ರಾವತ್ ಮತ್ತು ವಿಮಾನದಲ್ಲಿದ್ದ ಇತರ 11 ಜನರು ದುರದೃಷ್ಟಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ತೀವ್ರ ವಿಷಾದದೊಂದಿಗೆ ಖಚಿತಪಡಿಸಲಾಗುತ್ತಿದೆ - IAF

- Advertisement -
- Advertisement -

ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ರವರು ಸೇನಾ ಹೆಲಿಕಾಪ್ಟರ್ ಪತನದಲ್ಲಿ ದುರ್ಮರಣ ಹೊಂದಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಅವರ ಪತ್ನಿ ಸೇರಿ ಒಟ್ಟು 13 ಮಂದಿ ಮರಣ ಹೊಂದಿದ್ದಾರೆ. ಒಬ್ಬರು ಮಾತ್ರ ಬದುಕುಳಿದಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

“ಜನರಲ್ ಬಿಪಿನ್ ರಾವತ್, ಶ್ರೀಮತಿ ಮಧುಲಿಕಾ ರಾವತ್ ಮತ್ತು ವಿಮಾನದಲ್ಲಿದ್ದ ಇತರ 11 ಜನರು ದುರದೃಷ್ಟಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ತೀವ್ರ ವಿಷಾದದೊಂದಿಗೆ ಖಚಿತಪಡಿಸಲಾಗುತ್ತಿದೆ” ಎಂದು ಭಾರತೀಯ ವಾಯುಪಡೆ ಟ್ವೀಟ್ ಮೂಲಕ ತಿಳಿಸಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್‌ರವರು ದೆಹಲಿಯಲ್ಲಿ ಬಿಪಿನ್ ರಾವತ್‌ರವರ ಮನೆಗೆ ತೆರಳಿ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೇರಿದಂತೆ ಅನೇಕರು ಬಿಪಿನ್ ರಾವತ್‌ರವರ ಮರಣಕ್ಕೆ ಸಾಂತ್ವಾನ ಸೂಚಿಸಿದ್ದಾರೆ.

ಜನರಲ್ ಬಿಪಿನ್ ರಾವತ್ ಒಬ್ಬ ಅತ್ಯುತ್ತಮ ಸೈನಿಕ. ನಿಜವಾದ ದೇಶಭಕ್ತ, ಅವರು ನಮ್ಮ ಸಶಸ್ತ್ರ ಪಡೆಗಳು ಮತ್ತು ಭದ್ರತಾ ಉಪಕರಣಗಳನ್ನು ಆಧುನೀಕರಿಸುವಲ್ಲಿ ಮಹತ್ತರವಾಗಿ ಕೊಡುಗೆ ನೀಡಿದ್ದಾರೆ. ಕಾರ್ಯತಂತ್ರದ ವಿಷಯಗಳ ಬಗ್ಗೆ ಅವರ ಒಳನೋಟಗಳು ಮತ್ತು ದೃಷ್ಟಿಕೋನಗಳು ಅಸಾಧಾರಣವಾಗಿವೆ. ಅವರ ಅಗಲಿಕೆ ನನಗೆ ಅತೀವ ದುಃಖ ತಂದಿದೆ. ಓಂ ಶಾಂತಿ ಎಂದು ಪ್ರಧಾನಿ ಮೋದಿಯವರು ಸಂತಾಪ ಸೂಚಿಸಿದ್ದಾರೆ.

ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿಯವರ ಕುಟುಂಬಕ್ಕೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಇದು ಅನಿರೀಕ್ಷಿತ ದುರಂತ ಮತ್ತು ಈ ಕಷ್ಟದ ಸಮಯದಲ್ಲಿ ಅವರ ಕುಟುಂಬದೊಂದಿಗೆ ನಿಲ್ಲೋಣ. ಈ ದುರಂತದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡ ಇತರ ಎಲ್ಲರಿಗೂ ಸಹ ಸಂತಾಪಗಳು. ಈ ದುಃಖದಲ್ಲಿ ಭಾರತ ಒಗ್ಗಟ್ಟಾಗಿ ನಿಂತಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

IAFನ ಹೊಸ Mi-17 V5 ಹೆಲಿಕಾಪ್ಟರ್ ತಮಿಳುನಾಡಿನ ಸೂಲೂರು ವಾಯುನೆಲೆಯಿಂದ ವೆಲ್ಲಿಂಗ್ಟನ್‌ನಲ್ಲಿರುವ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿಗೆ ತೆರಳುವಾಗ 12.20 ರ ಸಮಯದಲ್ಲಿ ಕೂನೂರ್‌ನಲ್ಲಿ ಈ ದುರ್ಘಟನೆ ಜರುಗಿದೆ. ಕೊಯಮತ್ತೂರಿನ ಸೂಲೂರಿನ ಸೇನಾ ನೆಲೆಯಿಂದ ಸೇನಾ ಹೆಲಿಕಾಪ್ಟರ್ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ನೀಲಗಿರಿಯಲ್ಲಿ ಈ ಅಪಘಾತ ಸಂಭವಿಸಿದೆ.

ರಾವತ್ ಜೊತೆಯಲ್ಲಿ ಅವರ ಪತ್ನಿ ಮಧುಲಿಕಾ ರಾವತ್, ಅವರ ವಯಕ್ತಿಕ ಸಿಬ್ಬಂದಿ ಮತ್ತು ಇತರ ಅಧಿಕಾರಿಗಳು 09 ಜನರು ಸೇರಿ ಒಟ್ಟು 14 ಮಂದಿ ಇದ್ದರು.

ಅಪಘಾತದ ಘಟನೆಯ ನಂತರ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಪಘಾತದ ಕಾರಣವನ್ನು ಕಂಡುಹಿಡಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ಐಎಎಫ್ ಟ್ವಿಟರ್‌ನಲ್ಲಿ ತಿಳಿಸಿದೆ.

63 ವರ್ಷದ ಬಿಪಿನ್ ರಾವತ್ ಪೂರ್ಣ ಮೂರು ವರ್ಷಗಳ ಅವಧಿಗೆ ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ನಂತರ ರಾವತ್ ಅವರು ಡಿಸೆಂಬರ್ 31, 2019 ರಂದು ಭಾರತದ ಮೊದಲ ಸಿಡಿಎಸ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.


ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಇದ್ದ ಹೆಲಿಕ್ಯಾಪ್ಟರ್ ಪತನ: 10 ಅಂಶಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸೊರೇನ್ ಜಾಮೀನು ಅರ್ಜಿಗೆ ಉತ್ತರಿಸಲು ಇಡಿಗೆ ಕಾಲಾವಕಾಶ ನೀಡಿದ ಕೋರ್ಟ್‌

0
ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಜಾಮೀನು ಅರ್ಜಿಗೆ ಉತ್ತರಿಸಲು ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಮಂಗಳವಾರ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಇನ್ನೂ ಒಂದು ವಾರ ಕಾಲಾವಕಾಶ ನೀಡಿದೆ. ನ್ಯಾಯಾಲಯವು ಪ್ರಕರಣದ ಮುಂದಿನ...