Homeಕರ್ನಾಟಕHijab Live | ಹಿಜಾಬ್‌ ಲೈವ್‌ | ವಿಚಾರಣೆ ಸೋಮವಾರಕ್ಕೆ ಮುಂದೂಡಿದ ಹೈಕೋರ್ಟ್‌

Hijab Live | ಹಿಜಾಬ್‌ ಲೈವ್‌ | ವಿಚಾರಣೆ ಸೋಮವಾರಕ್ಕೆ ಮುಂದೂಡಿದ ಹೈಕೋರ್ಟ್‌

ಹಿಜಾಬ್ ಕುರಿತು ಹೈಕೋರ್ಟ್‌ನ ವಿಸ್ತೃತ ನ್ಯಾಯಪೀಠದಲ್ಲಿ ಗುರುವಾರ ನಡೆದ ವಿಚಾರಣೆಯ ಸಂಕ್ಷಿಪ್ತ ವಿವರಣೆ

- Advertisement -
- Advertisement -

ಹಿಜಾಬ್‌ ಧರಿಸಿ ಕಾಲೇಜು ಪ್ರವೇಶ ಕೋರಿ ಸಲ್ಲಿಸಿದ್ದ ಉಡುಪಿ ಜಿಲ್ಲೆಯ ವಿದ್ಯಾರ್ಥಿನಿಯರ ಅರ್ಜಿಯನ್ನು ಆಲಿಸುತ್ತಿದ್ದ ಹೈಕೋರ್ಟ್‌ನ ಏಕ ಸದಸ್ಯ ಪೀಠವು ಪ್ರಕರಣವನ್ನು ವಿಸ್ತೃತ ಪೀಠಕ್ಕೆ ಬುಧವಾರ ವರ್ಗಾಯಿಸಿದ್ದು, ಗುರುವಾರ(ಇಂದು) ಮದ್ಯಾಹ್ನ 02:30 ಕ್ಕೆ ವಿಚಾರಣೆ ಪ್ರಾರಂಭವಾಗಿದೆ.

ಅರ್ಜಿದಾರ ವಿದ್ಯಾರ್ಥಿಯರ ಪರವಾಗಿ ವಾದಿಸಿದ ಹಿರಿಯ ವಕೀಲರಾದ ಸಂಜಯ್ ಹೆಗ್ಡೆ ಮತ್ತು ದೇವದತ್‌ ಕಾಮತ್‌, “ಮಧ್ಯಂತರ ಆದೇಶ” ನೀಡುವಂತೆ ನ್ಯಾಯಾಲಯವನ್ನು ಕೇಳಿದ್ದಾರೆ.


ಅಪ್‌ಡೇಟ್‌‌ 05: 15 PM

  • ತಮ್ಮ ವಾದಗಳನ್ನು ಪ್ರಾರಂಭಿಸುತ್ತಾ ದೇವದತ್‌ ಕಾಮತ್: ನಾನು ಬಹಳ ಸಂಕ್ಷಿಪ್ತವಾಗಿ ಹೇಳುತ್ತೇನೆ ಮತ್ತು ನನ್ನ ವಾದಗಳು ಮಧ್ಯಂತರ ಪರಿಹಾರ ನೀಡಬೇಕು ಎಂಬುವುದಾಗಿದೆ. ಫೆ.3ರವರೆಗೆ ತಲೆಗೆ ಸ್ಕಾರ್ಫ್ ಹಾಕಿಕೊಂಡು ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿಗಳನ್ನು ತಡೆದು ನಿಲ್ಲಿಸಿ ತಲೆ ಸ್ಕಾರ್ಫ್ ತೆಗೆಯದಿದ್ದರೆ ಒಳಗೆ ಹೋಗುವಂತಿಲ್ಲ ಎಂದು ಹೇಳಿದ್ದರು.
  • ಕಾಮತ್‌: ಮೂರು ಹೈಕೋರ್ಟ್‌ಗಳು ತಮ್ಮ ತೀರ್ಪಿನಲ್ಲಿ ಹಿಜಾಬ್‌ ಧಾರಣೆ 25ನೇ ವಿಧಿಯ ಭಾಗವಲ್ಲ ಎಂದು ಹೇಳಿವೆ ಎಂದು ಉಲ್ಲೇಖಿಸಿ ಸರ್ಕಾರವು ಆದೇಶ ಮಾಡಿದೆ. ಸರ್ಕಾರದ ಆದೇಶವು ಮೇಲ್ನೋಟಕ್ಕೆ ಸೂಕ್ತವಲ್ಲ ಎಂದು ನಾನು ಸಾಬೀತುಪಡಿಸುತ್ತೇನೆ.
  • ಕಾಮತ್‌: ಸರ್ಕಾರದಲ್ಲಿ ಉಲ್ಲೇಖಿಸಿರುವ ಮೂರು ತೀರ್ಪುಗಳು ಸರ್ಕಾರದ ವಿರುದ್ಧವೇ ಇವೆ.
  • ಪೀಠ: ಸರ್ಕಾರದ ತಿಳಿವಳಿಕೆ ಆದಾಗಿಲ್ಲ.
  • ಕಾಮತ್‌: ಸರ್ಕಾರ ತಪ್ಪಾಗಿ ಅರ್ಥೈಸಿಕೊಂಡಿದೆ. ಕಾಲೇಜುಗಳು ಸರ್ಕಾರದ ಆದೇಶವನ್ನು ಪರಿಗಣಿಸಿ ಕಾಲೇಜುಗಳು ಶಿರವಸ್ತ್ರಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳುತ್ತಿವೆ. ಸರ್ಕಾರದ ಆದೇಶದಲ್ಲಿ ಅಡಿಪಾಯವೇ ಕುಸಿದಾಗ ಉಳಿದದ್ದು ನಿಲ್ಲುವುದಿಲ್ಲ.
  • ಕಾಮತ್‌: ಸರ್ಕಾರದ ಆದೇಶವು ಫಾತಿಮಾ ವರ್ಸಸ್‌ ಕೇರಳ ರಾಜ್ಯ ಪ್ರಕರಣವನ್ನು ಆಧರಿಸಿದೆ. ಇಲ್ಲಿ ಶಿಕ್ಷಣ ಸಂಸ್ಥೆಯು ಖಾಸಗಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸಂಸ್ಥೆಯಾಗಿದೆ. ಇದು ಸರ್ಕಾರಿ ಸಂಸ್ಥೆಗೆ ಸಂಬಂಧಿಸಿದ್ದಲ್ಲ. ಪ್ರತ್ಯೇಕ ಮೂಲಭೂತ ಹಕ್ಕು ಹೊಂದಿರುವ ಖಾಸಗಿ ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳಿಗೆ ಆ ತೀರ್ಪು ಸಂಬಂಧಿಸಿದ್ದಾಗಿದೆ.
  • ಸರ್ಕಾರದ ಆದೇಶದಲ್ಲಿ ಈ ತೀರ್ಪನ್ನು ಉಲ್ಲೇಖಿಸಿ ಸರ್ಕಾರ ಮಾಡಿದ ತಪ್ಪೇನು ಎಂದು ಮುಖ್ಯ ನ್ಯಾಯಮೂರ್ತಿ ಕೇಳುತ್ತಾರೆ.
  • ಮುಖ್ಯ ನ್ಯಾಯಮೂರ್ತಿ: ಸಮಾಜದ ಹಿತಾಸಕ್ತಿ ಕಾಪಾಡಲು ಅವರು ಈ ತೀರ್ಪನ್ನು ಪರಿಗಣಿಸಿದ್ದಾರೆ. ಅವರೇನು ತಪ್ಪು ಮಾಡಿದ್ದಾರೆ?
  • ಖಾಸಗಿ ಸಂಸ್ಥೆಯೊಂದರ ಹಿನ್ನೆಲೆಯಲ್ಲಿ ಈ ತೀರ್ಪು ಬಂದಿದೆ ಎಂದು ಕಾಮತ್ ಹೇಳುತ್ತಾರೆ.
  • ಮುಖ್ಯ ನ್ಯಾಯಮೂರ್ತಿ: ಖಾಸಗಿ ಸಂಸ್ಥೆಗಳೂ ಸಂವಿಧಾನದ ಅಡಿಯಲ್ಲಿವೆ. ಸಾಮಾನ್ಯ ಕಾನೂನು ಅವರಿಗೂ ಅನ್ವಯಿಸುತ್ತದೆ.
  • ಎಐಪಿಎಂಟಿ ಪ್ರಕರಣದಲ್ಲಿ ಹಿಜಾಬ್ ಅತ್ಯಗತ್ಯ ಆಚರಣೆ ಎಂದು ಕೇರಳ ಹೈಕೋರ್ಟ್‌ನ ಹಿಂದಿನ ತೀರ್ಪನ್ನು ಕಾಮತ್ ಉಲ್ಲೇಖಿಸುತ್ತಾರೆ.
  • ಕಾಮತ್: ಪವಿತ್ರ ಕುರಾನ್ ಮತ್ತು ಹದೀಸ್ ಸೇರಿದಂತೆ ಇಸ್ಲಾಮಿಕ್ ಕಾನೂನಿನ ಮೂಲಗಳ ಪ್ರಕಾರ ಹಿಜಾಬ್‌‌‌ನಿಂದ ತಲೆಯನ್ನು ಮುಚ್ಚಿಕೊಳ್ಳುವುದು ಕಡ್ಡಾಯವಾಗಿದೆ.
  • ಕಾಮತ್ ಅವರು ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾದ ಮುಂದಿನ ತೀರ್ಪನ್ನು ಉಲ್ಲೇಖಿಸುತ್ತಾ, ಈ ತೀರ್ಪು ಬಾಲಕಿಯರ ಶಾಲೆಯ ಸಂದರ್ಭದಲ್ಲಿ ನೀಡಲಾಗಿದೆ ಎಂದು ಅವರು ಹೇಳುತ್ತಾರೆ.
  • ಕಾಮತ್ ಅವರು ಸರ್ಕಾರದ ಆದೇಶದಲ್ಲಿರುವ ಮದ್ರಾಸ್ ಹೈಕೋರ್ಟ್‌ ತೀರ್ಪಿನಲ್ಲಿ ಉಲ್ಲೇಖಿಸಲಾದ ಮೂರನೇ ತೀರ್ಪನ್ನು ಉಲ್ಲೇಖಿಸುತ್ತಾ, ಇದು ಶಿಕ್ಷಕರಿಗೆ ಸಮವಸ್ತ್ರವನ್ನು ವಿಧಿಸಿದ ಪ್ರಕರಣದ ತೀರ್ಪಾಗಿದೆ. ಈ ಪ್ರಕರಣದವು 25 ನೇ ವಿಧಿಯ ಸಮಸ್ಯೆಯಲ್ಲ, ಯಾಕೆಂದರೆ ಇದು ಶಿಕ್ಷಕರಿಗೆ ಸಮವಸ್ತ್ರವನ್ನು ಸೂಚಿಸುವ ಅಧಿಕಾರದ ಸಮಸ್ಯೆಯಾಗಿದೆ ಎಂದು ಅವರು ಹೇಳುತ್ತಾರೆ.
  • ಕಾಮತ್: ಪವಿತ್ರ ಕುರಾನ್‌ನ 24:31 ನೇ ಶ್ಲೋಕವನ್ನು ಉಲ್ಲೇಖಿಸುತ್ತಾರೆ. ಸ್ಕಾರ್ಫ್‌ನ ಪ್ರಿಸ್ಕ್ರಿಪ್ಷನ್ ಅನ್ನು ಪವಿತ್ರ ಕುರಾನ್‌ನಲ್ಲಿ ನಿರ್ದಿಷ್ಟವಾಗಿ ಸೂಚಿಸಲಾಗಿದೆ ಎಂದು ಅವರು ಹೇಳುತ್ತಾರೆ.
  • ತಲೆಗೆ ಸ್ಕಾರ್ಫ್ ಧರಿಸುವುದು ಅತ್ಯಗತ್ಯ ಇಸ್ಲಾಮಿಕ್ ಆಚರಣೆ ಎಂದು ಹೇಳುವ ಅಜ್ಮಲ್ ಖಾನ್ ಪ್ರಕರಣ ಉಲ್ಲೇಖಿಸುತ್ತಾ, “ಮುಸ್ಲಿಂ ವಿದ್ವಾಂಸರ ಒಮ್ಮತದ ಅಭಿಪ್ರಾಯದಂತೆ ಪರ್ದಾ ಅನಿವಾರ್ಯವಲ್ಲ ಆದರೆ ಸ್ಕಾರ್ಫ್‌ನಿಂದ ತಲೆಯನ್ನು ಮುಚ್ಚುವುದು ಕಡ್ಡಾಯವಾಗಿದೆ” ಎಂದು ಕಾಮತ್‌ ಹೇಳಿದ್ದಾರೆ.
  • ಕಾಮತ್: ನೆರೆಯ ಹೈಕೋರ್ಟ್‌ನಿಂದ ನಾವು ಇಸ್ಲಾಮಿಕ್ ಕಾನೂನಿನ ಬಗ್ಗೆ ಅಧಿಕೃತ ನ್ಯಾಯಾಂಗ ವ್ಯಾಖ್ಯಾನವನ್ನು ಹೊಂದಿದ್ದೇವೆ.
  • ಕಾಮತ್: ಮಧ್ಯಂತರ ಪರಿಹಾರಕ್ಕಾಗಿ ನಾವು ವಿನಂತಿದ್ದೇವೆ. ವ್ಯಕ್ತಿಗಳು ತಮ್ಮ ಮೂಲಭೂತ ಹಕ್ಕುಗಳನ್ನು ಪಡೆಯುವ ಬಗ್ಗೆ ನ್ಯಾಯಾಲಯವು ಒಲವು ತೋರಲಿ.
  • ಮುಖ್ಯ ನ್ಯಾಯಮೂರ್ತಿ: ಸಂಸ್ಥೆಗಳನ್ನು ಪ್ರಾರಂಭಿಸಲು ನಾವು ಆದೇಶವನ್ನು ನೀಡುತ್ತೇವೆ ಆದರೆ ಪ್ರಕರಣ ಇನ್ನೂ ಬಾಕಿ ಇರುವುದರಿಂದ ಯಾವುದೇ ವಿದ್ಯಾರ್ಥಿಯು ಧಾರ್ಮಿಕ ಉಡುಗೆಯನ್ನು ಧರಿಸಬಾರದು.
  • ಮುಖ್ಯ ನ್ಯಾಯಮೂರ್ತಿ: ವಿಷಯ ಇತ್ಯರ್ಥವಾಗುವವರೆಗೆ, ನೀವು ಈ ಎಲ್ಲಾ ಧಾರ್ಮಿಕ ವಿಷಯಗಳನ್ನು ಧರಿಸಲು ಒತ್ತಾಯಿಸಬಾರದು.
  • ಮುಖ್ಯ ನ್ಯಾಯಮೂರ್ತಿ: ಸಮಸ್ಯೆಯನ್ನು ಆದಷ್ಟು ಬೇಗ ನಿರ್ಧರಿಸಲು ನಾವು ಸಿದ್ಧರಿದ್ದೇವೆ. ಆದರೆ ಶಾಂತಿ ಮತ್ತು ನೆಮ್ಮದಿಯನ್ನು ಪುನಃಸ್ಥಾಪಿಸಬೇಕು . ತೀರ್ಪಿನ ತನಕ, ಅನುಕೂಲಕರವಲ್ಲದ ಈ ಧಾರ್ಮಿಕ ಬಟ್ಟೆಗಳನ್ನು ಧರಿಸಲು ನೀವು ಒತ್ತಾಯಿಸಬಾರದು.
  • ಮುಖ್ಯ ನ್ಯಾಯಮೂರ್ತಿಯ ಮಾತಿಗೆ ಹಿರಿಯ ವಕೀಲ ಕಾಮತ್ ಆಕ್ಷೇಪಣೆ ಸಲ್ಲಿಸಿದ್ದಾರೆ: ಇದು ನಮ್ಮ ಹಕ್ಕುಗಳನ್ನು ಅಮಾನತುಗೊಳಿಸುವಂತೆ ಮಾಡುತ್ತದೆ. ಅದು ಅವರ ಹಕ್ಕುಗಳ ಸಂಪೂರ್ಣ ಉಲ್ಲಂಘನೆಯಾಗುತ್ತದೆ. ಆಹಾರ ಮತ್ತು ನೀರಿನ ನಡುವೆ ಆಯ್ಕೆ ಮಾಡಲು ನಮಗೆ ಹೇಳಲಾಗುತ್ತದೆ, ಆದರೆ ಇವು ಎರಡೂ ನಮಗೆ ಅತ್ಯಗತ್ಯ.
  • ಮುಖ್ಯ ನ್ಯಾಯಮೂರ್ತಿ: ಇದು ಕೆಲವೇ ದಿನಗಳ ವಿಷಯ. ದಯವಿಟ್ಟು ಸಹಕರಿಸಿ.
  • ಹೆಗ್ಡೆ: ಕೆಲವು ದಿನಗಳವರೆಗೆ ನಮ್ಮ ನಂಬಿಕೆಯನ್ನು ಅಮಾನತುಗೊಳಿಸುವಂತೆ ಕೇಳುವುದು ಸರಿಯಲ್ಲ.
  • ಪ್ರಕರಣದ ಕುರಿತು ನ್ಯಾಯಾಲಯ ತೀರ್ಮಾನ ಮಾಡುವವರೆಗೆ ಯಾವುದೇ ಧಾರ್ಮಿಕ ಸಂಕೇತ ಇರುವ ಉಡುಪು ಧರಿಸದಂತೆ ಮಧ್ಯಂತರ ಆದೇಶ ಮಾಡುವುದಾಗಿ ಹೇಳಿದ ನ್ಯಾಯಾಲಯ (ಇನ್ನೂ ಆದೇಶ ಹೊರಡಿಸಿಲ್ಲ)
  • ಮುಖ್ಯ ನ್ಯಾಯಮೂರ್ತಿ: ಸೋಮವಾರ ಮಧ್ಯಾಹ್ನ 2.30ಕ್ಕೆ ಮತ್ತೆ ಪ್ರಕರಣದ ವಿಚಾರಣೆ ನಡೆಸುತ್ತೇವೆ.
  • ಮಧ್ಯಂತರ ತಡೆಗೆ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.

ದಿನದ ವಿಚಾರಣೆ ಕೊನೆಗೊಳ್ಳುತ್ತದೆ.


ಅಪ್‌ಡೇಟ್‌‌ 04: 45 PM

  • ಮುಖ್ಯ ನ್ಯಾಯಮೂರ್ತಿ: ಕರ್ನಾಟಕ ಶಿಕ್ಷಣ ಕಾಯಿದೆಯು ಸಮವಸ್ತ್ರವನ್ನು ಸೂಚಿಸಿಲ್ಲ ಮತ್ತು ದಂಡವಿಲ್ಲ ಎಂಬ ನಿಮ್ಮ ಹೇಳಿಕೆಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ.
  • ಹೆಗಡೆ: ಸಾಂವಿಧಾನಿಕ ಸಮಸ್ಯೆಗಳನ್ನು ನಿರ್ಧರಿಸದೆ ಶಾಸನಬದ್ಧ ಪ್ರಶ್ನೆಗಳ ಆಧಾರದ ಮೇಲೆ ಪ್ರಕರಣವನ್ನು ನಿರ್ಧರಿಸಲು ಸಾಧ್ಯವಾದರೆ, ಅದನ್ನು ನಿರ್ಧರಿಸಬೇಕು ಎಂದು ನನ್ನ ಅಭಿಪ್ರಾಯ.
  • ಪೀಠ: ಆ ಹಂತ ಮೀರಿದ್ದೀವೆ. ಏಕಸದಸ್ಯ ಪೀಠವು ಈಗಾಗಲೇ ಪ್ರಕರಣವು ಸಾಂವಿಧಾನಿಕ ವಿಚಾರಗಳನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ. ಈಗ ವಿಚಾರವು ವಿಸ್ತೃತ ಪೀಠದ ಮುಂದಿದೆ.ಹೆಗಡೆ ಅವರಿಂದ ಜಿಗ್ಯಾ ಯಾದವ್‌ ವರ್ಸಸ್‌ ಸಿಬಿಎಸ್‌ಇ, ಪುಟ್ಟಸ್ವಾಮೀ ತೀರ್ಪು, ಮೇನಕಾ ಗಾಂಧಿ ಪ್ರಕರಣ ಉಲ್ಲೇಖ.
  • ಹೆಗಡೆ: ಸಾಂವಿಧಾನಿಕ ಹಕ್ಕುಗಳ ವಿಚಾರವನ್ನು ಅವರು ಅಧಿಕಾರದಲ್ಲಿ ಇರಲಿ ಅಥವಾ ಇಲ್ಲದಿರಲಿ ಅವುಗಳನ್ನು ರಾಜಕಾರಣಿಗಳು ಅಥವಾ ಸಂಸದರಿಗೆ ಬಿಡಲಾಗದು. ಅಂತಿಮವಾಗಿ ಸಂವಿಧಾನ ಎಲ್ಲಾ ಪ್ರಜೆಗಳನ್ನು ರಕ್ಷಿಸುತ್ತದೆ.
  • ಹೆಗಡೆ: ಸದರಿ ಪ್ರಕರಣದಲ್ಲಿ ಸಂಸ್ಥೆಯು ಸರ್ಕಾರದ ಕಾಲೇಜಾಗಿದೆ. ಇದು ರಾಜ್ಯ ಮತ್ತು ದೇಶದ ಎಲ್ಲಾ ನಾಗರಿಕರಿಗೆ ಸಂಬಂಧಿಸಿದ್ದಾಗಿದೆ. ನಿಮ್ಮ ನಂಬಿಕೆಯನ್ನು ತ್ಯಜಿಸಿ ಕಾಲೇಜಿಗೆ ಬರಬೇಕು ಎಂದು ನಿರ್ದಿಷ್ಟ ವಿದ್ಯಾರ್ಥಿಗಳಿಗೆ ಹೇಳಬಹುದೇ?
  • ಹಿಜಾಬ್ ಅನ್ನು ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿ ಪರಿಗಣಿಸಿರುವ ಕೇರಳ ಹೈಕೋರ್ಟ್ ತೀರ್ಪನ್ನು ಹೆಗ್ಡೆ ಅವರು ಉಲ್ಲೇಖಿಸುತ್ತಾರೆ. ಜೊತೆಗೆ ಶಾಲೆಯೊಂದರಲ್ಲಿ ತಲೆಗೆ ಸ್ಕಾರ್ಫ್‌ಗೆ ಅವಕಾಶ ನಿರಾಕರಿಸಿದ ಕೇರಳ ಹೈಕೋರ್ಟ್‌ನ ಎರಡನೇ ತೀರ್ಪನ್ನು ಉಲ್ಲೇಖಿಸಿದ ಹೆಗ್ಡೆ, ಇದು ಖಾಸಗಿ ಅಲ್ಪಸಂಖ್ಯಾತ ಸಂಸ್ಥೆಯಾಗಿತ್ತು ಎಂದು ಹೆಗ್ಡೆ ಹೇಳುತ್ತಾರೆ.
  • ಹೆಗಡೆ: ಸದರಿ ಪ್ರಕರಣದಲ್ಲಿ ಸಂಸ್ಥೆಯು ಸರ್ಕಾರದ ಕಾಲೇಜಾಗಿದೆ. ಇದು ರಾಜ್ಯ ಮತ್ತು ದೇಶದ ಎಲ್ಲಾ ನಾಗರಿಕರಿಗೆ ಸಂಬಂಧಿಸಿದ್ದಾಗಿದೆ. ನಿಮ್ಮ ನಂಬಿಕೆಯನ್ನು ತ್ಯಜಿಸಿ ಕಾಲೇಜಿಗೆ ಬರಬೇಕು ಎಂದು ನಿರ್ದಿಷ್ಟ ವಿದ್ಯಾರ್ಥಿಗಳಿಗೆ ಹೇಳಬಹುದೇ?ಕಾಲೇಜಿಗೆ ಹಾಜರಾಗಲು ನಿರಾಕರಿಸುವುದು ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ.
  • ಹೆಗ್ಡೆ: ದ್ವಿಚಕ್ರ ವಾಹನ ಸವಾರಿ ಮಾಡುವಾಗ ಟರ್ಬನ್ ಧರಿಸುವ ಸಿಖ್ಖರಿಗೆ ಹೆಲ್ಮೆಟ್‌ನ ಅವಶ್ಯಕತೆಯಿಂದ ಮೋಟಾರು ವಾಹನ ನಿಯಮಗಳು ವಿನಾಯಿತಿ ನೀಡುತ್ತವೆ. ಅಂತೆಯೇ, ಸುಪ್ರೀಂ ಕೋರ್ಟ್ ನಿಯಮಗಳಲ್ಲಿ, ಪರ್ದಧಾರಿ ಮಹಿಳೆಯರಿಗೆ ನಿಬಂಧನೆಗಳಿವೆ. ಈ ಪ್ರಕರಣದಲ್ಲಿ ಅರ್ಜಿದಾರ ವಿದ್ಯಾರ್ಥಿನಿಯರಿಗೆ 3 ತಿಂಗಳು ಕಾಲೇಜಿಗೆ ಹಾಜರಾಗುವ ಹಕ್ಕುಗಳನ್ನು ರಕ್ಷಿಸುವ ಮಧ್ಯಂತರ ಆದೇಶಗಳು ಇರಬೇಕು.
  • ಹೆಗ್ಗಡೆಯವರು ತಮ್ಮ ವಾದವನ್ನು ಮುಕ್ತಾಯಗೊಳಿಸುತ್ತಾರೆ.

ಅಪ್‌ಡೇಟ್‌‌ 04: 30 PM

  • ಹೆಗ್ಡೆ: ಈ ವಿಚಾರವನ್ನು ಕಾಲೇಜು ಅಭಿವೃದ್ಧಿ ಸಮಿತಿಗೆ (ಸಿಡಿಸಿ) ಬಿಡಬೇಕು ಎಂಬುದು ಸರಿಯಲ್ಲ. ಈ ವಿಚಾರದಲ್ಲಿ ನಾನು ಕಾಮತ್‌ ಅವರಿಗೆ ಬೆಂಬಲ ಸೂಚಿಸುತ್ತೇನೆ. ಸ್ಥಳೀಯ ಶಾಸಕರು, ಸಿಡಿಸಿಗೆ ತಮ್ಮದೇ ಆದ ಲೆಕ್ಕಾಚಾರಗಳು ಇರುತ್ತವೆ. ಇದು ಮಹಿಳೆಯ ಅಸ್ಮಿತೆ ಮತ್ತು ಘನತೆಯ ಪ್ರಶ್ನೆ.
  • ಹೆಗ್ಡೆ: ಡಾ. ಅಂಬೇಡ್ಕರ್‌ ಅವರು ಶಾಲೆಗೆ ಹೋಗಬೇಕೆಂದಾಗ ಅವರನ್ನು ಪ್ರತ್ಯೇಕವಾಗಿ ಕೂರಿಸಲಾಯಿತು. ದೇಶವು ಗಣರಾಜ್ಯವಾಗಿ ಹಲವು ವರ್ಷಗಳ ನಂತರ ಕೂಡಾ ಈ ರೀತಿಯ ಪ್ರತ್ಯೇಕತೆ ಬೇಡ. ನಮ್ಮ ರೀತಿಯ ಬೇರೆ ದೇಶ ಮತ್ತೊಂದಿಲ್ಲ. ನಮ್ಮದು ಹಲವು ರೀತಿಯ ಪ್ರಭಾವ ಮತ್ತು ಜನರನ್ನು ಒಳಗೊಂಡಿರುವ ರಾಷ್ಟ್ರ.
  • ಹೆಗ್ಡೆಯವರು ಬಿಜೊ ಇಮ್ಯಾನುಯೆಲ್ ತೀರ್ಪಿನ ಕೊನೆಯ ಪ್ಯಾರಾವನ್ನು ಉಲ್ಲೇಖಿಸುತ್ತಾ, “ನಮ್ಮ ಸಂಪ್ರದಾಯವು ಸಹಿಷ್ಣುತೆಯನ್ನು ಕಲಿಸುತ್ತದೆ, ನಮ್ಮ ತತ್ವಶಾಸ್ತ್ರವು ಸಹಿಷ್ಣುತೆಯನ್ನು ಕಲಿಸುತ್ತದೆ, ನಮ್ಮ ಸಂವಿಧಾನದಲ್ಲಿ ಸಹಿಷ್ಣುತೆ ಅಡಕಗೊಳಿಸಲಾಗಿದೆ. ನಾವು ಅದನ್ನು ದುರ್ಬಲಗೊಳಿಸಬಾರದು”
  • ಹೆಗಡೆ: ಮಧ್ಯಂತರ ಪರಿಹಾರಕ್ಕೆ ಅಡ್ವೋಕೇಟ್‌ ಜೊತೆ ಕುಳಿತು ಚರ್ಚಿಸಲು ಸಿದ್ಧ.

ಹೆಗಡೆ ಮನವಿಗೆ ಇದಕ್ಕೆ ದೇವದತ್‌ ಕಾಮತ್‌ ಬೆಂಬಲ. ವಕೀಲ ಕಾಳೀಶ್ವರಮ್‌ ರಾಜ್‌ ಅವರು ಕೂಡಾ ಮಧ್ಯಂತರ ಪರಿಹಾರಕ್ಕೆ ಒತ್ತಾಯ.


ಅಪ್‌ಡೇಟ್‌‌ 04: 15 PM

  • ಹೆಗ್ಡೆ ಅವರು ವಾದಗಳನ್ನು ಮುಂದುವರಿಸಿ: 1983 ರ ಕರ್ನಾಟಕ ಶಿಕ್ಷಣ ಕಾಯಿದೆಯಲ್ಲಿ ಸಮವಸ್ತ್ರಕ್ಕೆ ಯಾವುದೇ ನಿಬಂಧನೆಗಳಿಲ್ಲ. ನಾನು 1982 ರಿಂದ ಕರ್ನಾಟಕದಲ್ಲಿ ಪಿಯು ಕಾಲೇಜಿನಲ್ಲಿದ್ದೆ ಮತ್ತು ನಮ್ಮ ಬಳಿ ಯಾವುದೇ ಸಮವಸ್ತ್ರ ಇರಲಿಲ್ಲ. ಸಮವಸ್ತ್ರವನ್ನು ಶಾಲೆ ಪ್ರಾರಂಭಿಸಿದ್ದಾಗಿದೆ. ಕಾಲೇಜುಗಳಲ್ಲಿ ಸಮವಸ್ತ್ರವನ್ನು ತಮಿಳುನಾಡಿನ ಖಾಸಗಿ ಎಂಜಿನಿಯರಿಂಗ್‌ ಕಾಲೇಜು ಆರಂಭಿಸಿತು. ಕಾಲೇಜಿನಲ್ಲಿ ಸಮವಸ್ತ್ರ ಕಡ್ಡಾಯ ಮಾಡುವುದರಿಂದ ಫ್ಯಾಶನ್‌ ಶೋ ಮತ್ತಿತರ ಚಟುವಟಿಕೆಗಳಿಗೆ ತಡೆಯಾಗುತ್ತದೆ ಎಂಬ ನಂಬಿಕೆ ಇದೆ.
  • ಹೆಗಡೆ: ಎರಡು ರೀತಿಯ ನಿಯಮಗಳಿವೆ. ಕರ್ನಾಟಕ ಶಿಕ್ಷಣ ಸಂಸ್ಥೆಗಳ (ವರ್ಗೀಕರಣ, ಸುಧಾರಣೆ) ನಿಯಮಗಳು 1995. ನಿಯಮ 11ರ ಪ್ರಕಾರ ಸಮವಸ್ತ್ರ ಬಟ್ಟೆ, ಪಠ್ಯಪುಸಕ್ತ ಇತ್ಯಾದಿ ನಿಬಂಧನೆ. ನನ್ನ ಪ್ರಕಾರ ಇವು ಶಾಲೆಗಳಿಗೆ ಉದ್ದೇಶಿಸಲಾದ ನಿಯಮಗಳಾಗಿವೆ. ಆದ್ದರಿಂದ ನಿಯಮ 11 ರ ಈ ನಿಬಂಧನೆಯು ಪದವಿ ಪೂರ್ವ ವಿಶ್ವವಿದ್ಯಾಲಯಕ್ಕೆ ಅನ್ವಯಿಸುವುದಿಲ್ಲ ಮತ್ತು ಪ್ರಿ-ಯೂನಿವರ್ಸಿಟಿ, 2006 ರ ನಿಯಮಗಳ ಪ್ರಕಾರ ಸಮವಸ್ತ್ರಕ್ಕೆ ಅವಕಾಶವಿಲ್ಲ.
  • ಹೆಗಡೆ: ನಿಯಮ ಉಲ್ಲಂಘನೆಗೆ ದಂಡ ವಿಧಿಸಬೇಕು ಎಂದು ಹೇಳಲಾಗಿಲ್ಲ. ದಂಡ ವಿಧಿಸಬೇಕಾಗಿದ್ದರೂ ಸಹ ಮಕ್ಕಳನ್ನು ತರಗತಿಗಳಿಂದ ದೂರವಿಡುವುದು ಪ್ರಮಾಣಾನುಗುಣವಾದ ದಂಡವೇ ಎಂಬುದನ್ನು ಪೀಠ ಪರಿಶೀಲಿಸಬೇಕು.
  • ಹೆಗ್ಡೆ: ಸೆಕ್ಷನ್ 17ರ ಉಲ್ಲಂಘನೆಗಾಗಿ ವಿಸ್ತೃತ ನೆಲೆಯಲ್ಲಿ ದಂಡ ವಿಧಿಸಲಾಗುತ್ತದೆ. ರ್‍ಯಾಗಿಂಗ್‌, ಪರೀಕ್ಷೆಯಲ್ಲಿ ನಕಲು ಮಾಡುವುದು ಇತ್ಯಾದಿಗಳಿಗೆ ದಂಡವಿದೆ. ಆದರೆ, ಸಮವಸ್ತ್ರಕ್ಕೆ ಅವಕಾಶ ಇಲ್ಲದ ಕಾರಣ ಏಕರೂಪದ ವಸ್ತ್ರ ಸಂಹಿತೆ ಉಲ್ಲಂಘನೆಗೆ ದಂಡ ವಿಧಿಸಲು ಅವಕಾಶವಿಲ್ಲ.
  • ಹಿರಿಯ ವಕೀಲ ದೇವದತ್‌ ಕಾಮತ್‌: ಸರ್ಕಾರದ ಆದೇಶವನ್ನು ಆಧರಿಸಿ ರಾಜ್ಯ ಸರ್ಕಾರವು ತನ್ನ ನಿಲುವು ಸಮರ್ಥಿಸುತ್ತಿದೆ. ಮೊದಲಿಗೆ ಸರ್ಕಾರದ ಆದೇಶದ ಕುರಿತು ಪೀಠವು ವಿಚಾರಣೆ ನಡೆಸಬೇಕು.
  • ಪೀಠ(ದೇವದತ್‌ ಕಾಮತ್‌ ಅವರಿಗೆ): ಮೊದಲಿಗೆ ಹೆಗಡೆ ಅವರು ತಮ್ಮ ವಾದವನ್ನು ಪೂರ್ಣಗೊಳಿಸಲಿ. ಬಳಿಕ ನಿಮ್ಮನ್ನು ಆಲಿಸುತ್ತೇವೆ.
  • ಕಾಮತ್‌: ವಿದ್ಯಾರ್ಥಿಗಳು ತರಗತಿಯ ಹೊರಗಿದ್ದಾರೆ. ಅವರಿಗೆ ಸಮಸ್ಯೆಯಾಗಲಿದೆ. ಮೊದಲಿಗೆ ಮಧ್ಯಂತರ ಪರಿಹಾರದ ಕುರಿತು ವಿಚಾರಣೆ ನಡೆಸಲು ವಿನಂತಿ.
  • ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ: ಹಿಜಾಬ್‌ ವಿಚಾರ ಮುನ್ನೆಲೆಗೆ ಬಂದ ಬಳಿಕ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಇತ್ಯಾದಿ ಧರಿಸಿ ಕಾಲೇಜಿಗೆ ಬಂದಿದ್ದಾರೆ. ಇದಕ್ಕಾಗಿ ಕಾಲೇಜು ಮುಚ್ಚಲು ಸರ್ಕಾರ ಆದೇಶ ಮಾಡಿದೆ.
  • ಅಡ್ವೊಕೇಟ್‌ ಜನರಲ್‌: ಸಂಬಂಧಿತ ಕಾಲೇಜುಗಳು ವಿಧಿಸುವ ಸಮವಸ್ತ್ರ ನಿಯಮಕ್ಕೆ ವಿದ್ಯಾರ್ಥಿಗಳು ಬದ್ಧವಾಗಿರಬೇಕು. ಎಲ್ಲಾ ವಿದ್ಯಾರ್ಥಿಗಳು ಕಾಲೇಜಿಗೆ ಬರಬೇಕು. ತರಗತಿಗಳು ಆರಂಭವಾಗಬೇಕು. ನ್ಯಾಯಾಲಯ ಪ್ರಕರಣ ನಿರ್ಧರಿಸಲಿದೆ.
  • ಮುಖ್ಯ ನ್ಯಾಯಮೂರ್ತಿ: ಶಿಕ್ಷಣ ಸಂಸ್ಥೆಗಳು ಶೀಘ್ರವಾಗಿ ಪ್ರಾರಂಭವಾಗಬೇಕು ಮತ್ತು ಈ ಎಲ್ಲಾ ಸಮಸ್ಯೆಗಳನ್ನು ನ್ಯಾಯಾಲಯವು ನಿರ್ಧರಿಸುತ್ತದೆ ಎಂಬುದು ಪ್ರತಿಯೊಬ್ಬರ ಕಾಳಜಿಯಾಗಿದೆ. ವಿದ್ಯಾರ್ಥಿಗಳ ಶಿಕ್ಷಣ ಆರಂಭವಾಗಬೇಕು ಎಂಬುದು ನಮ್ಮ ಪ್ರಯತ್ನವಾಗಬೇಕು. ಕೋವಿಡ್ ನಂತರ ಎಲ್ಲವೂ ಮತ್ತೆ ಟ್ರ್ಯಾಕ್‌ಗೆ ಬರುತ್ತಿವೆ, ಆದರೆ ಈಗ ಇದು ಸಂಭವಿಸಿದೆ ಮತ್ತು ಇದು ಉತ್ತಮ ಪರಿಸ್ಥಿತಿಯಲ್ಲ.
  • ಕಾಮತ್: ಇದು ಸಮವಸ್ತ್ರದ ಸಮಸ್ಯೆ ಅಲ್ಲ. ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿದ್ದರು. ಅವರು ಸಮವಸ್ತ್ರದ ಬಣ್ಣದ್ದೇ ಸ್ಕಾರ್ಫ್ ಧರಿಸಲು ಬಯಸಿದ್ದರು. ತಲೆಗೆ ಸ್ಕಾರ್ಫ್ ಧರಿಸುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದು ಅವರ ಧಾರ್ಮಿಕ ಸಂಸ್ಕೃತಿಯ ಭಾಗವಾಗಿದೆ. ಇದೊಂದು ಯಾರಿಗೂ ತೊಂದರರೆಯಾಗದ ಪದ್ಧತಿ.
  • ಕಾಮತ್ : ಅವರು ಅದೇ ಬಣ್ಣದ ಸ್ಕಾರ್ಫ್ ಧರಿಸಿ ಕಾಲೇಜಿಗೆ ಹೋಗುವುದನ್ನು ಮುಂದುವರಿಸಲಿ. ರಾಜ್ಯ ಬೆಂಕಿಯ ಜೊತೆ ಆಟವಾಡುತ್ತಿದೆ. ತನ್ನ ಆದೇಶದಲ್ಲಿ, ಸ್ಕಾರ್ಫ್ ಧಾರ್ಮಿಕ ಆಚರಣೆಯಲ್ಲ ಎಂದು ರಾಜ್ಯ ಸರ್ಕಾರ ಹೇಳುತ್ತದೆ ಮತ್ತು ಇದನ್ನು ನಿರ್ಧರಿಸಲು ಕಾಲೇಜು ಅಭಿವೃದ್ಧಿ ಸಮಿತಿ ವಿವೇಚನೆಗೆ ನೀಡಲಾಗಿದೆ.
  • ಕಾಮತ್: ನಮ್ಮ ಮೂಲಭೂತ ಹಕ್ಕನ್ನು ಕೆಲವು ಶಾಲಾ ಸಮಿತಿಗೆ ಒತ್ತೆಯಾಳಾಗಿ ಇಡಲಾಗಿದೆ. ಶಿರ ವಸ್ತ್ರವನ್ನು ನಿಷೇಧಿಸುವುದು 25 ನೇ ವಿಧಿಯ ಉಲ್ಲಂಘನೆಯಲ್ಲ ಎಂದು ಸರ್ಕಾರದ ಆದೇಶ ಹೇಳುತ್ತದೆ. ಸರ್ಕಾರದ ಆದೇಶ ಆದೇಶ ಯಾರಿಗೂ ತೊಂದರೆ ನೀಡುವುದಿಲ್ಲ ಎಂದು ಹೇಳುತ್ತದೆ. ಆದರೆ ಅದು ನಿಜವಲ್ಲ.
  • ಈ ವೇಳೆ ಅಡ್ವೊಕೇಟ್ ಜನರಲ್ ಅಡ್ಡಿಪಡಿಸಿದರು.
  • ಇದನ್ನು ವಿರೋಧಿಸಿದ ಕಾಮತ್‌‌: ಇದು ಬೀದಿಯಲ್ಲ. ನಾನು ಅಡ್ವೋಕೇಟ್‌ ಜನರಲ್‌ ಅವರನ್ನು ಗೌರವಿಸುತ್ತೇನೆ ಮತ್ತು ಅವರಿಂದಲೂ ಸ್ವಲ್ಪಮಟ್ಟಿನ ಗೌರವವನ್ನು ನಾನು ನಿರೀಕ್ಷಿಸುತ್ತೇನೆ. ರಾಜ್ಯದ ಅಡ್ವೊಕೇಟ್ ಜನರಲ್ ಈ ರೀತಿ ಮಾಡಬಾರದು.
  • ಆದೇಶದ ಮುಖಾಂತರ ಸರ್ಕಾರವು ಸ್ಕಾರ್ಫ್ ಧರ್ಮದ ಭಾಗವಲ್ಲ ಎಂದು ಘೋಷಣೆ ಮಾಡಿದೆ ಎಂದು ಕಾಮತ್ ಹೇಳುತ್ತಾರೆ. ಅದಕ್ಕಾಗಿಯೇ ಸರ್ಕಾರದ ಆದೇಶವನ್ನು ಪ್ರಶ್ನಿಸುವುದು ಬಹಳ ಮುಖ್ಯವಾಗಿದೆ.
  • ಮುಖ್ಯ ನ್ಯಾಯಮೂರ್ತಿ: 25 ನೇ ವಿಧಿಯ ಅಡಿಯಲ್ಲಿ ತಲೆಗೆ ಸ್ಕಾರ್ಫ್ ಧರಿಸುವುದು ಮೂಲಭೂತ ಹಕ್ಕಿನೊಳಗೆ ಬರುತ್ತದೆಯೇ ಎಂಬುವುದನ್ನು ನಿರ್ಧರಿಸಬೇಕಿದೆ. ಅದರ ಜೊತೆಗೆ ತಲೆಗೆ ಸ್ಕಾರ್ಫ್ ಧರಿಸುವುದು ಧಾರ್ಮಿಕ ಆಚರಣೆಯ ಅಗತ್ಯ ಭಾಗವೇ ಎಂಬುದನ್ನೂ ನೋಡಬೇಕಿದೆ.
  • ಕಾಮತ್‌: ಹೌದು. ಹೀಗಾಗಿ, ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಮಧ್ಯಂತರ ಪರಿಹಾರವನ್ನು ನೀಡಬೇಕು ಎಂದು ಕೇಳುತ್ತಿದ್ದೇವೆ.
  • ಮುಖ್ಯ ನ್ಯಾಯಮೂರ್ತಿ : ಅದಕ್ಕಾಗಿಯೇ ನಾವು ಸಂಜಯ ಹೆಗ್ಡೆ ಅವರನ್ನು ಮಧ್ಯಂತರ ಅಥವಾ ಅಂತಿಮವಾಗಿ ಸಲ್ಲಿಸುತ್ತೀರಾ ಎಂದು ಕೇಳಿದೆವು,
  • ಹೆಗಡೆ: ವಿದ್ಯಾರ್ಥಿಗಳು ಕಾಲೇಜಿಗೆ ಮರಳಬೇಕು ಎಂದು ಹೇಳುವುದು ಸುಲಭ. ನ್ಯಾಯಾಲಯವು ಪ್ರಕರಣವನ್ನು ನಿರ್ಧರಿಸುವವರೆಗೆ ಮಧ್ಯಮ ಮಾರ್ಗವನ್ನು ಅನುಸರಿಸುವುದು ವಿವೇಕ.
  • ಹೆಗ್ಡೆ : ಆದರೆ ತುಂಬಾ ಕಷ್ಟಕರವಾದ ಸಮಸ್ಯೆ ಇರುವ ವಿದ್ಯಾರ್ಥಿನಿಯರಿದ್ದಾರೆ. ಅವರನ್ನು ವಾಪಸ್ ಕಾಲೇಜಿಗೆ ಹೋಗಲಿ ಎಂದು ಅಡ್ವೊಕೇಟ್‌ ಹೇಳುವುದು ಸುಲಭ. ಆದರೆ ಅವರು ತಮ್ಮ ಆತ್ಮಸಾಕ್ಷಿಯನ್ನು ನಿಗ್ರಹಿಸಲು ಮತ್ತು ಶಾಲೆಗೆ ಹಿಂತಿರುಗಲು ಪ್ರಜ್ಞಾಪೂರ್ವಕ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಕೇಳಬೇಕೇ?
  • ಹೆಗಡೆ: ಉಡುಗೆ-ತೊಡುಗೆ, ಊಟ-ತಿಂಡಿ, ನಂಬಿಕೆ ಏನೇ ಇರಲಿ, ಅವರೆಲ್ಲರೂ ನಮ್ಮ ಹೆಣ್ಣು ಮಕ್ಕಳು. ಇದು ಕೇವಲ ಅಗತ್ಯ ಧಾರ್ಮಿಕ ಆಚರಣೆಯ ಬಗ್ಗೆ ಅಲ್ಲ. ಇದು ಅಗತ್ಯ ಶಿಕ್ಷಣ ಹಕ್ಕುಗಳ ಪ್ರಕರಣ.
  • ಹೆಗ್ಡೆ: ನ್ಯಾಯಾಲಯ ತೀರ್ಪು ನೀಡುವವರೆಗೆ ಮಧ್ಯಮ ಹಾದಿ ಹಿಡಿಯುವುದೇ ಜಾಣತನ. ಇದನ್ನು ಪಿಯುಸಿ ಕಾಲೇಜು ಹಂತದಲ್ಲಿಯೇ ಪರಿಹರಿಸಬಹುದು ಮತ್ತು ಬುದ್ಧಿವಂತ ಸರ್ಕಾರ ಅದನ್ನು ಪರಿಹರಿಸಬಹುದು.
  • ಹೆಗ್ಡೆ: ಇಲ್ಲಿ ಅಸ್ಮಿತೆಯ ಪ್ರಶ್ನೆಗಳು ಬಹಳ ಆಳವಾಗಿ ಬೇರೂರಿವೆ. ಕುರಾನ್‌ಗೆ ಹಲವಾರು ವ್ಯಾಖ್ಯಾನಗಳಿವೆ ಎಂದು ನಿನ್ನೆ ಅಡ್ವೊಕೇಟ್ ಜನರಲ್ ಹೇಳುವುದನ್ನು ನಾನು ಕೇಳಿದ್ದೇನೆ. ಆರ್ಟಿಕಲ್ 14 ಮತ್ತು 21 ರ ಅನೇಕ ವ್ಯಾಖ್ಯಾನಗಳು ಇರಬಹುದು ಆದರೆ ಅವು ಎಲ್ಲರಿಗೂ ಸಹಾಯಕ್ಕೆ ಬರುತ್ತವೆ.
  • ಹೆಗ್ಡೆ: ನಾನು ಬೆಂಕಿಗೆ ತುಪ್ಪ ಸುರಿಯಲು ಬಯಸುವುದಿಲ್ಲ. ಮಕ್ಕಳು ಕಾಲೇಜಿಗೆ ಹಿಂತಿರುಗುವುದು ಮತ್ತು ಶಾಂತಿ ಮರಳಿ ಮತ್ತು ವಾತಾವರಣವು ಪ್ರಶಾಂತವಾಗಲು ಅವಕಾಶ ನೀಡುವುದು ಈ ರಾಜ್ಯವು ಮಾಡಬೇಕಾದ ಮೊದಲನೆ ಕೆಲಸವಾಗಿದೆ.

ಅಪ್‌ಡೇಟ್‌‌ 03: 25 PM

  • ವಿಚಾರಣೆ ಪ್ರಾರಂಭ
  • ಉಡುಪಿ ವಿದ್ಯಾರ್ಥಿಗಳ ಪರ ಹಿರಿಯ ವಕೀಲ ಸಂಜಯ್ ಹೆಗ್ಡೆ ಹಾಗೂ ಕುಂದಾಪುರ ವಿದ್ಯಾರ್ಥಿಗಳ ಪರ ದೇವದತ್ ಕಾಮತ್ ವಾದ ಮಂಡಿಸಲಿದ್ದಾರೆ.
  • ಹಿರಿಯ ವಕೀಲ ಸಂಜಯ್‌ ಹೆಗಡೆ ಅವರಿಂದ ವಾದ ಆರಂಭ.
  • ಮುಖ್ಯನ್ಯಾಯಮೂರ್ತಿ ಅವಸ್ಥಿ: ಪ್ರಕರಣವನ್ನು ಸಂಕ್ಷಿಪ್ತವಾಗಿ ವಿವರಿಸಿ. ನಂತರ ಪ್ರಕರಣಕ್ಕೆ ಸಂಬಂಧಿಸಿದ ಪ್ರಶ್ನೆಗಳು ಮತ್ತು ವಾಸ್ತವ ಸಂಗತಿಗಳನ್ನು ತಿಳಿಸಿ.
  • ಸಂಜಯ್ ಹೆಗ್ಡೆ: ಸಮಯಕ್ಕೆ ಸರಿಯಾಗಿ ಈ ಸಣ್ಣ ಪ್ರಕರಣವನ್ನು ನಿಯಂತ್ರಿಸುವ ಬದಲು ಅದನ್ನು ನಿಯಂತ್ರಣ ತಪ್ಪಲು ಬಿಡಲಾಗಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಿಂದ ಅರ್ಜಿದಾರ ವಿದ್ಯಾರ್ಥಿನಿಯರು ತಾರತಮ್ಯ ಅನುಭವಿಸುತ್ತಿದ್ದಾರೆ. ಅವರಿಗೆ ಹಾಜರಾತಿ ನೀಡದೇ ತರಗತಿಯಿಂದ ಹೊರಗೆ ಕೂರುವಂತೆ ಮಾಡಲಾಗಿದೆ.
  • ಸಂಜಯ್ ಹೆಗ್ಡೆ: ಅರ್ಜಿದಾರರು ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಸಮವಸ್ತ್ರದ ಮೇಲೆ ನಿತ್ಯ ತಲೆಗೆ ಸ್ಕಾರ್ಫ್ ಹಾಕಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಕರು ತಮ್ಮ ತಲೆಯ ಸ್ಕಾರ್ಫ್ ಅನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ.
  • ಹೆಗ್ಡೆ: ಡಿಸೆಂಬರ್ 2021 ರಿಂದ ಅರ್ಜಿದಾರರು ತಮ್ಮ ತರಗತಿಗಳಲ್ಲಿ ತಾರತಮ್ಯವನ್ನು ಎದುರಿಸುತ್ತಿದ್ದಾರೆ ಮತ್ತು ಅವರನ್ನು ವರ್ಗದಿಂದ ಹೊರಗಿಡಲಾಯಿತು ಮತ್ತು ಅದು ಮುಂದುವರಿಯುತ್ತದೆ. ತಲೆ ಸ್ಕಾರ್ಫ್ ತಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಯ ಭಾಗವಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ.
  • ಹೆಗ್ಡೆ: ಡಿ.30 ರಂದು ವಿದ್ಯಾರ್ಥಿಗಳು ಜಿಲ್ಲಾ ಶಿಕ್ಷಣಾಧಿಕಾರಿಯನ್ನು ಸಂಪರ್ಕಿಸಿದರು. ಜನವರಿ 1, 2022 ರಂದು, ಪ್ರಾಂಶುಪಾಲರು ಕಾಲೇಜು ಅಭಿವೃದ್ದಿ ಸಮಿತಿ(ಸಿಡಿಸಿ)ಯ ಸಭೆಯನ್ನು ಕರೆದರು ಮತ್ತು ಸಿಡಿಸಿ ಅಧ್ಯಕ್ಷರು ಅರ್ಜಿದಾರರು ತಲೆಗೆ ಸ್ಕಾರ್ಫ್ ಧರಿಸಬಾರದು ಎಂದು ಘೋಷಿಸಿದರು.
  • ಹೆಗ್ಡೆ: ಈ ಸಭೆಯ ನಂತರ ಅರ್ಜಿದಾರರಿಗೆ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡದೆ ಹೊರಗೆ ಕುಳಿತುಕೊಳ್ಳುವಂತೆ ಮಾಡಲಾಗಿತ್ತು. ಭರವಸೆ ಇಲ್ಲದ ಕಾರಣ ಅರ್ಜಿದಾರರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
  • ಮುಖ್ಯ ನ್ಯಾಯಮೂರ್ತಿ: ನಮಗೆ ಸಮಸ್ಯೆ ಅರ್ಥವಾಗಿದೆ.
  • ಹೆಗ್ಡೆ: ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿ ಸಮವಸ್ತ್ರಕ್ಕೆ ಅವಕಾಶವಿಲ್ಲ.
  • ಮುಖ್ಯ ನ್ಯಾಯಮೂರ್ತಿ: ಸಮವಸ್ತ್ರಕ್ಕೆ ಯಾವುದೇ ಅವಕಾಶವಿಲ್ಲ ಎಂದು ನೀವು ಹೇಳುತ್ತೀರಾ?
  • ಮುಖ್ಯ ನ್ಯಾಯಮೂರ್ತಿ: ನಮ್ಮ ಆದೇಶವನ್ನು ಪೂರ್ಣವಾಗಿ ಓದದೆ ಪೀಠದ ಕೆಲವೇ ಕೆಲವು ಅಭಿಪ್ರಾಯಗಳನ್ನು ವರದಿ ಮಾಡದಂತೆ ಮಾಧ್ಯಮಗಳಿಗೆ ಕೋರುತ್ತೇವೆ. ಸಾಮಾಜಿಕ ಮಾಧ್ಯಮ, ವೃತ್ತಪತ್ರಿಕೆ ಅಥವಾ ಬೇರೆಲ್ಲಿಯಾದರೂ ಸರಿ. ಆದೇಶವನ್ನು ಸರಿಯಾಗಿ ಓದದೆ ದಯವಿಟ್ಟು ವರದಿ ಮಾಡಬೇಡಿ. ಅಲ್ಲೊಂದು ಇಲ್ಲೊಂದು ಕಡೆಯಿಂದ ಕೆಲವು ಅವಲೋಕನಗಳು ವರದಿಯಾದರೆ ಅದು ಬೇರೆಯದೇ ಅನಿಸಿಕೆ ಮೂಡಿಸುತ್ತದೆ.
  • ಕಾಮತ್: ನ್ಯಾಯಾಲಯದ ಈ ಮಾತುಗಳಿಗೆ ನಾವು ತುಂಬಾ ಆಭಾರಿಯಾಗಿದ್ದೇವೆ.

ಅಪ್‌ಡೇಟ್‌‌ 02: 30 PM

ಹಿಜಾಬ್‌ ಧರಿಸಿ ಕಾಲೇಜು ಪ್ರವೇಶ ಕೋರಿ ಸಲ್ಲಿಸಿದ್ದ ಉಡುಪಿ ಜಿಲ್ಲೆಯ ವಿದ್ಯಾರ್ಥಿನಿಯರ ಅರ್ಜಿಯನ್ನು ಆಲಿಸುತ್ತಿದ್ದ ಹೈಕೋರ್ಟ್‌ನ ಏಕ ಸದಸ್ಯ ಪೀಠವು ಪ್ರಕರಣವನ್ನು ವಿಸ್ತೃತ ಪೀಠಕ್ಕೆ ಬುಧವಾರ ವರ್ಗಾಯಿಸಿದೆ. ಈ ಹಿನ್ನಲೆಯಲ್ಲಿ ಹೈಕೋರ್ಟ್‌ ಪ್ರಕರಣದ ವಿಚಾರಣೆಗಾಗಿ ಮೂವರು ಸದಸ್ಯರ ಪೂರ್ಣ ಪೀಠವನ್ನು ರಚಿಸಿದ್ದು, ಗುರುವಾರ(ಇಂದು) ಮದ್ಯಾಹ್ನ 02:30 ಕ್ಕೆ ವಿಚಾರಣೆ ಪ್ರಾರಂಭವಾಗಲಿದೆ.

ಪೀಠದಲ್ಲಿ ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿಯುದ್ದೀನ್ ಅವರು ಇರಲಿದ್ದಾರೆ. ಈ ವಿಶೇಷ ಪೀಠವು ಉಡುಪಿ ವಲಯದ ಕಾಲೇಜುಗಳ 18 ಬಾಲಕಿಯರ ಪರವಾಗಿ ಒಟ್ಟು ಐದು ಅರ್ಜಿಗಳನ್ನು ವಿಚಾರಣೆ ನಡೆಸಲಿದೆ.

ಅರ್ಜಿ ವಿಚಾರಣೆಯ ಎರಡನೇ ದಿನವಾದ ಬುಧವಾರ, “ವೈಯಕ್ತಿಕ ಕಾನೂನಿನ ಕೆಲವು ಅಂಶಗಳ ಹಿನ್ನಲೆಯಲ್ಲಿ ಮೂಲಭೂತ ಪ್ರಾಮುಖ್ಯತೆಯ ಕೆಲವು ಸಾಂವಿಧಾನಿಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ” ಎಂದು ಏಕಸದಸ್ಯ ಪೀಠದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಹೇಳಿ,  ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದ್ದರು. ಜೊತೆಗೆ ವಿದ್ಯಾರ್ಥಿನಿಯರು ಮಧ್ಯಂತರ ಆದೇಶದ ಸಮಸ್ಯೆಯನ್ನು ಸಹ ವಿಸ್ತೃತ ಪೀಠವೇ ಪರಿಗಣಿಸುತ್ತದೆ ಎಂದು ಆದೇಶ ನೀಡಿದ್ದರು.

“ಅರ್ಜಿಗಳಲ್ಲಿ ಮನವಿ ಮಾಡಲಾದ ತುರ್ತುಸ್ಥಿತಿಯನ್ನು ಪರಿಗಣಿಸಿ, ತಕ್ಷಣದ ಪರಿಗಣನೆಗೆ ಮುಖ್ಯ ನ್ಯಾಯಾಧೀಶರ ಮುಂದೆ ಪತ್ರಗಳನ್ನು ಇರಿಸಲು ರಿಜಿಸ್ಟ್ರಾರ್‌ಗೆ ಸೂಚಿಸಲಾಗಿದೆ” ನ್ಯಾಯಮೂರ್ತಿ ದೀಕ್ಷಿತ್ ಆದೇಶದಲ್ಲಿ ಟಿಪ್ಪಣಿಯಲ್ಲಿ ನಿನ್ನೆ ಹೇಳಿದ್ದರು. ಜೊತೆಗೆ, ವಿಸ್ತೃತ ಪೀಠಕ್ಕೆ ಸಂಬಂಧಿಸಿದಂತೆ ಮುಖ್ಯನ್ಯಾಯಮೂರ್ತಿ ನಿರ್ಧಾರ ತೆಗೆದುಕೊಂಡ ನಂತರ ಮಧ್ಯಂತರ ಆದೇಶವನ್ನು ಪಡೆಯಲು ಅರ್ಜಿದಾರರು ಮುಕ್ತವಾಗಿದ್ದಾರೆ ಎಂದು ಅವರು ತಿಳಿಸಿದ್ದರು.


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. However all are wearing basic minimum prescribed uniform in addition that some are covering their body for protection ( mentally, culturally, religiously etc ) some how all are following uniform code. Let any one come with additional cloth over the uniform why and how it disturbed the teaching faculty.
    I suspect trivial interference for disturbances in academics it was clearly mentioned no politics or outside effects should entertaine in the school’s or college.
    It is very ridiculous we have very big problems like Casteism and unemployment and other related threatening which should be dealt very sincerely by all governing body.
    Hope diversion will not diprive the development of nation and outsider should not make use of this opertunity

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು...

ಎಸ್‌ಐಆರ್‌ನ ನಿಜವಾದ ಉದ್ದೇಶ ಎನ್‌ಆರ್‌ಸಿ : ಮಮತಾ ಬ್ಯಾನರ್ಜಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್‌) ಹಿಂದಿನ ಕೇಂದ್ರ ಸರ್ಕಾರದ ನಿಜವಾದ ಉದ್ದೇಶ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮಾಡುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ನವೆಂಬರ್...