ಗುಜರಾತ್ ಮೂಲದ ಉದ್ಯಮಿ ಅದಾನಿ ಅವರ ಸಂಸ್ಥೆಯ ಮೇಲೆ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ ಮಾಡಿರುವ ಆರೋಪವೂ ‘ಭಾರತದ ಮೇಲಿನ ವ್ಯವಸ್ಥಿತ ದಾಳಿ’ ಎಂದು ಅದಾನಿ ಗ್ರೂಪ್ ಹೇಳಿಕೆ ಬಿಡುಗಡೆ ಮಾಡಿದೆ. ಹಿಂಡೆನ್‌ಬರ್ಗ್ ಮಾಡಿರುವ ಆರೋಪವೂ, ‘ಸುಳ್ಳೆ ಹೊರತು ಬೇರೇನೂ ಅಲ್ಲ’ ಎಂದು ಅದಾನಿ ಗ್ರೂಪ್ ಬಿಡುಗಡೆ ಮಾಡಿರುವ 413 ಪುಟಗಳ ಪ್ರತಿಕ್ರಿಯೆಯಲ್ಲಿ ಹೇಳಿದೆ.
“ಇದು ಕೇವಲ ಯಾವುದೊ ಒಂದು ನಿರ್ದಿಷ್ಟ ಕಂಪನಿಯ ಮೇಲಿನ ದಾಳಿಯಲ್ಲ. ಬದಲಾಗಿ ಭಾರತೀಯ ಸಂಸ್ಥೆಗಳ ಸ್ವಾತಂತ್ರ್ಯ, ಸಮಗ್ರತೆ ಮತ್ತು ಗುಣಮಟ್ಟ ಹಾಗೂ ಭಾರತದ ಬೆಳವಣಿಗೆ ಮತ್ತು ಮಹತ್ವಾಕಾಂಕ್ಷೆಯ ಮೇಲಿನ ವ್ಯವಸ್ಥಿತ ದಾಳಿಯಾಗಿದೆ” ಎಂದು ಅದಾನಿ ಗ್ರೂಪ್ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಹಿಂಡೆನ್‌ಬರ್ಗ್ ರಿಸರ್ಚ್ ಜನವರಿ 24 ರಂದು ಬಿಡುಗಡೆ ಮಾಡಿರುವ ವರದಿಯಲ್ಲಿನ ಆರೋಪಗಳು ‘ಸುಳ್ಳೇ ಹೊರತು ಬೇರೇನೂ ಇಲ್ಲ’ ಎಂದು ಹೇಳಿರುವ ಅದಾನಿ ಗ್ರೂಪ್, “ಡಾಕ್ಯುಮೆಂಟ್ ಅನ್ನು ಆಯ್ದ ತಪ್ಪು ಮಾಹಿತಿಯ ಮೂಲಕ ದುರುದ್ದೇಶಪೂರಿತವಾಗಿ ಸಂಯೋಜನೆ ಮಾಡಲಾಲಗಿದೆ” ಎಂದು ಹೇಳಿದೆ.
ಅಷ್ಟೆ ಅಲ್ಲದೆ ಅದಾನಿ ಗ್ರೂಪ್ ಹಿಂಡೆನ್‌ಬರ್ಗ್ ಸಂಸ್ಥೆಯ ವಿಶ್ವಾಸಾರ್ಹತೆ ಮತ್ತು ನೈತಿಕತೆಯನ್ನು ಕೂಡಾ ಪ್ರಶ್ನಿಸಿದೆ. “ಹಿಂಡೆನ್‌ಬರ್ಗ್ ಈ ವರದಿಯನ್ನು ಯಾವುದೇ ಪರಹಿತಚಿಂತನೆಯ ಕಾರಣಗಳಿಗಾಗಿ ಪ್ರಕಟಿಸಿಲ್ಲ. ಹೊರತಾಗಿ ಸಂಪೂರ್ಣವಾಗಿ ಸ್ವಾರ್ಥ ಉದ್ದೇಶಗಳಿಂದ ಪ್ರಕಟಿಸಿದೆ. ಇದು ಅನ್ವಯವಾಗುವ ಸೆಕ್ಯುರಿಟೀಸ್ ಮತ್ತು ವಿದೇಶಿ ವಿನಿಮಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ” ಎಂದು ಅದಾನಿ ಹೇಳಿದೆ.
Adani Group’s detailed response to Hindenburg’s Unsubstantiated Accusationshttps://t.co/byWV8z9q6O
— Adani Group (@AdaniOnline) January 29, 2023
“ವರದಿಯು ‘ಸ್ವತಂತ್ರ’ ಅಥವಾ ‘ವಸ್ತುನಿಷ್ಠ’ ಅಥವಾ ‘ಉತ್ತಮ ಸಂಶೋಧನೆ’ ಅಲ್ಲ” ಎಂದು ಅದಾನಿ ಗ್ರೂಪ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಅದಾನಿ ಪ್ರತಿಕ್ರಿಯೆಗಳಿಗೆ ಮರು ಪ್ರತಿಕ್ರಿಯಿಸಿರುವ ಹಿಂಡನ್‌ಬರ್ಗ್,“ವಂಚನೆಯನ್ನು ರಾಷ್ಟ್ರೀಯತೆಯ ಅಡಿಯಲ್ಲಿ ಮರೆಯಾಗಿಸಲು ಸಾಧ್ಯವಿಲ್ಲ” ಎಂದು ಹೇಳಿದೆ.
Our Reply To Adani:
Fraud Cannot Be Obfuscated By Nationalism Or A Bloated Response That Ignores Every Key Allegation We Raisedhttps://t.co/ohNAX90BDf
— Hindenburg Research (@HindenburgRes) January 30, 2023
ಅದಾನಿ ಪ್ರತಿಕ್ರಿಯೆಗೆ ಹಲವಾರು ಜನರು ಆಕ್ಷೇಪ ವ್ಯಕ್ತಪಡಿಸಿದ್ದು, ಅದಾನಿ ಎಂದರೆ ಭಾರತವಲ್ಲ ಎಂದು ಹೇಳಿದ್ದಾರೆ. “ಮುಂಚೆ ಮೋದಿ ಎಂದರೆ ಭಾರತ ಎಂದು ಹೇಳುತ್ತಿದ್ದರು. ಮೋದಿ ಸರ್ಕಾರವನ್ನು ಟೀಕಿಸಿದರೆ, ದೇಶ ವಿರೋಧಿ ಎಂದು ಅವರನ್ನು ಬಂಧಿಸಿ ಜೈಲಿಗೆ ಅಟ್ಟಲಾಗುತ್ತಿತ್ತು. ಆದರೆ ಈಗ ಅದು ಬದಲಾಗಿದೆ. ಅಮೆರಿಕದ ಸಂಸ್ಥೆಯೊಂದು ಅದಾನಿ ಎಂಬ ಉದ್ಯಮಿಯ ವಂಚನೆಯನ್ನು ಬಯಲಿಗೆಳೆದರೆ, ಅದಕ್ಕೆ ಆತನೆ ಉತ್ತರ ಕೊಡಬೇಕೆ ಹೊರತು, ತನ್ನ ತಪ್ಪುಗಳನ್ನು ಭಾರತೀಯರ ತಲೆಗೆ ಹಾಕುವುದಲ್ಲ. ಅದಾನಿಯನ್ನು ಪ್ರಶ್ನಿಸಿದರೆ, ಟೀಕಿಸಿದರೆ ಅದಾನಿಯನ್ನು ಮಾತ್ರ ಟೀಕಿಸಿದಂತೆ ಹೊರತು ಭಾರತವನ್ನಲ್ಲ” ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.


