ಲಂಡನ್‌ನ ಸ್ಕೂಲ್ ಆಫ್ ಓರಿಯೆಂಟಲ್ ಮತ್ತು ಆಫ್ರಿಕನ್ ಸ್ಟಡೀಸ್‌ನ (ಎಸ್‌ಒಎಎಸ್) ವಿಶ್ವಪ್ರಸಿದ್ಧ ಹಿಂದಿ ವಿದ್ವಾಂಸೆ ಮತ್ತು ಪ್ರಾಧ್ಯಾಪಕಿ ಫ್ರಾನ್ಸೆಸ್ಕಾ ಓರ್ಸಿನಿ ಅವರನ್ನು, ಐದು ವರ್ಷಗಳ ಮಾನ್ಯ ವೀಸಾ ಹೊಂದಿದ್ದರೂ ಭಾರತಕ್ಕೆ ಪ್ರವೇಶಿಸದಂತೆ ಸೋಮವಾರ (ಅ.20) ತಡೆಯಲಾಗಿದೆ ಎಂದು ವರದಿಗಳು ಹೇಳಿವೆ.
ಭಾರತ ಪ್ರವೇಶದಂತೆ ತಡೆಯಲು ಯಾವುದೇ ಕಾರಣವನ್ನು ತಿಳಿಸಿಲ್ಲ ಎಂದು ಓರ್ಸಿನಿ ಹೇಳಿದ್ದಾರೆ.
“ಲಂಡನ್ ವಿಶ್ವವಿದ್ಯಾಲಯದ ಎಸ್‌ಒಎಎಸ್‌ನಲ್ಲಿ ಹಿಂದಿ ವಿದ್ವಾಂಸೆಯಾಗಿರುವ ಪ್ರೊಫೆಸರ್ ಫ್ರಾನ್ಸೆಸ್ಕಾ ಓರ್ಸಿನಿ ಅವರನ್ನು 5 ವರ್ಷಗಳ ಮಾನ್ಯ ಇ-ವೀಸಾ ಇದ್ದರೂ ಇಂದು ರಾತ್ರಿ ಭಾರತ ಪ್ರವೇಶಿಸದಂತೆ ತಡೆಯಲಾಗಿದೆ ಎಂದು ನಾನು ದೃಢೀಕರಿಸಬಲ್ಲೆ. ಅವರು ಹಾಂಗ್ ಕಾಂಗ್‌ನಿಂದ ದೆಹಲಿಗೆ ಆಗಮಿಸಿದ್ದರು. ಈ ವೇಳೆ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿದೆ ಎಂದು ಹಿರಿಯ ಪತ್ರಕರ್ತ ಮತ್ತು ದಿ ವೈರ್‌ನ ಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
I can confirm that Prof Francesca Orsini, scholar of Hindi at SOAS, London University, has been stopped from entering India tonight even though she has a valid 5 year e-visa. She arrived from Hong Kong in Delhi and was told she would not be allowed in. https://t.co/Zww2uwrgVh
— Siddharth (@svaradarajan) October 20, 2025
“ನನ್ನನ್ನು ಗಡಿಪಾರು ಮಾಡಲಾಗುತ್ತಿದೆ, ನನಗೆ ಗೊತ್ತಿರುವುದು ಇಷ್ಟೆ” ಎಂದು ಓರ್ಸಿನಿ ಹೇಳಿರುವುದಾಗಿ ‘ದಿ ವೈರ್’ ವರದಿ ಮಾಡಿದೆ.
ಪ್ರಸ್ತುತ ಎಸ್‌ಒಎಎಸ್‌ನ ಭಾಷೆ, ಸಂಸ್ಕೃತಿ ಮತ್ತು ಭಾಷಾಶಾಸ್ತ್ರ ಸಂಸ್ಥೆಯ ಹಿಂದಿ ಮತ್ತು ದಕ್ಷಿಣ ಏಷ್ಯಾ ಸಾಹಿತ್ಯದ ಗೌರವ ಪ್ರಾಧ್ಯಾಪಕರಾಗಿರುವ ಓರ್ಸಿನಿ, ನವದೆಹಲಿಯಲ್ಲಿ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಹಿಂದಿ ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದಾರೆ. ಓರ್ಸಿನಿ ಅವರು ಲಂಡನ್ ವಿಶ್ವವಿದ್ಯಾಲಯದ ಭಾಗವಾಗಿರುವ ಎಸ್‌ಒಎಸ್‌ನಲ್ಲಿ ತಮ್ಮ ಪಿಎಚ್‌ಡಿ ಪೂರ್ಣಗೊಳಿಸಿದ್ದಾರೆ.
‘ಈಸ್ಟ್ ಆಫ್ ದೆಹಲಿ: ಬಹುಭಾಷಾ ಸಾಹಿತ್ಯ ಸಂಸ್ಕೃತಿ ಮತ್ತು ವಿಶ್ವ ಸಾಹಿತ್ಯ’, ‘ಪ್ರಿಂಟ್ ಅಂಡ್ ಪ್ಲೆಷರ್: ವಸಾಹತುಶಾಹಿ ಉತ್ತರ ಭಾರತದಲ್ಲಿ ಜನಪ್ರಿಯ ಸಾಹಿತ್ಯ ಮತ್ತು ಮನರಂಜನಾ ಕಾದಂಬರಿಗಳು ಮತ್ತು ‘ದಿ ಹಿಂದಿ ಪಬ್ಲಿಕ್ ಸ್ಪಿಯರ್ 1920-1940: ರಾಷ್ಟ್ರೀಯತೆಯ ಯುಗದಲ್ಲಿ ಭಾಷೆ ಮತ್ತು ಸಾಹಿತ್ಯ ಓರ್ಸಿನಿ ಅವರ ಪ್ರಮುಖ ಕೃತಿಗಳಾಗಿವೆ.
“ಪ್ರೊಫೆಸರ್ ಫ್ರಾನ್ಸೆಸ್ಕಾ ಓರ್ಸಿನಿ ಭಾರತೀಯ ಸಾಹಿತ್ಯದ ಮಹಾನ್ ವಿದ್ವಾಂಸರಾಗಿದ್ದು, ಅವರ ಕೃತಿಗಳು ನಮ್ಮ ಸ್ವಂತ ಸಾಂಸ್ಕೃತಿಕ ಪರಂಪರೆಯ ಬಗ್ಗೆ ನಮ್ಮ ತಿಳುವಳಿಕೆಯನ್ನು ಸಮೃದ್ಧವಾಗಿ ಬೆಳಗಿಸಿದೆ. ಯಾವುದೇ ಕಾರಣವಿಲ್ಲದೆ ಅವರನ್ನು ಗಡಿಪಾರು ಮಾಡುವುದು ಅಸುರಕ್ಷಿತ, ಸಂಶಯಗ್ರಸ್ತ ಮತ್ತು ಮೂರ್ಖತನದ ಸರ್ಕಾರದ ಲಕ್ಷಣವಾಗಿದೆ” ಎಂದು ಲೇಖಕ ರಾಮಚಂದ್ರ ಗುಹಾ ಅವರು ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
Professor Francesca Orsini is a great scholar of Indian literature, whose work has richly illuminated our understanding of our own cultural heritage. To deport her without reason is the mark of a government that is insecure, paranoid, and even stupid.https://t.co/j5Fz1uOphS
— Ramachandra Guha (@Ram_Guha) October 21, 2025
“ಎಂತಹ ನಾಚಿಕೆಗೇಡಿನ ವಿಷಯ! ಓರ್ಸಿನಿ ಹಿಂದಿ/ಹಿಂದೂಸ್ತಾನಿ ಭಾಷೆಯ ಪ್ರಸಿದ್ಧ ವಿದ್ವಾಂಸರು; ಹಿಂದಿ ಬೆಲ್ಟ್-ಹಿಂದುತ್ವವಾದಿಗಳಿಗೆ ಒರ್ಸಿನಿಯವರ ಸಿದ್ಧಾಂತಗಳು ಮತ್ತು ಬರವಣಿಗೆಗಳು ತುಂಬಾ ಸಂಕೀರ್ಣವಾಗಿವೆಯೇ?” ಶಿಕ್ಷಣ ತಜ್ಞೆ ಅರ್ಪಿತಾ ದಾಸ್ ಪ್ರಶ್ನಿಸಿದ್ದಾರೆ.
What an absolute shame! Orsini is a legendary scholar of Hindi/Hindustani; does the Hindi belt-Hindutva lot find her theories and writings too nuanced for their banal, trashy convenience? https://t.co/XLXZ32jasn
— Arpita Das (she/her) (@arpitayodapress) October 21, 2025
ನಿಜಾಮಾಬಾದ್ ‘ಎನ್‌ಕೌಂಟರ್’ ಕುರಿತು ನ್ಯಾಯಾಂಗ ತನಿಖೆಗೆ ಮಾನವ ಹಕ್ಕುಗಳ ವೇದಿಕೆ ಒತ್ತಾಯ


