ರಾಜ್ಯದಲ್ಲಿ ಹಿಂದೂಗಳು ಸುರಕ್ಷಿತರಾಗಿದ್ದರೆ, ಮುಸ್ಲಿಮರು ಸಹ ಸುರಕ್ಷಿತವಾಗಿರಲಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ರಾಜ್ಯದಲ್ಲಿ ಎಲ್ಲಾ ಧರ್ಮದ ಜನರು ಸುರಕ್ಷಿತವಾಗಿದ್ದಾರೆ ಎಂದು ಹೇಳಿದ ಅವರು, ತಾನೊಬ್ಬ ಯೋಗಿಯಾಗಿ ನಾನು ಎಲ್ಲರ ಸಂತೋಷವನ್ನು ಬಯಸುತ್ತೇನೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಸುದ್ದಿ ಸಂಸ್ಥೆ ಎಎನ್‌ಐಯ ಪಾಡ್‌ಕಾಸ್ಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೂರು ಹಿಂದೂ ಕುಟುಂಬಗಳು ಇರುವ ಜಾಗದಲ್ಲಿ ಒಂದು ಮುಸ್ಲಿಂ ಕುಟುಂಬವು ಸುರಕ್ಷಿತವಾಗಿರುತ್ತದೆ. ಆದಾಗ್ಯೂ, ನೂರು ಮುಸ್ಲಿಂ ಕುಟುಂಬಗಳು ಇರುವಲ್ಲಿ 50 ಹಿಂದೂ ಕುಟುಂಬಗಳು ಸುರಕ್ಷಿತವಾಗಿರುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ಹಿಂದೂಗಳು ಸುರಕ್ಷಿತರಾಗಿದ್ದರೆ
ಅದಾಗ್ಯೂ, ಮುಖ್ಯಮಂತ್ರಿಯ ಈ ಹೇಳಿಕೆಗೆ ಯಾವುದೆ ಆಧಾರವಿಲ್ಲ. ಹಿಂದೂ ಬಾಹುಳ್ಯವಿರುವ ದೇಶದ ಹಲವಾರು ಭಾಗಗಳಲ್ಲಿ ಸಾವಿರಾರು ಮುಸ್ಲಿಮರ ಹತ್ಯೆಯಾಗಿರುವ ಹಲವಾರು ಉದಾಹರಣೆಗಳು ಇವೆ.
“ನೂರು ಹಿಂದೂ ಕುಟುಂಬಗಳಲ್ಲಿ ಒಂದು ಮುಸ್ಲಿಂ ಕುಟುಂಬವು ಅತ್ಯಂತ ಸುರಕ್ಷಿತವಾಗಿರುತ್ತದೆ. ಅವರು ತಮ್ಮ ಎಲ್ಲಾ ಧಾರ್ಮಿಕ ಕಾರ್ಯಗಳನ್ನು ಆಚರಿಸಲು ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಆದರೆ 100 ಮುಸ್ಲಿಂ ಕುಟುಂಬಗಳು ಇದ್ದಲ್ಲಿ 50 ಹಿಂದೂಗಳು ಸುರಕ್ಷಿತವಾಗಿರಬಹುದೇ? ಇಲ್ಲ. ಇದಕ್ಕೆ ಬಾಂಗ್ಲಾದೇಶವು ಒಂದು ಉದಾಹರಣೆಯಾಗಿದೆ.” ಎಂದು ಅವರು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಮುಸ್ಲಿಮರು ಅತ್ಯಂತ ಸುರಕ್ಷಿತರು ಎಂದು ಸಿಎಂ ಆದಿತ್ಯನಾಥ್ ಪುನರುಚ್ಚರಿಸಿದ್ದು, 2017 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕೋಮು ಗಲಭೆಗಳು ನಿಂತಿವೆ ಎಂದು ಒತ್ತಿ ಹೇಳಿದ್ದಾರೆ.
“ಉತ್ತರ ಪ್ರದೇಶದಲ್ಲಿ, ಮುಸ್ಲಿಮರು ಅತ್ಯಂತ ಸುರಕ್ಷಿತರು. ಹಿಂದೂಗಳು ಸುರಕ್ಷಿತರಾಗಿದ್ದರೆ, ಅವರು ಸಹ ಸುರಕ್ಷಿತರು. 2017 ಕ್ಕಿಂತ ಮೊದಲು ಯುಪಿಯಲ್ಲಿ ಗಲಭೆಗಳಾಗಿದ್ದರೆ, ಹಿಂದೂ ಅಂಗಡಿಗಳು ಉರಿಯುತ್ತಿದ್ದರೆ, ಮುಸ್ಲಿಂ ಅಂಗಡಿಗಳು ಸಹ ಉರಿಯುತ್ತಿದ್ದವು. ಹಿಂದೂ ಮನೆಗಳು ಉರಿಯುತ್ತಿದ್ದರೆ, ಮುಸ್ಲಿಂ ಮನೆಗಳು ಸಹ ಉರಿಯುತ್ತಿದ್ದವು. ಮತ್ತು 2017 ರ ನಂತರ, ಗಲಭೆಗಳು ನಿಂತುಹೋದವು” ಎಂದು ಅವರು ಹೇಳಿದ್ದಾರೆ.
#UttarPradesh Chief Minister #YogiAdityanath assured that people from all religions are safe in the state, asserting that as a Yogi, he wishes for everyone's happiness. Adityanath, speaking to ANI, said that if Hindus are safe, then Muslims are also safe in his state. pic.twitter.com/dNzqAaTIGG
— The New Indian Express (@NewIndianXpress) March 26, 2025
“ನಾನು ಒಬ್ಬ ಸಾಮಾನ್ಯ ನಾಗರಿಕ, ಉತ್ತರ ಪ್ರದೇಶದ ನಾಗರಿಕ. ಮತ್ತು ನಾನು ಎಲ್ಲರ ಸಂತೋಷವನ್ನು ಬಯಸುವ ಯೋಗಿ. ಎಲ್ಲರ ಬೆಂಬಲ ಮತ್ತು ಅಭಿವೃದ್ಧಿಯಲ್ಲಿ ನಾನು ನಂಬಿಕೆ ಇಡುತ್ತೇನೆ” ಎಂದು ಯುಪಿ ಸಿಎಂ ಹೇಳಿದ್ದಾರೆ. ಸನಾತನ ಧರ್ಮವನ್ನು ವಿಶ್ವದ ಅತ್ಯಂತ ಪ್ರಾಚೀನ ಧರ್ಮ ಎಂದು ಅವರು ಹೇಳಿದ ಅವರು, ಹಿಂದೂ ಆಡಳಿತಗಾರರು ತಮ್ಮ ಸ್ವಂತ ಶಕ್ತಿಯನ್ನು ಬಳಸಿಕೊಂಡು ಇತರರ ಮೇಲೆ ಪ್ರಾಬಲ್ಯ ಸಾಧಿಸಿದ ಉದಾಹರಣೆಗಳಿಲ್ಲ ಎಂದು ಪ್ರತಿಪಾದಿಸಿದ್ದಾರೆ.


