ಮನೆಗಳಲ್ಲಿ ಕೆಲಸ ಮಾಡುವ ಮಹಿಳೆಯರು ಹಾಗೂ ಸ್ವ ಉದ್ಯೋಗಿಗಳನ್ನು ಸೇರಿಸುವ ಸಲುವಾಗಿ ಉದ್ಯೋಗಗಳ ವ್ಯಾಖ್ಯಾನವನ್ನು ಪರಿಷ್ಕರಿಸಬೇಕು ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯ ಬುಧವಾರ ಸೂಚಿಸಿದ್ದಾರೆ. ಮನೆಯಲ್ಲಿ ಕೆಲಸ ಮಾಡುವ
ಉದ್ಯೋಗಿಗಳಲ್ಲಿ ಮಹಿಳೆಯರ ಕಡಿಮೆ ಭಾಗವಹಿಸುವಿಕೆಯ ಬಗ್ಗೆ ಅಂಕಿಅಂಶಗಳ ಕುರಿತು ಪ್ರತಿಕ್ರಿಯಿಸಿದ ಮಾಂಡವಿಯ, ಮಹಿಳೆಯು ಬೇರೊಬ್ಬರ ಮನೆಯಲ್ಲಿ ಕೆಲಸ ಮಾಡುವಾಗ ಮಾತ್ರ ಉದ್ಯೋಗಿ ಎಂದು ಏಕೆ ಪರಿಗಣಿಸಲಾಗುತ್ತದೆ, ತನ್ನ ಸ್ವಂತ ಮನೆಯಲ್ಲಿ ಕೆಲಸ ಮಾಡಿದಾಗ ಅವರನ್ನು ಉದ್ಯೋಗಿ ಎಂದು ಏಕೆ ಪರಿಗಣಿಸುವುದಿಲ್ಲ” ಎಂದು ಪ್ರಶ್ನಿಸಿದ್ದಾರೆ.
ಹಲವಾರು ಮಹಿಳೆಯರು ಮನೆಯಲ್ಲಿ ದನಗಳನ್ನು ನೋಡಿಕೊಳ್ಳುವ ಮೂಲಕ ಮತ್ತು ಹೊಲಗಳಲ್ಲಿ ಕೆಲಸ ಮಾಡುವ ಮೂಲಕ ಮನೆಯೊಳಗೆ ಕೆಲಸ ಮಾಡುತ್ತಾರೆ ಮತ್ತು ಆದ್ದರಿಂದ ಅವರನ್ನು ಸ್ವ ಉದ್ಯೋಗಿಗಳೆಂದು ಪರಿಗಣಿಸಬೇಕು ಎಂದು ಅವರು ವಾದಿಸಿದ್ದಾರೆ. ಉದ್ಯೋಗದ ವ್ಯಾಖ್ಯಾನವನ್ನು ಬದಲಾಯಿಸಲು ನೀತಿ ಹಸ್ತಕ್ಷೇಪದ ಅಗತ್ಯವಿದೆ ಎಂದು ಸಚಿವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಭಾರತೀಯ ಕೈಗಾರಿಕಾ ಒಕ್ಕೂಟ ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಜಂಟಿಯಾಗಿ ಆಯೋಜಿಸಿದ್ದ “ಉದ್ಯೋಗಗಳ ಭವಿಷ್ಯ-ನಾಳಿನ ಕಾರ್ಯಪಡೆಯನ್ನು ರೂಪಿಸುವುದು” ಎಂಬ ಸಮ್ಮೇಳನವನ್ನು ಉದ್ದೇಶಿಸಿ ಮಾಂಡವಿಯ ಮಾತನಾಡುತ್ತಿದ್ದರು. ಮನೆಯಲ್ಲಿ ಕೆಲಸ ಮಾಡುವ
ಡಿಸೆಂಬರ್‌ನಲ್ಲಿ ಕೂಡಾ ಅವರು ಇದೇ ರೀತಿಯ ಸಲಹೆಯನ್ನು ನೀಡಿದ್ದರು. ಸ್ವಯಂ ಉದ್ಯೋಗಿ ವ್ಯಕ್ತಿಗಳನ್ನು ಸೇರಿಸಲು “ಉದ್ಯೋಗ”ವನ್ನು ಮರು ವ್ಯಾಖ್ಯಾನಿಸುವ ಅಗತ್ಯವಿದೆ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಉದ್ಯಮದ ಅವಶ್ಯಕತೆಗಳೊಂದಿಗೆ ಜೋಡಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದರು.
“ಭಾರತದ ಯುವಕರು ಅದರ ಶಕ್ತಿಯಾಗಿದ್ದು, ನಮ್ಮ ಅವಶ್ಯಕತೆಗೆ ಅನುಗುಣವಾಗಿ ಸ್ವ ಉದ್ಯೋಗಿಗಳನ್ನು ಸಹ ಸೇರಿಸಲು ನಾವು ಉದ್ಯೋಗದ ವ್ಯಾಖ್ಯಾನವನ್ನು ಮಾರ್ಪಡಿಸಬೇಕಾಗಿದೆ” ಎಂದು ಮಾಂಡವಿಯಾ ಹೇಳಿದ್ದರು ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಇತ್ತೀಚಿನ ವರ್ಷಗಳಲ್ಲಿ ಅನೌಪಚಾರಿಕ ವಲಯದ ಕಳಪೆ ಪ್ರದರ್ಶನದಿಂದ ಲಕ್ಷಾಂತರ ಭಾರತೀಯರು ಸ್ವ-ಉದ್ಯೋಗ, ಗಿಗ್ ವಲಯದಲ್ಲಿ ಉದ್ಯೋಗಗಳ ಕಡೆಗೆ ಹೊರಳಿದ್ದಾರೆ ಅಥವಾ ಅವರು ಕೃಷಿಗೆ ಮರಳುವಂತೆ ಮಾಡಿದೆ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜುಲೈ 9 ರಂದು, ಕ್ರೆಡಿಟ್ ಮಾರುಕಟ್ಟೆ ರೇಟಿಂಗ್ ಸಂಸ್ಥೆಯಾದ ಇಂಡಿಯಾ ರೇಟಿಂಗ್ಸ್ ದೇಶದಲ್ಲಿ 63 ಲಕ್ಷ ಅನೌಪಚಾರಿಕ ವಲಯದ ಉದ್ಯಮಗಳು ಸ್ಥಗಿತಗೊಂಡಿವೆ ಎಂದು ಹೇಳಿದೆ. ಇದರ ಪರಿಣಾಮವಾಗಿ 2015-’16 ಮತ್ತು 2022-’23 ರ ಆರ್ಥಿಕ ವರ್ಷಗಳ ನಡುವೆ 1.6 ಕೋಟಿ ಉದ್ಯೋಗಗಳು ನಷ್ಟವಾಗಿವೆ ಎಂದು ವರದಿ ಹೇಳಿತ್ತು.
ಇದನ್ನೂಓದಿ: ದೆಹಲಿ ವಿಧಾನಸಭೆ ಚುನಾವಣೆ| ‘ಬಿಜೆಪಿ ವಿರುದ್ಧ ಒಗ್ಗಟ್ಟಿನ ಅಗತ್ಯವಿದೆ’ ಎಂದ ಟಿಎಂಸಿ ಅಭಿಷೇಕ್ ಬ್ಯಾನರ್ಜಿ
ದೆಹಲಿ ವಿಧಾನಸಭೆ ಚುನಾವಣೆ| ‘ಬಿಜೆಪಿ ವಿರುದ್ಧ ಒಗ್ಗಟ್ಟಿನ ಅಗತ್ಯವಿದೆ’ ಎಂದ ಟಿಎಂಸಿ ಅಭಿಷೇಕ್ ಬ್ಯಾನರ್ಜಿ


