Homeಕರ್ನಾಟಕಮುಟ್ಟಿನ ರಜೆ : ಸರ್ಕಾರದ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಹೋಟೆಲ್ ಸಂಘ

ಮುಟ್ಟಿನ ರಜೆ : ಸರ್ಕಾರದ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಹೋಟೆಲ್ ಸಂಘ

- Advertisement -
- Advertisement -

ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್‌, ಬಹುರಾಷ್ಟ್ರೀಯ ಕಂಪನಿಗಳು, ಐಟಿ ಮತ್ತು ಇತರ ಖಾಸಗಿ ಕೈಗಾರಿಕೆಗಳು ಸೇರಿ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ಮುಟ್ಟಿನ ರಜೆ ನೀಡುವ ರಾಜ್ಯ ಸರ್ಕಾರದ ಆದೇಶದ ವಿರುದ್ದ ಬೆಂಗಳೂರು ಹೋಟೆಲ್‌ಗಳ ಸಂಘ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಕೇರಳ, ಒಡಿಶಾ, ಬಿಹಾರ ಮತ್ತು ಸಿಕ್ಕಿಂ ರಾಜ್ಯಗಳ ಇರುವಂತೆ ಮಹಿಳಾ ಉದ್ಯೋಗಿಗಳಿಗೆ ವೇತನ ಸಹಿತ ಮುಟ್ಟಿನ ರಜೆ ನೀಡುವ ಆದೇಶಕ್ಕೆ 2025ರ ಅಕ್ಟೋಬರ್ 9ರಂದು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

“ನಾಡಿನ ಲಕ್ಷಾಂತರ ಹೆಣ್ಣುಮಕ್ಕಳು, ಮಹಿಳೆಯರಿಗೆ ಋತುಚಕ್ರದ ಸಂದರ್ಭದಲ್ಲಿ ಕೆಲಸದ ಸ್ಥಳದಲ್ಲಿ ಎದುರಾಗುವ ಸವಾಲುಗಳು, ಅವರು ಅನುಭವಿಸುವ ಮಾನಸಿಕ ಹಾಗೂ ದೈಹಿಕ ನೋವು, ಸಂಕಟವನ್ನು ಅರಿತು ಈ ವೇಳೆ ಅವರಿಗೆ ಮಾಸಿಕ 1 ದಿನ ವೇತನ ಸಹಿತ ರಜೆ ನೀಡುವ ತೀರ್ಮಾನವನ್ನು ಸರ್ಕಾರವು ಕೈಗೊಂಡಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನವೆಂಬರ್ 12ರಂದು ರಾಜ್ಯ ಸರ್ಕಾರವು, 1948ರ ಕಾರ್ಖಾನೆ ಕಾಯ್ದೆ, 1961ರ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯ್ದೆ, 1951ರ ಪ್ಲಾಂಟೇಶನ್ ಕಾರ್ಮಿಕ ಕಾಯ್ದೆ, 1966ರ ಬೀಡಿ ಮತ್ತು ಸಿಗಾರ್ ಕಾರ್ಮಿಕರ ಕಾಯ್ದೆ ಮತ್ತು 1961ರ ಮೋಟಾರ್ ಸಾರಿಗೆ ಕಾರ್ಮಿಕರ ಕಾಯ್ದೆಯಡಿಯಲ್ಲಿ ನಡೆಯುವ ಎಲ್ಲಾ ಸಂಸ್ಥೆಗಳಿಗೆ ಮೇಲೆ ತಿಳಿಸಿದ ನೀತಿಯನ್ನು ಅನುಸರಿಸಲು ನಿರ್ದೇಶನ ನೀಡುವ ಅಧಿಸೂಚನೆಯನ್ನು ಹೊರಡಿಸಿದೆ ಎಂದು ಹೋಟೆಲ್‌ಗಳ ಸಂಘವು ಹೇಳಿಕೆಯಲ್ಲಿ ತಿಳಿಸಿದೆ.

ಸರ್ಕಾರವು ಪಾಲುದಾರರಿಂದ ಅಭಿಪ್ರಾಯಗಳನ್ನು ಕೇಳುವ ಯಾವುದೇ ಸೂಚನೆಯನ್ನು ನೀಡಿಲ್ಲವಾದ್ದರಿಂದ, ಅಧಿಸೂಚನೆಯು ನೈಸರ್ಗಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಹೋಟೆಲ್‌ ಸಂಘವು ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದೆ. ಈ ಕಾನೂನುಗಳು (ಮೇಲೆ ಉಲ್ಲೇಖಿಸಿದ ವಿವಿಧ ಕಾಯ್ದೆಗಳು) ಸರ್ಕಾರ ಈ ರೀತಿ ರಜೆಯನ್ನು (ಮುಟ್ಟಿನ ರಜೆ) ಕಡ್ಡಾಯಗೊಳಿಸುವ ಆದೇಶವನ್ನು ಹೊರಡಿಸಲು ಅನುವು ಮಾಡಿಕೊಡುವ ನಿಬಂಧನೆಗಳನ್ನು ಹೊಂದಿಲ್ಲ. ಆದ್ದರಿಂದ ಸರ್ಕಾರ ಅಂತಹ ಕಾರ್ಯಕಾರಿ ಆದೇಶವನ್ನು ಹೊರಡಿಸಲು ಸಾಧ್ಯವಿಲ್ಲ ಎಂದು ವಾದಿಸಿದೆ.

ಈ ರೀತಿಯ ರಜೆ ನೀಡುವುದು ಉದ್ಯೋಗದಾತರ ಸ್ವತಂತ್ರ ಅಧಿಕಾರಕ್ಕೆ ಸಂಬಂಧಿಸಿದೆ. ಇದನ್ನು ಸಂಸ್ಥೆಗಳ ಮಾನವ ಸಂಪನ್ಮೂಲ ವಿಭಾಗ (ಹೆಚ್‌ಆರ್) ನಿರ್ಧರಿಸುತ್ತದೆ. ಹಾಗಾಗಿ, ಸರ್ಕಾರ ಇಂತಹ ಆಡಳಿತಾತ್ಮಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಅಲ್ಲದೆ, ಮಹಿಳೆಯರಿಗೆ ಅತ್ಯಧಿಕ ಉದ್ಯೋಗ ನೀಡುವ ಸರ್ಕಾರವೇ ತನ್ನ ಉದ್ಯೋಗಿಗಳಿಗೆ ಮಾಸಿಕ ಮುಟ್ಟಿನ ರಜೆಗಳನ್ನು ನೀಡಿಲ್ಲ. ಹೀಗಿರುವಾಗ, ಸರ್ಕಾರದ ಅಧಿಸೂಚನೆ ತಾರತಮ್ಯದಿಂದ ಕೂಡಿದೆ ಮತ್ತು ಮನಬಂದಂತೆ ಹೊರಡಿಸಿದಂತೆ ಕಾಣುತ್ತಿದೆ” ಎಂದು ಹೋಟೆಲ್‌ ಸಂಘ ಹೇಳಿದೆ.

ಈ ಅರ್ಜಿಯ ವಿಚಾರಣೆ ದಿನಾಂಕವನ್ನು ಹೈಕೋರ್ಟ್ ಇನ್ನೂ ನಿಗದಿಪಡಿಸಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೇವನಹಳ್ಳಿ| ‘ಷರತ್ತುಗಳಿಲ್ಲದೆ ಭೂಸ್ವಾಧೀನ ಕೈಬಿಡಿ..’; ಚನ್ನರಾಯಪಟ್ಟಣ ರೈತರ ಆಗ್ರಹ

ದೇವನಹಳ್ಳಿಯ 13 ಗ್ರಾಮಗಳ 1,777 ಎಕರೆ ಭೂಸ್ವಾಧೀನ ಪ್ರಕ್ರಿಯೆಗೆ ರೈತರು ಮತ್ತು ಸಂಘಟನೆಗಳ ತೀವ್ರ ಪ್ರತಿರೋಧದ ನಂತರ ಸರ್ಕಾರವು ಜುಲೈ, 15, 2025 ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭೂಸ್ವಾಧೀನವನ್ನು ಸಂಪೂರ್ಣವಾಗಿ...

ಹೈದರಾಬಾದ್| ರದ್ದಾದ ನೋಟುಗಳ ದುರುಪಯೋಗ; ಅಂಚೆ ಸಿಬ್ಬಂದಿಗೆ 2 ವರ್ಷ ಜೈಲು ಶಿಕ್ಷೆ

ನೋಟು ರದ್ದತಿಯ ಸಂದರ್ಭದಲ್ಲಿ 27.27 ಲಕ್ಷ ರೂ.ಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ವಿಶೇಷ ಸಿಬಿಐ ನ್ಯಾಯಾಲಯವು ಅಂಚೆ ಇಲಾಖೆಯ ಇಬ್ಬರು ಅಧಿಕಾರಿಗಳಿಗೆ ತಲಾ 65,000 ರೂ.ಗಳ ದಂಡದೊಂದಿಗೆ ಎರಡು ವರ್ಷಗಳ ಕಠಿಣ ಜೈಲು...

ಮಹಿಳೆ ಮತ ಚಲಾಯಿಸುವಾಗ ಮತಗಟ್ಟೆ ಪ್ರವೇಶಿಸಿದ ಶಾಸಕ : ತನಿಖೆಗೆ ಆದೇಶ

ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಮಂಗಳವಾರ (ಡಿ.2) ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಂದರ್ಭದಲ್ಲಿ ಮಹಿಳೆಯೊಬ್ಬರು ಮತ ಚಲಾಯಿಸುತ್ತಿದ್ದಾಗ ಶಿವಸೇನಾ ಶಾಸಕ ಸಂತೋಷ್ ಬಂಗಾರ್ ಮತಗಟ್ಟೆಗೆ ಪ್ರವೇಶಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದ್ದು, ಈ ಕುರಿತು ಚುನಾವಣಾ...

ಅಸ್ಸಾಂ| ಕಾರು ಸಹಿತ ಮುಳುಗುತ್ತಿದ್ದ ಏಳು ಜೀವಗಳ ರಕ್ಷಣೆ; ಮಸೀದಿ ಧ್ವನಿವರ್ಧಕದ ಮೂಲಕ ಗ್ರಾಮಸ್ಥರನ್ನು ಎಚ್ಚರಿಸಿದ ಇಮಾಮ್

ನೀರಿನಲ್ಲಿ ಮುಳುಗುತ್ತಿರುವ ವಾಹನದಲ್ಲಿ ಸಿಲುಕಿದ್ದ ಏಳು ಜನರನ್ನು ರಕ್ಷಿಸಲು ಮುಂಜಾನೆ ಮಸೀದಿ ಮೈಕ್‌ ಬಳಸಿ ಇಡೀ ಗ್ರಾಮವನ್ನು ಎಚ್ಚರಿಸಿದ ಅಸ್ಸಾಂನ ಮುಸ್ಲಿಂ ಧರ್ಮಗುರು ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಅಸ್ಸಾಂನ ಶ್ರೀಭೂಮಿ ಜಿಲ್ಲೆಯಲ್ಲಿ ಮಂಗಳವಾರ ಮುಂಜಾನೆ...

ಪ್ರತಿಪಕ್ಷಗಳ ಪ್ರತಿಭಟನೆಗೆ ಮಣಿದ ಕೇಂದ್ರ : ಡಿ.9ರಂದು ಸಂಸತ್ತಿನಲ್ಲಿ ಎಸ್‌ಐಆರ್ ಚರ್ಚೆ

ಸಂಸತ್ತಿನ ಉಭಯ ಸದನಗಳಲ್ಲಿ ಎರಡು ದಿನಗಳಿಂದ ಪ್ರತಿಪಕ್ಷಗಳು ನಡೆಸಿದ ತೀವ್ರ ಪ್ರತಿಭಟನೆಗೆ ಕೇಂದ್ರ ಸರ್ಕಾರ ಮಣಿದಿದೆ. ಡಿಸೆಂಬರ್ 9ರಂದು ಚುನಾವಣಾ ಸುಧಾರಣೆಗಳು ಎಂಬ ವಿಷಯದ ಅಡಿಯಲ್ಲಿ ಎಸ್‌ಐಆರ್ ಕುರಿತು ಚರ್ಚೆ ನಡೆಸಲು ಒಪ್ಪಿಕೊಂಡಿದೆ. ವರದಿಗಳ...

‘ಸಂಚಾರ್ ಸಾಥಿ ಆ್ಯಪ್’ ಕಡ್ಡಾಯವಲ್ಲ, ಅಳಿಸಬಹುದು: ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸ್ಪಷ್ಟನೆ  

‘ಸಂಚಾರ್ ಸಾಥಿ’ ಅಪ್ಲಿಕೇಶನ್ ಅನ್ನು ಸಕ್ರಿಯಗೊಳಿಸುವುದು ಕಡ್ಡಾಯವಲ್ಲ, ನಿಮಗೆ ಬೇಡವೆಂದಾಗ ಅದನ್ನು ಅಳಿಸಬಹುದು ಎಂದು ದೂರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಂಗಳವಾರ ಸ್ಪಷ್ಟನೆ ನೀಡಿದ್ದಾರೆ.  ನವೆಂಬರ್ 28 ರಂದು, ಟೆಲಿಕಾಂ ಇಲಾಖೆ ಭಾರತದಲ್ಲಿ...

ಉತ್ತರ ಪ್ರದೇಶ| ಊಟದ ಕೌಂಟರ್‌ನಲ್ಲಿ ‘ಬೀಫ್‌ ಕರಿ’ ಲೇಬಲ್‌’; ಮದುವೆ ಆರತಕ್ಷತೆ ಅಸ್ತವ್ಯಸ್ತ

ಉತ್ತರ ಪ್ರದೇಶದ ಅಲಿಘರ್‌ನ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಭಾನುವಾರ ರಾತ್ರಿ ನಡೆದ ವಿವಾಹದ ಆರತಕ್ಷತೆಯಲ್ಲಿ ಇಬ್ಬರು ಅತಿಥಿಗಳು, ಆಹಾರ ಕೌಂಟರ್‌ನಲ್ಲಿ ಬರೆದಿದ್ದ 'ಬೀಫ್‌ ಕರಿ' ಎಂಬ ಲೇಬಲ್‌ಗೆ ಆಕ್ಷೇಪ ವ್ಯಕ್ತಪಡಿಸಿದ ನಂತರ ಸಮಾರಂಭ...

‘ಸಂಚಾರ್ ಸಾಥಿ’ ಆ್ಯಪ್ ಕಡ್ಡಾಯ | ಕೇಂದ್ರದ ಆದೇಶ ವಿರೋಧಿಸಲು ಮುಂದಾದ ಆ್ಯಪಲ್ : ವರದಿ

ಸ್ಮಾರ್ಟ್‌ಫೋನ್ ತಯಾರಕರು ಎಲ್ಲಾ ಹೊಸ ಮೊಬೈಲ್‌ ಫೋನ್‌ಗಳಲ್ಲಿ ಸರ್ಕಾರಿ ಸ್ವಾಮ್ಯದ 'ಸಂಚಾರ್ ಸಾಥಿ' ಆ್ಯಪ್ ಪ್ರಿ ಇನ್‌ಸ್ಟಾಲ್ (Pre-Install) ಮಾಡಬೇಕು ಮತ್ತು ಬಳಕೆದಾರರು ಅದನ್ನು ಡಿಲಿಟ್ ಮಾಡದಂತೆ ನೋಡಿಕೊಳ್ಳಬೇಕು ಎಂಬ ಕೇಂದ್ರ ಸರ್ಕಾರದ...

ಬಾಂಗ್ಲಾದೇಶಿಗರು ಎಂಬ ಆರೋಪ : ಬಂಗಾಳದ ನಾಲ್ವರು ಮುಸ್ಲಿಂ ವ್ಯಾಪಾರಿಗಳಿಗೆ ಒಡಿಶಾ ತೊರೆಯಲು 72 ಗಂಟೆಗಳ ಗಡುವು

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ನಾಲ್ವರು ಮುಸ್ಲಿಂ ವ್ಯಾಪಾರಿಗಳನ್ನು ಬಾಂಗ್ಲಾದೇಶಿಯರು ಮತ್ತು ರೋಹಿಂಗ್ಯಾ ವಲಸಿಗರು ಎಂದು ಆರೋಪಿಸಿ ಒಡಿಶಾದ ನಯಾಗಢವನ್ನು ತೊರೆಯಲು 72 ಗಂಟೆಗಳ ಗಡುವು ನೀಡಲಾಗಿದೆ ಎಂದು ದಿ ಟೆಲಿಗ್ರಾಫ್ ಮಂಗಳವಾರ...

‘ನಮ್ಮಲ್ಲಿ ಭಿನ್ನಾಭಿಪ್ರಾಯಗಳಿಲ್ಲ, ಒಗ್ಗಟ್ಟಿನಿಂದ ಇದ್ದೇವೆ: ನಾನು, ಡಿ.ಕೆ. ಶಿವಕುಮಾರ್ ಸಹೋದರರಿದ್ದಂತೆ’: ಸಿಎಂ ಸಿದ್ದರಾಮಯ್ಯ

‘ನಾನು ಹಾಗೂ ಉಪಮುಖ್ಯಮಂತ್ರಿಗಳು ಸಹೋದರರಿದ್ದಂತೆ, ಒಂದೇ ಪಕ್ಷದಲ್ಲಿದ್ದು, ಒಂದೇ ಸಿದ್ಧಾಂತ ನಂಬಿಕೊಂಡಿದ್ದೇವೆ, 2028ರ ಚುನಾವಣೆಯಲ್ಲಿಯೂ ಒಟ್ಟಿಗೆ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  ಡಿಸೆಂಬರ್ 2, ಮಂಗಳವಾರ ಉಪಮುಖ್ಯಮಂತ್ರಿ...