ಉತ್ತರ ಪ್ರದೇಶದ ಶಾಮ್ಲಿಯಲ್ಲಿ ರೈತರ ಮಹಾಪಂಚಾಯತ್ ನಡೆಸದಂತೆ ಉತ್ತರ ಪ್ರದೇಶ ಸರ್ಕಾರ 144 ಸೆಕ್ಷನ್ ಹಾಕಿತ್ತು. ಏಪ್ರಿಲ್ 03ರ ವರೆಗೆ ಯಾವುದೇ ಕಾರ್ಯಕ್ರಮ ನಡೆಸದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿತ್ತು. ಆದರೆ ಅದನ್ನು ಧಿಕ್ಕರಿಸಿರುವ ಹತ್ತಾರು ಸಾವಿರ ಜನರು ಇಂದು ಶಾಮ್ಲಿಯಲ್ಲಿ ಬೃಹತ್ ಮಹಾಪಂಚಾಯತ್ ನಡೆಸುತ್ತಿದ್ದು, 30-40 ಸಾವಿರ ರೈತರು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಆರಂಭಿಸಿದ್ದಾರೆ.
ಅನುಮತಿ ನಿರಾಕರಣೆಯ ನಡುವೆಯೂ ಇಂದು ಬೆಳಿಗ್ಗೆಯಿಂದಲೇ ರೈತರು ನಿಗದಿತ ಮೈದಾನದಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇರತೊಡಗಿದ್ದಾರೆ. ಅಲ್ಲದೇ ಜಿಲ್ಲೆಯಾದ್ಯಂತ ಟ್ರ್ಯಾಕ್ಟರ್ ರ್ಯಾಲಿ ನಡೆದಿದೆ. ಇಂದು ಕಾರ್ಯಕ್ರಮಕ್ಕೆ ಆಗಮಿಸಿದ ರೈತ ಮುಖಂಡ ರಾಕೇಶ್ ಟಿಕಾಯತ್‌ರನ್ನು ರೈತರು ಹೊತ್ತುಕೊಂಡು ಹೋಗುತ್ತಿರುವ ವಿಡಿಯೋಗಳು ಎಲ್ಲೆಡೆ ವೈರಲ್ ಆಗುತ್ತಿವೆ.
ಉತ್ತರ ಪ್ರದೇಶದ ಶಾಮ್ಲಿಯಲ್ಲಿ ಬಿಜೆಪಿ ಸರ್ಕಾರದಿಂದ ಅನುಮತಿ ನಿರಾಕರಣೆಯ ನಡುವೆಯೂ ನಡೆದ ಬೃಹತ್ ಮಹಾಪಂಚಾಯತ್.. ರಾಕೇಶ್ ಟಿಕಾಯತ್‌ರನ್ನು ಹೊತ್ತುಕೊಂಡು ಹೋಗುತ್ತಿರುವ ರೈತರು#Shamli #FarmersStandingFirm
Video Courtesy: Sandeep Singh pic.twitter.com/HwBF1HoiNN
— Naanu Gauri (@naanugauri) February 5, 2021
ಉತ್ತರ ಪ್ರದೇಶದ ಶಾಮ್ಲಿ ಜಿಲ್ಲಾಡಳಿತವು ಕೊರೊನಾ ನೆಪವೊಡ್ಡಿ ಜಿಲ್ಲೆಯಲ್ಲಿ ಇಂದಿನಿಂದ ಏಪ್ರಿಲ್ 3 ರವರೆಗೆ ದೊಡ್ಡ ಸಮಾವೇಶಗಳನ್ನು ನಿಷೇಧಿಸಿದೆ. ಆದಾಗ್ಯೂ, ಭಾರತೀಯ ಕಿಸಾನ್ ಯೂನಿಯನ್, ರಾಷ್ಟ್ರೀಯ ಲೋಕ ದಳ, (ಆರ್‌ಎಲ್‌ಡಿ) ಮತ್ತು ಇತರ ಸಂಘಟನೆಗಳು ಮಹಾ ಪಂಚಾಯತ್ ನಡೆಸಿಯೇ ತೀರುವುದಾಗಿ ಸವಾಲು ಹಾಕಿವೆ.
144 reasons why I will go to Shamli tomorrow! #Section144 #KisanPanchayat https://t.co/GTu0OgnIBT
— Jayant Chaudhary (@jayantrld) February 4, 2021
ಅತ್ತ ಜಿಲ್ಲಾಡಳಿತ ಸೆಕ್ಷನ್ 144 ಹೇರುತ್ತಿದ್ದಂತೆ “ನಾಳೆ ನಾನು ಶಾಮ್ಲಿಗೆ ಹೋಗಲು 144 ಕಾರಣಗಳು!” ಆರ್‌ಎಲ್‌ಡಿ ನಾಯಕ ಜಯಂತ್ ಚೌಧರಿ ಟ್ವೀಟ್ ಮಾಡಿದ್ದಾರೆ. ಆ ಮೂಲಕ ಕಾರ್ಯಕ್ರಮ ನಡೆಸುವುದಾಗಿ ನಿನ್ನೆಯೇ ಅವರು ಸ್ಪಷ್ಟಪಡಿಸಿದ್ದರು. ಅದರಂತೆ ಇಂದು ಸಾವಿರಾರು ಜನರಿಂದ ಕಿಕ್ಕಿರಿದು ಮಹಾಪಂಚಾಯತ್ ನಡೆಯುತ್ತಿದೆ.
ಇಂದು ಮಹಾಪಂಚಾಯತ್ ಆರಂಭಕ್ಕೂ ಮುನ್ನ ನಡೆದ ರ್ಯಾಲಿಯಲ್ಲಿ ಇಂಕ್ವಿಲಾಬ್ ಜಿಂದಾಬಾದ್ ಘೋಷಣೆಗಳು ಮೊಳಗಿವೆ. ಮೋದಿ ವಿರುದ್ಧ, ಯೋಗಿ ಆದಿತ್ಯನಾಥ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮುಂದಿನ ರಿಹಾನ್ನಾ ವಿಡಿಯೋದಲ್ಲಿ ನೀವಿರುತ್ತೀರಿ: ಸ್ವರ, ತಾಪ್ಸಿ ಶ್ಲಾಘಿಸಿದ ಅಭಯ್ ಡಿಯೋಲ್


