Homeಮುಖಪುಟಹುಕ್ಕೇರಿ: ಶಿಕ್ಷಕಿಯಿಂದ ಅಸ್ಪೃಶ್ಯತೆ ಆಚರಣೆ; ಶಾಲಾ ಆವರಣದಲ್ಲಿ ಪೋಷಕರ ಪ್ರತಿಭಟನೆ

ಹುಕ್ಕೇರಿ: ಶಿಕ್ಷಕಿಯಿಂದ ಅಸ್ಪೃಶ್ಯತೆ ಆಚರಣೆ; ಶಾಲಾ ಆವರಣದಲ್ಲಿ ಪೋಷಕರ ಪ್ರತಿಭಟನೆ

ಶಿಕ್ಷಕಿಯನ್ನು ವರ್ಗಾವಣೆ ಮಾಡುವಂತೆ ಶಿಕ್ಷಣಾಧಿಕಾರಿಯ ಕಾಲಿಗೆ ಬಿದ್ದ ಪೋಷಕರು

- Advertisement -
- Advertisement -

“ಸಂವಿಧಾನದ ಭಾರತದಲ್ಲಿ ಈಗಲೂ ಅಸಮಾನತೆ, ತಾರತಮ್ಯ, ಶ್ರೇಣಿಕೃತ ವ್ಯವಸ್ಥೆ ಕಾಡುತ್ತಿದೆ. ಕೊಳಕು ಜಾತಿವ್ಯವಸ್ಥೆಯಿಂದ ಹೊರಗಡೆ ಬರಲು ಸಾಧ್ಯವಾಗಿಲ್ಲ. ಮಹಿಳೆಯರು, ಮಕ್ಕಳ ಮೇಲೆ ಅತ್ಯಾಚಾರಗಳು ನಿರಂತರವಾಗಿವೆ. ಈ ಥರದ ಸಮಾಜವನ್ನು ಬದಲಾಯಿಸಲು ಸಂವಿಧಾನ ಕಟ್ಟಿಕೊಂಡಿದ್ದೇವೆ. ಶಿಕ್ಷಣ ವ್ಯವಸ್ಥೆಯೇ ಸಂವಿಧಾನದ ತೊಟ್ಟಿಲು. ನಿಜವಾದ ಸಂವಿಧಾನ ಆಶಯಗಳನ್ನು ಈಡೇರಿಸಬೇಕಾದರೆ ನೀವು ಬಲಿಷ್ಠ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಬೇಕು” ಎನ್ನುತ್ತಾರೆ ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ. ಆದರೆ ಶಿಕ್ಷಕರೇ ಮತೀಯವಾಗಿಗಳು, ಜಾತಿವಾದಿಗಳು ಆದರೆ ಏನು ಮಾಡುವುದು? ಶಿಕ್ಷಕರ ಮೇಲೆಯೇ ಇಂತಹ ಆರೋಪಗಳು ಬಂದರೆ?

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಅಸ್ಪೃಶ್ಯತೆ ಆಚರಿಸುತ್ತಿದ್ದಾರೆಂಬ ಆರೋಪ ಬಂದಿದ್ದು, ದಲಿತ ಸಮುದಾಯದ ಪೋಷಕರು ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಮಕ್ಕಳ ಮನಸ್ಸಿನಲ್ಲಿ ಜಾತಿ ವಿಷ ಬೀಜ ಬಿತ್ತುವ ಶಿಕ್ಷಕಿಯನ್ನು ತಕ್ಷಣ ಬೇರೆಡೆಗೆ ವರ್ಗಾವಣೆ ಮಾಡಿ ನಮ್ಮ ಮಕ್ಕಳಿಗಾಗಿ ಉತ್ತಮ ಶಿಕ್ಷಕರನ್ನು ನೇಮಿಸಿ ಎಂದು ಬೇಡಿಕೆ ಇಟ್ಟಿರುವ ಹುಕ್ಕೇರಿ ತಾಲೂಕಿನ ದಲಿತ ಮುಖಂಡರು ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಲಿಗೆ ಬಿದ್ದಿರುವ ಪ್ರಸಂಗವೂ ನಡೆದಿದೆ.

ಇಲ್ಲಿನ ಶಿಕ್ಷಕಿ ಎಂ.ಟಿ.ಅನುಪಮಾ ಅವರು ನಮ್ಮ ಗ್ರಾಮದ ಶಾಲೆಗೆ ಬಂದಾಗಿಲಿಂದ ದಲಿತ ಮಕ್ಕಳ ಬಗ್ಗೆ ಅಸಮಾನತೆಯ ಬೀಜ ಬಿತ್ತುವುದಲ್ಲದೆ, ದಲಿತ ಮಕ್ಕಳಿಗೆ ಅವಾಚ್ಯ ಪದಗಳನ್ನು ಬಳಸಿ ನಿಂದಿಸುತ್ತಾರೆ. ಮಕ್ಕಳ ಪಾಲಕರು ಈ ಬಗ್ಗೆ ಪ್ರಶ್ನಿಸಿದರೆ ಉಡಾಫೆ ಮಾತುಗಳನ್ನಾಡಿ ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ ಎಂದು ಮದಿಹಳ್ಳಿ ಗ್ರಾಮದ ಗ್ರಾಮಸ್ಥರು ದಿಢೀರನೆ ಪ್ರತಿಭಟನೆ ಮಾಡುವ ಮೂಲಕ ನಮಗೆ ಈ ಶಿಕ್ಷಕಿ ಬೇಡ ಎಂದು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿರಿ: ಮ್ಯಾನ್ಯುಯಲ್‌ ಸ್ಕ್ಯಾವೆಂಜಿಂಗ್‌: ಪ್ರಶ್ನಿಸಿದ್ದಕ್ಕೆ ‘ಈ ಕೆಲಸ ಮಾಡಲೆಂದೇ ಜಾತಿಗಳಿವೆ’ ಎಂದ ಇಂಜಿನಿಯರ್‌‌‌!

ಕಳೆದ ಆಗಸ್ಟ್‌ 15ರ ಸ್ವಾತಂತ್ರ್ಯ ಉತ್ಸವ ದಿನದಂದು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್ ಅವರ ಭಾವಚಿತ್ರವನ್ನು ಪೂಜೆಗೆ ಇರಿಸಿರಲಿಲ್ಲ. ಅಲ್ಲದೆ ದಲಿತ ಮಕ್ಕಳನ್ನು ಎರಡನೇ ದರ್ಜೆಯ ಪ್ರಜೆಗಳ ರೀತಿ ನೋಡಿಕೊಳ್ಳುತ್ತಾರೆ. ಹೀಗಾಗಿ ಈ ಕೂಡಲೇ ಮುಖ್ಯಶಿಕ್ಷಕಿ ಅನುಪಮಾ ಅವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು ಎಂದು ದಲಿತಪರ ಸಂಘಟನೆಗಳು ಈ ಹಿಂದೆಯೂ ಪ್ರತಿಭಟಿಸಿದ್ದವು.

ಪ್ರತಿಭಟನೆಗೆ ಸ್ಪಂದಿಸಿ ಮುಖ್ಯ ಶಿಕ್ಷಕಿ ಅನುಪಮಾ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಬೇರೆ ಶಾಲೆಗೆ ವರ್ಗಾವಣೆ ಮಾಡಿದ್ದರು. ಆದರೆ ಇದೀಗ ಮತ್ತೆ ಕೆಲವು ಮೇಲ್ಜಾತಿಯ ಪ್ರಭಾವಿಗಳ ಒತ್ತಡಕ್ಕೆ ಮಣಿದು ಅನುಪಮಾ ಅವರನ್ನು ಮತ್ತೆ ಇದೇ ಶಾಲೆಗೆ ಮರು ನೇಮಿಸಲಾಗಿದೆ ಎಂದು ಪೋಷಕರು ಹಾಗೂ ದಲಿತ ಸಂಘಟನೆಗಳ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ. ಶಿಕ್ಷಕಿ ಅನುಪಮಾ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

‘ಮಾತೆತ್ತಿದರೆ ನಾವೆಲ್ಲ ಹಿಂದೂ, ದುಡ್ಡಿನ ಆಸೆಗೆ ಮತಾಂತರ ಮಾಡ್ತಾರೆ ಎಂದೆಲ್ಲ ಹೋರಾಟ ಮಾಡುವ ಹಿಂದೂ ಸಂಘಟನೆಗಳು ಅಸ್ಪೃಶ್ಯತೆ ವಿರುದ್ಧ ಯಾಕೆ ಧ್ವನಿ ಎತ್ತುತ್ತಿಲ್ಲ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಪೋಷಕರು ತಮ್ಮ ಅಳಲು ತೋಡಿಕೊಂಡಿದ್ದಾರೆ. “ಶಿಕ್ಷಕಿ ಅನುಪಮಾ ನಮ್ಮ ಗ್ರಾಮದ ಶಾಲೆಗೆ ಬಂದಾಗಿಲಿಂದ ದಲಿತ ಮಕ್ಕಳ ಬಗ್ಗೆ ಅಸಮಾನತೆಯ ಬೀಜ ಬಿತ್ತುವುದಲ್ಲದೆ, ದಲಿತ ಮಕ್ಕಳಿಗೆ ಅವಾಚ್ಯ ಪದಗಳನ್ನು ಬಳಸಿ ನಿಂದಿಸುತ್ತಾರೆ. ಮಕ್ಕಳ ಪಾಲಕರು ಈ ಬಗ್ಗೆ ಪ್ರಶ್ನಿಸಿದರೆ ಉಡಾಫೆ ಮಾತುಗಳನ್ನಾಡಿ ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ” ಎಂದು ತಿಳಿಸಿದ್ದಾರೆ.

ಆದೇಶ: ಪೋಷಕರ ಆಗ್ರಹಕ್ಕೆ ಸ್ಪಂದಿಸಿರುವ ಶಿಕ್ಷಣಾಧಿಕಾರಿ, ಜಾತಿವಾದದ ಆರೋಪ ಹೊತ್ತಿರುವ ಶಿಕ್ಷಕಿಯನ್ನು ಬೇರೆ ಶಾಲೆಗೆ ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ.

ಉತ್ತರಪ್ರದೇಶದಲ್ಲೂ ಇಂತಹದ್ದೇ ಪ್ರಕರಣ ಬಯಲಿಗೆ

ಶಿಕ್ಷಕರೇ ಜಾತಿಯನ್ನು ಪ್ರಚೋದಿಸುವ ಬೆಳವಣಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವಂತಿದೆ. ಉತ್ತರ ಪ್ರದೇಶದಲ್ಲಿ ಇಂತಹದ್ದೇ ಪ್ರಕರಣ ಇತ್ತೀಚೆಗೆ ವರದಿಯಾಗಿತ್ತು. ಮಧ್ಯಾಹ್ನದ ಬಿಸಿಯೂಟಕ್ಕಾಗಿ ದಲಿತ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ತಟ್ಟೆಗಳನ್ನು ಇರಿಸಿದ್ದರಿಂದ ಶಾಲೆಯ ಮುಖ್ಯಶಿಕ್ಷಕಿಯನ್ನು ಅಮಾನತು ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿತ್ತು.

ಇದನ್ನೂ ಓದಿರಿ: ಬೆಂಗಳೂರು: ಪೌರಕಾರ್ಮಿಕರ ಘನತೆಯ ಬದುಕು, ಗೌರವ, ವಸತಿ, ಶಿಕ್ಷಣಕ್ಕಾಗಿ 15 ದಿನಗಳ ಜಾಥಾ

ಶಾಲೆಯ ಬಿಸಿಯೂಟ ನೌಕರರು ದಲಿತ ವಿದ್ಯಾರ್ಥಿಗಳ ತಟ್ಟೆಗಳನ್ನೂ ಮುಟ್ಟುವುದಿಲ್ಲ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿತ್ತು. ಮೈನ್‌‌ಪುರಿ ಜಿಲ್ಲೆಯ ದೌಡಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿರುವ 80 ಮಕ್ಕಳಲ್ಲಿ 60 ಮಕ್ಕಳು ಪರಿಶಿಷ್ಟ ಜಾತಿಯವರು. ಆದಾಗ್ಯೂ, ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಮಕ್ಕಳ ಪಾತ್ರೆಗಳನ್ನು ಮಾತ್ರ ಅಡುಗೆಮನೆಯಲ್ಲಿ ಇರಿಸಲಾಗಿತ್ತು. ಈ ಕುರಿತ ವಿಡಿಯೋ ಕೆಲವು ದಿನಗಳ ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌‌ ಆಗಿತ್ತು.

ಗ್ರಾಮದ ಜನಸಂಖ್ಯೆಯಲ್ಲಿ ಶೇ. 35ರಷ್ಟು ದಲಿತರು, ಅಷ್ಟೇ ಪ್ರಮಾಣದಲ್ಲಿ ಠಾಕೂರರು ಇದ್ದು, ಉಳಿದವರು ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ ಎಂದು ಸಾಹಬ್ ಸಿಂಗ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದರು.

ಇದನ್ನೂ ಓದಿರಿ: ರೈತರ ಹತ್ಯಾಕಾಂಡ ವಿರೋಧಿಸಿ ಮಹಾರಾಷ್ಟ್ರ ಬಂದ್: ಅಂಗಡಿ ಮುಂಗಟ್ಟು, ಮಾರುಕಟ್ಟೆ ಸಂಪೂರ್ಣ ಬಂದ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕುವೈತ್‌ ಅಗ್ನಿ ದುರಂತ: 45 ಭಾರತೀಯರ ಮೃತದೇಹಗಳು ಇಂದು ಕೇರಳಕ್ಕೆ ಆಗಮನ

0
ಎರಡು ದಿನಗಳ ಹಿಂದೆ ಗಲ್ಫ್ ದೇಶದಲ್ಲಿ ಸಂಭವಿಸಿದ ಭಾರೀ ಬೆಂಕಿಯಲ್ಲಿ ಸಾವನ್ನಪ್ಪಿದ 45 ಭಾರತೀಯರ ಮೃತದೇಹಗಳನ್ನು ಹೊತ್ತ ವಿಶೇಷ ವಾಯುಪಡೆಯ ವಿಮಾನವು ಕುವೈತ್‌ನಿಂದ ಟೇಕಾಫ್ ಆಗಿದೆ. ವಿಮಾನವು ಕೇರಳದ ಕೊಚ್ಚಿಯಲ್ಲಿ ಬೆಳಿಗ್ಗೆ 11...