ಒಲಿಂಪಿಕ್ಸ್‌ನ 50 ಕೆಜಿ ತೂಕದ ಕುಸ್ತಿ ವಿಭಾಗದಲ್ಲಿ 100 ಗ್ರಾಂ ಹೆಚ್ಚಿನ ತೂಕದ ಕಾರಣಕ್ಕೆ ಚಿನ್ನದ ಪದಕದ ಪಂದ್ಯದಲ್ಲಿ ಸ್ಪರ್ಧಿಸಲು ಅನರ್ಹಗೊಂಡ ನಂತರ ಪ್ಯಾರಿಸ್‌ನಲ್ಲಿ ತನಗೆ ಯಾವುದೇ ಬೆಂಬಲವಿಲ್ಲ ಎಂದು ಕುಸ್ತಿಪಟು ವಿನೇಶಾ ಫೋಗಟ್ ಹೇಳಿದ್ದಾರೆ.
ಕುಸ್ತಿ ಪಂದ್ಯಕ್ಕೂ ಮುನ್ನ ತನ್ನ ತೂಕವನ್ನು ಕಡಿಮೆ ಮಾಡಲು ತೀವ್ರವಾದ ಪ್ರಯತ್ನಗಳು ವ್ಯರ್ಥವಾಯಿತು. ಆದರೆಮ ಅದು ನಿರ್ಜಲೀಕರಣಕ್ಕೆ ಕಾರಣವಾಗಿದ್ದರಿಂದ ಆಸ್ಪತ್ರೆಗೆ ಸೇರಬೇಕಾಯಿತು ಎಂದರು.
ವಿನೇಶಾ ಆಸ್ಪತ್ರೆ ಸೇರಿದ ಬಳಿಕ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ (ಐಒಎ) ಮುಖ್ಯಸ್ಥೆ ಪಿಟಿ ಉಷಾ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಆದರೆ, ಪ್ಯಾರಿಸ್‌ನಲ್ಲಿ ತನಗೆ ಯಾವುದೇ ಬೆಂಬಲ ಸಿಗಲಿಲ್ಲ ಎಂದು ವಿನೇಶ್ ಈಗ ವಿನೇಶಾ ಹೇಳಿದ್ದಾರೆ.
ಪಿಟಿ ಉಷಾ ಅವರೊಂದಿಗೆ ಚಿತ್ರ ಕ್ಲಿಕ್ಕಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು ರಾಜಕೀಯದ ಒಂದು ಭಾಗವಾಗಿದೆ ಎಂದು ಹೇಳಿದ್ದಾರೆ. “ನನಗೆ ಅಲ್ಲಿ ಏನು ಬೆಂಬಲ ಸಿಕ್ಕಿತು ಎಂದು ನನಗೆ ತಿಳಿದಿಲ್ಲ; ಪಿಟಿ ಉಷಾ ಮೇಡಂ ನನ್ನನ್ನು ಆಸ್ಪತ್ರೆಗೆ ಭೇಟಿ ಮಾಡಿದರು. ಒಂದು ಫೋಟೋ ಕ್ಲಿಕ್ ಮಾಡಲಾಗಿದೆ. ನೀವು ಹೇಳಿದಂತೆ, ರಾಜಕೀಯದಲ್ಲಿ ಮುಚ್ಚಿದ ಬಾಗಿಲುಗಳ ಹಿಂದೆ ಬಹಳಷ್ಟು ನಡೆಯುತ್ತದೆ. ಹಾಗೆಯೇ, ಪ್ಯಾರಿಸ್‌ನಲ್ಲಿ ಹಾಗೆಯೇ ರಾಜಕೀಯ ನಡೆಯಿತು” ಎಂದು ಆರೋಪಿಸಿದ್ದಾರೆ.
“ಅದಕ್ಕಾಗಿಯೇ ನಾನು ಎದೆಗುಂದಿದೆ. ಬಹಳಷ್ಟು ಜನರು ‘ಕುಸ್ತಿಯನ್ನು ಬಿಡಬೇಡಿ’ ಎಂದು ಹೇಳುತ್ತಿದ್ದಾರೆ. ನಾನು ಯಾವುದಕ್ಕಾಗಿ ಮುಂದುವರಿಯಬೇಕು? ಎಲ್ಲೆಡೆ ರಾಜಕೀಯವಿದೆ” ಎಂದು ಅವರು ಹೇಳಿದರು. “ಅವರು ತಮ್ಮ ಫೋಟೋವನ್ನು ಪಿಟಿ ಉಷಾ ಅವರೊಂದಿಗೆ ಕ್ಲಿಕ್ ಮಾಡಿರುವುದು ತನಗೆ ತಿಳಿದಿರಲಿಲ್ಲ; ಅದು ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯುವ ಪ್ರಹಸನ” ಎಂದು ಹೇಳಿದ್ದಾರೆ.
“ನೀವು ಆಸ್ಪತ್ರೆಯ ಹಾಸಿಗೆಯಲ್ಲಿದ್ದೀರಿ, ಹೊರಗೆ ಜೀವನದಲ್ಲಿ ಏನಾಗುತ್ತಿದೆ ಎಂದು ನಿಮಗೆ ತಿಳಿದಿಲ್ಲ, ನಿಮ್ಮ ಜೀವನದ ಅತ್ಯಂತ ಕೆಟ್ಟ ಹಂತಗಳಲ್ಲಿ ಒಂದನ್ನು ನೀವು ಎದುರಿಸುತ್ತಿರುವಿರಿ. ಆ ಸ್ಥಳದಲ್ಲಿ, ನೀವು ನನ್ನೊಂದಿಗೆ ನಿಂತಿರುವ ಎಲ್ಲರಿಗೂ ತೋರಿಸಲು, ನನಗೆ ಹೇಳದೆ ಫೋಟೋ ಕ್ಲಿಕ್ ಮಾಡಿ ನಂತರ ನೀವು ನನ್ನೊಂದಿಗೆ ನಿಂತಿದ್ದೀರಿ ಎಂದು ಜಗತ್ತಿಗೆ ತೋರಿಸಲು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದೀರಿ” ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ; ವಿನೇಶಾ 2028ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ: ಮಹಾವೀರ್ ಫೋಗಟ್


