Homeರಂಜನೆಕ್ರೀಡೆಎಲ್ಲಾ ವಿಭಾಗದ ಕ್ರಿಕೆಟ್‌ಗೆ ಗುಡ್‌ಬೈ: ಬೆಂಗಳೂರಿಗರ ನೆಚ್ಚಿನ ಆಟಗಾರ ಎಬಿ ಡಿವಿಲಿಯರ್ಸ್ ವಿದಾಯ

ಎಲ್ಲಾ ವಿಭಾಗದ ಕ್ರಿಕೆಟ್‌ಗೆ ಗುಡ್‌ಬೈ: ಬೆಂಗಳೂರಿಗರ ನೆಚ್ಚಿನ ಆಟಗಾರ ಎಬಿ ಡಿವಿಲಿಯರ್ಸ್ ವಿದಾಯ

- Advertisement -
- Advertisement -

ಐಪಿಎಲ್‌ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಆಡುತ್ತಿದ್ದ ಬೆಂಗಳೂರಿಗರ ನೆಚ್ಚಿನ ಆಟಗಾರ ದಕ್ಷಿಣ ಆಫ್ರಿಕದ ಎಬಿ ಡಿವಿಲಿಯರ್ಸ್ ಇಂದು ಎಲ್ಲಾ ವಿಭಾಗದ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಇದು ಹಲವು ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ.

360 ಡಿಗ್ರಿ ಆಟಗಾರ ಎಂದೇ ಖ್ಯಾತರಾದ ಡಿವಿಲಿಯರ್ಸ್ ಚೆಂಡನ್ನು ಅಂಗಳದ ಎಲ್ಲಾ ಮೂಲೆಗೂ ಅಟ್ಟುವುದರಲ್ಲಿ ಪ್ರಸಿದ್ದರಾಗಿದ್ದರು. ಕಷ್ಟದ ಸಮಯದಲ್ಲಿ ಕ್ರೀಸ್‌ಗೆ ಬಂದು ಲೀಲಾಜಾಲವಾಗಿ ಬ್ಯಾಟ್ ಬೀಸಿ ಎಷ್ಟೋ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿರುವ ಅವರು ಈಗ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವುದು ಅಭಿಮಾನಿಗಳಿಗೆ ದೊಡ್ಡ ನಷ್ಟವಾಗಿದೆ.

ಎಬಿಡಿ ಎಂದೇ ಕರೆಯಲ್ಪಡುತ್ತಿದ್ದ ಅವರು ಬೆಂಗಳೂರು ಮತ್ತು ಕರ್ನಾಟಕದ ಜೊತೆಗೆ ವಿಶಿಷ್ಟ ನಂಟು ಹೊಂದಿದ್ದರು. ಅವರ ಅಭಿಮಾನಿಗಳು ಪ್ರಪಂಚದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿನಲ್ಲಿದ್ದಾರೆ ಎನ್ನಲಾಗುತ್ತಿದೆ. ನಟ ಯೂಟ್ಯೂಬರ್ ದಾನಿಷ್ ಸೇಠ್ ಜೊತೆಗೆ ಎಬಿಡಿ ಕನ್ನಡದಲ್ಲಿ ಮಾತಾಡಿ, ಕನ್ನಡ ಹಾಡು ಹಾಡಿ ಗಮನ ಸೆಳೆದಿದ್ದರು.

ತಮ್ಮ ವಿದಾಯವನ್ನು ಟ್ವಿಟರ್‌ನಲ್ಲಿ ಘೋಷಿಸಿರುವ ಅವರು, “ಇದೊಂದು ಅದ್ಭುತ ಪ್ರಯಾಣವಾಗಿದೆ. ಆದರೆ ನಾನು ಎಲ್ಲಾ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ನನ್ನ ಹಿರಿಯ ಸಹೋದರರೊಂದಿಗೆ ಅಂಗಳದಲ್ಲಿ ಆನಂದ ಮತ್ತು ಮಿತಿಯಿಲ್ಲದ ಉತ್ಸಾಹದಿಂದ ಆಟವನ್ನು ಆಡಿದ್ದೇನೆ. ನನ್ನೊಳಗಿನ ಜ್ವಾಲೆಯು ಅಷ್ಟು ಪ್ರಕಾಶಮಾನವಾಗಿಲ್ಲದಿರುವಾಗ ಈಗ 37 ನೇ ವಯಸ್ಸಿನಲ್ಲಿ ವಿದಾಯ ಘೋಷಿಸುತ್ತಿದ್ದೇನೆ” ಎಂದು ದಕ್ಷಿಣ ಆಫ್ರಿಕಾದ ಆಟಗಾರ ಹೇಳಿದ್ದಾರೆ.

“ಅದು ನಾನು ಒಪ್ಪಿಕೊಳ್ಳಲೇಬೇಕಾದ ವಾಸ್ತವ, ಮತ್ತು ಅದು ಹಠಾತ್ತಾಗಿ ಕಂಡರೂ ಸಹ, ಅದಕ್ಕಾಗಿಯೇ ನಾನು ಇಂದು ಈ ಘೋಷಣೆ ಮಾಡುತ್ತಿದ್ದೇನೆ. ನಾನು ನನ್ನ ಸಮಯವನ್ನು ಅನುಭವಿಸಿದ್ದೇನೆ. ಕ್ರಿಕೆಟ್ ನನ್ನ ಮೇಲೆ ಅಸಾಧಾರಣ ಕರುಣೆ ತೋರಿದೆ. ಟೈಟಾನ್ಸ್, ಪ್ರೋಟೀಸ್, ಅಥವಾ RCB ಅಥವಾ ಪ್ರಪಂಚದಾದ್ಯಂತ ಯಾವುದೇ ಲೀಗ್‌ನಲ್ಲಿ ಆಡುತ್ತಿರಲಿ ಆಟವು ನನಗೆ ಊಹಿಸಲಾಗದ ಅನುಭವಗಳನ್ನು ಮತ್ತು ಅವಕಾಶಗಳನ್ನು ನೀಡಿದೆ ಮತ್ತು ಅದಕ್ಕೆ ನಾನು ಯಾವಾಗಲೂ ಕೃತಜ್ಞರಾಗಿರುತ್ತೇನೆ” ಎಂದು ಅವರು ಬರೆದುಕೊಂಡಿದ್ದಾರೆ.

“ಕೊನೆಯದಾಗಿ, ನನ್ನ ಕುಟುಂಬ – ನನ್ನ ಹೆತ್ತವರು, ನನ್ನ ಸಹೋದರರು, ನನ್ನ ಹೆಂಡತಿ ನನಗಾಗಿ ಬಹಳ ತ್ಯಾಗ ಮಾಡಿದ್ದಾರೆ. ಅದೇ ಹಾದಿಯಲ್ಲಿ ಸಾಗಿದ ಪ್ರತಿಯೊಬ್ಬ ತಂಡದ ಸಹ ಆಟಗಾರ, ಪ್ರತಿ ಎದುರಾಳಿ, ಪ್ರತಿ ತರಬೇತುದಾರ, ಪ್ರತಿಯೊಬ್ಬ ಫಿಸಿಯೋ ಮತ್ತು ಪ್ರತಿಯೊಬ್ಬ ಸಿಬ್ಬಂದಿ ಸದಸ್ಯರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಮತ್ತು ನಾನು ದಕ್ಷಿಣ ಆಫ್ರಿಕಾದಲ್ಲಿ, ಭಾರತದಲ್ಲಿ, ನಾನು ಎಲ್ಲೇ ಆಡಿದರೂ ನನಗೆ ದೊರೆತ ಬೆಂಬಲದಿಂದ ನಾನು ವಿನಮ್ರನಾಗಿದ್ದೇನೆ” ಎಂದು ಡಿವಿಲಿಯರ್ಸ್ ಹೇಳಿದ್ದಾರೆ.

ಡಿವಿಲಿಯರ್ಸ್ ಐಪಿಎಲ್‌ನಲ್ಲಿ 184 ಪಂದ್ಯಗಳಲ್ಲಿ 39.70 ಸರಾಸರಿಯಲ್ಲಿ 5,162 ರನ್ ಗಳಿಸುವ ಮೂಲಕ ಸಾರ್ವಕಾಲಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಅವರ ಸ್ಟ್ರೈಕ್ ರೇಟ್ 151.68 ಆಗಿದ್ದು ಪಂದ್ಯಾವಳಿಯಲ್ಲಿ ಅಗ್ರ 20 ರನ್ ಗಳಿಸಿದವರಿಗಿಂತ ಉತ್ತಮವಾಗಿದೆ. ಅವರು ಐಪಿಎಲ್ 2021 ರಲ್ಲಿ 15 ಪಂದ್ಯಗಳನ್ನು ಆಡಿದರು, 31.30 ರ ಸರಾಸರಿಯಲ್ಲಿ 313 ರನ್ ಗಳಿಸಿದರು.


ಇದನ್ನೂ ಓದಿ: ಟಿ20 ಕ್ರಿಕೆಟ್‌ನಲ್ಲಿ ದಾಖಲೆ: 4 ಓವರ್‌ನಲ್ಲಿ ಒಂದೂ ರನ್ ಕೊಡದ ಮೊದಲ ಬೌಲರ್ ಅಕ್ಷಯ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...