ಲೈಂಗಿಕ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ ವಾಗ್ದಾಳಿ ನಡೆಸಿದ್ದು, ಆತನೇ ಮಹಾನ್ ನಾಯಕನಾಗಿದ್ದು, ಕನಕಪುರಕ್ಕೆ ಬಂದು ಹೋರಾಡುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, “ನಮ್ಮ ಬಳಿ 11 ಆಧಾರಗಳಿವೆ. ಆ ಮಹಾನ್ ನಾಯಕ ನರೇಶ್ ಜೊತೆ ಸಂಬಂಧವಿರುವುದನ್ನು ಒಪ್ಪಿಕೊಂಡಿದ್ದಾರೆ. ಆ ಯುವತಿ ನಮ್ಮ ಮನೆಗೆ ಬಂದಿದ್ದಳು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಹಾಗಾಗಿ ಅವರನ್ನು ಒದ್ದು ಒಳಗೆ ಹಾಕಬೇಕು, ಆ ಯುವತಿಯ ಮೇಲೆ ಕ್ರಮ ಕೈಗೊಳ್ಳಬೇಕು. ನಾನು ತಪ್ಪು ಮಾಡಿದ್ದರೆ ನನ್ನನ್ನು ಒದ್ದು ಒಳಗೆ ಹಾಕಬೇಕು” ಎಂದಿದ್ದಾರೆ.
ಆ ಯುವತಿ ಎಸ್ಟಿ ಜಾತಿ ಎಂಬುದು ನನಗೆ ಗೊತ್ತಿರಲಿಲ್ಲ. ಇಂದು ಆಕೆಯ ಪೋಷಕರು ಬಂದು ಪತ್ರಿಕಾಗೋಷ್ಠಿ ನಡೆಸಿ ಅದನ್ನು ಬಹಿರಂಗಪಡಿಸಿದ್ದಾರೆ. ಹಾಗಾಗಿ ಅಟ್ರಾಸಿಟಿ ಕಾಯ್ದೆ ಮೂಲಕ ಡಿ.ಕೆ ಶಿವಕುಮಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಆತ ಒಬ್ಬ ಗಾಂಡು, ಅವ ಗಂಡಸಲ್ಲ, ನಾನು ಗಂಡಸು ರಾಜಕಾರಣಿ ಆಗಲಿಕ್ಕೆ ನಾಲಾಯಕ್, ಅವನಿಗೆ ಮಾಫಿ ಎನ್ನುವುದು ಇಲ್ಲ. ಆತನನ್ನು ರಾಜೀನಾಮೆ ಕೊಡಿಸುವಂತೆ ಕಾಂಗ್ರೆಸ್ ನಾಯಕರಲ್ಲಿ ಮನವಿ ಮಾಡುತ್ತೇನೆ ಎಂದರು.
ಆ ಯುವತಿಯ ಪೋಷಕರಿಗೆ ನಾನು ಧನ್ಯವಾದ ಹೇಳುತ್ತೀನಿ. ಆಕೆಯ ಸಹೋದರನೇ ಎಲ್ಲಾ ಹೇಳಿದ್ದೇನೆ. ಅವರಿಗೆ ಮತ್ತೊಮ್ಮೆ ಥ್ಯಾಂಕ್ಸ್ ಹೇಳುತ್ತೀನಿ ಎಂದು ಪೋಷಕರಿಗೆ ಪದೇ ಪದೇ ಧನ್ಯವಾದ ತಿಳಿಸಿದರು.
ಆ ಪೋಷಕರನ್ನು ಕರೆತಂದು ನೀವೆ ಪ್ರೆಸ್ ಮೀಟ್ ಮಾಡಿಸಿದ್ದೀರಿ ಅಂತ ಆರೋಪವಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇರಬಹುದು ಎಂದರು. ಆದರೆ ನಮ್ಮ ಕುಟುಂಬ ಯಾವ ಹುಡುಗಿಗೂ ಮೋಸ ಮಾಡಿಲ್ಲ. ನನಗೆ ಹೆದರಿಕೆ ಇಲ್ಲ.. ನಾನು ಕನಕಪುರಕ್ಕೆ ಬಂದು ತೋರಿಸುತ್ತೇನೆ, ಅವನ ವಿರುದ್ಧ ಹೋರಾಡುತ್ತೇನೆ. ಅವನನ್ನು ಸೋಲಿಸಲು ಕುಮಾರಸ್ವಾಮಿಗೆ ಬೆಂಬಲ ನೀಡಲು ಸಿದ್ದನಿದ್ದೇನೆ. ನನ್ನ ತಮ್ಮನನ್ನು ಕನಕಪುರದಲ್ಲಿ ಕಣಕ್ಕಿಳಿಸುತ್ತೇನೆ ಎಂದರು.
ದೂರನ್ನು ಡಿಕೆಶಿ ವಿರುದ್ಧ ದೂರು ನೀಡುತ್ತೇನೆ. ಅಟ್ರಾಸಿಟಿ ಮೂಲಕ ಒಳಗೆ ಹಾಕಿಸುತ್ತೇನೆ. ನನ್ನ ಬಳಿ 11 ದಾಖಲೆಗಳಿವೆ, ಎಸ್‌ಐಟಿಗೆ ನೀಡುತ್ತೇನೆ ಎಂದರು.
ನಿಮ್ಮ ಹೆಸರೇಳಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಯುವತಿ ಹೇಳಿದ್ದಾಳೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಏನೇ ಆದರೂ ಡಿ.ಕೆ.ಶಿ ಕಾರಣ.. ಗಣಪತಿ ಕೇಸ್ ಏನಾಯ್ತು? ಕಾನೂನು ಇದೆ ದೇಶದಲ್ಲಿ ಎಂದರು.
ರಮೇಶ್ ಜಾರಕಿಹೊಳಿ ಪತ್ರಿಕಾಗೋಷ್ಠಿಗು ಮುನ್ನವೇ ಯುವತಿಯು ಪೋಷಕರು ಪತ್ರಿಕಾಗೋಷ್ಠಿ ನಡೆಸಿ ನಮ್ಮ ಮಗಳನ್ನು ನಮಗೆ ಒಪ್ಪಿಸಿ ಎಂದಿದ್ದಾರೆ. ಯುವತಿಯ ತಂದೆ ಮಾತನಾಡಿ ನಾವು ಎಸ್ಟಿ ಜನ ಎಂದು ತಿಳಿದು ನಮ್ಮನ್ನು ಹೀಗೆ ನಡೆಸಿಕೊಳ್ಳಲಾಗುತ್ತಿದೆ. ನಮ್ಮ ಬಳಿ ಆಡಿಯೋ ಇದೆ. ಅವಳನ್ನು ಒತ್ತೆಯಾಳು ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ಯುವತಿಯ ಸಹೋದರ ಮಾತನಾಡಿ, ನಮ್ಮ ಅಕ್ಕನನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದೀರಿ. ಈ ರೀತಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಸಂತ್ರಸ್ತೆಗೆ ಭಯ ಹುಟ್ಟಿಸುತ್ತಿರುವ ರಮೇಶ್ ಜಾರಕಿಹೊಳಿ ಬಂಧಿಸಿ: ಮಹಿಳಾ ಕಾಂಗ್ರೆಸ್ ಒತ್ತಾಯ


