ವಾರದಲ್ಲಿ 5 ದಿನಗಳ ಕೆಲಸ ಕುರಿತು ಇನ್ಫೊಸಿಸ್ ನ ಸಹ ಸ್ಥಾಪಕ ನಾರಾಯಣ ಮೂರ್ತಿ ತಮ್ಮ ನಿರಾಶೆಯನ್ನು ಮತ್ತೊಮ್ಮೆ ಪುರುಚ್ಚರಿಸಿದ್ದಾರೆ.
ಸಿಎನ್‌ಬಿಸಿ ಗ್ಲೋಬಲ್ ಲೀಡರ್‌ಶಿಪ್ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಅವರು, ಈ ರೀತಿಯ ಪರಿಕಲ್ಪನೆಯಲ್ಲಿ ನನಗೆ ನಂಬಿಕೆಯಿಲ್ಲ. ನನಗೆ ನಿರಾಶೆಯಾಗಿದೆ. ಈ ಅಭಿಪ್ರಾಯಕ್ಕೆ ದೃಢವಾಗಿ ನಿಲ್ಲುತ್ತೇನೆ ಮತ್ತು ಇದನ್ನು ಗಂಭೀರವಾಗಿ ತಗೆದುಕೊಳ್ಳುತ್ತೇನೆ ಎಂದಿದ್ದಾರೆ.
ಇಂತಹ ಕೆಲಸದ ಪರಿಕಲ್ಪನೆಯ ಕುರಿತು ಚಿಂತಿಸುವ ಬದಲು ಭಾರತದಂತಹ ಬಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಸವಾಲುಗಳು ಸಾಕಷ್ಟಿದ್ದು, ಇವುಗಳ ಮೇಲೆ ಬೆಳಕು ಚೆಲ್ಲಬೇಕಿದೆ. ಭಾರತದ ಪ್ರಧಾನಿ ವಾರವೊಂದಕ್ಕೆ 100 ಗಂಟೆ ಕೆಲಸ ನಿರ್ವಹಿಸುತ್ತಾರೆ. ನಮ್ಮ ಕೆಲಸ ನಮ್ಮ ಸುತ್ತಮುತ್ತ ನಡೆಯುತ್ತಿರುವ
ಇಂತಹ ವಿಷಯಗಳಿಗೆ ಪ್ರಶಂಸೆ ಪ್ರದರ್ಶಿಸುವುದೊಂದೆ ಏಕೈಕ ದಾರಿಯಾಗಿದೆ ಎಂದು ತಿಳಿಸಿದರು.
ಭಾರತದಲ್ಲಿ ಕಠಿಣ ಶ್ರಮ ಪಡಬೇಕಿದೆ. ಇದನ್ನು ಹೊರತುಪಡಿಸಿ ಪರ್ಯಾಯವಾಗಿ ಬೇರೊಂದು ಮಾರ್ಗವಿಲ್ಲ. ನೀವು ಜೀವನದಲ್ಲಿ ಗೆಲ್ಲಬೇಕಾದರೆ ತುಂಬಾ ಶ್ರಮಹಾಕಬೇಕಿದೆ. ನಾನು ನನ್ನ ಜೀವನದಲ್ಲಿ ಕಠಿಣ ಶ್ರಮಪಟ್ಟದ್ದಕ್ಕಾಗಿ ನನಗೆ ಹೆಮ್ಮೆಯಿದೆ. ನನ್ನ ಈ ಅಭಿಪ್ರಾಯವನ್ನು ನಾನೆಂದೂ ಬದಲಾಯಿಸಲು ಸಾಧ್ಯವಿಲ್ಲ. ಕ್ಷಮಿಸಿ. ಈ ನನ್ನ ಅನಿಸಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇನೆ ಎಂದು ಅವರು ಹೇಳಿದರು.
ಭಾರತದ ಅಭಿವೃದ್ಧಿಯ ಮಂತ್ರವು ಯಾವುದೇ ಸಡಿಲತೆಗಿಂತ ತ್ಯಾಗ, ಪರಿಶ್ರಮ ಮತ್ತು ದೀರ್ಘಾವಧಿಯ
ಕೆಲಸ ನಿರ್ವಹಿಸುವುದರಲ್ಲಿದೆ. ನಮ್ಮ ದೇಶವು ಜಾಗತೀಕ ಸ್ಪರ್ಧೆಯೊಂದಿಗೆ ಸಂಘರ್ಷವನ್ನು ನಡೆಸಬೇಕಾಗಿದೆ. ನಾನು ನನ್ನ ವೃತ್ತಿಯ ಆರಂಭದ ಗಳಿಗೆಯಲ್ಲಿ ದಿನವೊಂದಕ್ಕೆ 14 ಗಂಟೆಗಳ ಕೆಲಸ ನಿರ್ವಹಿಸುತ್ತಿದ್ದೆ. ಹಾಗೆಯೇ ವಾರದಲ್ಲಿ ಆರೂವರೆ ದಿನಗಳನ್ನು ಅರ್ಪಿಸಿಕೊಂಡಿದ್ದೆ. ನನ್ನ ವೃತ್ತಿಪರ ಬೆಳವಣಿಗೆಯಲ್ಲಿ ಈ ಬದ್ದತೆಯನ್ನು ತಗೆದುಕೊಂಡಿದ್ದಕ್ಕಾಗಿ ಹೆಮ್ಮೆಪಡುತ್ತೇನೆ. ಪ್ರತಿ ದಿನವು ನನ್ನ ಕಚೇರಿಗೆ ಬೆಳಗ್ಗೆ 6:30ಕ್ಕೆ ಆಗಮಿಸಿ, ರಾತ್ರಿ 8:30ಕ್ಕೆ
ನಿರ್ಗಮಿಸುತ್ತಿದ್ದೆ ಎಂದು ತಮ್ಮ ಈ ಹಿಂದಿನ ಕೆಲಸದ ದಿನಚರಿಯನ್ನು ನಾರಾಯಣ ಮೂರ್ತಿಯವರು ಮೆಲುಕು ಹಾಕಿದರು.
ಇದನ್ನೂ ಓದಿ : ಚುನಾವಣೆಯಲ್ಲಿ ಸ್ಪರ್ಧಿಸಲು ವಯೋಮಿತಿ ಇಳಿಸುವಂತೆ ಒತ್ತಾಯಿಸಿದ ತೆಲಂಗಾಣ ಸಿಎಂ ರೆಡ್ಡಿ


