ಆಶಾ ಕಾರ್ಯಕರ್ತರು ಮಾಡಿದ ಕೆಲಸವನ್ನು ಉತ್ತರ ಪ್ರದೇಶ ಸರ್ಕಾರ ಅವಮಾನಿಸಿದೆ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಮುಂಬರುವ ಯುಪಿ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 10,000 ರೂಪಾಯಿ ಗೌರವಧನ ನೀಡುವುದಾಗಿ ಭರವಸೆ ನೀಡಿದ್ದಾರೆ.
ಷಹಜಹಾನ್‌ಪುರದಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಪೊಲೀಸರು ನಡೆಸಿದ ಹಲ್ಲೆಯ ವೀಡಿಯೊವನ್ನು ಪ್ರಿಯಾಂಕ ಗಾಂಧಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಆಶಾ ಕಾರ್ಯಕರ್ತರು ತಮ್ಮ ಬೇಡಿಕೆಗಳೊಂದಿಗೆ ಸಿಎಂ ಆದಿತ್ಯನಾಥ್ ಅವರನ್ನು ಭೇಟಿಯಾಗಲು ಬಯಸಿದ್ದರು.
ಇದನ್ನೂ ಓದಿ: ಆದಿತ್ಯನಾಥ್ ಅವರನ್ನು ‘ವಿಷ’ ಎಂದು ಉಲ್ಲೇಖಿಸಿದ ಯುಪಿ BJP ಕಾರ್ಯಕಾರಿಣಿ ಸದಸ್ಯ!
“ಯುಪಿ ಸರ್ಕಾರ ಆಶಾ ಸಹೋದರಿಯರ ಮೇಲೆ ನಡೆಸುವ ಪ್ರತಿ ಹಲ್ಲೆಯು ಅವರು ಮಾಡಿದ ಕೆಲಸಕ್ಕೆ ಮಾಡುವ ಅಪಮಾನವಾಗಿದೆ. ಆಶಾ ಸಹೋದರಿಯರು ಕೊರೊನ ಸಮಯದಲ್ಲಿ ಮತ್ತು ಇತರ ಸಂದರ್ಭಗಳಲ್ಲಿ ತಮ್ಮ ಸೇವೆಯನ್ನು ಶ್ರದ್ಧೆಯಿಂದ ಮಾಡಿದ್ದಾರೆ. ಗೌರವಧನ ಅವರ ಹಕ್ಕಾಗಿದ್ದು, ಅವರ ಮಾತನ್ನು ಕೇಳುವುದು ಸರ್ಕಾರದ ಕರ್ತವ್ಯವಾಗಿದೆ. ಸರ್ಕಾರ ಅವರ ಮಾತನ್ನು ಕೇಳಬೇಕು” ಎಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ.
उप्र सरकार द्वारा आशा बहनों पर किया गया एक-एक वार उनके द्वारा किए गए कार्यों का अपमान है।
मेरी आशा बहनों ने कोरोना में व अन्य मौकों पर पूरी लगन से अपनी सेवाएं दीं। मानदेय उनका हक है। उनकी बात सुनना सरकार का कर्तव्य।
आशा बहनें सम्मान की हकदार हैं और मैं इस लड़ाई में उनके साथ हूं। pic.twitter.com/fTmBSvJbQD— Priyanka Gandhi Vadra (@priyankagandhi) November 10, 2021
“ಆಶಾ ಸಹೋದರಿಯರು ಗೌರವಕ್ಕೆ ಅರ್ಹರಾಗಿದ್ದು, ಈ ಹೋರಾಟದಲ್ಲಿ ನಾನು ಅವರೊಂದಿಗೆ ಇದ್ದೇನೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ.
ಆಶಾ ಸಹೋದರಿಯರ ಗೌರವಧನ ನೀಡಿ ಅವರನ್ನು ಗೌರವಿಸುವುದಕ್ಕೆ ಕಾಂಗ್ರೆಸ್ ಬದ್ಧವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದರೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 10,000 ರೂಪಾಯಿ ಗೌರವಧನ ನೀಡಲಾಗುವುದು ಎಂದು ಪ್ರಿಯಾಂಕ ಗಾಂಧಿ ಘೋಷಿಸಿದ್ದಾರೆ.
ಇದನ್ನೂ ಓದಿ: ವಿರಾಟ್ ಕೋಹ್ಲಿ ಮಗಳಿಗೆ ಅತ್ಯಾಚಾರ ಬೆದರಿಕೆಯೊಡ್ಡಿದ ಆರೋಪಿಯ ಬಂಧನ


